ಎರಡು ಪ್ರಮುಖ ಪ್ರಶಸ್ತಿಗಳನ್ನು ಮುಡಿಗೇರಿಸಿ ಕೊಂಡ ವಿಸ್ತಾರ ಏರ್‌ಲೈನ್ಸ್

ವಿಸ್ತಾರ ಏರ್‌ಲೈನ್ಸ್ ಭಾರತೀಯ ಮೂಲದ ವಿಮಾನಯಾನ ಕಂಪನಿಯಾಗಿದೆ. ವಿಮಾನಯಾನ ಕ್ಷೇತ್ರದಲ್ಲಿ ಕಂಪನಿಯು ಎರಡು ಪ್ರಮುಖ ಪ್ರಶಸ್ತಿಗಳನ್ನು ಗೆದ್ದಿರುವ ಬಗ್ಗೆ ವರದಿಯಾಗಿದೆ. ವಿಸ್ತಾರ ಏರ್‌ಲೈನ್ಸ್ ಭಾರತ ಹಾಗೂ ದಕ್ಷಿಣ ಏಷ್ಯಾದ ಅತ್ಯುತ್ತಮ ವಿಮಾನಯಾನ ಕಂಪನಿ ಮತ್ತು ಭಾರತ ಹಾಗೂ ದಕ್ಷಿಣ ಏಷ್ಯಾದ ಅತ್ಯುತ್ತಮ ಏರ್ ಸ್ಟಾಫ್ ಎಂಬ ಎರಡು ಪ್ರಮುಖ ಪ್ರಶಸ್ತಿಗಳನ್ನು ಗೆದ್ದಿದೆ.

ಎರಡು ಪ್ರಮುಖ ಪ್ರಶಸ್ತಿಗಳನ್ನು ಮುಡಿಗೇರಿಸಿ ಕೊಂಡ ವಿಸ್ತಾರ ಏರ್‌ಲೈನ್ಸ್

ಇದರ ಜೊತೆಗೆ ವಿಸ್ತಾರ ಏರ್‌ಲೈನ್ಸ್ 2021 ರ ವರ್ಷದ ಸ್ವಚ್ಛ ಕ್ಯಾಬಿನ್ ಏರ್‌ಲೈನ್ ಎಂಬ ಖ್ಯಾತಿಯನ್ನು ಪಡೆದಿದೆ. ವಿಶ್ವದ ಅಗ್ರ 350 ವಿಮಾನಯಾನ ಸಂಸ್ಥೆಗಳ ಪಟ್ಟಿಯಲ್ಲಿ ವಿಸ್ತಾರ ಏರ್‌ಲೈನ್ಸ್ 28 ನೇ ಸ್ಥಾನದಲ್ಲಿದೆ. 2019 ರಲ್ಲಿ ಕಂಪನಿಯು 69 ನೇ ಸ್ಥಾನದಲ್ಲಿತ್ತು. ಇದಕ್ಕೂ ಮುನ್ನ 2018 ರಲ್ಲಿ ಕಂಪನಿಯು 86 ನೇ ಸ್ಥಾನದಲ್ಲಿತ್ತು. ಈಗ ತನ್ನ ಸೇವೆಯನ್ನು ವೃದ್ಧಿಸಿಕೊಳ್ಳುವ ಮೂಲಕ 28 ನೇ ಸ್ಥಾನಕ್ಕೆ ಏರಿದೆ. ಪ್ರಯಾಣಿಕರಲ್ಲಿ ನಡೆಸುವ ಸಮೀಕ್ಷೆಯ ಮೂಲಕ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ಎರಡು ಪ್ರಮುಖ ಪ್ರಶಸ್ತಿಗಳನ್ನು ಮುಡಿಗೇರಿಸಿ ಕೊಂಡ ವಿಸ್ತಾರ ಏರ್‌ಲೈನ್ಸ್

ಈ ಸಮೀಕ್ಷೆಯನ್ನು 2019ರ ಸೆಪ್ಟೆಂಬರ್ 2019 ಹಾಗೂ 2021ರ ಜುಲೈ ನಡುವೆ ಸುಮಾರು 13 ಮಿಲಿಯನ್ ಪ್ರಯಾಣಿಕರೊಂದಿಗೆ ನಡೆಸಲಾಗಿತ್ತು. ಪ್ರಯಾಣಿಕರ ಸಮೀಕ್ಷೆ ಆಧಾರದ ಮೇಲೆ ನೀಡಲಾಗುವ ಪ್ರಶಸ್ತಿಯನ್ನು ಸ್ಕೈಟ್ರೋಕ್ಸ್ ಕಂಪನಿಯು 1999 ರಲ್ಲಿ ಆರಂಭಿಸಿತು. ಹಲವು ಪರೀಕ್ಷೆಗಳು ಹಾಗೂ ಅಧ್ಯಯನದ ನಂತರ ವಿಮಾನಯಾನ ಕಂಪನಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಎರಡು ಪ್ರಮುಖ ಪ್ರಶಸ್ತಿಗಳನ್ನು ಮುಡಿಗೇರಿಸಿ ಕೊಂಡ ವಿಸ್ತಾರ ಏರ್‌ಲೈನ್ಸ್

