ಬೆಂಗಳೂರಿನಲ್ಲಿ ಕಾರು ಚಾಲನೆ ಮಾಡಿದ 10 ವರ್ಷದ ಬಾಲಕ..!

ಇಂಟರ್‍‍ನೆಟ್ ಒಂದು ಅದ್ಬುತವಾದ ಲೋಕ. ಇದರಲ್ಲಿ ಅಸಂಖ್ಯಾತ ವೀಡಿಯೋಗಳು ನಮಗೆ ಕಾಣ ಸಿಗುತ್ತವೆ. ಅದು ಶೈಕ್ಷಣಿಕವಾಗಿರಬಹುದು, ಸ್ಪೂರ್ತಿದಾಯಕವಾಗಿರಬಹುದು. ಕೆಲವು ವೀಡಿಯೋಗಳನ್ನು ನೋಡಿದ ನಂತರವೂ ಅವು ನಮ್ಮನ್ನು ಕಾಡುತ್ತವೆ. ಅಂತಹ ವೀಡಿಯೋಗಳಲ್ಲಿ ಈ ವೀಡಿಯೋ ಸಹ ಒಂದು.

ಬೆಂಗಳೂರಿನಲ್ಲಿ ಕಾರು ಚಾಲನೆ ಮಾಡಿದ 10 ವರ್ಷದ ಬಾಲಕ..!

ಈ ವೀಡಿಯೋವನ್ನು ಯೂ ಟ್ಯೂಬ್‍ನಲ್ಲಿ ಅಪ್ ಲೋಡ್ ಮಾಡಲಾಗಿದ್ದು, ರೇಣುಕೇಶ್ ಎಂಬ 10 ವರ್ಷದ ಬಾಲಕ ಕಾರು ಚಾಲನೆ ಮಾಡುತ್ತಿರುವುದನ್ನು ಕಾಣಬಹುದು. ಈ ವೀಡಿಯೋವನ್ನು ಬಾಲಕನೇ ಸ್ವತಃ ಕ್ಯಾಮೆರಾದಲ್ಲಿ ಸೆರೆ ಹಿಡಿದು ಅಪ್‍ಲೋಡ್ ಮಾಡಿದ್ದಾನೆ. ಈ ವೀಡಿಯೋಗೆ 10 ವರ್ಷ ವಯಸ್ಸಿನ ಎಂಬ ಶೀರ್ಷಿಕೆ ನೀಡಿರುವುದರಿಂದ ಜನರ ಗಮನವನ್ನು ತನ್ನತ್ತ ಸೆಳೆದು ಸುಮಾರು 22 ಲಕ್ಷದಷ್ಟು ವೀಕ್ಷಣೆ ಕಂಡಿದೆ. ಅಷ್ಟೆ ಅಲ್ಲದೇ 2 ನಿಮಿಷ 14 ಸೆಕೆಂಡ್ ಗಳಷ್ಟು ಇರುವ ಈ ಚಾನೆಲ್ ಗೆ 6 ಸಾವಿರಕ್ಕೂ ಅಧಿಕ ಮಂದಿ ಸಬ್ ಸ್ಕ್ರೈಬ್ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಕಾರು ಚಾಲನೆ ಮಾಡಿದ 10 ವರ್ಷದ ಬಾಲಕ..!

ಯಾವುದೇ ವ್ಯಕ್ತಿ ವೀಡಿಯೋವೊಂದನ್ನು ಅಪ್ ಲೋಡ್ ಮಾಡಿ ಏಕಾ ಏಕಿ ಜನಪ್ರಿಯವಾಗುವುದು ಹೇಗೆ ಎಂಬುದನ್ನು ಈ ವೀಡಿಯೋ ತೋರಿಸುತ್ತದೆ, ಅಲ್ಲದೇ ಇಂಟರ್ನೆಟ್ ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ತೋರಿಸುತ್ತದೆ.

ಬೆಂಗಳೂರಿನಲ್ಲಿ ಕಾರು ಚಾಲನೆ ಮಾಡಿದ ೧೦ ವರ್ಷದ ಬಾಲಕ..!

