ಅಪ್ಪನ ಕೊನೆ ಆಸೆ: ಹೊಚ್ಚ ಹೊಸ ಕಾರಿನಂತೆ 'ಚೆವ್ರೊಲೆಟ್ ಟವೇರಾ' ರೆಡಿ ಮಾಡಿಸಿದ ಮಗ.. Video

ನೆನಪುಗಳೆಂದರೆ ಹಾಗೆ ಅಲ್ವಾ.. ಸಣ್ಣ ವಯಸ್ಸಿನಲ್ಲಿ ಕುಟುಂಬಕ್ಕಾಗಿ ತಂದೆ ಖರೀದಿಸುವ ಮೊದಲ ವಾಹನದ ಮೇಲೆ ಮಕ್ಕಳು ಅವಿನಾಭಾವ ಸಂಬಂಧ ಹೊಂದಿರುತ್ತಾರೆ. ಜೊತೆಗೆ ಇದರಲ್ಲಿಯೇ ಕನಸುಗಳನ್ನು ಕಂಡಿರುತ್ತಾರೆ. ಕೆಲವರು, ತಮ್ಮ ಪೋಷಕರು ಖರೀದಿಸಿದ ಫಸ್ಟ್ ಕಾರು ಅಥವಾ ಬೈಕ್‌ಗಳನ್ನು ಎಷ್ಟೇ ಕಷ್ಟವಾಗಲಿ ಜೀವನಪೂರ್ತಿ ತಮ್ಮಲ್ಲಿಯೇ ಇಟ್ಟುಕೊಳ್ಳುತ್ತಾರೆ.

ಇದೀಗ, ತನ್ನ ತಂದೆಯ ಪ್ರೀತಿಯ ಚೆವ್ರೊಲೆಟ್ ಟವೇರಾವನ್ನು ಹೊಸ ಕಾರಿನಂತೆ ಮಗನೊಬ್ಬ ಮರು ವಿನ್ಯಾಸ ಮಾಡಿಸಿದ್ದಾರೆ. ಆಟೋರೌಂಡರ್‌ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಟವೇರಾವನ್ನು ನೂತನ ಕಾರಿನಂತೆ ರೆಡಿ ಮಾಡಿರುವ ಕುರಿತಂತೆ ಸ್ವತಃ ನಿರೂಪಕರಾಗಿರುವ ಪುಣೆಯ ವರ್ಕ್‌ಶಾಪ್‌ನ ಮಾಲೀಕ ಮಾತನಾಡಿದ್ದಾರೆ. ಬಹುತೇಕ ದಶಕಗಳ ಹಿಂದಿನ ಕಾರುಗಳನ್ನು ಮತ್ತೆ ಮಾಡಿಫೈಗೊಳಿಸಿವುದು ಕಷ್ಟವಾದ ಕೆಲಸ. ಆದರೆ, ಇದು ಭಾವನಾತ್ಮಕ ವಿಚಾರವಾಗಿರುವುದರಿಂದ ಒಪ್ಪಿಕೊಂಡೆ ಎಂದು ಹೇಳಿದ್ದಾರೆ.

