ಹಿಂದೆಂದೂ ಕಾಣಿಸಿಕೊಳ್ಳದ ಕಾರಿನಲ್ಲಿ ಬಂದಿಳಿದ ವಿರಾಟ್‌ ಕೊಹ್ಲಿ : ಪೋರ್ಶೆ ಕಾರಿನ ಡಿಕ್ಕಿಯಲ್ಲಿ ಕ್ರಿಕೆಟ್‌ ಕಿಟ್‌

ಭಾರತ ಕ್ರಿಕೆಟ್‌ ತಂಡದ ಮಾಜಿ ಕಪ್ತಾನ ವಿರಾಟ್‌ ಕೊಹ್ಲಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸದ್ಯಕ್ಕೆ ವಿಶ್ವ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿಯಷ್ಟು ಯಾರೂ ಸಹ ಸದ್ದು ಮಾಡುತ್ತಿಲ್ಲ. ಅವರಷ್ಟೇ ಅವರ ಬಳಿ ಇರುವ ಕಾರುಗಳು ಸಹ ಆಗಾಗ ಮಾಧ್ಯಮಗಳಲ್ಲಿ, ಸೋಷಿಯಲ್‌ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿರುತ್ತದೆ.

ಕೊಹ್ಲಿ ಆಸ್ಟ್ರೇಲಿಯಾ ವಿರುದ್ದ ನಡೆಯುತ್ತಿರುವ ಬಾರ್ಡರ್‌ ಗವಾಸ್ಕರ್‌ ಟ್ರೋಫಿಯ ಎರಡನೇ ಟೆಸ್ಟ್‌ ಪಂದ್ಯವನ್ನು ಆಡುವುದಕ್ಕೋಸ್ಕರ ದೆಹಲಿ ತಲುಪಿದ್ದಾರೆ. ಎಲ್ಲಾ ಕ್ರಿಕೆಟ್ ತಾರೆಯರಂತೆ ವಿರಾಟ್‌ ಕೊಹ್ಲಿಯೂ ಸಹ ಪಂದ್ಯ ಆರಂಭವಾಗುವುದಕ್ಕೂ ಮುನ್ನ ದಿನ ಅಭ್ಯಾಸ ನಡೆಸುವುದಕ್ಕಾಗಿ ತಮ್ಮ ಕಾರಲ್ಲಿ ಅರುಣ್‌ ಜೇಟ್ಲಿ ಕ್ರೀಡಾಂಗಣಕ್ಕೆ ಬಂದಿಳಿದಿದ್ದಾರೆ. ಆದರೆ ಅವರಿಗಿಂತಲೂ ಮುಖ್ಯವಾಗಿ ಅವರು ಬಂದು ಇಳಿದಂತಹ ಪೋರ್ಶೆ ಪನಾಮೆರಾ ಸ್ಪೋರ್ಟ್ಸ್ ಕಾರು ಗಮನ ಸೆಳೆದಿದೆ.

ಹೌದು, ಸದ್ಯಕ್ಕೆ ವಿರಾಟ್‌ ಕೊಹ್ಲಿ ಕಾರು ಪೋರ್ಶೆ ಪನಾಮೆರಾ ಕಾರು ನೆಟ್ಟಿಗರ ಗಮನ ಸೆಳೆದಿದ್ದು, ಸಾಮಾಜಿಕ ಜಾಲಾತಾಣಗಳಲ್ಲಿ ಕಾರಿನ ಕುರಿತಾಗಿ ಭಾರೀ ಕಾಮೆಂಟ್‌ಗಳು ವ್ಯಕ್ತವಾಗುತ್ತಿವೆ. ಕಾರು ನೆಟ್ಟಿಗರ ಗಮನ ಸೆಳೆಯಲು ಮುಖ್ಯ ಕಾರಣವೇನೆಂದರೆ ಅದು ಕಾರಿನ ನಂಬರ್‌. ವಿರಾಟ್‌ ಕೊಹ್ಲಿಯ ಜೆರ್ಸಿ ನಂಬರ್‌ ಆದ 18, ಕಾರಿನ ನಂಬರ್‌ ಕೂಡ ಆಗಿದೆ. ಮಾತ್ರವಲ್ಲದೆ ವಿರಾಟ್‌ ಕೊಹ್ಲಿ ಇದಕ್ಕೂ ಹಿಂದೆ ಒಮ್ಮೆಯೂ ಸಹ ಪೋರ್ಶೆ ಪನಾಮೆರಾ ಕಾರಿನ ಜೊತೆ ಕಾಣಿಸಿಕೊಂಡಿರಲಿಲ್ಲ.

