Viral video: ಅಡ್ಡದಿಡ್ಡಿ ಚಾಲನೆ, ಅಡ್ಡ ಬಂದವರಿಗೆ ಗೂಸಾ! ಪೊಲೀಸರ ಮುಂದೆ ನವರಂಗಿ ಆಟ
ಮಹಿಳೆ ಒಬ್ಬರು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಕಾರನ್ನು ತಪ್ಪು ದಾರಿಯಲ್ಲಿ ಓಡಿಸಿಕೊಂಡು ಬಂದಿದ್ದಲ್ಲದೇ ಜಗಳ ದೊಡ್ಡದಾಗಿ ಮಾಡಿ ಕ್ಯಾಬ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರನ್ನು ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ. ಸಂಪೂರ್ಣ ಜಗಳವನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಆಗಸ್ಟ್ 20, 2023 ರಂದು ಇಬ್ಬರು ಮಹಿಳಾ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಕ್ಯಾಬ್ ಚಾಲಕ ವೀಡಿಯೊವನ್ನು ರೆಕಾರ್ಡ್ ಮಾಡಿದ್ದು, ಚಂಡೀಗಢದ ಸೆಕ್ಟರ್ 34 ರಲ್ಲಿ ಘಟನೆ ನಡೆದಿದೆ. ಫೋಕ್ಸ್‌ವ್ಯಾಗನ್ ಪೋಲೋ ಹ್ಯಾಚ್‌ಬ್ಯಾಕ್ ಅನ್ನು ಚಲಾಯಿಸುತ್ತಿದ್ದ ಮಹಿಳೆಯೊಬ್ಬರು ರಸ್ತೆ ನಿಯಮಗಳನ್ನು ಉಲ್ಲಂಘಿಸಿ ವಿರುದ್ಧ ದಿಕ್ಕಿನಲ್ಲಿ ಕಾರನ್ನು ಚಲಾಯಿಸುತ್ತಿದ್ದರು. ಈ ವೇಳೆ ಸಹ ಪ್ರಯಾಣಿಕರು ಇದನ್ನು ಖಂಡಿಸಿ ಸರಿಯಾಗಿ ಹೋಗುವಂತೆ ಎಚ್ಚರಿಸಿದ್ರು, ಆದ್ರೆ ಆಕೆ ಪಟ್ಟುಹಿಡಿದು ತನ್ನಿಷ್ಟದಂತೆ ಪ್ರಯಾಣಿಸಿದ್ದರು.

ಅಂತಿಮವಾಗಿ, ಆಕೆಯ ಕಾರು ಇಬ್ಬರು ಮಹಿಳೆಯರನ್ನು ಹೊತ್ತೊಯ್ಯುತ್ತಿದ್ದ ಕ್ಯಾಬ್‌ಗೆ ಎದುರಾಗಿದೆ. ಆ ವೇಳೆ ಕಾರನ್ನು ಅಡ್ಡ ಹಾಕಿ ಆಕೆಯನ್ನು ಕೆಳಗೆ ಇಳಸಿದ್ದಾರೆ. ಕ್ಯಾಬ್‌ನಲ್ಲಿದ್ದ ಪ್ರಯಾಣಿಕರು ವೋಕ್ಸ್‌ವ್ಯಾಗನ್ ಪೋಲೋದಲ್ಲಿದ್ದ ಮಹಿಳೆಯೊಂದಿಗೆ ವಾದಿಸಲು ಪ್ರಾರಂಭಿಸಿದ್ದಾರೆ. ಮಾತಿನಲ್ಲಿ ಆರಂಭವಾದ ಜಗಳ ದೈಹಿಕ ಹಲ್ಲೆಗೆ ತಿರುಗಿದೆ. ಫೊಲೊ ಓಡಿಸುತ್ತಿದ್ದ ಮಹಿಳೆ ಮನಬಂದಂತೆ ಇಬ್ಬರು ಮಹಿಳೆಯರನ್ನು ಥಳಿಸಿದ್ದಾರೆ.
ಪೋಲೋ ಓಡಿಸಿದ್ದ ಮಹಿಳೆ ಕ್ಯಾಬ್‌ನಲ್ಲಿದ್ದ ವಯಸ್ಸಾದ ಮಹಿಳೆಯ ಮೇಲೆ ದೈಹಿಕವಾಗಿ ಹಲ್ಲೆ ಮಾಡಲು ಮುಂದಾಗಿ ಒದೆಯುವುದನ್ನು ನಾವು ವಿಡಿಯೋದಲ್ಲಿ ನೋಡಬಹುದು. ಮಹಿಳೆ ತನ್ನ ಹಲ್ಲೆಯನ್ನು ರೆಕಾರ್ಡ್ ಮಾಡಿದ್ದಾನೆಂಬ ಕಾರಣಕ್ಕೆ ಚಾಲಕನ ಫೋನ್ ಅನ್ನು ಹಾನಿಗೊಳಿಸಿದ್ದಾರೆ. ಮಾರಾಮಾರಿ ನಡೆಯುವಾಗಲೇ ಇಡೀ ಘಟನೆಯನ್ನು ವೀಡಿಯೊದಲ್ಲಿ ಸೆರೆಹಿಡಿಯುವುದರ ಜೊತೆಗೆ ಕ್ಯಾಬ್ ಚಾಲಕ ಪೊಲೀಸರನ್ನು ಸಂಪರ್ಕಿಸಿದ್ದ.