ಅಪ್ಪನ ಕೊನೆ ಆಸೆ: ಹೊಚ್ಚ ಹೊಸ ಕಾರಿನಂತೆ ಚೆವ್ರೊಲೆಟ್ ಟವೇರಾ ರೆಡಿ ಮಾಡಿಸಿದ ಮಗ.. Video

ಈ ವಿಡಿಯೋದಲ್ಲಿ ವರ್ಕ್‌ಶಾಪ್‌ಗೆ ಟವೇರಾ ಬಂದಾಗ ಹೇಗಿತ್ತು. ಅದನ್ನು ಹೇಗೆ ಅತ್ಯಾಧುನಿಕ ಕಾರಿನಂತೆ ಮರುವಿನ್ಯಾಸಗೊಳಿಸಲಾಯಿತು ಎಂಬುದನ್ನು ಕಾಣಬಹುದು. ಮೊದಲಿಗೆ ಅಲ್ಲಿನ ನುರಿತ ಸಿಬ್ಬಂದಿ ಹಳೆಯ ಫ್ರಂಟ್ ಬಂಪರ್, ಹೆಡ್ ಲೈಟ್, ರೇರ್ ಬಂಪರ್, ಟೈಲ್‌ಲೈಟ್ ಅನ್ನು ತೆಗೆಯುತ್ತಾರೆ. ಕಾರಿನ ಬಾಡಿಯ ವಿವಿಧ ಭಾಗದಲ್ಲಿ ಡೆಂಟ್ ಕೆಲಸವನ್ನು ಮಾಡಿ, ಸಂಪೂರ್ಣವಾಗಿ ಹೊಸದಾಗಿ ಪೈಂಟ್ ಮಾಡುತ್ತಾರೆ.

ಇದಿಷ್ಟೇ ಅಲ್ಲದೆ, ಚೆವ್ರೊಲೆಟ್ ಟವೇರಾದ ಒಳಭಾಗವನ್ನು ಅಚ್ಚುಕಟ್ಟಾಗಿ ಮಾಡಿಫೈಗೊಳಿಸಿರುವ ಬಗ್ಗೆ ನಿರೂಪಕರು ವಿವರಿಸಿದ್ದಾರೆ. ಈ ಹಳೆಯ ಕಾರನ್ನು ಅತ್ಯಾಕರ್ಷಕವಾಗಿ ಕಾಣುವಂತೆ ಮಾಡಲು ಹೊಸದಾದ ಸೀಟುಗಳು, ಇನ್ಫೋಟೈನ್ಮೆಂಟ್ ಸಿಸ್ಟಮ್, ಪವರ್ ಸ್ಟೀರಿಂಗ್ ಮತ್ತು ಡಬಲ್ ಎಸಿ ವೆಂಟ್ ಸೇರಿದಂತೆ ನವೀನ ವೈಶಿಷ್ಟ್ಯಗಳನ್ನು ಸೇರಿಸಲಾಯಿತು. ಈ ಮೂಲಕ ನೂತನ ಕಾರುಗಳಿಗೆ ಟಫ್ ಫೈಟ್ ನೀಡುವಂತೆ ಮರು ವಿನ್ಯಾಸಗೊಳಿಸಲಾಯಿತು ಎಂದು ಹೇಳಿದ್ದಾರೆ.

ಅಪ್ಪನ ಕೊನೆ ಆಸೆ: ಹೊಚ್ಚ ಹೊಸ ಕಾರಿನಂತೆ ಚೆವ್ರೊಲೆಟ್ ಟವೇರಾ ರೆಡಿ ಮಾಡಿಸಿದ ಮಗ.. Video

ಅಂತಿಮವಾಗಿ ಚೆವ್ರೊಲೆಟ್ ಟವೇರಾವನ್ನು ಗ್ರಾಹಕರಿಗೆ ಡೆಲಿವರಿ ಮಾಡುತ್ತಿರುವ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ಅಚ್ಚುಕಟ್ಟಾಗಿ ಮರುವಿನ್ಯಾಸಗೊಳಿಸಲಾದ ಕಾರನ್ನು ಕಂಡು ಆ ಕ್ಷಣ ಕೊಂಚ ಭಾವೋದ್ವೇಗಕ್ಕೆ ಒಳಗಾಗುವ ಗ್ರಾಹಕ, ಮೂರನೇ ತರಗತಿಯಲ್ಲಿದ್ದಾಗ ತನ್ನ ತಂದೆ ಈ ಕಾರನ್ನು ಖರೀದಿಸಿದ್ದರು. ನೋಡಿದ ತಕ್ಷವೇ ನನ್ನನ್ನು ಹಳೆಯ ದಿನಗಳು ಜ್ಞಾಪಕ ಬಂದು, ಮತ್ತೆ ಮಗುವಾದಂತೆ ಭಾಸವಾಯಿತು ಎಂದು ಹೇಳಿ, ವರ್ಕ್‌ಶಾಪ್‌ ಮಾಲೀಕರಿಗೆ ತುಂಬು ಮನಸ್ಸಿನಿಂದ ಧನ್ಯವಾದ ಅರ್ಪಿಸಿದ್ದಾರೆ.