ಯೂಟ್ಯೂಬ್ ಚಾನೆಲ್‍ನಲ್ಲಿನ ಹೆಸರು ಮತ್ತು ಶೀರ್ಷಿಕೆ ಹೇಳುವಂತೆ ಈ ವೀಡಿಯೋದಲ್ಲಿ 10 ವರ್ಷದ ಬಾಲಕನು ಸಾರ್ವಜನಿಕ ರಸ್ತೆಗಳಲ್ಲಿ ಹ್ಯುಂಡೈ ಕ್ರೆಟಾ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾನೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಈ ವೀಡಿಯೋವನ್ನು ಯಾರೋ ದಾರಿ ಹೋಕರು ಚಿತ್ರಿಕರಿಸಿಲ್ಲ.

ಬೆಂಗಳೂರಿನಲ್ಲಿ ಕಾರು ಚಾಲನೆ ಮಾಡಿದ ೧೦ ವರ್ಷದ ಬಾಲಕ..!

ಬದಲಿಗೆ ಕಾರು ಚಲಾಯಿಸುತ್ತಿರುವ ಬಾಲಕನೇ ಸ್ವತಃ ಚಿತ್ರಿಕರಿಸಿದ್ದಾನೆ. ಇಬ್ಬರು ಬಾಲಕರು ವೀಡಿಯೋದಲ್ಲಿರುವ ಕಾರನ್ನು ಚಲಾಯಿಸಲು ಅಣಿಯಾಗುತ್ತಿರುವುದರಿಂದ ವೀಡಿಯೋ ಶುರುವಾಗುತ್ತದೆ. ಈ ವೀಡಿಯೋವನ್ನು ಅನೇಕ ಬಾರಿ ಚಿತ್ರಿಕರಿಸಿದ್ದು, ಎಡಿಟ್ ಮಾಡಲಾಗಿದೆ. ಇದನ್ನು ಮ್ಯೂಸಿಕ್ ವೀಡಿಯೋ ತರಹ ಶೂಟ್ ಮಾಡಿ ಇದೆಲ್ಲಾ ಕೂಲ್ ಎಂಬಂತೆ ಬಿಂಬಿಸಲಾಗಿದೆ.

ಸೂಕ್ಷ್ಮವಾಗಿ ಗಮನಿಸಿದರೆ ಕಾರಿನಲ್ಲಿರುವ ಗಡಿಯಾರದಿಂದ ಕಾರು ಸಾಯಂಕಾಲ ಪೀಕ್ ಅವರ್ ನಲ್ಲಿ ಶೂಟ್ ಮಾಡಿರುವುದು ಗೊತ್ತಾಗುತ್ತದೆ. ಇಬ್ಬರು ಬಾಲಕರು ಮಾತ್ರ ಕಾರಿನಲ್ಲಿ ಕುಳಿತು, ಡ್ರೈವ್ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ.

ಬೆಂಗಳೂರಿನಲ್ಲಿ ಕಾರು ಚಾಲನೆ ಮಾಡಿದ ೧೦ ವರ್ಷದ ಬಾಲಕ..!

ಜೊತೆಗೆ ಬಾಲಕರು ಸೀಟ್ ಬೆಲ್ಟ್ ಧರಿಸದೇ ಇರುವುದನ್ನು ಕಾಣಬಹುದಾಗಿದೆ. ಹ್ಯುಂಡೈ ಕ್ರೆಟಾ ಚಾಲನೆ ಮಾಡುತ್ತಿರುವ ಬಾಲಕನು ಕಾರಿನ ಸ್ಟೀಯರಿಂಗ್ ಹಿಡಿದಿರುವುದನ್ನು ಕಾಣಬಹುದು. ಸ್ಟೀಯರಿಂಗ್ ವ್ಹೀಲ್ ಅನ್ನು ನೋಡುತ್ತಿರುವ ಬಾಲಕನಿಗೆ, ಆ ಸ್ಟೀಯರಿಂಗ್ ಗ್ರಿಪ್ ಸಿಗದೆ, ಕಾರು ನಿಯಂತ್ರಣಕ್ಕೆ ಬರದೇ ಇರುವ ಸಾಧ್ಯತೆಗಳು ಇವೆ. ಈ ರೀತಿಯ ಸಂದರ್ಭಗಳಲ್ಲಿ ಮಕ್ಕಳಿಗೆ ಮಾತ್ರವಲ್ಲದೇ ದೊಡ್ಡವರಿಗೂ ಸಹ ಈ ರೀತಿಯ ದೊಡ್ಡ ಕಾರುಗಳನ್ನು ಹಿಡಿತಕ್ಕೆ ತೆಗೆದು ಕೊಳ್ಳುವುದು ಕಷ್ಟವಾಗುತ್ತದೆ.

