ದ್ವಿಚಕ್ರ ವಾಹನಗಳ ಸಂಚಾರದ ಮೇಲೆ ನಿಷೇಧ ಹೇರಿದ ಸರ್ಕಾರ

ಆಸ್ಟ್ರಿಯಾದ ರಾಜಧಾನಿ ವಿಯೆನ್ನಾದಲ್ಲಿ ಎಲ್ಲಾ ರೀತಿಯ ದ್ವಿಚಕ್ರ ವಾಹನಗಳ ಸಂಚಾರದ ಮೇಲೆ ನಿಷೇಧ ಹೇರಲಾಗಿದೆ. ಅಂದ ಹಾಗೆ ಭಾರತದ ಜನಪ್ರಿಯ ಬೈಕ್‌ಗಳಲ್ಲಿ ಒಂದಾದ ಕೆಟಿಎಂ ವಿಯೆನ್ನಾ ಮೂಲದ ಕಂಪನಿ ಎಂಬುದನ್ನು ಗಮನಿಸಬೇಕು.

ದ್ವಿಚಕ್ರ ವಾಹನಗಳ ಸಂಚಾರದ ಮೇಲೆ ನಿಷೇಧ ಹೇರಿದ ಸರ್ಕಾರ

ಇತ್ತೀಚಿಗಷ್ಟೇ ಆಸ್ಟ್ರಿಯಾದ ಟೈರೋಲ್ ರಾಜ್ಯದಲ್ಲಿ ಬೈಕ್‌ಗಳ ಬಳಕೆಯ ಮೇಲೆ ನಿಷೇಧ ಹೇರಲಾಗಿತ್ತು. ಯುರೋಪಿನಲ್ಲಿಯೇ ಅತ್ಯುತ್ತಮವಾದ ರಸ್ತೆಗಳು ಆಸ್ಟ್ರಿಯಾದಲ್ಲಿವೆ. ಟೈರೋಲ್ ರಾಜ್ಯದಲ್ಲಿ ಬೈಕ್‌ಗಳ ಸಂಚಾರದ ಮಾತ್ರ ನಿಷೇಧ ಹೇರಲಾಗಿದೆ. ಸ್ಪೋರ್ಟ್ಸ್ ಕಾರುಗಳ ಸಂಚಾರದ ಮೇಲೆ ಯಾವುದೇ ನಿಷೇಧ ಹೇರಲಾಗಿಲ್ಲ.

ದ್ವಿಚಕ್ರ ವಾಹನಗಳ ಸಂಚಾರದ ಮೇಲೆ ನಿಷೇಧ ಹೇರಿದ ಸರ್ಕಾರ

ವಿಯೆನ್ನಾ ನಗರದ ಕೇಂದ್ರ ಭಾಗದಲ್ಲಿ ಎಲೆಕ್ಟ್ರಿಕ್ ಬೈಕ್ ಸೇರಿದಂತೆ ಎಲ್ಲಾ ರೀತಿಯ ಬೈಕ್‌ಗಳನ್ನು ನಿಷೇಧಿಸಲಾಗಿದೆ. ಮೂಲಗಳ ಪ್ರಕಾರ, ವಿಯೆನ್ನಾದ ಆಡಳಿತವು ನಗರವನ್ನು ಕಾರುಗಳ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡುವ ಯೋಜನೆಯಲ್ಲಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ದ್ವಿಚಕ್ರ ವಾಹನಗಳ ಸಂಚಾರದ ಮೇಲೆ ನಿಷೇಧ ಹೇರಿದ ಸರ್ಕಾರ

ಈ ಯೋಜನೆಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ. ಅದರಲ್ಲೂ ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಎಲೆಕ್ಟ್ರಿಕ್ ಬೈಕ್‌ಗಳನ್ನು ನಿಷೇಧಿಸಿರುವುದರ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಯುರೋಪಿನಲ್ಲಿ ಹೆಚ್ಚಿನ ಸಂಖ್ಯೆಯ ಜನರು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಬಳಸುತ್ತಿದ್ದಾರೆ.

ದ್ವಿಚಕ್ರ ವಾಹನಗಳ ಸಂಚಾರದ ಮೇಲೆ ನಿಷೇಧ ಹೇರಿದ ಸರ್ಕಾರ

ಜೊತೆಗೆ ಎಲೆಕ್ಟ್ರಿಕ್ ಕಾರುಗಳನ್ನು ಸಹ ಹೆಚ್ಚಿನ ಸಂಖ್ಯೆಯಲ್ಲಿ ಬಳಸುತ್ತಿದ್ದಾರೆ. ವಿಯೆನ್ನಾದ ಸ್ಥಳೀಯ ಆಡಳಿತವು ನಗರದ ಮಧ್ಯಭಾಗದಲ್ಲಿ ವಾಹನಗಳ ನಿಲುಗಡೆಯ ಮೇಲೂ ನಿರ್ಬಂಧ ಹೇರಿದೆ. ಆದರೆ ಸ್ಥಳೀಯ ಆಡಳಿತವು ವಿನಾಯಿತಿ ನೀಡಿರುವ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ದ್ವಿಚಕ್ರ ವಾಹನಗಳ ಸಂಚಾರದ ಮೇಲೆ ನಿಷೇಧ ಹೇರಿದ ಸರ್ಕಾರ

ನಗರದ ಸುತ್ತ ಇರುವ ರಿಂಗ್ ರಸ್ತೆಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ. ಈ ರಸ್ತೆಯಲ್ಲಿ ಖಾಸಗಿ ಕಾರು, ವ್ಯಾನ್‌ ಹಾಗೂ ಬೈಕ್‌ಗಳ ಸಂಚಾರದ ಮೇಲೆ ಯಾವುದೇ ನಿರ್ಬಂಧ ವಿಧಿಸಿಲ್ಲ.

ದ್ವಿಚಕ್ರ ವಾಹನಗಳ ಸಂಚಾರದ ಮೇಲೆ ನಿಷೇಧ ಹೇರಿದ ಸರ್ಕಾರ

ಈ ನಿರ್ಬಂಧವು ಈ ಪ್ರದೇಶದಲ್ಲಿ ವಾಸಿಸುವವರಿಗೆ, ಖಾಸಗಿ ಗ್ಯಾರೇಜ್ ಹೊಂದಿರುವವರಿಗೆ ಅನ್ವಯಿಸುವುದಿಲ್ಲ. ಆದರೆ ಈ ವಿನಾಯಿತಿಯು ಬೈಕ್ ಹಾಗೂ ಸ್ಕೂಟರ್‌ಗಳ ಬಳಕೆಗೂ ಅನ್ವಯಿಸಲಿದೆಯೇ ಎಂಬುದನ್ನು ಅಲ್ಲಿನ ಸರ್ಕಾರ ಸ್ಪಷ್ಟಪಡಿಸಿಲ್ಲ.

Most Read Articles

Kannada
English summary
Vienna bans all kinds of two wheelers use in city. Read in Kannada.
Story first published: Thursday, June 25, 2020, 17:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X