Rajinikanth: ಜೈಲರ್ ಸೂಪರ್ ಹಿಟ್.. ರಜನಿಗೆ 1.26 ಕೋಟಿಯ ಹೊಸ ಬಿಎಂಡಬ್ಲ್ಯೂ ಕಾರು ಉಡೊಗೊರೆ

ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಸೇರಿದಂತೆ ಇಡೀ ಜೈಲರ್ (Jailer) ಚಿತ್ರತಂಡ ಯಶಸ್ಸಿನ ಸಂಭ್ರಮದಲ್ಲಿದೆ. ನೆಲ್ಸನ್ ದಿಲೀಪ್‌ಕುಮಾರ್ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾ 600 ಕೋಟಿ ರೂಪಾಯಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ್ದು, ಸನ್ ಪಿಕ್ಚರ್ಸ್ ಮುಖ್ಯಸ್ಥ ಕಲಾನಿತಿ ಮಾರನ್ ಹೊಸ ಬಿಎಂಡಬ್ಲ್ಯೂ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಈ ಸಂಬಂಧ ಟ್ವಿಟರ್‌ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿರುವ ಸನ್ ಪಿಕ್ಚರ್ಸ್, 'ಜೈಲರ್ ಸಕ್ಸಸ್ ಸೆಲೆಬ್ರೇಷನ್ಸ್ ಮುಂದಿವರಿದಿದೆ. ರಜನಿಕಾಂತ್ ಅವರಿಗೆ ವಿವಿಧ ಕಾರು ಮಾದರಿಗಳನ್ನು ತೋರಿಸಲಾಯಿತು. ಅವರು ಆಯ್ಕೆ ಮಾಡಿದ ಕಪ್ಪು ಬಣ್ಣದ ಬಿಎಂಡಬ್ಲ್ಯೂ ಎಕ್ಸ್7 (BMW X7) ಕಾರಿನ ಕೀಲಿಯನ್ನು ಕಲಾನಿತಿ ಮಾರನ್ ರಜನಿ ಅವರಿಗೆ ಹಸ್ತಾಂತರಿಸಿದರು' ಎಂದು ಬರೆಯಲಾಗಿದೆ.

Rajinikanth: ಜೈಲರ್ ಸೂಪರ್ ಹಿಟ್.. ರಜನಿಗೆ 1.26 ಕೋಟಿಯ ಹೊಸ ಬಿಎಂಡಬ್ಲ್ಯೂ ಕಾರು ಉಡೊಗೊರೆ

ಸದ್ಯ, ರಜಿನಿಕಾಂತ್ ಅವರಿಗೆ ಗಿಫ್ಟ್ ನೀಡಲಾಗಿರುವ ಬಿಎಂಡಬ್ಲ್ಯೂ ಎಕ್ಸ್7 ಭಾರತದ ಮಾರುಕಟ್ಟೆಯಲ್ಲಿ ರೂ.1.24 ರಿಂದ ರೂ.1.26 ಕೋಟಿ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. ಈ ಕಾರು, 3 - ಲೀಟರ್ ಟ್ವಿನ್ ಟರ್ಬೊ ಇನ್‌ಲೈನ್ 6 ಸಿಲಿಂಡರ್ ಪೆಟ್ರೋಲ್ ಅಥವಾ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರೆಯಲಿದೆ.

ಕ್ರಮವಾಗಿ 381 PS ಗರಿಷ್ಠ ಪವರ್ ಹಾಗೂ 520 Nm ಪೀಕ್ ಟಾರ್ಕ್, 340 PS ಪವರ್, 700 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 8 ಸ್ವೀಡ್ ಆಟೋಮೆಟಿಕ್ ಟ್ರಾಸ್ಮಿಷನ್ ಆಯ್ಕೆಯಲ್ಲಿ ಸಿಗುತ್ತದೆ. ಆರು ಆಸನ ವ್ಯವಸ್ಥೆಯನ್ನು ಪಡೆದಿದ್ದು, 4WD (ಫೋರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಒಳಗೊಂಡಿದೆ. ರೂಪಾಂತರಗಳಿಗೆ ಅನುಗುಣವಾಗಿ 11.29 - 14.31 kmpl ಮೈಲೇಜ್ ನೀಡುತ್ತದೆ.

