ವಿಡಿಯೋ: ಕ್ರಿಕೆಟ್ ಕಾಮೆಂಟರಿಗಾಗಿ ಓಲಾ ಸ್ಕೂಟರ್ ಬಳಕೆ.. ಅದು ಹೇಗೆ ಸಾಧ್ಯ?

ಓಲಾ ಎಲೆಕ್ಟ್ರಿಕ್ ಸ್ಕೂಟರ್‌ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದಾಗಿನಿಂದ ಸುದ್ದಿಯಲ್ಲಿದೆ. ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ನಾವು ಪಾಸಿಟಿವ್ ಮತ್ತು ನೆಗೆಟಿವ್ ಅಂಶಗಳೆರಡನ್ನು ಕೇಳುತ್ತಿದ್ದೇವೆ. ಆದರೆ, ವಾಹನ ತಯಾರಕರು ಈ ಸ್ಕೂಟರ್‌ ಮೂಲಕ ತಮ್ಮ ಗ್ರಾಹಕರಿಗೆ ಒಳ್ಳೆಯ ಅನುಭವ ನೀಡಲು ಪ್ರಯತ್ನಗಳನ್ನು ಮಾಡುವುದನ್ನು ಮುಂದುವರಿಸಿದ್ದಾರೆ.

ಓಲಾ S1 ಪ್ರೊ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ವೈಶಿಷ್ಟ್ಯಪೂರ್ಣ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಒಂದಾಗಿದೆ. ಇತರೆ ಅನೇಕ ಎಲೆಕ್ಟ್ರಿಕ್ ಸ್ಕೂಟರ್‌ಗಳಂತೆ, ಇದರಲ್ಲಿರುವ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಮತ್ತು ಇಂಟರ್ನೆಟ್ ಸಂಪರ್ಕ ವೈಶಿಷ್ಟ್ಯಗಳನ್ನು ನೀಡುವ ಟಚ್‌ಸ್ಕ್ರೀನ್ ಟ್ಯಾಬ್ಲೆಟ್ ಆಗಿದೆ. ಇಲ್ಲೊಬ್ಬ ವ್ಯಕ್ತಿ ಸ್ಥಳೀಯ ಕ್ರಿಕೆಟ್ ಪಂದ್ಯಕ್ಕೆ ಕಾಮೆಂಟರಿ ಮಾಡಲು ಈ ಸ್ಕೂಟರ್ ಅನ್ನು ಸ್ಪೀಕರ್ ಆಗಿ ಬಳಸಿದ ವಿಡಿಯೋವೊಂದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಈ ವಿಡಿಯೋವನ್ನು ಟ್ವಿಟ್ಟರ್ ಬಳಕೆದಾರ ಬಿಕಾಶ್ ಬೆಹೆರಾ ಎಂಬುವವರು ಶೇರ್ ಮಾಡಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ ಅವರು, ಓಲಾ ಸಿಇಒ ಭವಿಶ್ ಅಗರ್ವಾಲ್ ಮತ್ತು ಓಲಾ ಎಲೆಕ್ಟ್ರಿಕ್ ಅನ್ನು ಟ್ಯಾಗ್ ಮಾಡಿದ್ದಾರೆ. ಆದರೆ, ಈವರೆಗೆ ಭವಿಶ್ ಅವರು ಈ ಪೋಸ್ಟ್‌ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸದ್ಯ ವಿಡಿಯೋ ಭಾರೀ ವೈರಲ್ ಆಗುತ್ತಿದ್ದು, ಬಹುಶಃ ಒಡಿಶಾ ರಾಜ್ಯದಲ್ಲಿ ಕ್ರಿಕೆಟ್ ಪಂದ್ಯ ನಡೆದಿರಬೇಕು. ಭಾರತದಲ್ಲಿ ನಾವೆಲ್ಲರೂ ಕ್ರಿಕೆಟ್ ಅನ್ನು ಪ್ರೀತಿಸುತ್ತೇವೆ. ಇದು ದೇಶದ ಅತ್ಯಂತ ಜನಪ್ರಿಯ ಕ್ರೀಡೆಯಾಗಿ ಬೆಳೆಯುತ್ತಿದೆ.