ಇದಕ್ಕೂ ಮೊದಲು 2020 ರಲ್ಲಿ ವಿರಾಟ್‌ ಕೊಹ್ಲಿಯ ಸಹೋದರ ಕಾರಿನ ಜೊತೆ ಗುರುಗಾವ್‌ನಲ್ಲಿ ಒಂದು ಬಾರಿ ಕಾಣಿಸಿಕೊಂಡಿದ್ದರು. ಹಾಗಾಗಿ ಪೋರ್ಶೆ ಪನಾಮೆರಾ ವಿರಾಟ್‌ ಕೊಹ್ಲಿಯ ಗ್ಯಾರೇಜ್‌ ಬಿಟ್ಟು ಹೊರಬಂದಿರುವುದು ತುಂಬಾನೇ ವಿರಳ ಎಂದು ಹೇಳಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ವಿರಾಟ್‌ ಕೊಹ್ಲಿಯು ಪೋರ್ಶೆ ಪನಾಮೆರಾ ಸ್ಪೋರ್ಟ್ಸ್‌ ಕಾರಿನ ಡಿಕ್ಕಿಯನ್ನು ತಮ್ಮ ಕ್ರಿಕೆಟ್‌ ಕಿಟ್‌ ಇಡುವುದಕ್ಕೋಸ್ಕರ ಉಪಯೋಗಿಸುತ್ತಿರುವುದನ್ನು ಕಾಣಬಹುದಾಗಿದೆ.

ಹಿಂದೆಂದೂ ಕಾಣಿಸಿಕೊಳ್ಳದ ಕಾರಿನಲ್ಲಿ ಬಂದಿಳಿದ ವಿರಾಟ್‌ ಕೊಹ್ಲಿ

ಸದ್ಯಕ್ಕೆ ವಿಶ್ವದಲ್ಲಿರುವ ಸ್ಪೋರ್ಟ್ಸ್‌ ಕಾರುಗಳಲ್ಲಿ ಪೋರ್ಶೆ ಪಾನಮೆರಾ ಕಾರು ಹೆಚ್ಚು ಪ್ರ್ಯಾಕ್ಟಿಕಲ್‌ ಆಗಿದ್ದು, ಹಿಂಬದಿಯೂ ಸಹ ಸವಾರರು ಕೂರಬಹುದಾಗಿದೆ ಮತ್ತು ನಾಲ್ಕು ಡೋರ್‌ಗಳನ್ನು ಕಾರು ಹೊಂದಿದೆ. ವಿರಾಟ್‌ ಕೊಹ್ಲಿ ಪೋರ್ಶೆ ಪನಾಮೆರಾ ಟರ್ಬೋ ಕಾರಿನ ಡೆಲಿವರಿಯನ್ನು 2020ರಲ್ಲಿ ತೆಗೆದುಕೊಂಡಿದ್ದರು. ಇನ್ನು ಕಾರಿನ ಬೆಲೆಯ ಕುರಿತಾಗಿ ನೋಡುವುದಾದರೆ ಸುಮಾರು 2.13 ಕೋಟಿ (ಎಕ್‌.ಶೋ ರೂಮ್‌) ರೂಗಳಿಂದ ಕಾರು ಪ್ರಾರಂಭವಾಗುತ್ತಿದ್ದು ಹಲವಾರು ಬಣ್ಣಗಳಲ್ಲಿ ಇದು ಲಭ್ಯವಿದೆ.