ಬೆಂಗಳೂರಿನಲ್ಲಿ ಕಾರು ಚಾಲನೆ ಮಾಡಿದ ೧೦ ವರ್ಷದ ಬಾಲಕ..!

ಅದೂ ಅಲ್ಲದೇ, ಈ ವೀಡಿಯೋವನ್ನು ಡಿಸ್ ಲೈಕ್ ಮಾಡಿರುವುದಕ್ಕಿಂತ 3 ಪಟ್ಟು ಹೆಚ್ಚು ಅಂದರೆ 6 ಸಾವಿರಕ್ಕೂ ಅಧಿಕ ಲೈಕ್ ಗಳನ್ನು ಗಿಟ್ಟಿಸಿರುವುದನ್ನು ನೋಡಿದರೆ ಈ ರೀತಿಯ ಅಪಾಯಕಾರಿ ವೀಡಿಯೋಗಳನ್ನು ಬೆಂಬಲಿಸಲು ತುಂಬಾ ಜನರಿರುವುದು ತಿಳಿಯುತ್ತದೆ.

ಬೆಂಗಳೂರಿನಲ್ಲಿ ಕಾರು ಚಾಲನೆ ಮಾಡಿದ ೧೦ ವರ್ಷದ ಬಾಲಕ..!

ಈ ರೀತಿಯ ವೀಡಿಯೋಗಳಿಗೆ ಯಾರು ಜವಾಬ್ದಾರರು ? ಮಾಹಿತಿ ತಂತ್ರಜ್ಣಾನದ ಈ ಯುಗದಲ್ಲಿ ಈ ರೀತಿಯ ವೀಡಿಯೋಗಳನ್ನು ರೆಕಾರ್ಡ್ ಮಾಡಿ ಅಪ್ ಲೋಡ್ ಮಾಡುವುದು ತುಂಬಾ ಸುಲಭ, ಆದರೆ ಅದರ ಪರಿಣಾಮ ? ಇದಕ್ಕೆ ಹೊಣೆ ಯಾರು ? ಮಕ್ಕಳೋ, ತಂದೆ ತಾಯಿಯೋ ಅಥವಾ ಈ ರೀತಿಯ ಅಪಾಯಕಾರಿ ವೀಡಿಯೋಗಳಿಗೆ ಬೆಂಬಲ ನೀಡಿ ಹೊಣೆಗಾರಿಕೆ ಮರೆಯುವ ಜನಗಳೋ ಗೊತ್ತಿಲ್ಲ.

ಬೆಂಗಳೂರಿನಲ್ಲಿ ಕಾರು ಚಾಲನೆ ಮಾಡಿದ ೧೦ ವರ್ಷದ ಬಾಲಕ..!

ಇನ್ನೂ ಈ ವೀಡಿಯೋದಲ್ಲಿ ಸಿಕ್ಕಿರುವ ಮಾಹಿತಿ ಪ್ರಕಾರ ಘಟನೆ ನಡೆದಿರುವುದು ನಮ್ಮ ಬೆಂಗಳೂರಿನಲ್ಲಿ ನಡೆದಿರುವುದು ಸ್ಪಷ್ಟವಾಗಿದ್ದು, ಯಾರೇ ಪಾಲಕರು ತಮ್ಮ ಮಕ್ಕಳು ಸೂಕ್ತ ವಯಸ್ಸಿಗೆ ಬರುವವರೆಗೆ ವಾಹನಗಳನ್ನು ಚಾಲನೆಗೆ ಅವಕಾಶ ನೀಡದಿರುವುದು ಒಳಿತು.

Most Read Articles

Kannada
English summary
Video of a 10-Year-Old Kid Driving Hyundai Creta on Public Roads Goes Viral, Who is Responsible? - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X