ಚೆವ್ರೊಲೆಟ್ ಟವೆರಾ ಬಗ್ಗೆ ಒಂದಷ್ಟು ಮಾತನಾಡುವುದಾದರೆ, ಇದನ್ನು ಅಮೆರಿಕದ ಅತಿದೊಡ್ಡ ವಾಹನ ತಯಾರಕ ಕಂಪನಿ 'ಚೆವಿ' ಭಾರತದ ಮಾರುಕಟ್ಟೆಯಲ್ಲಿ ಪರಿಚಯಿಸಿತ್ತು. ಇದು ಎಂಪಿವಿಯಾಗಿದ್ದರಿಂದ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಗಳಿಸಿತ್ತು. ದಶಕಗಳ ಹಿಂದೆ ಹೆಚ್ಚಿನ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಿದ್ದರು. ಆದರೆ, ದೇಶದಲ್ಲಿ ಟವೆರಾದಂತೆ ಕಂಪನಿ ಬೇರೆ ಯಾವ ಕಾರುಗಳು ಕ್ಲಿಕ್ ಆಗಲಿಲ್ಲ. ಇದರಿಂದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು. ಆದರೂ, ಇಂದಿಗೂ ರಸ್ತೆಗಳಲ್ಲಿ ಚೆವ್ರೊಲೆಟ್ ಟವೆರಾ ಆಗೊಮ್ಮೆ, ಈಗೊಮ್ಮೆ ಕಂಡು ಬರುತ್ತಿರುತ್ತದೆ.

ಅಪ್ಪನ ಕೊನೆ ಆಸೆ: ಹೊಚ್ಚ ಹೊಸ ಕಾರಿನಂತೆ ಚೆವ್ರೊಲೆಟ್ ಟವೇರಾ ರೆಡಿ ಮಾಡಿಸಿದ ಮಗ.. Video

ಇನ್ನು, ಪ್ರತಿಯೊಬ್ಬರು ತಮ್ಮ ಕುಟುಂಬ ಮೊದಲ ಕಾರಿನ ಮೇಲೆ ಅತೀವ ಪ್ರೀತಿಯನ್ನು ಹೊಂದಿರುತ್ತಾರೆ. ನಾನಾ ಕಾರಣಗಳಿಗೆ ಅದನ್ನು ಕಳೆದುಕೊಂಡಾಗ ಪುನಃ ಪಡೆಯಲು ಅವರು ಪಡುವ ಕಷ್ಟವನ್ನು ನೋಡಿದ್ದೇವೆ. ಇಲ್ಲಿಯೂ ತನ್ನ ತಂದೆಯ ಕೊನೆ ಆಸೆಯಂತೆ ಪ್ರೀತಿಯ ಚೆವ್ರೊಲೆಟ್ ಟವೇರಾವನ್ನು ಮಗನೊಬ್ಬ ಹೊಸ ಕಾರಿನಂತೆ ಮರು ವಿನ್ಯಾಸಗೊಳಿಸಿರುವುದನ್ನು ಕಾಣಬಹುದು. ಜೊತೆಗೆ ಪುಣೆಯ ವರ್ಕ್‌ಶಾಪ್‌ ಮಾಲೀಕನ ಕಾರ್ಯವನ್ನು ಮೆಚ್ಚಲೇಬೇಕು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ವೀಕ್ಷಿಸಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್ ಮತ್ತು ಶೇರ್ ಮಾಡುವುದನ್ನು ಮರೆಯದಿರಿ.

Article Published On: Monday, May 8, 2023, 10:28 [IST]
English summary
Video son restores chevrolet tavera his dads last wish details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+