Rajinikanth: ಜೈಲರ್ ಸೂಪರ್ ಹಿಟ್.. ರಜನಿಗೆ 1.26 ಕೋಟಿಯ ಹೊಸ ಬಿಎಂಡಬ್ಲ್ಯೂ ಕಾರು ಉಡೊಗೊರೆ

ಬಿಎಂಡಬ್ಲ್ಯೂ ಎಕ್ಸ್7 ದುಬಾರಿ ಬೆಲೆಯ ಕಾರಾಗಿರಿವುದರಿಂದ ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಮುಖ್ಯವಾಗಿ, 12.3 - ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, 14.9 - ಇಂಚಿನ ಇನ್ಫೋಟೈನ್ಮೆಂಟ್ ಯೂನಿಟ್, 16 - ಸ್ಪೀಕರ್ ಹರ್ಮನ್ ಕಾರ್ಡನ್ ಮ್ಯೂಸಿಕ್ ಸಿಸ್ಟಮ್, ಡಿಜಿಟಲ್ ಕೀ, ಪನೋರಮಿಕ್ ಸನ್‌ರೂಫ್ ಹಾಗೂ ಕನೆಕ್ಟೆಡ್ ಕಾರ್ ಟೆಕ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.

ಈ ನೂತನ ಬಿಎಂಡಬ್ಲ್ಯೂ ಎಕ್ಸ್7 ಎಸ್‌ಯುವಿ, ನಾಲ್ಕು ಡ್ರೈವ್ ಮೋಡ್‌ಗಳನ್ನು ಹೊಂದಿದೆ. ಅವುಗಳೆಂದರೆ, ಕಂಫರ್ಟ್, ಎಫಿಶಿಯೆಂಟ್, ಸ್ಪೋರ್ಟ್ ಮತ್ತು ಸ್ಪೋರ್ಟ್ ಪ್ಲಸ್. ಜೊತೆಯಲ್ಲಿ ಈ ಕಾರು, ಕೇವಲ 5.9 ಸೆಕೆಂಡುಗಳಲ್ಲಿ 0 - 100 kmph ವೇಗವನ್ನು ಪಡೆಯಲಿದೆ. ಈ ಮೂಲಕ ಇದರಲ್ಲಿ ಪ್ರಯಾಣಿಸುವವರಿಗೆ ಅತ್ಯುತ್ತಮ ಅನುಭವ ನೀಡುತ್ತದೆ.

ಸುರಕ್ಷತೆಯ ದೃಷ್ಟಿಯಿಂದ ಈ ಬಿಎಂಡಬ್ಲ್ಯೂ ಕಾರು ಅತ್ಯಾಧುನಿಕವಾಗಿದ್ದು, ಮಲ್ಟಿ ಏರ್‌ಬ್ಯಾಗ್ಸ್, 360-ಡಿಗ್ರಿ ಕ್ಯಾಮೆರಾ, CBC (ಕಾರ್ನರಿಂಗ್ ಬ್ರೇಕ್ ಕಂಟ್ರೋಲ್), DSC (ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್), ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಡ್ರೈವರ್ ಡ್ರೆಸಿನೆಸ್ ಡಿಟೆಕ್ಷನ್ ಒಳಗೊಂಡಂತೆ ಹತ್ತಾರು ಸೇಫ್ಟಿ ಫೀಚರ್ಸ್ ಪಡೆದಿದೆ. ಈ ಕಾರಿಗೆ ಆಡಿ ಹಾಗೂ ವೋಲೊ ಕಂಪನಿ ಕಾರುಗಳು ಪ್ರಬಲ ಪ್ರತಿಸ್ಪರ್ಧಿಯಾಗಿವೆ.

ಇನ್ನು, ರಜನಿಕಾಂತ್ ನಟನೆಯ ಜೈಲರ್ ಸಿನಿಮಾದಲ್ಲಿ ಶಿವರಾಜ್ ಕುಮಾರ್, ಮೋಹನ್ ಲಾಲ್, ತಮನ್ನಾ ಭಾಟಿಯಾ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಮೊನ್ನೆಯಷ್ಟೇ ರಜನಿಕಾಂತ್ ಅವರು, ಬೆಂಗಳೂರಿನ ಜಯನಗರದಲ್ಲಿರುವ ಬಿಎಂಟಿಸಿ ಡಿಪೋಗೆ ತಮ್ಮ ಸ್ನೇಹಿತ ರಾಜ್ ಬಹದ್ದೂರ್ ಜೊತೆಗೆ ಆಗಮಿಸಿ ಎಲ್ಲರಲ್ಲೂ ಅಚ್ಚರಿ ಮಾಡಿಸಿದ್ದರು. ರಜಿನಿಕಾಂತ್​ ಅವರನ್ನು ನೋಡಿ, ಅಲ್ಲಿನ ಸಿಬ್ಬಂದಿ ಸೆಲ್ಫಿ ತೆಗೆದುಕೊಂಡು ಖುಷಿಪಟ್ಟಿದ್ದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, September 1, 2023, 15:03 [IST]
English summary
Video rajinikanth gets luxury bmw car from jailer producer details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+