ಸಾಮಾನ್ಯರಂತೆ ಮಾಸ್ಕ್ ಧರಿಸಿ ಬಂದ್ರು... ಯಾರೆಂದು ತಿಳಿದು ಇಡೀ ವಿಮಾನ ಒಂದು ಕ್ಷಣ ಸ್ಟನ್!

ಭಾರತದಲ್ಲಿ ಸಿನಿಮಾ ನಟರಷ್ಟೇ ಕ್ರೇಜ್ ಹೊಂದಿರುವವರೆಂದರೆ ಕ್ರಿಕೆಟ್ ಆಟಗಾರರು ಎಂಬುದರಲ್ಲಿ ಎರಡು ಮಾತಿಲ್ಲ. ಸದ್ಯ ವಿಶ್ವಕಪ್ ಜೋರು ಇಡೀ ಭಾರತವನ್ನೇ ತನ್ನತ್ತ ತಿರುಗಿಸಿಕೊಂಡಿದೆ. ಸತತವಾಗಿ ಒಂದರಮೇಲೊಂದು ಪಂದ್ಯಗಳನ್ನು ಭಾರೀ ಅಂತರದಲ್ಲಿ ಗೆದ್ದು ಸದ್ದು ಮಾಡುತ್ತಿರುವ ಟೀ ಇಂಡಿಯಾಗೆ ಸಾರ್ವಜನಿಕರಿಂದ ಭರ್ಜರಿ ಸ್ವಾಗತ ಸಿಗುತ್ತಿದೆ.

ಇಂತಹ ಸಂದರ್ಭದಲ್ಲಿ ಕ್ರಿಕೆಟ್ ಆಟಗಾರರೊಬ್ಬರು ವಿಮಾನದಲ್ಲಿ ಸಾಮಾನ್ಯ ಪ್ರಯಾಣಿಕರಂತೆ ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸಿ ಇತರ ಪ್ರಯಾಣಿಕರನ್ನು ಅಚ್ಚರಿಗೊಳಿಸಿದ್ದಾರೆ. ಒಮ್ಮೆಲೆ ಈ ಆಟಗಾರನನ್ನು ನೋಡಿ ಪ್ರಯಾಣಿಕರಿಗೆ ಒಂದು ಕ್ಷಣ ಹೇಗೆ ವರ್ತಿಸುವುದೋ ತಿಳಿಯದ ಪರಿಸ್ಥಿತಿಗೆ ಸಿಲುಕಿದಂತಾಗಿದೆ. ಅಷ್ಟಕ್ಕೂ ಈ ಆಟಗಾರ ಇಡೀ ವಿಶ್ವ ಕ್ರಿಕೆಟ್‌ ಜಗತ್ತಿನಲ್ಲಿ ಸದ್ಯದ ಟಾಪ್ ಬ್ಯಾಟ್ಸ್‌ಮನ್ ಎಂದು ಖ್ಯಾತಿ ಗಳಿಸಿದ್ದಾರೆ.

virat-kohli-travelled-economy-class-viral-video

ಅವರೇ ಕಿಂಗ್ ಕೊಹ್ಲಿ, ಐಸಿಸಿ ಏಕದಿನ ವಿಶ್ವಕಪ್‌ 2023ರ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 243 ರನ್‌ಗಳ ಭರ್ಜರಿ ಜಯ ದಾಖಲಿಸಿದ ನಂತರ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ನೆದರ್‌ಲ್ಯಾಂಡ್ ವಿರುದ್ಧದ ಮುಂದಿನ ಪಂದ್ಯಕ್ಕಾಗಿ ಇಂಡಿಗೋದ ಎಕಾನಮಿ ಕ್ಲಾಸ್‌ನಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.

ಈ ಕುರಿತ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಫುಲ್ ವೈರಲ್ ಆಗಿದ್ದು, ಕೊಹ್ಲಿ ಕ್ಯಾಪ್, ಕನ್ನಡಕ ಮತ್ತು ಮಾಸ್ಕ್ ಧರಿಸಿ ವಿಮಾನದಲ್ಲಿ ಮತ್ತೊಬ್ಬ ಪ್ರಯಾಣಿಕನೊಂದಿಗೆ ಕುಳಿತಿರುವುದು ಕಂಡುಬಂದಿದೆ. ಕೊಹ್ಲಿ ತಂಡದೊಂದಿಗೆ ಪ್ರಯಾಣಿಸಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕು. ಈ ಗೆಸ್ಚರ್ ಅವರ ಅಭಿಮಾನಿಗಳಲ್ಲಿ ಪ್ರತಿಧ್ವನಿಸಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲವನ್ನು ಸೃಷ್ಟಿಸಿದೆ.

virat-kohli-travelled-economy-class-viral-video

ಸಾಮಾನ್ಯವಾಗಿ ಎಕಾನಮಿ ಹಾಗೂ ಬಿಸಿನೆಸ್‌ ಕ್ಲಾಸ್ ನಡುವೆ ತುಂಬಾ ವ್ಯತ್ಯಾಸವಿರುತ್ತದೆ. ಬಿಸಿನೆಸ್ ಕ್ಲಾಸ್ ದರವು ಎಕಾನಮಿ ಕ್ಲಾಸ್‌ಗಿಂತ ಎರಡರಿಂದ ಐದು ಪಟ್ಟು ಹೆಚ್ಚು. ಬಿಸಿನೆಸ್‌ ಕ್ಲಾಸ್‌ನಲ್ಲಿ ಹೆಚ್ಚುವರಿ ಸಾಮಾನುಗಳನ್ನು ಸಾಗಿಸಲು ನಿಮಗೆ ಅನುಮತಿಸಲಾಗುತ್ತದೆ. ಜೊತೆಗೆ, ನೀವು ಉಚಿತ ಆಹಾರ ಮತ್ತು ಪಾನೀಯಗಳು, ಲೌಂಜ್ ಸೇವೆಗಳು ಮತ್ತು ವಿಶಾಲವಾದ ಆಸನಗಳನ್ನು ಪಡೆಯಬಹುದು.

ಮತ್ತೊಂದೆಡೆ ಎಕಾನಮಿ ಕ್ಲಾಸ್‌ಗೆ ಇಂತಹ ಯಾವುದೇ ಸವಲತ್ತುಗಳನ್ನು ಒದಗಿಸುವುದಿಲ್ಲ. ಇದೇ ಕಾರಣಕ್ಕೆ ಎಲ್ಲಾ ಕ್ರಿಕೆಟ್ ಆಟಗಾರರಿಗೆ ಪ್ರತ್ಯೇಕ ವಿಮಾನ ಅಥವಾ ಬಿಸಿನೆಸ್‌ ಕ್ಲಾಸ್‌ನಲ್ಲಿ ಪ್ರಯಾಣಿಸುವ ಸೌಲಭ್ಯವನ್ನು ಒದಗಿಸುಲಾಗುತ್ತದೆ. ಆದ್ರೆ ಕೊಹ್ಲಿ ಈ ಬಾರಿಗೆ ಬೆಂಗಳೂರಿಗೆ ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸಿ ಪ್ರಯಾಣಿಕರಿಗೆ ಅಚ್ಚರಿ ಮೂಡಿಸಿರುವುದಂತು ಸತ್ಯ.

virat-kohli-travelled-economy-class-viral-video

ಪರಿಪೂರ್ಣ ಹುಟ್ಟುಹಬ್ಬದ ಉಡುಗೊರೆ?: ಭಾರತದ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಸಾಧನೆಯನ್ನು ಸರಿಗಟ್ಟುವ ಮೂಲಕ ಏಕದಿನದಲ್ಲಿ 49ನೇ ಶತಕವನ್ನು ದಾಖಲಿಸಿದ ನಂತರ ಕೊಹ್ಲಿ ತಮ್ಮ 35 ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು. ಕೊಹ್ಲಿ 121 ಎಸೆತಗಳಲ್ಲಿ ಹತ್ತು ಬೌಂಡರಿಗಳೊಂದಿಗೆ 101 ರನ್ ಗಳಿಸಿ ಪಂದ್ಯದ ಮ್ಯಾನ್ ಆಫ್‌ ದ ಮ್ಯಾಚ್ ಪ್ರಶಸ್ತಿ ಗೆದ್ದರು.

ಜೊತೆಗೆ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ತಂಡವನ್ನು ಅದ್ಭುತ ಗೆಲುವಿನತ್ತ ಮುನ್ನಡೆಸಿದರು. ಇನ್ನು ಇತರ ಆಟಗಾರರಾದ ಶ್ರೇಯಸ್ ಅಯ್ಯರ್ ಅವರ ಕೊಡುಗೆಯೊಂದಿಗೆ ಭಾರತವು ಗಮನಾರ್ಹ ಮೊತ್ತವನ್ನು ಗಳಿಸಲು ನೆರವಾಯಿತು. ಜಡೇಜಾ ಅವರ ಆಕರ್ಷಕ ಐದು ವಿಕೆಟ್ ಗಳಿಕೆಯು ದಕ್ಷಿಣ ಆಫ್ರಿಕಾವನ್ನು 83 ರನ್‌ಗಳ ಅಲ್ಪ ಸ್ಕೋರ್‌ಗೆ ಸೀಮಿತಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಪರಿಣಾಮ ಭಾರತ 243 ರನ್‌ಗಳ ಭರ್ಜರಿ ಅಂತರದಿಂದ ಪಂದ್ಯವನ್ನು ವಶಪಡಿಸಿಕೊಂಡಿತು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, November 7, 2023, 17:00 [IST]
English summary
Virat kohli travelled economy class viral video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+