Video: ನಟ ಅಮಿತಾಬ್ ಬಚ್ಚನ್‌ಗೆ 'ಮಹೀಂದ್ರಾ ಥಾರ್' ಅಂದ್ರೆ ವಿಶೇಷ ಪ್ರೀತಿ..!
ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಭಾರೀ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ವಯಸ್ಸು 80 ಆದ್ರೂ ಲವಲವಿಕೆಯಿಂದ ಸಿನಿಮಾ ಶೂಟಿಂಗ್ ಗಳಲ್ಲಿ ಭಾಗವಹಿಸುತ್ತಾರೆ. ಅವರಿಗೆ ಕಾರುಗಳೆಂದರೂ ತುಂಬಾ ಅಚ್ಚುಮೆಚ್ಚು. ಅಮಿತಾಬ್ ಮುಂಬೈ ನಿವಾಸದಲ್ಲಿ ದುಬಾರಿ ಬೆಲೆಯ ಐಷಾರಾಮಿ ಕಾರುಗಳ ದೊಡ್ಡ ಸಂಗ್ರಹವಿದೆ.
ಅಮಿತಾಬ್ ಬಚ್ಚನ್ ಸ್ವತಃ ಕಾರನ್ನು ಡ್ರೇವಿಂಗ್ ಮಾಡುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದೆ. ಅದರಲ್ಲೂ ಈ ವಯಸ್ಸಿನಲ್ಲಿ ಸ್ವತಃ ಅಮಿತಾಬ್ ಬಚ್ಚನ್ ಅವರೇ 'ಮಹೀಂದ್ರಾ ಥಾರ್' ಕಾರನ್ನು ಓಡಿಸಿರುವುದನ್ನು ನೋಡಿ, ಅವರ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರು, ಡ್ರೈವರ್ ಸೀಟಿನಲ್ಲಿ ಕುಳಿತು ಕಾರು ಚಲಾಯಿಸುವುದು ತೀರಾ ಅಪರೂಪವಾಗಿದೆ.

ಅಮಿತಾಬ್ ಬಚ್ಚನ್ ಮಹೀಂದ್ರಾ 3 ಡೋರ್ ಥಾರ್ ಎಸ್‌ಯುವಿಯನ್ನು ಓಡಿಸಿಕೊಂಡು ಮುಂಬೈನ ಅವರ ನಿವಾಸವನ್ನು ಪ್ರವೇಶಿಸುತ್ತಿರವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ಕಪ್ಪು ಬಣ್ಣದ ಥಾರ್ ಕಾರಿನಲ್ಲಿ ಅಮಿತಾಬ್ ಬಚ್ಚನ್ ಬಿಟ್ಟರೆ, ಬೇರೆ ಯಾರು ಇರಲಿಲ್ಲ. ಸ್ಥಳದಲ್ಲಿದ್ದ ಅವರ ಅಭಿಮಾನಿಗಳು, ತಮ್ಮ ನೆಚ್ಚಿನ ನಟ ಕಾರು, ಚಲಾಯಿಸುತ್ತಿದ್ದನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದರು.
ಅಮಿತಾಬ್ ಬಚ್ಚನ್ ಅವರ ಬಳಿಯಲ್ಲಿ ಕಾರುಗಳ ದೊಡ್ಡ ಸಂಗ್ರಹವೇ ಇದೆ ಎಂದು ಹೇಳಿದರೇ ತಪ್ಪಾಗುವುದಿಲ್ಲ. ಮೊದಲಿಗೆ ಅವರ ಐಷಾರಾಮಿ ಕಾರು, 'ರೇಂಜ್ ರೋವರ್ ಆಟೋಬಯೋಗ್ರಫಿ' ಬಗ್ಗೆ ತಿಳಿಯೋಣ. ಇದು ಅತ್ಯಂತ ದುಬಾರಿ ಬೆಲೆಯ ಕಾರಾಗಿದ್ದು, ರೂ.3.50 ಕೋಟಿ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಅವರ ಗ್ಯಾರೇಜ್ ನಲ್ಲಿರುವ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ರೂ. 3.30 ಕೋಟಿ ದರವನ್ನು ಹೊಂದಿದೆ.
ಇನ್ನುಳಿದಂತೆ ಅಮಿತಾಬ್ ಬಚ್ಚನ್ ಅವರು, ಪೋರ್ಷೆ ಕೇಮನ್ ಎಸ್, ಮಿನಿ ಕೂಪರ್ ಎಸ್, ಮರ್ಸಿಡಿಸ್ ಎಸ್-ಕ್ಲಾಸ್, ಟೊಯೋಟಾ ಲ್ಯಾಂಡ್ ಕ್ರೂಸರ್, ಲೆಕ್ಸಸ್ LX570, ಆಡಿ A8L ಒಳಗೊಂಡಂತೆ ವಿವಿಧ ಕಾರುಗಳ ಮಾಲೀಕರಾಗಿದ್ದಾರೆ. ಏನೇ ಐಷಾರಾಮಿ ಕಾರುಗಳು ಇದ್ದರೂ ಕೈಗೆಟುಕುವ ಬೆಲೆಯಲ್ಲಿ ಗ್ರಾಹಕರಿಗೆ ದೊರೆಯುವ ಆಫ್-ರೋಡ್ ಎಸ್‌ಯುವಿ, ಮಹೀಂದ್ರಾ ಥಾರ್ ಮೇಲೆ ಅವರಿಗಿರುವ ವಿಶೇಷ ಪ್ರೀತಿಗೆ ಎಲ್ಲರೂ ಮೆಚ್ಚಲೇಬೇಕು.
ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಮಹೀಂದ್ರಾ ಥಾರ್ ಬಗ್ಗೆ ಒಂದಷ್ಟು ವಿಚಾರಗಳನ್ನು ಮಾತನಾಡುವುದಾದರೆ, ಈ ಎಸ್‌ಯುವಿ ರೂ.10.54 - 16.78 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯುತ್ತದೆ. ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯನ್ನು ಲಭ್ಯವಿದ್ದು, RWD ಅಥವಾ 4X4 ಡ್ರೈವಿಂಗ್ ತಂತ್ರಜ್ಞಾನ ಸಿಗುತ್ತದೆ. 15.2 kmpl ಮೈಲೇಜ್ ನೀಡುತ್ತದೆ.
ಮಹೀಂದ್ರಾ ಥಾರ್ 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಹ್ಯಾಲೊಜೆನ್ ಹೆಡ್‌ಲೈಟ್, ಎಲ್ಇಡಿ DRL ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಒಳಗೊಂಡಂತೆ ವಿವಿಧ ಫೀಚರ್ಸ್ ಪಡೆದಿದೆ. ಇನ್ನು, ಮಹೀಂದ್ರಾ ಕಂಪನಿ 5 ಡೋರ್ ಥಾರ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಲು ಸಕಲ ಸಿದ್ಧತೆ ನಡೆಸುತ್ತಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications