ಯುವಕನನ್ನು ತಬ್ಬಿಕೊಂಡ ಯುವತಿಯರು.. ಬೈಕ್‌ನಲ್ಲಿ ಹುಚ್ಚು ಸಾಹಸ, ಮೂವರು ಬಂಧನ: ವಿಡಿಯೋ ವೈರಲ್

ಸಾರ್ವಜನಿಕ ರಸ್ತೆಯಲ್ಲಿ ಬೈಕ್ ಸ್ಟಂಟ್ ಮಾಡುವುದು ಕೆಲವು ಯುವಕರಿಗೆ ಕ್ರೇಜ್ ಆಗಿದೆ. ಇಂತಹ ಹುಚ್ಚು ಸಾಹಸದಿಂದ ತಮಗೆ ಅಥವಾ ಇತರರಿಗೆ ಹಾನಿಯಾಗುತ್ತದೆ. ಜೊತೆಗೆ ಜೀವಕ್ಕೂ ಸಂಚಕಾರ ತರಬಹುದು ಎಂಬ ಕನಿಷ್ಠ ಪರಿಜ್ಞಾನ ಇಟ್ಟುಕೊಂಡಿರುವುದಿಲ್ಲ. ಸದ್ಯ, ಅಂತಹದ್ದೇ ಕೆಲಸ ಮಾಡಲು ಹೋಗಿ, ಮೂವರು ಪೋಲೀಸರ ಅತಿಥಿಯಾಗಿದ್ದಾರೆ.

ಅಷ್ಟಕ್ಕೂ ಈ ಪ್ರಕರಣ ನಮ್ಮ ರಾಜ್ಯದಲ್ಲಿ ನಡೆದಿಲ್ಲ. ಪಕ್ಕದ ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ವರದಿಯಾಗಿದೆ. ಸಾರ್ವಜನಿಕ ರಸ್ತೆಯಲ್ಲಿ ಬೈಕ್ ಸಾಹಸ ಮಾಡುವುದೇ ಅಪರಾಧ. ಅಂತಹದರಲ್ಲಿ ವ್ಯಕ್ತಿಯೋರ್ವ ಇಬ್ಬರು ಯುವತಿಯರೊಂದಿಗೆ ಸ್ಟಂಟ್ ಮಾಡಿದ್ದಾನೆ. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಮುಂಬೈ ಪೊಲೀಸರು ಭಾನುವಾರ ಇಬ್ಬರು ಯುವತಿಯರೊಂದಿಗೆ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಯುವಕನನ್ನು ತಬ್ಬಿಕೊಂಡ ಯುವತಿಯರು.. ಬೈಕ್‌ನಲ್ಲಿ ಹುಚ್ಚು ಸಾಹಸ, ಮೂವರು ಬಂಧನ: ವಿಡಿಯೋ ವೈರಲ್

ಸಾಮಾಜಿಕ ಕಾರ್ಯಕರ್ತ ಮುಷ್ತಾಕ್ ಅನ್ಸಾರಿ ಎಂಬುವವರೂ ಈ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಇದರಲ್ಲಿ ಜನಬಳಕೆಯ ರಸ್ತೆಯಲ್ಲಿಯೇ ಹೆಲ್ಮೆಟ್ ಸೇರಿದಂತೆ ಯಾವುದೇ ಸುರಕ್ಷತಾ ಪರಿಕರಗಳನ್ನು ಧರಿಸಿದೆ, ಯುವಕನೊಬ್ಬ ವೀಲಿಂಗ್ ಮಾಡಿಕೊಂಡು ಬೈಕ್ ಚಲಾಯಿಸುತ್ತಿದ್ದಾನೆ. ಓರ್ವ ಮಹಿಳೆ ಫ್ಯೂಯೆಲ್ ಟ್ಯಾಂಕ್ ಮೇಲೆ, ಇನೋರ್ವ ಮಹಿಳೆ ಪಿಲಿಯನ್ ಸೀಟ್ ನಲ್ಲಿ ಆತನನ್ನು ತಬ್ಬಿಕೊಂಡು ಕುಳಿತ್ತಿದ್ದಾಳೆ.