ವಾಗ್ವಾದದ ನಂತರ ಮಹಿಳೆಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆದರೂ ಪೊಲೀಸರು ಆಕೆಯನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ವೀಡಿಯೊದ ಕೊನೆಯಲ್ಲಿ, ಎಲ್ಲಾ ಮೂವರು ಮಹಿಳೆಯರು ಚಂಡೀಗಢದ ಸೆಕ್ಟರ್ 34 ನಲ್ಲಿ ಪೊಲೀಸ್ ಠಾಣೆಯ ಹೊರಗೆ ನಿಂತಿರುವುದನ್ನು ಕಾಣಬಹುದು. ಪೋಲೋ ಓಡಿಸುತ್ತಿದ್ದ ಮಹಿಳೆ ತನ್ನ ವರ್ತನೆಗೆ ಕ್ಷಮೆಯಾಚಿಸುತ್ತಿರುವುದನ್ನು ಇಲ್ಲಿ ತೋರಿಸಲಾಗಿದೆ.
ವರದಿಗಳ ಪ್ರಕಾರ, ಎರಡೂ ಕಡೆಯವರು ಒಪ್ಪಂದಕ್ಕೆ ಬಂದ ನಂತರ ಸಮಸ್ಯೆಯನ್ನು ಪರಿಹರಿಸಲಾಗಿದೆ. ಆದರೆ ಪೋಲೋ ಚಾಲಕಿಯ ವಿರುದ್ಧ ರಸ್ತೆ ನಿಯಮಗಳ ಉಲ್ಲಂಘನೆ ಮಾಡಿದ್ದಕ್ಕಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆಯೇ ಎಂಬುದು ತಿಳಿದುಬಂದಿಲ್ಲ. ಇಂತಹ ಘಟನೆಗಳು ನಡೆಯುತ್ತಿರುವುದು ಇದೇ ಮೊದಲಲ್ಲ, ಇತ್ತೀಚೆಗೆ ಕಾರಿನ ವಿಂಡ್‌ಶೀಲ್ಡ್ ಒಡೆದು ದಾಂದಲೆ ಸೃಷ್ಟಿಸಿದ್ದ ಕುರಿತು ಡ್ರೈವ್‌ಸ್ಪಾರ್ಕ್‌ನಲ್ಲಿ ವರದಿ ಮಾಡಲಾಗಿತ್ತು.
ಕೇರಳದ ಕೊಡುಂಗಲ್ಲೂರಿನಲ್ಲಿ ಎರಡು ವಾಹನಗಳ ಯುವಕರ ನಡುವಿನ ಘರ್ಷಣೆಯು ಹಿಂಸಾತ್ಮಕವಾಗಿ ತಿರುಗಿದ ಪರಿಣಾಮ ಒಬ್ಬ ವ್ಯಕ್ತಿ ಮಾರುತಿ ಸುಜುಕಿ ರಿಟ್ಜ್‌ನ ಗಾಜುಗಳನ್ನು ಕಲ್ಲಿನಿಂದ ಒಡೆದು ಹಾಕಿದ್ದ. ಈ ಘಟನೆ ತುಂಬಾ ವೈರಲ್ ಆಗಿ ಪೊಲೀಸರು ಪುಂಡರನ್ನು ಬಂಧಿಸಿದ್ದರು. ಆದರೆ ಅಷ್ಟೊತ್ತಿಗಾಗಲಾ ಆಗಬಾರದ ಅನಾಹುತ ನಡೆದುಹೊಗಿತ್ತು. ಕಾರನ್ನು ಸಂಪೂರ್ಣ ಹಾನಿಗೊಳಿಸಿದ್ದರು.
ನೀವು ಎಂದಾದರೂ ಇಂತಹ ಪರಿಸ್ಥಿತಿಯಲ್ಲಿ ಸಿಲುಕಿಕೊಂಡರೆ, ಪರಿಸ್ಥಿತಿಯನ್ನು ಹದಗೆಡಿಸುವ ಯಾವುದೇ ರೀತಿಯ ಮಾತುಗಳನ್ನು ಆಡಬಾರದು. ಪರಿಸ್ಥಿತಿ ಹದಗೆಟ್ಟರೆ, ಸಹಾಯಕ್ಕಾಗಿ ತಕ್ಷಣ ಪೊಲೀಸರಿಗೆ ಕರೆ ಮಾಡಿ. ದೈಹಿಕ ವಾಗ್ವಾದಗಳಲ್ಲಿ ತೊಡಗಿಸಿಕೊಳ್ಳುವುದನ್ನು ತಪ್ಪಿಸಲು ಶಾಂತವಾಗಿ ಮಾತನಾಡಿ ಸಮಸ್ಯೆ ಪರಿಹಾರಕ್ಕೆ ಯೋಚಿಸಿ, ಎದುರಿದ್ದವರು ಎಷ್ಟೇ ಪ್ರಚೋದಿಸಿದರು ಗಲಾಟೆಗೆ ಮುಂದಾಗಬಾರದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications