Video: ಇದ್ದಕ್ಕಿದ್ದಂತೆ ಬೆಟ್ಟದಿಂದ ಉರುಳಿಬಿದ್ದ ಬೃಹತ್ ಬಂಡೆಗಳು..ಅದೃಷ್ಟ ಅಂದ್ರೆ ಇದೇ ಅಲ್ವಾ, ಪವಾಡವೇ ನಡೆದೋಯ್ತು!
ದೇಶದ ವಿವಿಧೆಡೆ ಮಳೆ ಶುರುವಾಗಿದ್ದು, ಅಲ್ಲಲ್ಲಿ ಪ್ರವಾಸ ಪರಿಸ್ಥಿತಿ, ಗುಡ್ಡ ಕುಸಿತ ಪ್ರಕರಣಗಳು ವರದಿಯಾಗುತ್ತಿವೆ. ಮಳೆ ಹೆಚ್ಚಾದರೆ ಬೆಟ್ಟಗಳು ಸಡಿಲಗೊಂಡು ಇದ್ದಕ್ಕಿಂತ ಧರಾಶಾಹಿಯಾಗುತ್ತವೆ. ಇಂತಹ ಸನ್ನಿವೇಶದಲ್ಲಿ ಎಷ್ಟೋ ಮಂದಿ ಪ್ರಾಣವನ್ನು ಕಳೆದುಕೊಳ್ಳುತ್ತಾರೆ. ಸದ್ಯ, ಆ ರೀತಿಯ ಘಟನೆ ನಡೆದಿದ್ದು, ಪ್ರವಾಸಿಗರು ಗ್ರೇಟ್ ಎಸ್ಕೇಪ್ ಆಗಿದ್ದಾರೆ.
ಹಿಮಾಚಲ ಪ್ರದೇಶದ ವಿವಿಧ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ದಾಟ್ಯಾರ್ ಗ್ರಾಮದ ಸಮೀಪವಿರುವ ಪರ್ವಾನೂ - ಶಿಮ್ಲಾ ಹೆದ್ದಾರಿಯಲ್ಲಿ ಗುಡ್ಡದಿಂದ ಬಂಡೆಗಳು ಕುಸಿದು ಬಿದ್ದಿವೆ. ಅದೃಷ್ಟವಶಾತ್ ಕಾರಿನಲ್ಲಿ ಹೋಗುತ್ತಿದ್ದ ಪ್ರಯಾಣಿಕರು ಸ್ವಲ್ಪ ಅಂತರದಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆ ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ಟ್ವಿಟರ್‌ನಲ್ಲಿರುವ ವಿಡಿಯೋದಲ್ಲಿ ಗುಡ್ಡ ಕುಸಿಯುತ್ತಿರುವ ಕಡೆ ಕ್ಷಣದ ದೃಶ್ಯಗಳು ಸೆರೆಯಾಗಿವೆ. ಬೆಟ್ಟದಿಂದ ಕಲ್ಲು ಬೀಳುವುದು ಶುರುವಾದ ಕೊಡಲೇ ಮೊದಲೆರಡು ಕಾರುಗಳು, ಅಲ್ಲಿಂದ ಸುಲಭವಾಗಿ ಪಾರಾಗಿವೆ. ಮೂರನೇ ಕಾರು, ಬರುವಷ್ಟರಲ್ಲಿ ಕಲ್ಲುಗಳು ರಸ್ತೆಗೆ ಬೀಳುತ್ತಿರುತ್ತವೆ. ಆದರೆ, ಕೊಂಚದರಲ್ಲಿಯೇ ಆ ಕಾರಿನಲ್ಲಿದ್ದವರೂ ಅಪಾಯದಿಂದ ತಪ್ಪಿಸಿಕೊಂಡಿದ್ದಾರೆ. ಅದನ್ನು ವಿಡಿಯೋದಲ್ಲಿ ಕಾಣಬಹುದು.