ಬೈಕ್ ಸ್ಟಂಟ್ ನಡೆಸುವ ವಿಡಿಯೋ ವ್ಯಾಪಕವಾಗಿ ವೈರಲ್ ಆದ ನಂತರ, ಮುಂಬೈ ಪೊಲೀಸರು, ಕಳೆದ ಶುಕ್ರವಾರ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 279 (ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆ), 336 (ಮಾನವ ಜೀವ ಅಥವಾ ಇತರರ ಸುರಕ್ಷತೆಗೆ ಅಪಾಯವನ್ನು ಉಂಟು ಮಾಡುವುದು) ಹಾಗೂ 114 (ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಿ, ಭಾನುವಾರ ಮೂವರನ್ನು ಬಂಧಿಸಿದ್ದಾರೆ.

ಬೈಕ್ ಸವಾರನನ್ನು ಫೈಯಾಜ್ ಅಹ್ಮದ್ ಅಜ್ಜೆಮುಲ್ಲಾ ಖಾದ್ರಿ ಎಂದು ಗುರುತಿಸಲಾಗಿದ್ದು, ಈ ಹಿಂದೆಯೂ ಈತನ ಮೇಲೆ ಹಲವು ಕೇಸ್ ದಾಖಲಾಗಿದ್ದವು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನು, ಸಾರ್ವಜನಿಕ ರಸ್ತೆಗಳಲ್ಲಿ ವಿವಿಧ ವಾಹನಗಳನ್ನು ಬಳಸಿ, ಸ್ಟಂಟ್ ಮಾಡುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ. ಇದನ್ನು ಉಲ್ಲಂಘಿಸುವವರೂ ದೊಡ್ಡ ಪ್ರಮಾಣದಲ್ಲಿ ದಂಡ ಕಟ್ಟಬೇಕು. ಜೊತೆಗೆ ಕೆಲವೊಮ್ಮೆ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.

ಆದರೂ, ನೀವು ವಾಹನಗಳಲ್ಲಿ ಸಾಹಸ ಮಾಡಲೇಬೇಕು, ಅದರ ವಿಡಿಯೋ ರೆಕಾರ್ಡ್ ಮಾಡಬೇಕು ಅಂದುಕೊಂಡರೆ, ಖಾಸಗಿ ರೇಸ್ ಟ್ರ್ಯಾಕ್‌ ಅಥವಾ ಫಾರ್ಮ್‌ಹೌಸ್‌ನಲ್ಲಿ ನಡೆಸಬಹುದು. ಅಲ್ಲಿ ಸುರಕ್ಷತಾ ದೃಷ್ಟಿಯಿಂದ ಎಷ್ಟೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರೂ ಕೆಲವೊಮ್ಮೆ ಅಪಾಯಗಳಾಗುವುದು ಕಟ್ಟಿಟ್ಟ ಬುತ್ತಿ. ಜೊತೆಗೆ ಜೀವಕ್ಕೂ ಮುಳುವಾಗಬಹುದು. ಆದ್ದರಿಂದ ಸ್ಟಂಟ್ ಮಾಡುವ ಮೊದಲು ಒಮ್ಮೆ ಯೋಚಿಸಿಸುವುದು ಒಳ್ಳೆಯದು.

ಬೆಂಗಳೂರು ಸೇರಿದಂತೆ ದೊಡ್ಡ ದೊಡ್ಡ ಮಹಾನಗರಗಳಲ್ಲಿ ಪ್ರತಿಯೊಂದು ರಸ್ತೆಯು ಸಿಸಿಟಿವಿ ಇರುತ್ತದೆ. ಅವುಗಳ ಮೂಲಕ ಪೊಲೀಸರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರ ಮೇಲೆ ಕಣ್ಣಿಟ್ಟಿರುತ್ತಾರೆ ಎನ್ನುವುದು ಗಮನಿಸಬೇಕಾದ ಅಂಶವಾಗಿದೆ. ಯುವಕ, ಯುವತಿಯರು ಹುಚ್ಚು ಬೈಕ್ ಸಾಹಸಕ್ಕೆ ಕೈ ಹಾಕುವ ಮುನ್ನ ನಮಗಾಗಿ ನಮ್ಮ ಕುಟುಂಬ ಎದುರು ನೋಡುತ್ತಿರುತ್ತದೆ ಎಂಬುದನ್ನು ಯಾವತ್ತೂ ಮರೆಯಬಾರದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Tuesday, April 4, 2023, 10:30 [IST]
English summary
Video viral mumbai bike stunt three arrested details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+