Video: ಹೈವೇಯಲ್ಲಿ ಚಲಿಸುತ್ತಿರುವ ಬೈಕ್‌ನಲ್ಲಿ ಪ್ರೇಮಿಗಳ ಮುದ್ದಾಟ: ಪೋಲೀಸರ ದಂಡಕ್ಕೆ ಪುಲ್ ಸುಸ್ತು!

ಸಾರ್ವಜನಿಕ ರಸ್ತೆಯಲ್ಲಿ ಚಲಿಸುತ್ತಿರುವ ಬೈಕ್‌ನಲ್ಲಿ ಯುವಕ, ಯುವತಿ ಅಸಹ್ಯಕಾರವಾಗಿ ಮುದ್ದಾಡುವ ವಿಡಿಯೋಗಳು, ಇತ್ತೀಚೆಗೆ ದಿನಗಳಲ್ಲಿ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿರುತ್ತವೆ. ಬಹುತೇಕರು, ಬೇಗನೇ ಖ್ಯಾತಿಗಳಿಸಲು ಈ ರೀತಿಯ ಕೆಲಸಗಳಿಗೆ ಮುಂದಾಗುತ್ತಾರೆ. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಪೊಲೀಸರು ಪ್ರಯತ್ನಿಸುತ್ತಿದ್ದರೂ, ಹತೋಟಿಗೆ ಬರುತ್ತಲೇ ಇಲ್ಲ.

ಮಧ್ಯ ರಸ್ತೆಯಲ್ಲಿಯೇ ಕೊಂಚವು ಭಯವಿಲ್ಲದೆ, ಯುವಕ, ಯುವತಿಯರು ವಿವಿಧ ಸ್ಟಂಟ್ ಮಾಡಲು ಮಾಡುವುದು ಸಾಮಾನ್ಯವಾಗಿ ಬಿಟ್ಟಿದೆ. ಇಲ್ಲಿ ಸ್ವಲ್ಪ ಯಾಮಾರಿದರೂ ಪ್ರಾಣವನ್ನೇ ಕಳೆದುಕೊಳ್ಳಬೇಕು. ಇಲ್ಲವೇ, ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗಬೇಕು. ಅಂತಹದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಚಲಿಸುತ್ತಿರುವ ಬೈಕ್‌ನಲ್ಲಿ ಮುದ್ದಾಡಿದ್ದ ಪ್ರೇಮಿಗಳಿಗೆ ಪೊಲೀಸರು ಸರಿಯಾಗಿಯೇ ದಂಡ ವಿಧಿಸಿದ್ದಾರೆ.

Video: ಹೈವೇಯಲ್ಲಿ ಚಲಿಸುತ್ತಿರುವ ಬೈಕ್‌ನಲ್ಲಿ ಪ್ರೇಮಿಗಳ ಮುದ್ದಾಟ: ಪೋಲೀಸರ ದಂಡಕ್ಕೆ ಸುಸ್ತು!

ಅಷ್ಟಕ್ಕೂ ಈ ಘಟನೆ ನಡೆದಿರುವುದು ಉತ್ತರಪ್ರದೇಶದ ಗಾಜಿಯಾಬಾದ್‌ನ ರಾಷ್ಟ್ರೀಯ ಹೆದ್ದಾರಿ 9ರಲ್ಲಿ. ಇಬ್ಬರು ಪ್ರೇಮಿಗಳು ಯಾವುದೇ ಭಯವಿಲ್ಲದೇ ಚಲಿಸುತ್ತಿರುವ ಬೈಕ್‌ನಲ್ಲಿ ಮುದ್ದಡುತ್ತಾ ತೆರಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಯುವತಿಯು ಫ್ಯುಯೆಲ್ ಟ್ಯಾಂಕ್ ಮೇಲೆ ಕುಳಿತ್ತಿದ್ದರೆ, ಆ ಯುವಕ ಬೈಕ್ ಓಡಿಸುತ್ತಿದ್ದಾನೆ. ಸ್ವಲ್ಪವು ಅಳುಕಿಲ್ಲದೆ, ಹೆಲ್ಮೆಟ್ ಧರಿಸಿವುದು ಸೇರಿದಂತೆ ಒಂದಿಷ್ಟು ಸುರಕ್ಷತಾ ಮಾನದಂಡಗಳನ್ನು ಪಾಲಿಸದೇ ಮೋಟಾರ್ ಸೈಕಲ್ ಚಲಾಯಿಸಿದ್ದಾನೆ.

ಸದ್ಯ, ವೈರಲ್ ಆಗಿರುವ ಈ ವಿಡಿಯೋಗೆ ನೆಟ್ಟಿಗರು ಕೂಡ ತರಹೇವಾರಿ ಕಾಮೆಂಟ್ ಮಾಡಿದ್ದು, ಟ್ವಿಟರ್ ಬಳಕೆದಾರನೊಬ್ಬ 'ಯುವತಿಯ ಆರೋಗ್ಯ ಹದಗೆಟ್ಟಿದೆಯೋ ಗೊತ್ತಿಲ್ಲ. ಅದಕ್ಕೆ ಹಿಂದೆ ಕೂರಿಸುವ ಬದಲು ಮುಂದೆ ಕೂರಿಸಿರಬಹುದು' ಎಂದು ಹೇಳಿದ್ದಾರೆ. ಮತ್ತೊಬ್ಬರು, 'ಇವರಿಬ್ಬರು ಈ ರೀತಿಯಾಗಿ ಮತ್ತೊಮ್ಮೆ ಮಾಡದಂತೆ ಪೊಲೀಸರು ಸರಿಯಾಗಿ ಬುದ್ದಿ ಹೇಳಬೇಕು' ಎಂದಿದ್ದಾರೆ.

ಈ ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆದ ಕೊಡಲೇ ಗಾಜಿಯಾಬಾದ್‌ ಪೊಲೀಸರು ಎಚ್ಛೆತುಕೊಂಡಿದ್ದು, ಬೈಕ್ ಮಾಲೀಕನಿಗೆ ಬರೋಬ್ಬರಿ 21,000 ದಂಡ ವಿಧಿಸಿದ್ದಾರೆ. ಅದರಲ್ಲಿ ಹೆಲ್ಮೆಟ್ ರಹಿತ ಚಾಲನೆಗೆ ರೂ.1,000, ವಾಹನದ ನೋಂದಣಿ ಸಂಖ್ಯೆ ಸರಿಯಾಗಿ ಕಾಣದಿರುವುದಕ್ಕೆ ರೂ. 5,000, ವಾಯು ಮಾಲಿನ್ಯ ಸಂಬಂಧಿಸಿದ ನಿಯಮ ಉಲ್ಲಂಘನೆಗೆ ರೂ.10,000 ಹಾಗೂ ಸಾರ್ವಜನಿಕ ರಸ್ತೆಯಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ವೇಗದಲ್ಲಿ ಬೈಕ್ ಚಲಿಯಿಸಿದ್ದಕ್ಕೆ ರೂ.5,000 ದಂಡದ ಮೊತ್ತ ಸೇರಿದೆ.

ಕಳೆದ ಕೆಲವು ತಿಂಗಳ ಹಿಂದೆ, ರಾಜಸ್ಥಾನದ ಅಜ್ಮೇರ್ ನಲ್ಲಿ ಇದೇ ರೀತಿಯ ಘಟನೆವೊಂದು ವರದಿಯಾಗಿತ್ತು. ಪ್ರೇಮಿಗಳಿಬ್ಬರು ಬೈಕ್ ನಲ್ಲಿ ರೋಮ್ಯಾನ್ಸ್ ಮಾಡುತ್ತಾ ತೆರಳುತ್ತಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಆ ಬಳಿಕ ಅಲರ್ಟ್ ಆಗಿದ್ದ ಅಜ್ಮೇರ್ ನ ಸ್ಥಳೀಯ ಪೊಲೀಸರು, ಸವಾರನ ವಿರುದ್ದ ಕೇಸ್ ದಾಖಲಿಸಿ, ಬೈಕ್ ಅನ್ನು ವಶಪಡಿಸಿಕೊಂಡಿದ್ದರು.

ಇನ್ನು, ದಿನದಿಂದ ದಿನಕ್ಕೆ ದೇಶದಲ್ಲಿ ಇಂತಹ ಘಟನೆಗಳು ಹೆಚ್ಚುತ್ತಲೇ ಇವೆ. ಪೊಲೀಸರು ಈ ರೀತಿ ಕೃತ್ಯ ವೆಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಮುಂದೆ ಯಾರು ಇಂತಹ ಕೆಲಸ ಮಾಡದಂತೆ ಬುದ್ದಿ ಹೇಳಬೇಕಾಗಿದೆ. ಯುವಕ, ಯುವತಿಯರು ಕೂಡ ಒಮ್ಮೆ ತಮ್ಮ ಕುಟುಂಬದ ಬಗ್ಗೆ ಯೋಚಿಸಿ, ಸ್ಟಂಟ್ ಮಾಡುವುದು ಉತ್ತಮ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, June 23, 2023, 16:46 [IST]
English summary
Video viral lovers seen cuddling moving motorcycle police challan issued
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+