ಬೈಕ್‌ನಲ್ಲಿ ಬಿಟ್ಟಿ ಶೋಕಿ: ಸಿಕ್ಕಿಬಿದ್ದವನಿಗೆ ಬಸ್ಕಿ ಹೊಡೆಸಿ 4,200 ರೂ. ದಂಡ ವಿಧಿಸಿದ ಪೊಲೀಸರು

ರಸ್ತೆಯಲ್ಲಿ ವ್ಯಕ್ತಿಯೊಬ್ಬ ತನ್ನ ಎರಡೂ ಕಾಲುಗಳನ್ನು ಒಂದೆಡೆ ಇಟ್ಟು (ಮಹಿಳೆಯರಂತೆ ಕುಳಿತು) ಒಂದು ಕೈಯಲ್ಲಿ ಬೈಕ್ ಚಲಾಯಿಸುತ್ತಿರುವ ವಿಡಿಯೋ ವೈರಲ್ ಆದ ಬೆನ್ನಲೇ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿ ದಂಡ ವಿಧಿಸಿ ಬಸ್ಕಿ ಹೊಡೆಸಿದ್ದಾರೆ. ಇನ್ನೊಮ್ಮೆ ಇಂತಹ ಕೃತ್ಯಗಳನ್ನು ಮಾಡುವುದಿಲ್ಲ ಎಂದು ಹೇಳಿಸಿ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಬೈಕ್‌ನಲ್ಲಿ ಬಿಟ್ಟಿ ಶೋಕಿ: ಸಿಕ್ಕಿಬಿದ್ದವನಿಗೆ ಬಸ್ಕಿ ಹೊಡೆಸಿ 4,200 ರೂ. ದಂಡ ವಿಧಿಸಿದ ಪೊಲೀಸರು

ಭಾರತದಲ್ಲಿ ಪ್ರತಿ ದಿನ ಸಾವಿರಾರು ರಸ್ತೆ ಅಪಘಾತಗಳು ವರದಿಯಾಗುತ್ತಿವೆ. ಇವುಗಳಲ್ಲಿ ಹೆಚ್ಚಿನವು ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಜನರಲ್ಲಿ ನಿರ್ಲಕ್ಷ್ಯ ಮತ್ತು ಅರಿವಿನ ಕೊರತೆಯಿಂದಾಗಿ ಸಂಭವಿಸುತ್ತವೆ. ಇಂತಹ ಭೀಕರ ರಸ್ತೆ ಅಪಘಾತಗಳ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುತ್ತವೆ.

ಬೈಕ್‌ನಲ್ಲಿ ಬಿಟ್ಟಿ ಶೋಕಿ: ಸಿಕ್ಕಿಬಿದ್ದವನಿಗೆ ಬಸ್ಕಿ ಹೊಡೆಸಿ 4,200 ರೂ. ದಂಡ ವಿಧಿಸಿದ ಪೊಲೀಸರು

ಆದರೆ ಇವುಗಳನ್ನು ನೋಡಿದರು ಹಲವರು ಎಚ್ಚೆತ್ತುಕೊಳ್ಳುವುದಿಲ್ಲ, ಬದಲಿಗೆ ಇನ್ನೂ ಭಯಾನಕ ಸಾಹಸಗಳನ್ನು ಮಾಡುತ್ತಾರೆ. ಇಂತಹದೇ ಒಂದು ಸಾಹಸ ಮಾಡಿ ವ್ಯಕ್ತಿಯೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಅಪಾಯಕಾರಿ ಸಾಹಸವನ್ನು ಮಾಡಿರುವ ಈ ವ್ಯಕ್ತಿ ಪೊಲೀಸರಿಂದಲೇ ವೈರಲ್ ಆಗಿದ್ದಾನೆ.

ಬೈಕ್‌ನಲ್ಲಿ ಬಿಟ್ಟಿ ಶೋಕಿ: ಸಿಕ್ಕಿಬಿದ್ದವನಿಗೆ ಬಸ್ಕಿ ಹೊಡೆಸಿ 4,200 ರೂ. ದಂಡ ವಿಧಿಸಿದ ಪೊಲೀಸರು

ಇತ್ತೀಚೆಗೆ ಛತ್ತೀಸ್‌ಗಢದಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಬೈಕ್ ಚಲಾಯಿಸುತ್ತಾ ವ್ಯಕ್ತಿಯೊಬ್ಬ ಅಪಾಯಕಾರಿ ಸಾಹಸ ಮಾಡಿದ್ದಾನೆ. ಈ ಸಂಬಂಧ ಇಲ್ಲಿನ ದುರ್ಗ್ ಪೋಲೀಸರು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿರುವ ವಿಡಿಯೋವು ಸದ್ಯ ಎಲ್ಲಡೆ ವೈರಲ್ ಆಗಿದೆ.

ಬೈಕ್‌ನಲ್ಲಿ ಬಿಟ್ಟಿ ಶೋಕಿ: ಸಿಕ್ಕಿಬಿದ್ದವನಿಗೆ ಬಸ್ಕಿ ಹೊಡೆಸಿ 4,200 ರೂ. ದಂಡ ವಿಧಿಸಿದ ಪೊಲೀಸರು

ವಿಡಿಯೋವನ್ನು ವೀಕ್ಷಿಸಿದ ಹಲವರು ಸಾಮಾಜಿಕ ಮಾಧ್ಯಮ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ವ್ಯಕ್ತಿ ತನ್ನ ಎಡಗೈಯನ್ನು ಬಳಸಿ ಬೈಕು ಸವಾರಿ ಮಾಡುತ್ತಾ, ತನ್ನ ಎರಡೂ ಕಾಲುಗಳನ್ನು ಬಲಭಾಗದಲ್ಲಿ ಇಟ್ಟು ಕುಳಿತಿದ್ದಾನೆ. 28 ಸೆಕೆಂಡ್‌ಗಳ ಈ ವೀಡಿಯೊದಲ್ಲಿ ಹೆಲ್ಮೆಟ್ ಇಲ್ಲದೆ ಸಾಹಸ ಮಾಡುವ ವ್ಯಕ್ತಿಯನ್ನು ನೋಡಬಹುದು.

ಬೈಕ್‌ನಲ್ಲಿ ಬಿಟ್ಟಿ ಶೋಕಿ: ಸಿಕ್ಕಿಬಿದ್ದವನಿಗೆ ಬಸ್ಕಿ ಹೊಡೆಸಿ 4,200 ರೂ. ದಂಡ ವಿಧಿಸಿದ ಪೊಲೀಸರು

ಅದರ ಜೊತೆಗೆ ಬೈಕ್‌ನ ಬಲಭಾಗದಲ್ಲಿ ಕೆಲವು ಕ್ಯಾರಿ ಬ್ಯಾಗ್‌ಗಳು ನೇತಾಡುತ್ತಿದ್ದು, ಆತನ ನಿರ್ಲಕ್ಷದ ಸವಾರಿಯುವ ನೋಡಲು ಮಜವಾಗಿದ್ದರು ತುಂಬಾ ಅಪಾಯಕಾರಿಯಾಗಿದೆ. ಬ್ಯಾಲೆನ್ಸ್ ತಪ್ಪಿದರೆ ಕೈ-ಕಾಳು ಮುರಿಯುವುದು ಖಚಿತ. ಬೈಕ್ ಸವಾರನ ಹಿಂದೆ ಬರುತ್ತಿದ್ದ ವ್ಯಕ್ತಿಯೊಬ್ಬರು ಈ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ.

ಬೈಕ್‌ನಲ್ಲಿ ಬಿಟ್ಟಿ ಶೋಕಿ: ಸಿಕ್ಕಿಬಿದ್ದವನಿಗೆ ಬಸ್ಕಿ ಹೊಡೆಸಿ 4,200 ರೂ. ದಂಡ ವಿಧಿಸಿದ ಪೊಲೀಸರು

ಇದರ ಬಗ್ಗೆ ತ್ವರಿತ ಕ್ರಮ ಕೈಗೊಂಡ ಪೊಲೀಸರು ಮಧ್ಯಪ್ರವೇಶಿಸಿ ವ್ಯಕ್ತಿಯನ್ನು ಠಾಣೆಗೆ ಕರೆತಂದಿದ್ದಾರೆ. ಬಳಿಕ 4,200 ರೂಪಾಯಿ ದಂಡ ವಿಧಿಸಿದ್ದು, ಆತನ ಕೃತ್ಯಕ್ಕಾಗಿ ಕ್ಷಮೆಯಾಚಿಸಿದ್ದಾನೆ. ರಸ್ತೆ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕ್ಷಮೆಯಾಚಿಸಿದ ವ್ಯಕ್ತಿಯೂ ತನ್ನ ಕಿವಿಗಳನ್ನು ಹಿಡಿದು ಬಸ್ಕಿ ಹೊಡೆದಿದ್ದಾನೆ.

ಬೈಕ್‌ನಲ್ಲಿ ಬಿಟ್ಟಿ ಶೋಕಿ: ಸಿಕ್ಕಿಬಿದ್ದವನಿಗೆ ಬಸ್ಕಿ ಹೊಡೆಸಿ 4,200 ರೂ. ದಂಡ ವಿಧಿಸಿದ ಪೊಲೀಸರು

ತ್ವರಿತ ಕ್ರಮಕ್ಕೆ ಪೊಲೀಸರನ್ನು ಶ್ಲಾಘಿಸಿದ ನೆಟ್ಟಿಗರು

ಈ ಮಧ್ಯೆ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅನೇಕರು ಕಾಮೆಂಟ್ ವಿಭಾಗದಲ್ಲಿ ಪ್ರತಿಕ್ರಿಯಿಸಿದ್ದಾರೆ. ಆತನ ರೈಡಿಂಗ್ 'ಕೌಶಲ್ಯ' ನೋಡಿ ಕೆಲವರು ಮೆಚ್ಚಿದರೆ, ಇನ್ನೂ ಹಲವರು ವಿಡಿಯೋದ ಹಿನ್ನೆಲೆಯಲ್ಲಿ ಪ್ಲೇ ಮಾಡಿದ ಹಾಡಿನ ಆಯ್ಕೆಯನ್ನು ಮೆಚ್ಚಿದ್ದಾರೆ. ಉಳಿದಂತೆ ಇನ್ನೆಲ್ಲರು ಆತನ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೈಕ್‌ನಲ್ಲಿ ಬಿಟ್ಟಿ ಶೋಕಿ: ಸಿಕ್ಕಿಬಿದ್ದವನಿಗೆ ಬಸ್ಕಿ ಹೊಡೆಸಿ 4,200 ರೂ. ದಂಡ ವಿಧಿಸಿದ ಪೊಲೀಸರು

ದೇಶದಲ್ಲಿ ದ್ವಿಚಕ್ರ ವಾಹನ ಅಪಘಾತಗಳೇ ಹೆಚ್ಚು

2020ರಲ್ಲಿ ದೇಶದಲ್ಲಿ ದ್ವಿಚಕ್ರ ವಾಹನ ಅಪಘಾತಗಳಿಗೆ ಸಂಬಂಧಿಸಿದಂತೆ 1,58,964 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಒಟ್ಟು 56,873 ಜನರು ಸಾವನ್ನಪ್ಪಿದ್ದಾರೆ. 2019 ರಲ್ಲಿ ಒಟ್ಟು ಅಪಘಾತಗಳ ಸಂಖ್ಯೆ 1,67,184 ದಾಖಲಾಗಿದ್ದು, ಇದರಲ್ಲಿ ದ್ವಿಚಕ್ರ ವಾಹನ ಅಪಘಾತಗಳಲ್ಲಿ ಒಟ್ಟು 56,136 ಜನರು ಜೀವ ಕಳೆದುಕೊಂಡಿದ್ದಾರೆ.

ಬೈಕ್‌ನಲ್ಲಿ ಬಿಟ್ಟಿ ಶೋಕಿ: ಸಿಕ್ಕಿಬಿದ್ದವನಿಗೆ ಬಸ್ಕಿ ಹೊಡೆಸಿ 4,200 ರೂ. ದಂಡ ವಿಧಿಸಿದ ಪೊಲೀಸರು

ಈ ಅಪಘಾತಗಳಿಗೆ ಸಂಚಾರಿ ನಿಯಮಗಳ ಉಲ್ಲಂಘನೆ ಮುಖ್ಯ ಕಾರಣವಾಗಿದೆ. ಜೊತೆಗೆ ರಾಂಗ್ ಸೈಡ್‌ ಡ್ರೈವಿಂಗ್, ಅತಿವೇಗ, ಸಿಗ್ನಲ್ ಜಂಪ್, ಅಪ್ರಾಪ್ತ ವಯಸ್ಸಿನವರ ಚಾಲನೆಯು ಅಪಘಾತಗಳಿಗೆ ಪ್ರಮುಖ ಕಾರಣಗಳಾಗಿರುವುದಾಗಿ ಸಾರಿಗೆ ಸಚಿವಾಲಯದ ಅಂಕಿಅಂಶಗಳು ತಿಳಿಸಿರುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಬೈಕ್‌ನಲ್ಲಿ ಬಿಟ್ಟಿ ಶೋಕಿ: ಸಿಕ್ಕಿಬಿದ್ದವನಿಗೆ ಬಸ್ಕಿ ಹೊಡೆಸಿ 4,200 ರೂ. ದಂಡ ವಿಧಿಸಿದ ಪೊಲೀಸರು

ಒಂದು ಅಂದಾಜಿನ ಪ್ರಕಾರ, ದೇಶದಲ್ಲಿ ಪ್ರತಿ ಗಂಟೆಗೆ 53 ರಸ್ತೆ ಅಪಘಾತಗಳು ಸಂಭವಿಸುತ್ತಿವೆ ಮತ್ತು ಪ್ರತಿ ನಾಲ್ಕು ನಿಮಿಷಗಳಿಗೊಮ್ಮೆ ಒಬ್ಬ ವ್ಯಕ್ತಿ ರಸ್ತೆ ಅಪಘಾತದಲ್ಲಿ ಸಾಯುತ್ತಿದ್ದಾನೆ. ಭಾರತದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತಗಳು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸುತ್ತಿವೆ. ಅಂಕಿಅಂಶಗಳ ಪ್ರಕಾರ ದ್ವಿಚಕ್ರ ವಾಹನ ಚಾಲಕರೇ ರಸ್ತೆ ಅಪಘಾತಗಳಲ್ಲಿ ಹೆಚ್ಚಾಗಿ ಸಾವನ್ನಪ್ಪುತ್ತಿದ್ದಾರೆ.

ಬೈಕ್‌ನಲ್ಲಿ ಬಿಟ್ಟಿ ಶೋಕಿ: ಸಿಕ್ಕಿಬಿದ್ದವನಿಗೆ ಬಸ್ಕಿ ಹೊಡೆಸಿ 4,200 ರೂ. ದಂಡ ವಿಧಿಸಿದ ಪೊಲೀಸರು

ಸಾರಿಗೆ ಸಚಿವಾಲಯದ ವರದಿಯ ಪ್ರಕಾರ, ದೇಶದಲ್ಲಿ ಪ್ರತಿ ವರ್ಷ ಸುಮಾರು 4.50 ಲಕ್ಷ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಇದರಲ್ಲಿ 1.50 ಲಕ್ಷ ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ. ಇತರ ಯಾವುದೇ ದೇಶಕ್ಕೆ ಹೋಲಿಸಿದರೆ ಈ ಸಂಖ್ಯೆ ವಿಶ್ವದಲ್ಲೇ ಅತ್ಯಧಿಕವಾಗಿದೆ. ಭಾರತದಲ್ಲಿ ಅಂಗವೈಕಲ್ಯಕ್ಕೆ ರಸ್ತೆ ಅಪಘಾತಗಳು ಮುಖ್ಯ ಕಾರಣ ಎಂದು ಉಲ್ಲೇಖಿಸಲಾಗಿದೆ.

ಬೈಕ್‌ನಲ್ಲಿ ಬಿಟ್ಟಿ ಶೋಕಿ: ಸಿಕ್ಕಿಬಿದ್ದವನಿಗೆ ಬಸ್ಕಿ ಹೊಡೆಸಿ 4,200 ರೂ. ದಂಡ ವಿಧಿಸಿದ ಪೊಲೀಸರು

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಪ್ರಪಂಚದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುವ ದೇಶಗಳಲ್ಲಿ ಭಾರತವೂ ಸಹ ಸೇರಿದೆ. ಅಪಘಾತ ನಿಯಂತ್ರಣಕ್ಕೆ ಸರ್ಕಾರ ಹಲವು ಕಠಿಣ ಕ್ರಮಗಳನ್ನು ಜಾರಿಗೆ ತಂದರೂ ಪ್ರಾಣ ನಷ್ಟ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆಯಾದರೂ ಅಪಘಾತ ಪ್ರಕರಣಗಳು ಮಾತ್ರ ಕಡಿಮೆಯಾಗಿಲ್ಲ.

Most Read Articles

Kannada
English summary
Virul video a man rides bike with both legs on one side police fined Rs 4200
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X