Just In
Don't Miss!
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ: ಇದರ ಅಪಾಯಗಳೇನು, ತಡೆಗಟ್ಟುವುದು ಹೇಗೆ?
- Sports
ಭಾರತೀಯರ ನಿಂದಿಸಿದ ಕಿಡಿಗೇಡಿಗಳ ಕಂಡುಹಿಡಿಯುವಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ವಿಫಲ
- News
ಶಶಿಕಲಾ ಈಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾಮಾನ್ಯ ರೋಗಿ
- Movies
ಎಸ್ಎಸ್ ರಾಜಮೌಳಿ ನಿರ್ಧಾರಕ್ಕೆ ಬೇಸರಗೊಂಡ ನಿರ್ಮಾಪಕ ಬೋನಿ ಕಪೂರ್
- Finance
ಹೊಸ ಸಾರ್ವಕಾಲಿಕ ದಾಖಲೆ ಬರೆದ ಪೆಟ್ರೋಲ್- ಡೀಸೆಲ್ ದರ; ಯಾವ ನಗರದಲ್ಲಿ ಎಷ್ಟು?
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರೈಲ್ವೆ ಪ್ರಯಾಣಿಕರ ಪ್ರಯಾಣವನ್ನು ಸ್ಮರಣೀಯವಾಗಿಸುತ್ತವೆ ಈ ಹೊಸ ಬೋಗಿಗಳು
ಭಾರತೀಯ ರೈಲ್ವೆಯು ಹೊಸ ವಿಸ್ಟಾಡೊಮ್ ಕೋಚ್'ನ ಪರೀಕ್ಷೆಯನ್ನು ಗಂಟೆಗೆ 180 ಕಿ.ಮೀ ವೇಗದಲ್ಲಿ ಪೂರ್ಣಗೊಳಿಸಿರುವುದಾಗಿ ರೈಲ್ವೆ ಸಚಿವ ಪಿಯೂಷ್ ಗೋಯಲ್ ಮಾಹಿತಿ ನೀಡಿದ್ದಾರೆ.

ಈ ಹೊಸ ಬೋಗಿಗಳು ಪ್ರಯಾಣಿಕರ ರೈಲು ಪ್ರಯಾಣವನ್ನು ಸ್ಮರಣೀಯವಾಗಿಸುವುದರ ಜೊತೆಗೆ ಪ್ರವಾಸೋದ್ಯಮವನ್ನು ಉತ್ತೇಜಿಸಲು ನೆರವಾಗುತ್ತವೆ ಎಂದು ಅವರು ಹೇಳಿದ್ದಾರೆ. ಈ ಬೋಗಿಗಳನ್ನು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ನಿರ್ಮಿಸಲಾಗಿದೆ.

ರೈಲ್ವೆ ಸಚಿವರು ಹೊಸ ಬೋಗಿಗಳ ಚಿತ್ರಗಳನ್ನು ಶೇರ್ ಮಾಡಿದ್ದಾರೆ. ಈ ಚಿತ್ರಗಳಲ್ಲಿ ಕೆಂಪು ಬಣ್ಣದಲ್ಲಿರುವ ಸೀಟುಗಳು, ರೂಫ್ ನಲ್ಲಿರುವ ವಿಂಡೋಗಳನ್ನು ಕಾಣಬಹುದು. ಈ ಬೋಗಿಗಳ ಎರಡೂ ಬದಿಗಳ ಕೊನೆಯಲ್ಲಿ ಸ್ಕ್ರೀನ್'ಗಳಿವೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಬೋಗಿಯ ಎರಡೂ ಬದಿಯಲ್ಲಿ ಎರಡು ಸೀಟುಗಳನ್ನು ನೀಡಲಾಗಿದ್ದು, ಎರಡು ಸಾಲುಗಳ ನಡುವೆ ಸಾಕಷ್ಟು ಜಾಗವನ್ನು ನೀಡಲಾಗಿದೆ. ಈ ಹೊಸ ವಿಸ್ಟಾಡೋಮ್ ಬೋಗಿಗಳನ್ನು ಪ್ರವಾಸಿ ರೈಲು ಮಾರ್ಗದಲ್ಲಿ ಓಡಿಸಲಾಗುವುದು.

ಈ ಕಾರಣಕ್ಕಾಗಿಯೇ ಈ ಬೋಗಿಯಲ್ಲಿ ಗಾಜಿನ ರೂಫ್ ಹಾಗೂ ಅಗಲವಾದ ವಿಂಡೋಗಳನ್ನು ನೀಡಲಾಗಿದೆ. ಇದರಿಂದ ಈ ಬೋಗಿಯಲ್ಲಿ ಪ್ರಯಾಣಿಸುವವರು ಹೊರಗಿನ ನೋಟವನ್ನು ಕಾಣಬಹುದು. ಭಾರತೀಯ ರೈಲ್ವೆಯು ಸದ್ಯಕ್ಕೆ 13 ವಿಸ್ಟಾಡೋಮ್ ಬೋಗಿಗಳನ್ನು ಆಯ್ದ ಮಾರ್ಗಗಳಲ್ಲಿ ನಡೆಸುತ್ತಿದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಇವುಗಳಲ್ಲಿ ದಾದರ್, ಮಡ್ ಗಾಂವ್, ಅರಕು ವ್ಯಾಲಿ, ಕಾಶ್ಮೀರ ಕಣಿವೆ, ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆ, ಕಲ್ಕಾ ಶಿಮ್ಲಾ ರೈಲ್ವೆ, ಕಾಂಗ್ರಾ ವ್ಯಾಲಿ ರೈಲ್ವೆ, ಮಾಥೆರನ್ ಹಿಲ್ ರೈಲ್ವೆ, ನೀಲಗಿರಿ ಹಿಲ್ ರೈಲ್ವೆಗಳು ಸೇರಿವೆ.

ವಿಶಾಲವಾದ ವಿಂಡೋಗಳನ್ನು ಅಳವಡಿಸಿರುವ ಸ್ಥಳದಲ್ಲಿ ಬೋಗಿಯು ಬಣ್ಣವನ್ನು ಬದಲಾಯಿಸುವ ಗಾಜಿನ ರೂಫ್ ಅನ್ನು ಹೊಂದಿದೆ. ಈ ರೂಫ್ ಅನ್ನು ಕಂಟ್ರೋಲ್ ಮಾಡಬಹುದಾಗಿದೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಇದರ ಜೊತೆಗೆ ವಿಶೇಷ ಚೇತನರಿಗಾಗಿ ತಿರುಗುವ ಸೀಟುಗಳು, ಪ್ರಯಾಣಿಕರ ಬಗೆಗಿನ ಮಾಹಿತಿ, ಆಟೋಮ್ಯಾಟಿಕ್ ಸ್ಲೈಡಿಂಗ್ ಡೋರ್, ಸಣ್ಣ ಪ್ಯಾಂಟ್ರಿ ಹಾಗೂ ಅಗಲವಾದ ಡೋರುಗಳನ್ನು ನೀಡಲಾಗಿದೆ.

ವಿಸ್ಟಾಡೋಮ್ ಕೋಚ್ ನಿರ್ಮಾಣಕ್ಕಾಗಿ ಸುಮಾರು ರೂ.4 ಕೋಟಿ ಖರ್ಚು ಮಾಡಲಾಗಿದೆ ಎಂದು ರೈಲ್ವೆ ಇಲಾಖೆಯು ತಿಳಿಸಿದೆ. ಈ ಬೋಗಿಯಲ್ಲಿ ಚೂರು ನಿರೋಧಕ ಗ್ಲಾಸುಗಳನ್ನು ಅಳವಡಿಸಲಾಗಿದ್ದು, ಸುರಕ್ಷತೆಯ ಹಿನ್ನೆಲೆಯಲ್ಲಿ ಫಿಲ್ಮ್ ಕೋಟಿಂಗ್ ನೀಡಲಾಗಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಇದೇ ವೇಳೆ ರೈಲ್ವೆ ಸಚಿವ ಪಿಯೂಷ್ ಗೋಯಲ್ ರವರು ತಮಿಳುನಾಡಿನ ನೀಲಗಿರಿ ಹಿಲ್ ರೈಲ್ವೆ ಸೇವೆಯನ್ನು ಪುನರಾರಂಭಿಸಲಾಗಿದೆ ಎಂದು ಹೇಳಿದ್ದಾರೆ. ಜೊತೆಗೆ ಪಶ್ಚಿಮ ಬಂಗಾಳದಲ್ಲಿ ಎಲೆಕ್ಟ್ರಿಕ್ ಲೋಕೋಮೋಟಿವ್‌ಗಳ ಪರೀಕ್ಷೆ ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ.

ಸೋಮವಾರ ಪ್ರಧಾನಿ ನರೇಂದ್ರ ಮೋದಿರವರು ದೇಶದ ಮೊದಲ ಚಾಲಕ ರಹಿತ ರೈಲು ಸೇವೆಗೆ ಚಾಲನೆ ನೀಡಿದ್ದರು. ಈ ರೈಲು ದೆಹಲಿ ಮೆಟ್ರೋದ ಮೆಜೆಂಟಾ ಮಾರ್ಗದಲ್ಲಿ ಚಲಿಸುತ್ತದೆ. ಇದರ ಜೊತೆಗೆ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಅನ್ನು ಬಿಡುಗಡೆಗೊಳಿಸಲಾಯಿತು.