ಹಲವಾರು ಸ್ಥಳೀಯ ಗ್ರೋಪ್ಸ್ ಮತ್ತು ಕ್ಲಬ್‌ಗಳು, ಹಳ್ಳಿಗಳಿಂದ ಹಿಡಿದು ಪಟ್ಟಣ ಪ್ರದೇಶದವರೆಗೆ ದೇಶದ ವಿವಿಧ ಭಾಗಗಳಲ್ಲಿ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋ ಅಂತಹದೇ ಒಂದು ಪಂದ್ಯದ ರೀತಿ ಕಾಣುತ್ತದೆ. ವ್ಯಕ್ತಿಯೊಬ್ಬ ಬ್ಲೂಟೂತ್ ಮೂಲಕ ಫೋನ್ ಅನ್ನು ಓಲಾ S1 ಪ್ರೋ ಸ್ಕೂಟರ್‌ಗೆ ಸಂಪರ್ಕಿಸಿದ್ದಾರೆ. ಜೊತೆಗೆ ಅದರ ಪಕ್ಕದಲ್ಲಿ ನಿಂತುಕೊಳ್ಳುವ ಆತ ಕ್ರಿಕೆಟ್ ಪಂದ್ಯದ ಕಾಮೆಂಟರಿ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಇದಕ್ಕೆ ನೆಟ್ಟಿಗರು ವಿಭಿನ್ನವಾಗಿ ಕಾಮೆಂಟ್ ಮಾಡಿದ್ದಾರೆ.

ವಾಸ್ತವವಾಗಿ, ಆ ವ್ಯಕ್ತಿಯು ಸ್ಕೂಟರ್‌ಗೆ ಕನೆಕ್ಟ್ ಆದ ಸಂಖ್ಯೆಗೆ ಕರೆ ಮಾಡಿದ್ದು, ಸ್ಪೀಕರ್ ಮೂಲಕ ಕ್ರಿಕೆಟ್ ಪಂದ್ಯದ ಕಾಮೆಂಟರಿ ಮಾಡಿದ್ದಾನೆ. ಓಲಾ ಸ್ಕೂಟರ್‌ ಅನ್ನು ಈ ರೀತಿಯಾಗಿ ಬಳಕೆ ಮಾಡಿರುವುದು ಇದೇ ಮೊದಲಲ್ಲ. ಈ ಮೊದಲು ಅಂದರೇ, ವರ್ಷಾರಂಭದಲ್ಲಿ ರಾಜ್ಯದ ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳು ಓಲಾ S1 ಪ್ರೋ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಜೋರಾಗಿ ಸಾಂಗ್ಸ್ ಹಾಕಿ, ತಮ್ಮ ಕಾಲೇಜಿನಲ್ಲಿ ಎತ್ನಿಕ್ ಡೇ ಭಾಗವಾಗಿ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದರು. ಈ ವಿಡಿಯೋ ತುಂಬಾ ವೈರಲ್ ಆಗಿತ್ತು.

'ಈ ವೈಶಿಷ್ಟ್ಯವನ್ನು ವಿನ್ಯಾಸಗೊಳಿಸುವಾಗ ಜನರು ಸ್ಕೂಟರ್ ಅನ್ನು ಸ್ಪೀಕರ್ ಆಗಿ ಬಳಸುತ್ತಾರೆ ಎಂದು ಭಾವಿಸಿರಲಿಲ್ಲ' ಎಂದು ಓಲಾ ಎಲೆಕ್ಟ್ರಿಕ್‌ನ ಸಿಇಒ ಭಾವಿಶ್ ಈ ವೀಡಿಯೊಗೆ ಪ್ರತಿಕ್ರಿಯಿಸಿದ್ದರು. ಇದನ್ನು ನೋಡಿದ ಅನೇಕ ನೆಟ್ಟಿಗರು ಕಾಮೆಂಟ್ ಮಾಡಿದ್ದು, ಅವರಲ್ಲಿ ಬಹುತೇಕರು ವಿದ್ಯಾರ್ಥಿಗಳ ಐಡಿಯಾವನ್ನು ಮೆಚ್ಚಿಕೊಂಡಿದ್ದಾರೆ. ಓಲಾ ಸ್ಕೂಟರ್‌ಗೆ 'MoveOS 3' ಅಪ್ಡೇಟ್ ಯಾವಾಗ ಸಿಗಲಿದೆ ಎಂದು ಗ್ರಾಹಕರೊಬ್ಬರು ಈ ಹಿಂದೆ, ಪ್ರಶ್ನೆ ಮಾಡಿದ್ದರು. ಇದಕ್ಕೆ ಓಲಾ ಎಲೆಕ್ಟ್ರಿಕ್ ಸಹ ಉತ್ತರ ನೀಡಿತ್ತು.

