ವಿಶ್ವದಲ್ಲೇ ಮೊದಲು: ಕೋಟಿ, ಕೋಟಿ ಬೆಲೆಯ ಹೊಸ ಲ್ಯಾಂಬೋರ್ಗಿನಿ ಮೇಲೆ 'ಜೈ ಶ್ರೀರಾಮ್' ಮುದ್ರಣ, Video
ನಮ್ಮಲ್ಲಿ ಇವತ್ತಿಗೂ ಬಹುತೇಕರು, ಹೊಸ ಕಾರು ಅಥವಾ ದ್ವಿಚಕ್ರ ವಾಹನ ಖರೀದಿಸಿದರೆ ಅವುಗಳ ಮೇಲೆ ದೇವರ ಚಿತ್ರ, ಹೆಸರು, ಇಲ್ಲವೇ ತಮ್ಮ ಪ್ರೀತಿ ಪಾತ್ರರ ಹೆಸರಿನ ಸ್ಟಿಕ್ಕರ್ ಹಾಕಿಸುವುದು ವಾಡಿಕೆ. ಆದರೆ, ದುಬಾರಿ ಬೆಲೆ ಕಾರುಗಳಲ್ಲಿ ಈ ರೀತಿಯಾಗಿ ಪ್ರಿಂಟ್ ಮಾಡಿಸುವುದು ತೀರಾ ಅಪರೂಪ.
ಇಲ್ಲೊಬ್ಬ, ಯೂಟ್ಯೂಬರ್ ತಮ್ಮ ಹೊಚ್ಚ ಹೊಸ ದುಬಾರಿ ಬೆಲೆಯ ಐಷಾರಾಮಿ ಲ್ಯಾಂಬೋರ್ಗಿನಿ ಕಾರಿನ ಮೇಲೆ, 'ಜೈ ಶ್ರೀ ರಾಮ್' ಎಂಬ ಸ್ಟಿಕ್ಕರ್ ಹಾಕಿಸಿದ್ದಾರೆ. 'ಐ ಆಮ್ ನಿತಿನ್' ಹೆಸರಿನ ಯೂಟ್ಯೂಬ್ ಚಾನೆಲ್ ಹೊಂದಿರುವ ಮೃದುಲ್ ಎಂಬುವವರೂ ತಮ್ಮ ಹಿಂದಿನ ವೀಡಿಯೊದಲ್ಲಿ ವೀಕ್ಷಕರಿಗೆ ನೀಡಿದ್ದ ಭರವಸೆಯಂತೆ ಈ ಕೆಲಸವನ್ನು ಮಾಡಿದ್ದಾರೆ.

ತನ್ನ ವಿಡಿಯೋಗೆ, 2 ಮಿಲಿಯನ್ ಲೈಕ್‌ಗಳು ಹಾಗೂ 1 ಲಕ್ಷ ಕಾಮೆಂಟ್ ಬಂದರೆ, ತಾನು ಖರೀದಿಸಿರುವ ನೂತನ ಲ್ಯಾಂಬೋರ್ಗಿನಿ ಹುರಾಕನ್ ಕಾರಿನ ಮೇಲೆ 'ಜೈ ಶ್ರೀ ರಾಮ್' ಎಂದು ಮುದ್ರಿಸುವುದಾಗಿ ಹೇಳಿದ್ದರು. ಅದರಂತೆ ವೀಕ್ಷಕರಿಂದ ನೀರಿಕ್ಷೆಗೂ ಮೀರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೊಟ್ಟ ಮಾತಿನಂತೆ ಮೃದುಲ್, ಹಿಂದಿ ಭಾಷೆಯಲ್ಲಿರುವ 'ಜೈ ಶ್ರೀ ರಾಮ್' ಸ್ಟಿಕ್ಕರ್‌ನ್ನು ತನ್ನಲ್ಯಾಂಬೋರ್ಗಿನಿ ಕಾರಿನ ಬಾನೆಟ್ ಮೇಲೆ ಹಾಕಿಸಿದ್ದಾರೆ.
ಮೃದುಲ್, ತನ್ನ ಸ್ನೇಹಿತನೊಂದಿಗೆ ಸ್ಟಿಕ್ಕರಿಂಗ್ ಶಾಪ್‌ಗೆ ತೆರಲುವಾಗ ವಿಡಿಯೋ (Video)ವನ್ನು ಚಿತ್ರೀಕರಿಸಿದ್ದು, ಕಾರಿನ ಕೆಲವೊಂದು ವಿಶೇಷತೆಗಳನ್ನು ವಿವರಿಸಿದ್ದಾರೆ. ಬಳಿಕ, ಇಂಧನ ತುಂಬಲು ಪೆಟ್ರೋಲ್ ಬಂಕ್ಗೆ ಈ ಲ್ಯಾಂಬೋರ್ಗಿನಿ ಕಾರನ್ನು ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿನ ಸಿಬ್ಬಂದಿ ಕಾರಿನ ಫೋಟೋಗಳನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಿಡಿಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಆ ಬಳಿಕ, ಶಾಪ್‌ಗೆ ತೆರಳಿದ್ದಾರೆ.

ಅಲ್ಲಿ, ಕಾರಿನ ಬಾನೆಟ್ ಮೇಲೆ ಜೈ ಶ್ರೀ ರಾಮ್ ಎಂಬ ಹೆಸರಿನ ಸ್ಟಿಕ್ಕರ್ ಹಾಕಲಾಗಿದೆ. ಮೃದುಲ್ ಅವರೇ ಹೇಳುವಂತೆ ಈ ಸ್ಟಿಕ್ಕರ್ ಪಡೆದಿರುವ ವಿಶ್ವದ ಮೊದಲ ಲ್ಯಾಂಬೋರ್ಗಿನಿ ಕಾರು ಇದೆಯಂತೆ. ನಿಮಗೆ ಗೊತ್ತರಲಿ.. ಇಟಲಿ ವಾಹನ ತಯಾರಕ 'ಫೆರಾರಿ' ಸೇರಿದಂತೆ ಪ್ರಮುಖ ಕಾರು ಉತ್ಪಾದನಾ ಕಂಪನಿಗಳು, ತಾವು ಮಾರಾಟ ಮಾಡುವ ಕಾರುಗಳಿಗೆ ಗ್ರಾಹಕರು ಯಾವುದೇ ಮಾಡಿಫೈ ಮಾಡಿಸಬಾರದು ಎಂದು ಹೇಳುತ್ತವೆ.
ಆಗೊಮ್ಮೆ, ನೀವು ಮಾರ್ಪಾಡುಗಳನ್ನು ಮಾಡಿಸಿದರೆ, ಕಾರಿನ ವಾರಂಟಿ ನೀಡುವುದಿಲ್ಲ. ಜೊತೆಗೆ ಅವುಗಳ ರಿಪೇರಿಗೂ ಹಣವನ್ನು ಪಾವತಿಸಬೇಕಾಗುತ್ತದೆ. ಆದರೆ, ಲ್ಯಾಂಬೋರ್ಗಿನಿ ಕಾರುಗಳನ್ನು ಮಾಡಿಫೈ ಮಾಡಲು ನಿರ್ಬಂಧಗಳಿಲ್ಲ. ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಲ್ಯಾಂಬೋರ್ಗಿನಿ ಹುರಾಕನ್ (Lamborghini Huracan) ಇವಿಒ, ರೂ.3.21 ಲಕ್ಷದಿಂದ ರೂ.4.99 ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ.
2 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿರುವ ಈ ಕಾರು, 5.2 ಲೀಟರ್ ವಿ10 ಪೆಟ್ರೋಲ್ ಎಂಜಿನ್ ಹೊಂದಿದ್ದು, 610 PS ಹಾಗೂ 600 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ದೊರೆಯುತ್ತದೆ. ಕೇವಲ 3.4 ಸೆಕೆಂಡುಗಳಲ್ಲಿ 0 - 100 kmph ವೇಗವನ್ನು ಪಡೆಯಲಿದ್ದು, 260 kmph ಟಾಪ್ ಸ್ವೀಡ್ ಹೊಂದಿದೆ.
ಲ್ಯಾಂಬೋರ್ಗಿನಿ ಹುರಾಕನ್ ಬೆಲೆಗೆ ತಕ್ಕಂತೆ ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 19 - ಇಂಚಿನ ಅಲಾಯ್ ವೀಲ್ಸ್, ಪ್ಯಾಡಲ್ ಶಿಫ್ಟರ್ಸ್ ಹಾಗೂ ಲೆದರ್ ಅಪ್ಹೋಲ್ಸ್ಟರಿ ಒಳಗೊಂಡಂತೆ ವಿವಿಧ ಫೀಚರ್ಸ್ ಪಡೆದಿದೆ. ಇದಕ್ಕೆ ಫೆರಾರಿ ಕ್ಯಾಲಿಫೋರ್ನಿಯಾ ಟಿ, ಆಸ್ಟನ್ ಮಾರ್ಟಿನ್ ವಾಂಟೇಜ್ ರೋಡ್‌ಸ್ಟರ್, ಪೋರ್ಷೆ 911 ಟರ್ಬೊ ಎಸ್ ಕ್ಯಾಬ್ರಿಯೊಲೆಟ್ ಹಾಗೂ ಪೋರ್ಷೆ 911 ಪ್ರಬಲ ಪ್ರತಿಸ್ಪರ್ಧಿಯಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications