viral video: ಬೆಂಗಳೂರಿನಲ್ಲಿ ಮಾತ್ರ ಸಾಧ್ಯ: ಹೆಣ್ಮಗು.. ಹೆಣ್ಮಗು ಓಹ್‌.. ಎಂದ ನೆಟ್ಟಿಗರು!

viral video: ಸೋಷಿಯಲ್ ಮೀಡಿಯಾದಲ್ಲಿ ನಿತ್ಯ ಯಾವುದೋ ಒಂದು ವೈರಲ್ ವಿಡಿಯೋ ನೋಡುತ್ತಲೇ ಇರುತ್ತೇವೆ. ವೈರಲ್ ಆಗಿ ಸಾರ್ವಜನಿಕರಲ್ಲಿ ಗುರ್ತಿಸಿಕೊಳ್ಳಲು ಸೊಷಿಯಲ್ ಮೀಡಿಯಾ ಒಂದಿದ್ದರೇ ಸಾಕು, ಕೆಲವರು ಬೇಕಂತಲೇ ವೈರಲ್ ಆಗಲು ಶ್ರಮಿಸಿದರೇ, ಇನ್ನೂ ಕೆಲವರು ಅಕಸ್ಮಾತ್ ಆಗಿ ವೈರಲ್ ಆಗಿಬಿಡುತ್ತಾರೆ. ಇದೀಗ ಮಹಿಳೆಯೊಬ್ಬರು ಹೀಗೆಯೇ ವೈರಲ್ ಆಗಿದ್ದಾರೆ.

ಸಾಮಾನ್ಯವಾಗಿ ವಾಹನ ಚಲಾಯಿಸುತ್ತಾ ಫೋನ್ ಮಾತನಾಡುವಂತಿಲ್ಲ. ಇದು ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದಂತಾಗುತ್ತದೆ. ಕೆಲವರು ಟ್ರಾಫಿಕ್ ಪೊಲೀಸರ ಕಣ್ತಪ್ಪಿಸಿ ಹೆಲ್ಮೆಟ್ ಒಳಗೆ ಫೋನ್‌ ಇಟ್ಟುಕೊಂಡು ಮಾತನಾಡಿದ್ರೆ, ಇನ್ನೂ ಕೆಲವರು ಇಯರ್‌ಫೋನ್‌ ಬಳಸುತ್ತಾರೆ. ಆದ್ರೆ ಇಲ್ಲಿ ನಾವು ಹೇಳಲು ಹೊರಟಿರುವ ಮಹಿಳೆ ಯಾವುದೇ ಟ್ರಾಫಿಕ್ ನಿಯಮಗಳನ್ನು ಲೆಕ್ಕಿಸದೇ ಸ್ಕೂಟರ್ ಓಡಿಸುತ್ತಾ ಫೋನ್ ಬಳಸಿದ್ದಾರೆ. ಪಕ್ಕದಲ್ಲೇ ಬಂದ ವಾಹನ ಸವಾರ ಇದನ್ನು ರೆಕಾರ್ಡ್ ಮಾಡಿ ವೈರಲ್ ಮಾಡಿದ್ದಾರೆ.

viral-video-bengaluru-woman-using-phone-while-riding-scooter

@3rdEyeDude ಅವರು X (ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ ಈ ವೀಡಿಯೊವು ಸಾಕಷ್ಟು ವೀಕ್ಷಕರನ್ನು ಗಳಿಸಿದೆ. ಸ್ಕೂಟರ್ ಚಾಲನೆ ವೇಳೆ ಫೋನ್ ಬಳಸುವಾಗ ಕೈಗಳು ಫೋನ್‌ ಹಿಡಿಯದಂತೆ ಹೊಸ ಉಪಾಯ ಕಂಡುಕೊಂಡಿದ್ದಾರೆ. ಕಿವಿಯ ಬಳಿ ಫೋನ್ ಇಟ್ಟು ಅದು ಕೆಳಗೆ ಬೀಳದಂತೆ ತಳೆಯ ಸುತ್ತ ಸ್ಕಾರ್ಫ್ ಕಟ್ಟಿಕೊಂಡಿದ್ದಾರೆ. ಸ್ಕಾರ್ಫ್ ಹೊರತುಪಡಿಸಿ ಬೇರೇನೂ ಬಳಸದೆ 'ಹ್ಯಾಂಡ್ಸ್-ಫ್ರೀ' ವಿಧಾನವನ್ನು ರೂಪಿಸಿದ್ದಾರೆ.

ಸ್ಕಾರ್ಫ್ ನಿಂದ ಫೋನ್ ಅನ್ನು ತನ್ನ ತಲೆಗೆ ಭದ್ರಪಡಿಸಿಕೊಳ್ಳುವ ಮೂಲಕ, ಆಕೆ ತನ್ನ ಪ್ರಯಾಣದುದ್ದಕ್ಕೂ ಫೋನ್‌ ಅಲ್ಲೇ ಇರುವಂತೆ ಮಾಡಿಕೊಂಡಿದ್ದಾರೆ. ಮೊದಲು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾದ ಈ ಕ್ಲಿಪ್ ಈಗ ರಸ್ತೆ ಸುರಕ್ಷತೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ. ನಗರದ ಎಲ್ಲೆಡೆ ಸಂಚಾರ ಪೊಲೀಸರನ್ನು ನಿಯೋಜಿಸಲಾಗಿದೆ. ಹಲವಾರು ಸ್ಥಳಗಳಲ್ಲಿ ಎಐ ಕ್ಯಾಮೆರಾಗಳನ್ನು ಸ್ಥಾಪಿಸಲಾಗಿದೆ. ಆದರೂ ಮಹಿಳೆ ಯಾವುದೇ ಭಯವಿಲ್ಲದೇ ಹೀಗೆ ಮಾಡಿರುವುದು ಆಶ್ಚರ್ಯಕ್ಕೆ ಗುರಿಮಾಡಿದೆ.

viral-video-bengaluru-woman-using-phone-while-riding-scooter

ನಡೆದದ್ದು ಎಲ್ಲಿ?: ಮಾರ್ಚ್ 26 ರಂದು ಸಂಜೆ 5 ಗಂಟೆ ಸುಮಾರಿಗೆ ಬೆಂಗಳೂರಿನ ಎನ್‌ಟಿಐ ಮೈದಾನದ ಎದುರಿನ ವಿದ್ಯಾರಣ್ಯಪುರ ಬಳಿ ಈ ಘಟನೆ ನಡೆದಿದ್ದು, ತನಿಖೆ ನಡೆಸಲು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಲಾಗಿದೆ. ಮಹಿಳೆ ಹೆಲ್ಮೆಟ್ ಧರಿಸಿಲ್ಲ, ಇತರ ವಾಹನಗಳನ್ನು ಗಮನಿಸದೇ ತಮ್ಮಿಷ್ಟಕ್ಕೆ ಫೋನ್ ಮಾತನಾಡುತ್ತಾ ವಾಹನ ಚಲಾಯಿಸಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಇನ್ನೂ ಕೆಲವರು ಇದು ನೋಡಲು ತಮಾಷೆಯಾಗಿದೆ ಎಂದು ಕಮೆಂಟ್ ಮಾಡಿದ್ರೆ, ಟ್ರೋಲ್‌ಗಳಲ್ಲಿ ಈಕೆಯನ್ನು ಹೆಣ್ಮಗು.. ಹೆಣ್ಮಗೂ ಓಹ್ ಎಂದು ವೈರಲ್ ಮಾಡುತ್ತಿದ್ದಾರೆ. ಇತರರ ಜೀವವನ್ನು ಅಪಾಯಕ್ಕೆ ತಳ್ಳಿ, ಇಂತಹ ಕೃತ್ಯವನ್ನು ಎಸಗುವುದು ಸಂಪೂರ್ಣ ಮೂರ್ಖತನ ಎಂದು ಖಂಡಿಸಲಾಗುತ್ತಿದೆ. ಈ ಮಹಿಳೆಯ ವಿರುದ್ಧ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆಯೇ ಎಂಬುದು ಇನ್ನು ತಿಳಿದುಬಂದಿಲ್ಲ.

viral-video-bengaluru-woman-using-phone-while-riding-scooter

ಹೆಚ್ಚು ಕಳವಳಕಾರಿ ವಿಷಯವೆಂದರೆ ಜನರು ನೆಕ್ ಬ್ಯಾಂಡ್ ಇಯರ್ ಫೋನ್‌ಗಳನ್ನು ಹಾಕುತ್ತಾರೆ, ಅದು ಸುತ್ತಮುತ್ತಲಿನ ಶಬ್ದಗಳನ್ನು ನಿರ್ಬಂಧಿಸುತ್ತವೆ. ಇವರು ಯಾವಾಗಲೂ ಹುಚ್ಚರಂತೆ ಸವಾರಿ ಮಾಡುತ್ತಾರೆ. ಇತರ ವಾಹನಗಳ ಹಾರ್ನ್‌ಗಳನ್ನು ಕೇಳದೆ ಮನಬಂದಂತೆ ಸವಾರಿ ಮಾಡುತ್ತಾರೆ. ಇದರಿಂದಲೇ ಹಲವು ಅಪಘಾತಗಳು ಸಂಭವಿಸಿದ ಉದಾಹರಣೆಗಳು ಇವೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, March 28, 2024, 13:10 [IST]
English summary
Viral video bengaluru woman using phone while riding scooter
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+