ನಕಲಿ ಸಮೀಕ್ಷೆಗಳನ್ನು ಹಾಗೂ ಅನುಮಾನಾಸ್ಪದ ಸಮೀಕ್ಷೆಗಳನ್ನು ಪರಿಗಣಿಸುವುದಿಲ್ಲ ಎಂಬುದು ಗಮನಾರ್ಹ. ವಿಸ್ತಾರ ಏರ್‌ಲೈನ್ಸ್, ಟಾಟಾ ಎಸ್‌ಐಎ ಏರ್‌ಲೈನ್ಸ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿದೆ. ಈ ಕಂಪನಿಯು ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಸಿಂಗಾಪುರ್ ಏರ್‌ಲೈನ್ಸ್ ಲಿಮಿಟೆಡ್ (SIA) ನಡುವೆ 51:49ರ ಸಹ ಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತದೆ.

ಎರಡು ಪ್ರಮುಖ ಪ್ರಶಸ್ತಿಗಳನ್ನು ಮುಡಿಗೇರಿಸಿ ಕೊಂಡ ವಿಸ್ತಾರ ಏರ್‌ಲೈನ್ಸ್

ವಿಸ್ತಾರ ಏರ್‌ಲೈನ್ಸ್ ​​48 ವಿಮಾನಗಳನ್ನು ನಿರ್ವಹಿಸುತ್ತದೆ. ಇವುಗಳಲ್ಲಿ 37 A320 ಏರ್ ಬಸ್ ಗಳು, ಮೂರು A321 ನಿಯೋ ಏರ್ ಬಸ್ ಗಳು, ಆರು ಬೋಯಿಂಗ್ 737 - 800 NG ಹಾಗೂ ಎರಡು ಬೋಯಿಂಗ್ 787 - 9 ಡ್ರೀಮ್ ಲೈನರ್ ವಿಮಾನಗಳು ಸೇರಿವೆ. ವಿಸ್ತಾರ ಏರ್‌ಲೈನ್ಸ್ ಕಂಪನಿಯು ಆರಂಭವಾದಾಗಿನಿಂದ ಇದುವರೆಗೂ 28 ​​ಮಿಲಿಯನ್ ಗ್ರಾಹಕರು ಪ್ರಯಾಣಿಸಿದ್ದಾರೆ ಎಂಬುದು ಗಮನಾರ್ಹ.

ಎರಡು ಪ್ರಮುಖ ಪ್ರಶಸ್ತಿಗಳನ್ನು ಮುಡಿಗೇರಿಸಿ ಕೊಂಡ ವಿಸ್ತಾರ ಏರ್‌ಲೈನ್ಸ್

ವಿಸ್ತಾರ ಏರ್‌ಲೈನ್ಸ್ ಎರಡು ಪ್ರಶಸ್ತಿಗಳನ್ನು ಪಡೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಕೈಟ್ರೋಕ್ಸ್ ಸಿಇಒ ಎಡ್ವರ್ಡ್ ಪ್ಲಾಸ್ಟೀನ್, ವಿಸ್ತಾರ ಏರ್‌ಲೈನ್ಸ್ ಈ ಎರಡು ಪ್ರಮುಖ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಗಮನಾರ್ಹ ಯಶಸ್ಸನ್ನು ಸಾಧಿಸಿದೆ. ಕಂಪನಿಯು ತನ್ನ ಅತ್ಯುನ್ನತ ಉತ್ಪನ್ನ ಹಾಗೂ ಉದ್ಯೋಗಿಗಳ ಸೇವಾ ಗುಣಮಟ್ಟದೊಂದಿಗೆ ತನ್ನ ನಾಯಕತ್ವವನ್ನು ಸಾಬೀತುಪಡಿಸಿದೆ ಎಂದು ಹೇಳಿದ್ದಾರೆ.

ಎರಡು ಪ್ರಮುಖ ಪ್ರಶಸ್ತಿಗಳನ್ನು ಮುಡಿಗೇರಿಸಿ ಕೊಂಡ ವಿಸ್ತಾರ ಏರ್‌ಲೈನ್ಸ್

ವಿಮಾನಯಾನವು ದೂರದ ಪ್ರಯಾಣವನ್ನು ಸುಲಭವಾಗಿಸುತ್ತದೆ. ವಿಮಾನಗಳು ಹಲವು ವರ್ಷಗಳ ಕಾಲ ಸೇವೆ ಸಲ್ಲಿಸುತ್ತವೆ. ವಿಮಾನಗಳು ಸಹ ಸೇವೆಯಿಂದ ನಿವೃತ್ತಿಯಾಗುತ್ತವೆ. ವಿಮಾನಗಳು ಎಷ್ಟು ವರ್ಷಗಳವರೆಗೆ ಬಾಳಿಕೆ ಬರುತ್ತವೆ ಎಂಬ ಪ್ರಶ್ನೆ ಹಲವರನ್ನು ಕಾಡುವುದು ಸಹಜ. ದೊಡ್ಡ ವಿಮಾನಗಳು ಹಲವು ದಶಕಗಳವರೆಗೆ ಸೇವೆ ಸಲ್ಲಿಸುತ್ತವೆ ಎಂಬುದು ಕೆಲವರ ಅಭಿಪ್ರಾಯ. ಆದರೆ ವಿಮಾನವೊಂದರ ಸರಾಸರಿ ಜೀವಿತಾವಧಿ ಕೇವಲ 25 ವರ್ಷದಿಂದ 30 ವರ್ಷಗಳಾಗಿರುತ್ತದೆ.

ಎರಡು ಪ್ರಮುಖ ಪ್ರಶಸ್ತಿಗಳನ್ನು ಮುಡಿಗೇರಿಸಿ ಕೊಂಡ ವಿಸ್ತಾರ ಏರ್‌ಲೈನ್ಸ್

ವಿಮಾನದ ವಯಸ್ಸನ್ನು ಸಾಮಾನ್ಯವಾಗಿ ಪ್ರೆಷರ್ ಸೈಕಲ್'ಗಳಿಂದ ಅಳೆಯಲಾಗುತ್ತದೆ. ಪ್ರತಿ ಬಾರಿ ವಿಮಾನವು ಹಾರಾಟ ನಡೆಸಿದಾಗ ಅದು ಒತ್ತಡಕ್ಕೊಳಗಾಗುತ್ತದೆ. ಇದು ವಿಮಾನದ ಪ್ಯೂಸ್ ಲೇಜ್ ಹಾಗೂ ರೆಕ್ಕೆಗಳ ಮೇಲೆ ಒತ್ತಡವನ್ನು ಬೀರುತ್ತದೆ. ಈ ಕಾರಣಕ್ಕಾಗಿಯೇ ವಿಮಾನ ತಯಾರಕ ಕಂಪನಿಗಳು ವಿಮಾನಗಳ ನಿರ್ವಹಣೆ ವೇಳೆಯಲ್ಲಿ ವಿಮಾನದ ಬಿಡಿ ಭಾಗಗಳು ಒತ್ತಡದಿಂದ ಹಾನಿಗೊಳಗಾಗಿವೆಯೇ ಎಂದು ಪರಿಶೀಲಿಸುತ್ತವೆ.

ಎರಡು ಪ್ರಮುಖ ಪ್ರಶಸ್ತಿಗಳನ್ನು ಮುಡಿಗೇರಿಸಿ ಕೊಂಡ ವಿಸ್ತಾರ ಏರ್‌ಲೈನ್ಸ್

ಯಾವುದೇ ವಿಮಾನವು ಸಂಪೂರ್ಣವಾಗಿ ಹಳೆಯದಾಗುವವರೆಗೆ ಕಾಯುವುದಿಲ್ಲ. ಹಲವು ವಿಮಾನಗಳು ತಮ್ಮ ಪೂರ್ಣ ಜೀವನವನ್ನು ಸಹ ತಲುಪುವುದಿಲ್ಲ. ವಿಮಾನದ ಜೀವಿತಾವಧಿ ಸುಮಾರು 25 ವರ್ಷಗಳೇ ಆದರೂ ಬಹುತೇಕ ವಿಮಾನಗಳು 18 ವರ್ಷ ಸೇವೆ ಸಲ್ಲಿಸಿದ ನಂತರ ನಿವೃತ್ತಿಯಾಗುತ್ತವೆ. ವಿಮಾನವು ನಿವೃತ್ತಿಯಾದ ನಂತರ ಅದು ತನ್ನ ಕೊನೆಯ ಹಾರಾಟವನ್ನು ಸ್ಟೋರೆಜ್ ವಿಮಾನ ನಿಲ್ದಾಣಕ್ಕೆ ಮಾಡುತ್ತದೆ. ಈ ಸ್ಟೋರೆಜ್ ವಿಮಾನ ನಿಲ್ದಾಣವು ದೊಡ್ಡದಾಗಿದ್ದು, ತೆರೆದ ಆಕಾಶದ ಅಡಿಯಲ್ಲಿರುತ್ತದೆ.