'ನಾವು MoveOS 3 ಅಪ್ಡೇಟ್ ಅನ್ನು ಹಂತ ಹಂತವಾಗಿ ಹೊರತರುತ್ತಿದ್ದೇವೆ. ಅದು ಲಭ್ಯವಾದ ತಕ್ಷಣ, ನಿಮ್ಮ Ola ಸ್ಕೂಟರ್ ಪರದೆಯಲ್ಲಿ ನೀವು ನೋಟಿಫಿಕೇಶನ್ ಪಡೆಯಲಿದ್ದಾರೆ' ಎಂದು ಹೇಳಿತ್ತು. ಓಲಾ ಎಲೆಕ್ಟ್ರಿಕ್‌ ಅಧಿಕೃತವಾಗಿ MoveOs 3 ಅನ್ನು 22 ಡಿಸೆಂಬರ್ 2022ರಂದು ಬಿಡುಗಡೆ ಮಾಡಿದೆ. ದೇಶಾದ್ಯಂತ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ನ ಒಂದು ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಸಾಫ್ಟ್‌ವೇರ್ ಅಪ್ಡೇಟ್ ಲಭ್ಯವಿದೆ. ಉತ್ತಮ ಗ್ರಾಹಕ ಅನುಭವಕ್ಕಾಗಿ ಓಲಾ ಸ್ಕೂಟರ್‌ನಲ್ಲಿ ಸಾಫ್ಟ್‌ವೇರ್ ನವೀಕರಿಸಿದ್ದು, ಮೂರನೇ ಬಾರಿಯಾಗಿದೆ. ಈ ಅಪ್ಡೇಟ್ ಸ್ಕೂಟರ್‌ಗಾಗಿ 50ಕ್ಕೂ ಹೆಚ್ಚು ಹೊಸ ವೈಶಿಷ್ಟ್ಯಗಳನ್ನು ನೀಡುತ್ತಿದೆ.

MoveOS 3 ಅಪ್‌ಡೇಟ್‌ನೊಂದಿಗೆ, ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳು ಈಗ ಹೈಪರ್‌ಚಾರ್ಜಿಂಗ್‌ ಸೌಲಭ್ಯವನ್ನು ಹೊಂದಿದ್ದು, ಇದು ಕೇವಲ 15 ನಿಮಿಷಗಳ ಚಾರ್ಜಿಂಗ್‌ನೊಂದಿಗೆ 50 ಕಿ.ಮೀ ಮೈಲೇಜ್ ನೀಡುತ್ತದೆ. ನೀವು ಓಲಾದ ಹೈಪರ್ಚಾರ್ಜರ್ ನೆಟ್ವರ್ಕ್ ಅನ್ನು ಬಳಸಿದಾಗ ಇದು ಸಾಧ್ಯವಾಗುತ್ತದೆ. ಸ್ಕೂಟರ್ ಮೂರು ರೀಜೆನ್ ಮೋಡ್‌ ಜೊತೆಗೆ ವೆಕೇಶನ್ ಮೋಡ್ ಅನ್ನು ಸಹ ಪಡೆಯುತ್ತದೆ. MoveOS 3 ಅಪ್‌ಡೇಟ್‌ನೊಂದಿಗೆ ಓಲಾ ಸ್ಕೂಟರ್‌ ತನ್ನ ಗ್ರಾಹಕರಿಗೆ ವಿಭಿನ್ನ ಅನುಭವ ನೀಡುತ್ತದೆ ಎಂದು ಹೇಳಬಹುದು.

Most Read Articles

Kannada
English summary
Video viral use of ola scoote for cricket commentary
Story first published: Saturday, December 24, 2022, 11:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X