ಬೆಟ್ಟದಿಂದ ಕುಸಿದ ಕಲ್ಲುಗಳು ಭಾರೀ ಗಾತ್ರದಲ್ಲಿದ್ದವು. ಒಂದೊಮ್ಮೆ ಕಾರಿನ ಮೇಲೆ ಬಿದ್ದಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಕಾರಿನಲ್ಲಿದ್ದ ಪ್ರವಾಸಿಗರು ಶಿಮ್ಲಾದಿಂದ ಚಂಡೀಗಢಕ್ಕೆ ಪ್ರಯಾಣಿಸುತ್ತಿದ್ದರು. ಹಿಮಾಚಲ ಪ್ರದೇಶದ ವಿವಿಧ ಭಾಗದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಮತ್ತೊಂದು ಘಟನೆಯಲ್ಲಿ ಬದರಿನಾಥ್ ಹೆದ್ದಾರಿಯ ಚಿಂಕಾ ಸಮೀಪ ಗುಡ್ಡದಿಂದ ಬಂಡೆಗಳು ಉರುಳಿದ್ದು, ಸಂಚಾರವನ್ನು ನಿರ್ಬಂಧಿಸಲಾಗಿದೆ.
ಮಳೆಗಾಲದಲ್ಲಿ ಕಾರುಗಳನ್ನು ಚಲಾಯಿಸುವಾಗ ಕೊಂಚ ಜಾಗ್ರತೆಯಿರಲಿ. ಅದರಲ್ಲೂ ನಿಮಗೆ ತಿಳಿದಿಲ್ಲದ ರಸ್ತೆಗಳಲ್ಲಿ ವಾಹನಗಳನ್ನು ಚಲಾಯಿಸಬೇಡಿ. ಧಾರಾಕಾರ ಮಳೆಯಿಂದ ಪ್ರವಾಹ ಅಥವಾ ಭೂಕುಸಿತ ಸಂಭವಿಸಿ, ನಿಮ್ಮನ್ನು ಅಪಾಯಕ್ಕೆ ದೂಡಬಹುದು. ಈ ಕಾರಣಕ್ಕೆ ನಿಮಗೆ ತಿಳಿದಿರುವ ರಸ್ತೆಯಲ್ಲಿ ವಾಹನಗಳನ್ನು ಓಡಿಸಿ. ಆದಷ್ಟು ಮಳೆಗಾಲದಲ್ಲಿ ಪ್ರವಾಸಕ್ಕೆ ಹೋಗುವುದನ್ನು ಮಾಡಬೇಡಿ.
ಜೋರು ಮಳೆಯಾಗುತ್ತಿದ್ದು, ನೀವು ಹೋಗುವ ರಸ್ತೆಯಲ್ಲಿ ನದಿ ಅಥವಾ ಹಳ್ಳಗಳಿದ್ದು, ಅಲ್ಲಿ ಈ ಮೊದಲು ಪ್ರವಾಹ ಬಂದಿದ್ದರೆ ಆದಷ್ಟು ಮಳೆ ಕಡಿಮೆಯಾದಾಗ ನಿಮ್ಮ ವಾಹನಗಳನ್ನು ನಿಧಾನವಾಗಿ ಚಲಾಯಿಸಿ. ಇಂತಹ ರಸ್ತೆಗಳಲ್ಲಿ ರಾತ್ರಿ ಚಾಲನೆ ಮಾಡುವುದು ತಪ್ಪಿಸಿ, ಆ ವೇಳೆ ನೀರಿನ ಪ್ರಮಾಣವನ್ನು ಅಂದಾಜಿಸಲು ಸಾಧ್ಯವಿಲ್ಲ.
ಪರ್ವಾನೂ - ಶಿಮ್ಲಾ ಹೆದ್ದಾರಿಯಲ್ಲಿ ಗುಡ್ಡದಿಂದ ಬಂಡೆ ಇದ್ದಕ್ಕಿಂದಂತೆ ಕುಸಿದು, ಕಾರಿನಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಕೃತಿಯ ಸೊಬಗನ್ನು ಹೊಂದಿರುವ ಹಿಮಾಚಲ ಪ್ರದೇಶ ರಾಜ್ಯದಲ್ಲಿ ಬೆಟ್ಟಗಳಲ್ಲಿಯೇ ರಸ್ತೆಗಳು ಇದ್ದು, ಮಳೆ ಬಂದಾಗ ಗುಡ್ಡ ಕುಸಿಯುವುದು ಸಾಮಾನ್ಯ. ಆದಷ್ಟು ಇಂತಹ ಸಮಯದಲ್ಲಿ ಅಲ್ಲಿಗೆ ಪ್ರವಾಸಕ್ಕೆ ಹೋಗುವುದನ್ನು ತಪ್ಪಿಸಬೇಕು. ಸರ್ಕಾರವು ಈ ರೀತಿಯ ರಸ್ತೆಗಳಲ್ಲಿ ತಡೆಗೋಡೆ ಅಥವಾ ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.


Click it and Unblock the Notifications