Video viral: ಎಂದಿಗೂ ಹೀಗೆ ಕಾರನ್ನು ನಿಲ್ಲಿಸಬೇಡಿ.. ಸ್ವಲ್ಪ ಯಾಮಾರಿದ್ರು ಕೈತುಂಬಾ ಖರ್ಚು ಮಾಡಬೇಕು!
ಭಾರತದಂತಹ ದೊಡ್ಡ ನಗರಗಳಿರುವ ದೇಶದಲ್ಲಿ ವಾಹನಗಳ ಪಾರ್ಕಿಂಗ್ ಎಂಬುದು ಬಹುದೊಡ್ಡ ಸಮಸ್ಯೆಯಾಗಿದೆ. ಕೆಲವರು ತಮ್ಮ ಕಾರು ಅಥವಾ ಬೈಕ್ ಗಳನ್ನು ಮಳೆ, ಬಿಸಿಲಿನಿಂದ ರಕ್ಷಿಸಲು ಫ್ಲೈ ಓವರ್ ಕೆಳಗೆ ಪಾರ್ಕ್ ಮಾಡುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಅಲ್ಲಿ ಹೆಚ್ಚಿನ ಸ್ಥಳಾವಕಾಶ ಸುಲಭವಾಗಿ ಸಿಗುತ್ತದೆ ಎಂದು ಅವರ ನಂಬಿಕೆಯಾಗಿದೆ.
ಆದರೆ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಫ್ಲೈ ಓವರ್ ಕೆಳಗಡೆ ವಾಹನಗಳನ್ನು ಪಾರ್ಕಿಂಗ್ ಮಾಡುವುದು ಸುರಕ್ಷಿತವೇ ಎಂಬ ಪ್ರಶ್ನೆಗಳು ಕಾಡುತ್ತಿವೆ. ಆ ಬಗ್ಗೆ ಚರ್ಚೆಗಳು ಕೂಡ ಆರಂಭವಾಗಿವೆ. ಒಂದೊಮ್ಮೆ ವೈರಲ್ ಆಗಿರುವ ವಿಡಿಯೋದಲ್ಲಿರುವ ಕಾರಿನಂತೆ ನಮ್ಮ ವಾಹನಕ್ಕೂ ಹಾನಿಯಾದರೆ, ಅದರ ರಿಪೇರಿಗೆ ಸಾಕಷ್ಟು ಹಣ ಖರ್ಚು ಮಾಡಬೇಕಾಗುತ್ತದೆ.

ಅಂದಹಾಗೆ ಈ ಘಟನೆ ನಡೆದಿರುವುದು ನಮ್ಮ ದೇಶದಲ್ಲಿ ಅಲ್ಲ. ಪಕ್ಕದ ಚೀನಾದಲ್ಲಿ. ವ್ಯಕ್ತಿಯೊಬ್ಬ ತನ್ನ ಕಾರನ್ನು ಫ್ಲೈ ಓವರ್ ಕೆಳಗೆ ಪಾರ್ಕ್ ಮಾಡಿ, ತನ್ನ ಕೆಲಸಕ್ಕೆ ತೆರಳಿದ್ದಾನೆ. ಆದರೆ, ಮಳೆಗಾಲವಾದ್ದರಿಂದ ಕೆಲವೇ ಗಂಟೆಗಳಲ್ಲಿ ಮಳೆ ಆರಂಭವಾಗಿದೆ. ಅದು ಜಡಿ ಮಳೆಯಾಗಿದ್ದರಿಂದ ಯಾವುದೇ ಸಮಸ್ಯೆ ಆಗಿಲ್ಲ. ಆದರೆ, ಇದ್ದಕ್ಕಿದಂತೆ ಜೋರು ಮಳೆ ಶುರುವಾಗಿದ್ದು, ಅಲ್ಲಿಂದ ಸಮಸ್ಯೆ ತೀವ್ರಗೊಂಡಿದೆ.
ಚೀನಾದಲ್ಲಿ ಬಹುತೇಕ ಮೆಟ್ರೋ ಮಾರ್ಗಗಳು ಅಂಡರ್ ಗ್ರೌಂಡ್ ನಲ್ಲಿರುತ್ತವೆ. ಇದರಿಂದಾಗಿ ಈ ಫ್ಲೈ ಓವರ್ (ಸೇತುವೆ) ವಾಹನ ಸಂಚಾರಕ್ಕಾಗಿಯೇ ಮೀಸಲಾಗಿದೆ ಎಂದು ಸುಲಭವಾಗಿ ಹೇಳಬಹುದು. ಅಲ್ಲಿ ಯಾವುದೇ ರೀತಿಯಲ್ಲಿ ನೀರು ನಿಂತು, ವಾಹನ ಸಂಚಾರಕ್ಕೆ ಅಡ್ಡಿಯಾಗಬಾರದೆಂದು ಫೈಫ್ ಗಳ ಮೂಲಕ ನೀರನ್ನು ಹೊರ ಬಿಡಲಾಗುತ್ತದೆ. ಸದ್ಯದ ಘಟನೆಯಲ್ಲೂ ಫೈಫ್ ಮುಖಾಂತರ ವೇಗವಾಗಿ ಬಂದ ನೀರು ಕಾರಿನ ಮೇಲೆ ಬಿದ್ದಿದೆ.
