ಸ್ವಲ್ಪವು ನಾಚಿಕೆ ಇಲ್ವಾ: ಚಲಿಸುತ್ತಿರುವ ಬೈಕ್‌ನ್ನು 'ಬೆಡ್ ರೂಮ್' ಮಾಡಿಕೊಂಡ ಯುವತಿಯರು.. ವಿಡಿಯೋ ವೈರಲ್
ಸಾರ್ವಜನಿಕ ರಸ್ತೆಯಲ್ಲಿ ಕಾರು ಅಥವಾ ಬೈಕ್ ಬಳಸಿ ಸ್ಟಂಟ್ ಮಾಡುವುದು ಕಾನೂನಿನ ಪ್ರಕಾರ, ಅಪರಾಧ. ಇದರ ಅರಿವಿದ್ದರೂ ಎಷ್ಟೋ ಮಂದಿ ಇಂತಹ ಸಾಹಸ ಪ್ರದರ್ಶನಗಳಿಗೆ ಕೈ ಹಾಕಿ, ತಮ್ಮ ಜೀವಕ್ಕೆ ಸಂಚಕಾರ ತಂದುಕೊಳ್ಳುತ್ತಾರೆ. ಕೆಲವೊಮ್ಮೆ ಇತರರ ಪ್ರಾಣಕ್ಕೂ ಎರವಾಗುತ್ತಾರೆ. ಇಲ್ಲವೇ, ತಾವೇ ದೀರ್ಘಕಾಲಿಕ ಅಂಗವೈಕಲ್ಯಕ್ಕೆ ತುತ್ತಾಗಬಹುದು.
ಸದ್ಯ, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ಭಾರೀ ವೈರಲ್ ಆಗಿದೆ. ಅದರಲ್ಲಿ ಯುವತಿಯರಿಬ್ಬರೂ ಮೊದಲೇ ಜೀವದ ಮೇಲೆ ಭಯವಿಲ್ಲ ಎಂಬಂತೆ ಬೈಕ್‌ನಲ್ಲಿ ಸ್ಟಂಟ್ ಮಾಡುತ್ತಿದ್ದು, ಜೊತೆಗೆ ಸ್ವಲ್ಪವು ನಾಚಿಕೆ ಇಲ್ಲದಂತೆ ಚುಂಬಿಸಿಕೊಂಡಿದ್ದಾರೆ. ಇದನ್ನು ಕಂಡ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಈ ಘಟನೆ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ವಾಹನದ ನೋಂದಣಿ ಸಂಖ್ಯೆಯನ್ನು ನೋಡಿದಾಗ ತಮಿಳುನಾಡಿನದ್ದು ಎಂದು ಭಾವಿಸಲಾಗಿದೆ.

ಆದರೆ, ಈ ವೈರಲ್ ವಿಡಿಯೋವನ್ನು ಜಾರ್ಖಂಡ್ ಮೂಲದ ಇನ್‌ಸ್ಟಾಗ್ರಾಮ್ ಪೇಜ್ ನಲ್ಲಿ ಶೇರ್ ಮಾಡಲಾಗಿದೆ. ಇದರಲ್ಲಿ ಚಲಿಸುತ್ತಿರುವ ಬೈಕಿನಲ್ಲಿ ಇಬ್ಬರು ಯುವತಿಯರು ಯಾವುದೇ ಭಯವಿಲ್ಲದೆ, ಪರಸ್ಪರ ಮುಖ ಮಾಡಿಕೊಂಡು ಕುಳಿತ್ತಿತ್ತು, ಕೊಂಚವು ಅಳುಕಿಲ್ಲದೆ ಚುಂಬಿಸುತ್ತಾ ತಬ್ಬಿಕೊಳ್ಳುವುದನ್ನು ಮಾಡುತ್ತಿದ್ದಾರೆ. ಇದನ್ನು, ಪಕ್ಕದಲ್ಲಿಯೇ ಮತ್ತೊಂದು ವಾಹನದಲ್ಲಿ ಸಂಚರಿಸುತ್ತಿದ್ದ ವ್ಯಕ್ತಿ ವಿಡಿಯೋ ರೆಕಾರ್ಡ್ ಮಾಡಿದ್ದಾನೆ ಎಂದು ವರದಿಯಾಗಿದೆ.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಹಲ್ ಚಲ್ ಸೃಷ್ಟಿಸಿದ ಬಳಿಕ ನೆಟ್ಟಿಗರು ಫುಲ್ ಗರಂ ಆಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಶೀಘ್ರದಲ್ಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನು ಹಲವಾರು ಜಾರ್ಖಂಡ್ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಜೊತೆಗೆ ಈ ಇಬ್ಬರು ಯುವತಿಯರ ವರ್ತನೆಯನ್ನು ವಿರೋಧಿಸಿ, ತರಹೇವಾರಿ ಕಾಮೆಂಟ್ ಮಾಡಿದ್ದಾರೆ.
ಇದೇ ರೀತಿಯ ಮತ್ತೊಂದು ವಿಡಿಯೋವೊಂದನ್ನು ಕೂಡ ಇನ್‌ಸ್ಟಾಗ್ರಾಮ್ ಖಾತೆಯೊಂದರಲ್ಲಿ ಪೋಸ್ಟ್ ಮಾಡಲಾಗಿದೆ. ಇಲ್ಲಿಯೂ ಯುವಕ ಹಾಗೂ ಯುವತಿ ಪರಸ್ಪರ ಮುಖ ಮಾಡಿಕೊಂಡು ಕುಳಿತುಕೊಂಡು ರಸ್ತೆಯಲ್ಲಿ ಸ್ಟಂಟ್ ಮಾಡುತ್ತಿದ್ದಾರೆ. ಆದರೆ, ಇವರಿಬ್ಬರೂ ಜಾಣ ನಡೆಯನ್ನು ಪ್ರದರ್ಶಿಸಿದ್ದು, ತಮ್ಮ ಗುರುತನ್ನು ಮರೆಮಾಚಲು ಹೆಲ್ಮೆಟ್ ಧರಿಸಿದ್ದಾರೆ ಹಾಗೂ ಬೈಕಿನ ನಂಬರ್ ಪ್ಲೇಟ್ ತೆಗೆದಿದ್ದಾರೆ. ಈ ದುರ್ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ದೇಶದ ಜನ ಸಂಚಾರಿ ರಸ್ತೆಗಳಲ್ಲಿ ಬೈಕ್ ಅಥವಾ ಕಾರುಗಳನ್ನು ಉಪಯೋಗಿಸಿ ಸ್ಟಂಟ್ ಮಾಡಲು ಯಾವುದೇ ರೀತಿಯಿಂದಲ್ಲೂ ಅವಕಾಶವಿಲ್ಲ. ಇದರಿಂದ ವಾಹನವನ್ನು ಓಡಿಸುವ ಚಾಲಕ ಅಥವಾ ಇತರರಿಗೆ ತೊಂದರೆಯಾಗಬಹುದು. ಈ ರೀತಿಯ ಕೆಟ್ಟ ಸಾಹಸ ಮಾಡಲು ಹೋಗಿ, ಎಷ್ಟೋ ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಪೊಲೀಸರು ಇಂತಹ ಕೆಲಸ ಮಾಡಬೇಡಿ ಎಂದು ಹಲವು ಬಾರಿ ದಂಡವನ್ನು ವಿಧಿಸಿದರೂ ಬುದ್ಧಿಯನ್ನೇ ಕಲಿಯುವುದಿಲ್ಲ.
ಆಗೋ ಸ್ಟಂಟ್ ಮಾಡಬೇಕು ಅಂದುಕೊಂಡರೇ ರೇಸ್ ಟ್ರ್ಯಾಕ್ ಅಥವಾ ನಿಮ್ಮ ಖಾಸಗಿ ಸ್ಥಳದಲ್ಲಿ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡು ನಡೆಸಿ. ಸಾರ್ವಜನಿಕ ಸ್ಥಳದಲ್ಲಿ ಎಂದಿಗೂ ಈ ಕೆಲಸ ಮಾಡಿ, ಬೇರೆಯವರಿಗೆ ಕಷ್ಟಕೊಡಬೇಡಿ. ಅದರಲ್ಲೂ ರೋಡ್ ನಲ್ಲಿ ಸಾಹಸ ಪ್ರದರ್ಶನ ಮಾಡುವುದು ಮೊದಲೇ ತಪ್ಪು. ಆದರೆ, ಈ ಇಬ್ಬರು ಯುವತಿಯರು ಮುಜುಗರವಿಲ್ಲದೇ ಪರಸ್ಪರ ಚುಂಬಿಸುವ ಮೂಲಕ ಸಾರ್ವಜನಿಕ ಆಕ್ರೊಶಕ್ಕೆ ಕಾರಣರಾಗಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ವೀಕ್ಷಿಸಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್ ಮತ್ತು ಶೇರ್ ಮಾಡುವುದನ್ನು ಮರೆಯದಿರಿ.


Click it and Unblock the Notifications