viral video: ಜೀವ ಪಣಕ್ಕಿಟ್ಟು ತಾಯಿ-ಮಗುವಿಗೆ ಪುನರ್‌ಜನ್ಮ ನೀಡಿದ ಯುವಕ!

viral video: ತಾಯಿ-ಮಗುವನ್ನು ರಕ್ಷಿಸಿ ಸೋಷಿಯಲ್ ಮೀಡಿಯಾದಲ್ಲಿ ಸೂಪರ್ ಹೀರೋ ಎನಿಸಿಕೊಂಡ ಯುವಕನ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಇತ್ತೀಚೆಗೆ ಬ್ರೆಜಿಲ್‌ನಲ್ಲಿ ಪ್ರವಾಹಕ್ಕೆ ಸಿಲುಕಿದ ತಾಯಿ - ಮಗುವನ್ನು ರಕ್ಷಿಸಲು ತನ್ನ ಪ್ರಾಣವನ್ನು ಪಣಕ್ಕಿಟ್ಟ ಈ ಯುವಕನ ಬಗ್ಗೆ ವಿಶ್ವದೆಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ಹೌದು.. ತಮ್ಮ ಜೀವ ಪಣಕ್ಕಿಟ್ಟು ಇತರರನ್ನು ರಕ್ಷಿಸುವ ಸನ್ನಿವೇಶಗಳನ್ನು ಕೇವಲ ಸಿನಿಮಾಗಳಲ್ಲೇ ಹೆಚ್ಚಾಗಿ ನೋಡುತ್ತೇವೆ. ನಿಜ ಜೀವನದಲ್ಲಿ ಇಂತಹ ಹೀರೋಗಳು ತುಂಬಾ ಕಡಿಮೆ. ಇತ್ತೀಚೆಗೆ ಬ್ರೆಜಿಲ್‌ನ ನಗರವೊಂದರಲ್ಲಿ ಉಂಟಾದ ಪ್ರವಾಹಕ್ಕೆ ಅಲ್ಲಿನ ಜನ ತತ್ತರಿಸಿದ್ದರು. ಪ್ರವಾಹ ಹೆಚ್ಚಾಗಿ ಕಾರೊಂದು ಭೀಕರವಾಗಿ ಹರಿಯುವ ನೀರಿಗೆ ಸಿಲುಕಿ ಅದರಿಲ್ಲದ್ದವರು ಜೀವ ಕಾಪಾಡಿಕೊಳ್ಳಲು ಪರದಾಡುತ್ತಿದ್ದರು.

viral-video-man-rescued-mother-and-child-who-were-caught-in-the-flood

ಈ ಕಾರಿನಲ್ಲಿ ಸಣ್ಣ ಮಗು ಹಾಗೂ ತಾಯಿ ಇದ್ದರು. ಆದ್ರೆ ಆ ತಾಯಿಗೆ ಹೊರ ಬರಲು ಯಾವುದೇ ಉಪಾಯವಿಲ್ಲದೇ ಕಾರಿನಲ್ಲೆ ಕುಳಿತಿದ್ದರು. ಈ ವೇಳೆ ದೇವರಂತೆ ರಕ್ಷಣೆಗೆ ಮುಂದಾದ ಯುವಕ, ಉಕ್ಕಿ ಹರಿಯುವ ನೀರಿನಲ್ಲಿ ಕಾರಿನಲ್ಲಿ ಸಿಕ್ಕಿಬಿದ್ದ ತಾಯಿ ಮತ್ತು ಮಗುವನ್ನು ಉಳಿಸಲು ತನ್ನ ಪ್ರಾಣವನ್ನು ಪಣಕ್ಕಿಟ್ಟು ವೀರೋಚಿತವಾಗಿ ಕೆಲವೇ ನಿಮಿಷಗಳಲ್ಲಿ ಪ್ರಯಾಣಿಕರನ್ನು ಹೊರತೆಗೆದಿದ್ದಾನೆ.

ಈ ಭಯಾನಕ ದೃಶ್ಯಗಳನ್ನು ತೋರಿಸುವ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ವೀಡಿಯೊದಲ್ಲಿ, ಕಾರು ಕೊಚ್ಚಿಹೋಗುವ ಕೆಲವೇ ನಿಮಿಷಗಳ ಮೊದಲು ತಾಯಿ - ಮಗುವನ್ನು ಹೊರತೆಗೆಯುವುದನ್ನು ಈ ದೃಶ್ಯಗಳು ತೋರಿಸುತ್ತವೆ. ಈ ವಿಡಿಯೋವನ್ನು ಗುಡ್‌ ನ್ಯೂಸ್ ಮೂವ್ಮೆಂಟ್ ಎಂಬ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಪೋಸ್ಟ್ ಮಾಡಲಾಗಿದ್ದು, ಅದ್ಬುತ ಶೀರ್ಷಿಕೆಯೊಂದಿಗೆ ಎಲ್ಲರ ಗಮನವನ್ನು ಸೆಳೆದಿದೆ.

viral-video-man-rescued-mother-and-child-who-were-caught-in-the-flood

''ಬ್ರೆಜಿಲ್‌ನ ಈ ಹೀರೋ, ಕಾರು ಪ್ರವಾಹಕ್ಕೆ ಸಿಲುಕುವ ಕೆಲವೇ ಕ್ಷಣಗಳ ಮೊದಲು ತಾಯಿ ಮತ್ತು ಮಗುವನ್ನು ಉಳಿಸಲು ತನ್ನ ಪ್ರಾಣವನ್ನು ಪಣಕ್ಕಿಟ್ಟಿದ್ದಾನೆ" ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾಗಿದೆ. ರಕ್ಷಣೆ ಮಾಡಿದ ವ್ಯಕ್ತಿಯನ್ನು ಮಾರ್ಕೋಸ್ ವಿನೀಸಿಯಸ್ ಎಂದು ಗುರುತಿಸಲಾಗಿದೆ. ಉಕ್ಕಿ ಹರಿಯುವ ಪ್ರವಾಹದಲ್ಲಿ ಕಾರಿನ ಬಾಗಿಲನ್ನು ಹಿಡಿದು ನೇತಾಡುತ್ತಾ ಒಂದು ಕೈಯಲ್ಲಿ ಮಗುವನ್ನು ಹಾಗೂ ತಾಯಿಯನ್ನು ರಕ್ಷಿಸಿದ್ದಾನೆ.

ಅದೃಷ್ಟವಶಾತ್ ಈ ಘಟನೆಯಲ್ಲಿ ಎಲ್ಲರೂ ಪಾರಾಗಿದ್ದಾರೆ. ವಿಚಿತ್ರವೆಂದರೆ ಕೇವಲ ಸಿನಿಮಾಗಳಲ್ಲಿ ಕಂಡುಬರುವಂತೆ ತಾಯಿ-ಮಗುವನ್ನು ರಕ್ಷಿಸಿದ ಕೂಡಲೇ ಕಾರು ಕೊಚ್ಚಿಹೋಗುವುದನ್ನು ನೋಡಿ ಹಲವರು ಆಘಾತಕ್ಕೆ ಗುರಿಯಾಗಿದ್ದಾರೆ. ಒಂದು ವೇಳೆ ರಕ್ಷಣೆ ಮಾಡುವಲ್ಲಿ ತುಸು ತಡವಾಗಿದ್ದರೂ ಘೋರ ದುರಂತವನ್ನು ನೋಡಬೇಕಿರುತಿತ್ತು ಎಂದು ವಿಡಿಯೋವನ್ನು ನೋಡಿದ ಹಲವರು ಕಮೆಂಟ್ ಮಾಡಿದ್ದಾರೆ.

viral-video-man-rescued-mother-and-child-who-were-caught-in-the-flood

ನಿಜಕ್ಕೆ ರಕ್ಷಣೆಗೆ ಮುಂದಾಗಿದ್ದ ವ್ಯಕ್ತಿಯು ಅಂತಹ ಭೀಕರ ಪರಿಸ್ಥಿತಿಯಲ್ಲೂ ತುಂಬಾ ತಾಳ್ಮೆ ಹಾಗೂ ಶಾಂತವಾಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಪರಿಸ್ಥಿತಿಯನ್ನು ನಿಭಾಯಿಸಲು ಗಾಬರಿಗೊಳ್ಳದೇ ತಾಳ್ಮೆಯಿಂದಿದ್ದರೇ ಎಲ್ಲವೂ ಸಾಧ್ಯ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಏನೇ ಹೇಳಿ ಇಬ್ಬರ ಜೀವ ಉಳಿಸಲು ತಮ್ಮ ಜೀವ ಪಣಕ್ಕಿಟ್ಟು ಹೋರಾಡಿದ ಈ ವ್ಯಕ್ತಿ ಇಂದು ಹೀರೋ ಎನಿಸಿಕೊಂಡಿದ್ದಾರೆ. ಈತನ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, February 24, 2024, 14:44 [IST]
English summary
Viral video man rescued mother and child who were caught in the flood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+