ನೀರು ಬಿದ್ದ ರಭಸಕ್ಕೆ ಕಾರಿನ ವಿಂಡ್ ಶೀಲ್ಡ್ ಒಡೆದು ಹೋಗಿದೆ. ಕ್ಯಾಬಿನ್ ಒಳಭಾಗ ಸಂಪೂರ್ಣವಾಗಿ ನೀರು ನುಗ್ಗಿದೆ. ಡ್ಯಾಶ್ ಬೋರ್ಡ್ ಸೇರಿದಂತೆ ಎಲೆಕ್ಟ್ರಿಕ್ ಪರಿಕರಗಳೆಲ್ಲ ಹಾಳಾಗಿದ್ದು, ಕಾರಿನ ಬಾಗಿಲಿಂದ ನೀರು ಸೋರಿಕೆಯಾಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇದರಿಂದಾಗಿ ಈ ಕಾರನ್ನು ರಿಪೇರಿ ಮಾಡಿಸಬೇಕಾದರೆ, ಅದರ ಮಾಲೀಕ ಹೆಚ್ಚಿನ ಹಣ ವ್ಯಯಿಸಬೇಕಾಗಿದೆ.
ಬಹುಶಃ ಈ ಘಟನೆಯಲ್ಲಿ ಹಾನಿಗೊಳ್ಳಾಗಿರುವ ಕಾರು ಹ್ಯುಂಡೈ ಕ್ರೆಟಾ ಎಂದು ತೋರುತ್ತದೆ. ಇದು, ಭಾರತದಲ್ಲಿ ಜನಪ್ರಿಯ ಕಾರಾಗಿ ಗುರುತಿಸಿಕೊಂಡಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಫ್ಲೈ ಓವರ್ ಕೆಳಗೆ ಕಾರು ನಿಲ್ಲಿಸುವುದು ಸುರಕ್ಷಿತವೇ ಎಂಬ ಪ್ರಶ್ನೆ ಹಲವರಲ್ಲಿ ಕಾಡುತ್ತಿದೆ. ಆಕಸ್ಮಿಕವಾಗಿ ಈ ರೀತಿಯಾಗಿ ನಮ್ಮ ವಾಹನಕ್ಕೂ ನಡೆದರೆ ಮುಂದೇನು ಎಂದು ತಲೆಕೆಡಿಸಿಕೊಂಡಿದ್ದಾರೆ.
ಸೂಕ್ತ ಪಾರ್ಕಿಂಗ್ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನಿಮ್ಮ ವಾಹನಗಳಿಗೆ ಹಾನಿಯಾಗುವುದನ್ನು ತಪ್ಪಿಸಬಹುದು. ನೀವು ಕೆಲಸಕ್ಕೆ ತೆರಳುವ ಕಚೇರಿಯಿಂದ ಪಾರ್ಕಿಂಗ್ ಸ್ಥಳ ನೀಡಿದ್ದರೆ, ಅಲ್ಲಿಯೇ ವಾಹನಗಳನ್ನು ನಿಲ್ಲಿಸಿ. ಅದು ಬಿಟ್ಟು ಫ್ಲೈ ಓವರ್ ಕೆಳಗೆ ಅಥವಾ ಮರದಡಿ ನಿಲ್ಲಿಸಬೇಡಿ. ಮಳೆಗಾಲದಲ್ಲಿ ಮರಗಳು ಬೀಳುವ ಸಂಭವವಿರುತ್ತದೆ. ನಿಮ್ಮ ಕಚೇರಿಯಲ್ಲಿ ಪಾರ್ಕಿಂಗ್ ಸ್ಥಳ ಇಲ್ಲದಿದ್ದರೆ, ಖಾಸಗಿ ಪಾರ್ಕಿಂಗ್ ಜಾಗದಲ್ಲಿ ವಾಹನಗಳು ಬಿಡಿ, ಇಲ್ಲವೇ ಸಾರ್ವಜನಿಕ ಸಾರಿಗೆ ಬಳಸುವುದು ಉತ್ತಮ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications