ಸರ್ಕಾರಿ ಶಾಲೆ ಶಿಕ್ಷಕನಿಗೆ ಬೈಕ್ ಗಿಫ್ಟ್ ನೀಡಿದ ಗ್ರಾಮಸ್ಥರು: ಭಾವುಕರಾಗಿ ಕಣ್ಣೀರಿಟ್ಟ ವಿದ್ಯಾರ್ಥಿಗಳು
ವಿದ್ಯಾರ್ಥಿಗಳನ್ನು ಉತ್ತಮ ನಾಗರೀಕರನ್ನಾಗಿ ರೂಪಿಸುವಲ್ಲಿ ಗುರುವಿನ ಪಾತ್ರ ಮಹತ್ವದ್ದು. ಶಿಕ್ಷಣ ಕೇವಲ ಪಾಠದಿಂದ ಮಾತ್ರ ಬರುವುದಲ್ಲ, ಶಿಕ್ಷಕರ ನಡೆ ನುಡಿಗಳೂ ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಬೀರುತ್ತವೆ. ಇದಕ್ಕೆ ಹಲವಾರು ಮಾದರಿ ಶಿಕ್ಷಕರು ನಮ್ಮ ನಡುವೆ ಇದ್ದಾರೆ. ಇದಕ್ಕೆ ಮತ್ತೊಂದು ಉದಾಹರಣೆ ಎಂದರೆ, ಸರ್ಕಾರಿ ಶಾಲೆಯ ಶಿಕ್ಷಕ (Teacher) ಸಂತೋಷ್ ಕಾಂಚನ್.
ಶಿವಮೊಗ್ಗ (Shivamogga) ಜಿಲ್ಲೆಯ ವಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಾದರಿ ಶಿಕ್ಷಕ ಸಂತೋಷ್ ಕಾಂಚನ್ ಅವರಿಗೆ ಗ್ರಾಮಸ್ಥರು ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದ್ದಾರೆ. ಈ ಶಾಲೆಯಲ್ಲಿ ಸಂತೋಷ್ ಅವರು 16 ವರ್ಷಗಳಿಂದ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದರು. ಶಿಕ್ಷಕ ಸಂತೋಷ್ ಕಾಂಚನ್ ಅವರ ಬೀಳ್ಕೊಡುಗೆಗೆ ಗ್ರಾಮಸ್ಥರು ಆಕರ್ಷಕ ಬಜಾಜ್ ಪಲ್ಸರ್ ಬೈಕ್ ಅನ್ನು ಗಿಫ್ಟ್ ಕೊಟ್ಟಿದ್ದಾರೆ.

ಸಂತೋಷ್ ಅವರು ವಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಗೆ ಶಿಕ್ಷಕರಾಗಿ ಬಂದಾಗ ಇಲ್ಲಿನ ಕಾಡು ಕುಣುಬಿ ಜನಾಂಗದವರಿಗೆ ವಾಹನ ವ್ಯವಸ್ಥೆ ಇರಲಿಲ್ಲ. ಮುಖ್ಯರಸ್ತೆಗೆ ತಲುಪಬೇಕೆಂದರೆ 8 ಕಿಲೋ ಮೀಟರ್ ಕಾಲ್ನಡಿಗೆಯಲ್ಲೇ ಹೋಗಬೇಕಿತ್ತು. ಹೀಗಾಗಿ ವಿದ್ಯಾರ್ಥಿಗಳು ಹಾಗೂ ಊರಿನವರಿಗಾಗಿ ಶಿಕ್ಷಕ ಸಂತೋಷ್ ಕಾಂಚನ್ ಬೈಕ್ ಅನ್ನು ಖರೀದಿಸಿದ್ದರು. ಗ್ರಾಮದ ಜನರಿಗೆ ಆರೋಗ್ಯ ಸಮಸ್ಯೆ ಬಂದರೆ ಈ ಶಿಕ್ಷಕನ ಬೈಕ್ ಆ್ಯಂಬುಲೆನ್ಸ್ ಆಗಿತ್ತು.
ತಮ್ಮ ಶಾಲೆಯ ವಿದ್ಯಾರ್ಥಿಗಳನ್ನು ಪ್ರತಿಭಾಕಾರಂಜಿಗೂ ಈ ಬೈಕ್‌ನಲ್ಲಿಯೇ ಕರೆದುಕೊಂಡು ಹೋಗುತ್ತಿದ್ರು. ಇದೀಗ ಶಿಕ್ಷಕ ಸಂತೋಷ್ ಅವರಿಗೆ ಬೇರೆ ಊರಿನ ಶಾಲೆಗೆ ವರ್ಗವಣೆಯಾಗಿದೆ. ಸತತ 16 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಮಾಡಿದ ಅವರಿಗೆ ಗ್ರಾಮಸ್ಥರೆಲ್ಲಾ ಸೇರಿ ಹಣ ಒಗ್ಗೂಡಿಸಿ ಬಜಾಜ್ ಪಲ್ಸರ್ (Bajaj Pulsar) ಬೈಕ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕ ಸಂತೋಷ್ ಕಾಂಚನ್ ಅವರಿಗೆ ಗ್ರಾಮಸ್ಥರು ಗಿಫ್ಟ್ ನೀಡಿದ ಬೈಕ್ ವಿಡಿಯೋದಲ್ಲಿ ನೋಡಿ ಬಜಾಜ್ ಪಲ್ಸರ್ 150 ಅಥವಾ ಬಜಾಜ್ ಪಲ್ಸರ್ 180 ಬೈಕ್ ಆಗಿರಬಹುದು ಎಂದು ನಿರಿಕ್ಷಿಸುತ್ತಿದ್ದೇವೆ. ಈ ಬಜಾಜ್ ಪಲ್ಸರ್ ಬೈಕ್ ಬಗ್ಗೆ ಹೇಳುವುದಾದರೆ, ಭಾರತೀಯ ಮಾರುಕಟ್ಟೆಯಲ್ಲಿ ಒಂದು ಕಾಲದಲ್ಲಿ ಬಜಾಜ್ ಪಲ್ಸರ್ ಬೈಕ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸುತ್ತಿತ್ತು.
ಬಜಾಜ್ ಪಲ್ಸರ್ ಹೆಚ್ಚಿನ ಯುವಕರ ಫೇವರೆಟ್ ಮತ್ತು ಕನಸಿನ ಬೈಕ್ ಆಗಿತ್ತು. ಆದರೆ ಮಾರುಕಟ್ಟೆಯಲ್ಲಿ ಹೊಸ ಬೈಕ್‌ಗಳು ಲಗ್ಗೆ ಇಟ್ಟ ಬಳಿಕ ಪಲ್ಸರ್ ಬೈಕ್‌ಗಳ ಬೇಡಿಕೆಯು ಕುಸಿಯತೊಡಗಿತು. ಬಜಾಜ್ ಪಲ್ಸರ್ ಇನ್ನೂ ಬಜಾಜ್‌ನ ಉತ್ಪನ್ನ ಪೋರ್ಟ್‌ಫೋಲಿಯೊದಲ್ಲಿ ಹೆಚ್ಚು ಮಾರಾಟವಾಗುವ ಮೋಟಾರ್‌ಸೈಕಲ್‌ಗಳಲ್ಲಿ ಒಂದಾಗಿದೆ.

ಇನ್ನು ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವವರು ಹಾಗೂ ಅವರು ವಿದ್ಯಾರ್ಥಿಗಳನ್ನು ತಿದ್ದಿ ಸಮಾಜದ ಒಂದು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಮಕ್ಕಳಿಗೆ ಜೀವನದಲ್ಲಿ ಮುನ್ನಡೆಯಲು ತಂದೆತಾಯಿ ಹೇಗೆ ದಾರಿ ತೋರುತ್ತಾರೋ, ಅದೇ ರೀತಿ ಯಾವುದೇ ಸ್ವಾರ್ಥ ಭಾವನೆಯಿಲ್ಲದೆ ಮಕ್ಕಳಿಗೆ ಸರಿಯಾದ ದಾರಿಯನ್ನು ತೋರುವ ಮೂಲಕ ಅವರ ಭವಿಷ್ಯವನ್ನು ಉತ್ತಮವಾಗಿ ರೂಪಿಸುವವರೇ ಶಿಕ್ಷಕರು.
ನಮ್ಮೆಲ್ಲರ ಜೀವನದಲ್ಲಿ ಶಿಕ್ಷಕರಿಗೆ ವಿಶೇಷ ಮಹತ್ವವಿದೆ. ಶಿಕ್ಷಕರು ನಮ್ಮ ಜೀವನದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತಾರೆ. ಹೆತ್ತವರ ನಂತರ, ಶಿಕ್ಷಕರು ನಮಗೆ ಶಿಕ್ಷಣ ದೀಕ್ಷೆ ಮತ್ತು ಸಮಾಜದ ಜ್ಞಾನ ನೀಡುತ್ತಾರೆ. ಇದರಿಂದ ಶಿಕ್ಷಕರಿಗೆ ದುಬಾರಿ ಗಿಫ್ಟ್ ನೀಡುವುದು ಕೂಡ ತಪ್ಪಲ್ಲ. ಅದರಲ್ಲೂ ಇಂತಹ ಮಾದರಿ ಶಿಕ್ಷಕರಿಗೆ ಒಂದುವರೆ ಲಕ್ಷದ ಬಜಾಜ್ ಪಲ್ಸರ್ ಬೈಕ್ ನೀಡುವುದರ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಗ್ರಾಮಸ್ಥರಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಟ್ಟಿಸಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಇನ್ನು ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications