ಹೆದ್ದಾರಿ ಪ್ರಯಾಣಿಕರೇ ಎಚ್ಚರ! ಸ್ಥಳೀಯರು ನಿಯಮ ಪಾಲನೆ ಮಾಡೋದಿಲ್ಲ... ನಮ್ಮ ತಪ್ಪಿಲ್ಲದಿದ್ದರೂ ಬಿಡೋದಿಲ್ಲ!

ಭಾರತದ ಬಹುತೇಕ ನಗರಗಳಲ್ಲಿ ಹೆಚ್ಚಾಗಿ ಟ್ರಾಫಿಕ್ ನಿಯಮಗಳನ್ನು ಪಾಲನೆ ಮಾಡಲಾಗುತ್ತದೆ. ಹೊರ ವರಲಯಗಳಲ್ಲಿ ನಿಯಮ ಪಾಲನೆ ಎಂಬುದು ತೀರಾ ದೂರ, ಇನ್ನು ಹೆದ್ದಾರಿಗಳ ವಿಚಾರಕ್ಕೆ ಬಂದರೆ ಸುಧೀರ್ಘ ಪ್ರಯಾಣ ಮಾಡುವವರು ನಿಯಮ ಪಾಲನೆ ಮಾಡಿದ್ರೂ, ಸ್ಥಳೀಯರಿಗೆ ಇದು ಅನ್ವಯಿಸುವುದಿಲ್ಲ ಎಂಬಂತೆ ವರ್ತಿಸುತ್ತಾರೆ. ಇದಕ್ಕೆ ಉತ್ತಮ ಉದಾಹರಣೆಯೇ ಈ ಘಟನೆ.

ಹ್ಯುಂಡೈ ವೆನ್ಯೂ ಎನ್-ಲೈನ್‌ನ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿರುವ ದೃಶ್ಯಗಳನ್ನು ಕಂಡರೆ ನೀವು ಖಂಡಿತ ಆಶ್ಚರ್ಯಕ್ಕೆ ಒಳಗಾಗುತ್ತೀರ. ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಬಂದ ಬೈಕ್ ಸವಾರ ವೇಗದಲ್ಲಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ವಿಡಿಯೋ ಪ್ರಕಾರ ಬೈಕ್ ಸವಾರನಿಗಾದ ಹಾನಿಗೆ ಕಾರು ಮಾಲೀಕನಿಂದ ಹಣ ವಸೂಲಿ ಮಾಡಲಾಗಿದೆ ಎಂದು ಹೇಳಲಾಗಿದೆ.

viral-video-wrong-side-biker-crashes-into-hyundai-venue-in-highway

ಹೈದರಾಬಾದ್‌ನಿಂದ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಕಾರಿನ ಮಾಲೀಕರು ಹಂಚಿಕೊಂಡ ವೀಡಿಯೊದಲ್ಲಿ ಹೇಳಲಾಗಿದೆ. ನಾಲ್ಕು ಪಥದ ಹೆದ್ದಾರಿ ಮತ್ತು ವಾಹನಗಳು ಯೋಗ್ಯವಾದ ವೇಗದಲ್ಲಿರುವುದನ್ನು ವೀಡಿಯೊದಲ್ಲಿ ನೋಡಬಹುದು. ಬಸ್‌ ಒಂದು ಬಲ ಪಥವನ್ನು ಆಕ್ರಮಿಸಿಕೊಂಡಿದ್ದರೆ, ಎಡಪಥದಲ್ಲಿ ಆಟೋ ಇದೆ. ಆಟೋವನ್ನು ಹಿಂದಿಕ್ಕಲು ಪ್ರಯತ್ನಿಸಿದ ಹ್ಯುಂಡೈ ವೆನ್ಯೂ ಎನ್-ಲೈನ್‌ ಚಾಲಕನಿಗೆ ಹಠಾತ್ ಆಗಿ ಬೈಕ್ ಸವಾರ ಎದುರಾಗಿದ್ದಾನೆ.

ಇದರಿಂದ ತಕ್ಷಣ ಕಾರು ಚಾಲಕನಿಗೆ ಪ್ರತಿಕ್ರಿಯಿಸಲು ಅವಕಾಶ ಸಿಗದೇ ಬೈಕ್ ಸವಾರ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ವೀಡಿಯೋ ಪ್ರಕಾರ ಸ್ಥಳೀಯರು ಜಮಾಯಿಸಿ ಬೈಕ್ ಸವಾರನಿಗೆ ಪರಿಹಾರವಾಗಿ ಕಾರು ಮಾಲೀಕರಿಂದ ಅಪಘಾತಕ್ಕೆ 5,000 ರೂ. ನೀಡುವಂತೆ ಒತ್ತಾಯಿಸಿರುವುದಾಗಿ ವಿಡಿಯೋದಲ್ಲಿ ಹೇಳಲಾಗಿದೆ. ಇದೇ ವೇಳೆ ಕಾರಿಗೂ ಹಾನಿಯಾಗಿದ್ದು, ಈ ಬಗ್ಗೆ ಸ್ಥಳೀಯರು ತಲೆಕೆಡಿಸಿಕೊಂಡಿಲ್ಲ.

viral-video-wrong-side-biker-crashes-into-hyundai-venue-in-highway

ಏಕೆ ವಿರುದ್ಧ ದಿಕ್ಕಿನ ಚಾಲನೆ?: ಸ್ಥಳೀಯರು ಹೆದ್ದಾರಿಗಳಲ್ಲಿ ವಿರುದ್ಧ ದಿಕ್ಕಿನಲ್ಲಿ ಚಾಲನೆ ಮಾಡುವುದರಿಂದ ಸಮಯ ಮತ್ತು ಇಂಧನ ಉಳಿಸಬಹುದು ಎಂದು ಭಾವಿಸುತ್ತಾರೆ. ಇನ್ನೂ ವಿಚಿತ್ರವೆಂದರೆ ವಿರುದ್ಧ ದಿಕ್ಕಿನಲ್ಲಿ ಬರುವುದು ಬಿಡಿ, ರಸ್ತೆಯ ಮಧ್ಯದಲ್ಲಿ ಬಂದು ಇತರ ವಾಹನಗಳಿಗೂ ಅಪಾಯಕಾರಿ ಪರಿಣಾಮಗಳನ್ನು ಉಂಟುಮಾಡುತ್ತಿದ್ದಾರೆ.

ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳನ್ನು ನಿರ್ಮಿಸಿದಾಗ, ಸ್ಥಳೀಯ ಸಮುದಾಯಗಳಿಗೆ ಪ್ರವೇಶ ನೀಡುವ ರಸ್ತೆಗಳನ್ನು ಗುತ್ತಿಗೆದಾರರು ಅಥವಾ ಅಧಿಕಾರಿಗಳಿಂದ ನಿರ್ಲಕ್ಷಿಸಲ್ಪಡುತ್ತವೆ. ಇದರಿಂದ ಸ್ಥಳೀಯರು ಹೆದ್ದಾರಿಗಳನ್ನು ಬಳಸಲು ಕಾರಣವಾಗುತ್ತಿದೆ, ಹತ್ತಿರದ ಯು-ಟರ್ನ್‌ಗಳು ಸಿಗದ ಕಾರಣ, ಅವರು ದೂರವನ್ನು ಕಡಿಮೆ ಮಾಡಿ ತಮ್ಮ ಸ್ಥಳಗಳನ್ನು ತಲುಪಲು ವಿರುದ್ಧ ದಿಕ್ಕಿನಲ್ಲಿ ಚಾಲನೆ ಮಾಡಿ ಅಪಾಯವನ್ನು ಆಹ್ವಾನಿಸುತ್ತಿದ್ದಾರೆ.

viral-video-wrong-side-biker-crashes-into-hyundai-venue-in-highway

ನಿಮ್ಮ ಕಾರಿನಲ್ಲೂ ಡ್ಯಾಶ್‌ಕ್ಯಾಮ್ ಇರಲಿ: ನಿಮ್ಮ ಕಾರಿನಲ್ಲಿರುವ ಡ್ಯಾಶ್‌ಕ್ಯಾಮ್ ಅನೇಕ ಸಂದರ್ಭಗಳಲ್ಲಿ ನಿಜವಾಗಿಯೂ ನಿಮ್ಮನ್ನು ರಕ್ಷಿಸುತ್ತದೆ. ಈಗಿನ ಬಹುತೇಕ ಹೊಸ ಕಾರುಗಳಲ್ಲಿ ಕಂಪನಿಯೇ ಡ್ಯಾಷ್‌ಕ್ಯಾಮ್‌ಗಳನ್ನು ನೀಡುತ್ತಿದೆ. ಇಲ್ಲದಿದ್ದವರು ನಿಮ್ಮ ವಾಹನಕ್ಕಾಗಿ ವಿವಿಧ ಬ್ರ್ಯಾಂಡ್‌ಗಳಿಂದ ಆಫ್ಟರ್ ಮಾರ್ಕೆಟ್ ಡ್ಯಾಶ್‌ಬೋರ್ಡ್ ಕ್ಯಾಮೆರಾಗಳನ್ನು ಖರೀದಿಸಬಹುದು.

ಸಾರ್ವಜನಿಕ ರಸ್ತೆಗಳಲ್ಲಿ ಸಂಭವಿಸುವ ಅಪಘಾತಗಳು ಮತ್ತು ಅಪರಾಧಗಳನ್ನು ಸೆರೆಹಿಡಿಯಲು ಈ ಕ್ಯಾಮೆರಾಗಳು ಉಪಯುಕ್ತವಾಗಿವೆ. ಅಪಘಾತಗಳು ಸಂಭವಿಸಿದಾಗ ಅವರು ಮಾಡುವ ರೆಕಾರ್ಡಿಂಗ್‌ಗಳು ಪ್ರಮುಖ ಪುರಾವೆಗಳನ್ನು ಒದಗಿಸುತ್ತವೆ, ವಿಮಾ ಹಕ್ಕುಗಳನ್ನು ಪ್ರಕ್ರಿಯೆಗೊಳಿಸಲು ಸುಲಭವಾಗುತ್ತದೆ. ಇದು ನಿಮ್ಮ ಸ್ವಂತ ಸುರಕ್ಷತೆಗಾಗಿ ಮಾತ್ರವಲ್ಲದೆ ಕೆಲ ಅನಿರೀಕ್ಷಿತ ಸಂದರ್ಭಗಳನ್ನು ತಪ್ಪಿಸಲು ಸಹ ಸಹಕರಿಸುತ್ತದೆ. ಪ್ರತಿಯೊಬ್ಬರೂ ಒಂದನ್ನು ಪಡೆಯುವುದನ್ನು ಉತ್ತಮ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಇನ್ನು ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

Article Published On: Friday, January 12, 2024, 13:17 [IST]
English summary
Viral video wrong side biker crashes into hyundai venue in highway
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+