ಪೋರ್ಶೆ ಪಾನಮೆರಾ ಕಾರು 4.0 ಲೀಟರ್‌ ಟ್ವಿನ್‌ ಟರ್ಬೋ ಚಾರ್ಜ್ಡ್‌ ವಿ8 ಪೆಟ್ರೋಲ್‌ ಎಂಜಿನ್ ಅನ್ನು ಹೊಂದಿದೆ. ಎಂಜಿನ್‌ನ ಸಹಾಯದಿಂದಾಗಿ ಕಾರ ಸುಮಾರು 550 ಪಿಎಸ್‌ ಪವರ್‌ ಹಾಗೂ ಬರೋಬ್ಬರಿ 770 ನ್ಯೂಟನ್‌ ಮೀಟರ್‌ ಟಾರ್ಕನ್ನು ಉತ್ಪಾದಿಸುತ್ತದೆ. ಇನ್ನು ಹೀಗೆ ಉತ್ತತ್ತಿಯಾದ ಭಾರೀ ಶಕ್ತಿಯನ್ನು 8 ಸ್ಪೀಡ್‌ ಪಿಡಿಕೆ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ನ ಸಹಾಯದಿಂದಾಗಿ ಕಾರಿನ ನಾಲ್ಕೂ ಟೈರ್‌ಗೆ ಹಂಚುತ್ತದೆ.

ಪೋರ್ಶೆ ಪನಾಮೆರ ತೀರಾ ಪ್ರ್ಯಾಕ್ಟಿಕಲ್‌ ಆಗಿರುವ ಸ್ಪೋರ್ಟ್ಸ್‌ ಕಾರಾಗಿದ್ದರೂ ವೇಗದಲ್ಲಿ ಯಾವುದೇ ರಾಜಿಯನ್ನು ಮಾಡಿಕೊಂಡಿಲ್ಲ. 0-100 ಕಿಲೋ ಮೀಟರ್‌ ಸ್ಪೀಡನ್ನು ಕೇವಲ 3.8 ಸೆಕೆಂಡ್‌ಗಳಲ್ಲಿ ತಲುಪುತ್ತದೆ. ಇನ್ನು ಪೋರ್ಶೆ ಇದರಲ್ಲಿ ಸ್ಪೋರ್ಟ್‌ ಕ್ರೋನೋ ಪ್ಯಾಕೇಜನ್ನು ಸಹ ನೀಡುತ್ತಿದ್ದು ಇದರ ಮೂಲಕವಾಗಿ 0-100 ಕಿಲೋ ಮೀಟರ್‌ ವೇಗವನ್ನು ಕೇವಲ 3.6 ಸೆಕೆಂಡ್‌ಗಳಲ್ಲಿ ತಲುಪಬಹುದಾಗಿದೆ. ಇನ್ನು ಕಾರಿನ ಗರಿಷ್ಟ ವೇಗ ಪ್ರತಿ ಗಂಟೆಗೆ ಸುಮಾರು 306 ಕಿಮೀ.

ಡ್ರೈವ್‌ಸ್ಪಾರ್ಕ್‌ ಅಭಿಪ್ರಾಯ:

ವಿರಾಟ್‌ ಕೊಹ್ಲಿಯಷ್ಟೇ, ಕೊಹ್ಲಿಯ ಕಾರುಗಳು ಸಹ ತುಂಬಾ ಜನಪ್ರಿಯವಾದುದು. ಕೊಹ್ಲಿ ಬಳಿ ಇರುವ ಕಾರು ಕಲೆಕ್ಷನ್‌ಗಳ ಕುರಿತಾಗಿ ನಾವು ಹಿಂದೆಯೇ ಹಲವಾರು ಲೇಖನಗಳಲ್ಲಿ ಮಾಹಿತಿಗಳನ್ನು ನೀಡಿದ್ದೇವೆ. ಸ್ವತಃ ಆಡಿ ಕಾರಿನ ರಾಯಭಾರಿಯೂ ಆಗಿರುವ ಕೊಹ್ಲಿ ಬಳಿ ಆಡಿ ಕಾರುಗಳು ಸಹ ಇತರ ಕಾರುಗಳಿಗೆ ಹೋಲಿಸಿದರೆ ಹೆಚ್ಚಿದೆ. ವಿರಾಟ್‌ ಕೊಹ್ಲಿಯ ಕಾರು ಪ್ರೀತಿ ಎಲ್ಲರಿಗೂ ಗೊತ್ತಿದೆ. ಅವರ ಬಳಿ ಇನ್ನೂ ಹೆಚ್ಚು ಹೆಚ್ಚು ಕಾರುಗಳು ಕೈಗೂಡಲಿ ಎಂಬುದೇ ನಮ್ಮ ಆಶಯ.

Article Published On: Thursday, February 16, 2023, 18:12 [IST]
English summary
Virat kohli spot on porsche panamera in arun jaitley stadium
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+