Video: ಕುಡುಕನ ಅವಾಂತರ.. ರೈಲು ಹಳಿ ಮೇಲೆ ಕಾರು ಚಲಾಯಿಸಿದ, ಮುಂದೇನಾಯ್ತು?

ಮದ್ಯದ ಅಮಲಿನಲ್ಲಿ ಕುಡುಕರು ಮಾಡುವ ಎಡವಟ್ಟುಗಳಿಂದ ಕೆಲವೊಮ್ಮೆ ಅವರ ಪ್ರಾಣಕ್ಕೆ ಹಾನಿಯಬಹುದು. ಇಲ್ಲವೇ, ಇತರರ ಜೀವಕ್ಕೂ ಎರವಾಗಬಹುದು. ಇಲ್ಲೊಬ್ಬ ಕಂಠಪೂರ್ತಿ ಕುಡಿದು ರೈಲು ಹಳಿ ಮೇಲೆಯೇ ಕಾರನ್ನು ಚಲಾಯಿಸಿದ್ದಾನೆ. ಆ ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ (Social Media) ಭಾರೀ ವೈರಲ್ ಆಗಿದೆ.

ಈ ಘಟನೆ ಪಕ್ಕದ ರಾಜ್ಯದ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ಜುಲೈ 18ರಂದು ನಗರದ ತಾಜಿ ರೈಲ್ವೆ ಕ್ರಾಸಿಂಗ್ ಹಳಿ ಮೇಲೆ ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ, ರಸ್ತೆಯೆಂದು ತಪ್ಪಾಗಿ ಭಾವಿಸಿ ಕಾರನ್ನು ಓಡಿಸಿದ್ದಾನೆ. ಹಳಿಯಲ್ಲಿ ಕಾರು, ಕೆಲವು ಮೀಟರ್ ಚಲಿಸಿದ ನಂತರ, ಮುಂದೆ ಹೋಗದೆ ನಿಂತಿದೆ. ಆತನು ಅದರಲ್ಲಿಯೇ ಕುಳಿತಿದ್ದಾನೆ.

Video: ಕುಡುಕನ ಅವಾಂತರ.. ರೈಲು ಹಳಿ ಮೇಲೆ ಕಾರು ಚಲಾಯಿಸಿದ, ಮುಂದೇನಾಯ್ತು?

ತಕ್ಷಣವೇ ಅದನ್ನು ನೋಡಿದ ಸ್ಥಳೀಯರು, ಕಾರನ್ನು ಟ್ರ್ಯಾಕ್ ನಿಂದ ಹೊರ ನೂಕಿದ್ದಾರೆ. ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಕಾರ್ಯಪ್ರವೃತರಾದ ಅವರು, ಕುಡಿದು ಕಾರು ಚಲಾಯಿಸಿದ ವ್ಯಕ್ತಿ ಜಯಪ್ರಕಾಶ್ ವಿರುದ್ಧ ಮೋಟಾರು ವಾಹನ ಹಾಗೂ ರೈಲ್ವೆ ಕಾಯ್ದೆಗಳ ಅನ್ವಯ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಬಳಿಕ, ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋ ಸದ್ಯ, ಭಾರೀ ವೈರಲ್ ಆಗಿದೆ.

ಇದೇ ರೀತಿಯ ಘಟನೆಯೊಂದು ಕಳೆದ ತಿಂಗಳು ಬೀದರ್ ಜಿಲ್ಲೆಯ ಔರಾದ್ ಬಸ್ ನಿಲ್ದಾಣದಲ್ಲಿ ನಡೆದಿತ್ತು. ಕುಡಿದ ಮತ್ತಿನಲ್ಲಿ ಯಶಪ್ಪ ಎಂಬ ವ್ಯಕ್ತಿ, ಸ್ಟ್ಯಾಂಡ್‌ನಲ್ಲಿ ನಿಲ್ಲಿಸಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಬಸ್ ಓಡಿಸಿಕೊಂಡು ಹೋಗಿ, ಬೇರೆ ವಾಹನವೊಂದಕ್ಕೆ ಡಿಕ್ಕಿ ಹೊಡೆದು ಡಿವೈಡರ್ ಮೇಲೆ ಹತ್ತಿಸಿ, ಅಪಘಾತಕ್ಕೆ ಕಾರಣನಾಗಿದ್ದ. ಅದೃಷ್ಟವಶಾತ್ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿ ಪಾರಾಗಿದ್ದರು.

ನಿಲ್ದಾಣದಲ್ಲಿ ಬಸ್ ನಿಲ್ಲಿಸಿದ ಚಾಲಕ ಹಾಗೂ ನಿರ್ವಾಹಕ, ಅಧಿಕಾರಿಗಳ ಬಳಿ ಎಂಟ್ರಿ ಹಾಕಿಸಿಕೊಂಡು ಬರುವಷ್ಟರಲ್ಲಿ ಮದ್ಯದ ಅಮಲಿನಲ್ಲಿ ಈ ಕೆಲಸ ಮಾಡಿದ್ದನು. ತನ್ನ ಸ್ವಗ್ರಾಮಕ್ಕೆ ತೆರಳಲು ಔರಾದ್ ಬಸ್ ನಿಲ್ದಾಣಕ್ಕೆ ಬಂದಿದ್ದ ಆತ, ಎಣ್ಣೆ ಏಟಿನಲ್ಲಿ ತಾನೇ ಬಸ್ ಚಲಾಯಿಸಿಕೊಂಡು ಹೋಗಿ, ಅಪಘಾತ ಮಾಡಿದ್ದನು. ತಪ್ಪಿಸಿಕೊಂಡು ಹೋಗಲು ಯತ್ನಿಸಿದ ಆತನನ್ನು ಸ್ಥಳೀಯರ ನೆರವಿನಿಂದ ಪೊಲೀಸರು ಹಿಡಿದಿದ್ದರು.

ಗಂಟೆಗಟ್ಟಲೆ ಕಾದರೂ ಊರಿಗೆ ಬರಲಿಲ್ಲ. ಅದಕ್ಕಾಗಿ ಈ ರೀತಿಯ ಕೆಲಸ ಮಾಡಿದ್ದೇನೆ ಎಂದು ಪೊಲೀಸರ ವಿಚಾರಣೆಯಲ್ಲಿ ಆತ ಹೇಳಿದ್ದನು. ಅದಕ್ಕೂ ಮೊದಲೇ ಮದ್ಯದ ಅಮಲಿನಲ್ಲಿ ತನ್ನೂರಿಗೆ ಬಸ್ ತೆಗೆದುಕೊಂಡು ಹೋಗುತ್ತೇನೆ ಎಂದು ಯಶಪ್ಪ ಹೇಳುತ್ತಿದ್ದಂತೆ. ಆದರೆ. ಇತರೆ ಪ್ರಯಾಣಿಕರು, ಅದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲವಂತೆ.

ಕೇರಳದ ಕಣ್ಣೂರಿನ ಘಟನೆಯಲ್ಲೂ ಕಂಠಪೂರ್ತಿ ಕುಡಿದು ರೈಲು ಹಳಿ ಮೇಲೆ ಕಾರು ಚಲಾಯಿಸಿದ್ದಾನೆ. ಆದರೆ, ಸ್ಥಳೀಯರ ಸಮಯೋಚಿತ ಕೆಲಸದಿಂದ ನಡೆಯಬೇಕಿದ್ದ ಭಾರೀ ಅನಾಹುತ ತಪ್ಪಿದೆ. ಅವರು, ಹತ್ತಿರದ ರೈಲ್ವೆ ನಿಲ್ದಾಣಕ್ಕೂ ಮಾಹಿತಿ ನೀಡುವ ಮೂಲಕ ಸಮಯ ಪ್ರಜ್ಞೆಯನ್ನು ಮೆರೆದಿದ್ದಾರೆ. ಯಾರೇ ಆಗಲಿ.. ವಾಹನ ಚಲಾಯಿಸುವಾಗ ಮದ್ಯಪಾನ ಮಾಡಬೇಡಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, July 22, 2023, 10:31 [IST]
English summary
Video drunk man drives car railway track kerala details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+