ಎರಡು ಪ್ರಮುಖ ಪ್ರಶಸ್ತಿಗಳನ್ನು ಮುಡಿಗೇರಿಸಿ ಕೊಂಡ ವಿಸ್ತಾರ ಏರ್‌ಲೈನ್ಸ್

ಈ ಸ್ಟೋರೆಜ್ ವಿಮಾನ ನಿಲ್ದಾಣಗಳನ್ನು ಪ್ರಪಂಚದ ಹಲವು ಭಾಗಗಳಲ್ಲಿ ಕಾಣಬಹುದು. ಇವುಗಳಲ್ಲಿ ಹೆಚ್ಚಿನವು ನೈಋತ್ಯ ಅಮೆರಿಕಾದಲ್ಲಿವೆ. ಈ ಸ್ಥಳದಲ್ಲಿ ಭೂಮಿಯ ಲಭ್ಯತೆ ಹೆಚ್ಚಾಗಿದ್ದು ಗಾಳಿ ಒಣಗಿರುವುದರಿಂದ ವಿಮಾನಗಳು ತುಕ್ಕು ಹಿಡಿಯುವ ಪ್ರಕ್ರಿಯೆ ತುಂಬಾ ನಿಧಾನವಾಗಿರುತ್ತದೆ. ವಿಮಾನವು ಸ್ಟೋರೆಜ್ ವಿಮಾನ ನಿಲ್ದಾಣಕ್ಕೆ ಬಂದ ನಂತರ, ಅದರ ಮೇಲಿರುವ ಉಪ್ಪಿನ ಅಂಶವನ್ನು ತೆಗೆದುಹಾಕಲು ವಿಮಾನವನ್ನು ಚೆನ್ನಾಗಿ ತೊಳೆಯಲಾಗುತ್ತದೆ. ನಂತರ ಆ ವಿಮಾನದ ಪ್ಯುಯಲ್ ಟ್ಯಾಂಕ್‌ಗಳನ್ನು ಬರಿದಾಗಿಸಿ, ಲೂಬ್ರಿಕಂಟ್‌ಗಳನ್ನು ಹಚ್ಚಲಾಗುತ್ತದೆ. ವಿಮಾನಗಳ ಟಯರ್‌ಗಳನ್ನು ಸಹ ಸುರಕ್ಷಿತವಾಗಿಡಲಾಗುತ್ತದೆ.

ಎರಡು ಪ್ರಮುಖ ಪ್ರಶಸ್ತಿಗಳನ್ನು ಮುಡಿಗೇರಿಸಿ ಕೊಂಡ ವಿಸ್ತಾರ ಏರ್‌ಲೈನ್ಸ್

ಪ್ರತಿ ವಿಮಾನವು ಎಂಜಿನ್‌, ಫ್ಯೂಸ್‌ಲೇಜ್ ಹಾಗೂ ಎಲೆಕ್ಟ್ರಾನಿಕ್ಸ್‌ ಸೇರಿದಂತೆ 3,50,000ಕ್ಕೂ ಹೆಚ್ಚು ಬಿಡಿಭಾಗಳನ್ನು ಹೊಂದಿರುತ್ತದೆ. ವಿಮಾನವೊಂದು ನಿವೃತ್ತಿಯಾದ ನಂತರ ಅದರಲ್ಲಿರುವ ಬಿಡಿ ಭಾಗಗಳನ್ನು ಇತರ ವಿಮಾನಗಳಲ್ಲಿ ಬಳಸಲಾಗುತ್ತದೆ. ಕೆಲವೊಮ್ಮೆ ವಿಮಾನಗಳಲ್ಲಿರುವ ಬಿಡಿಭಾಗಗಳನ್ನು ಸರಿಪಡಿಸುವುದರ ಬದಲು ಹಳೆಯ ವಿಮಾನಗಳಲ್ಲಿರುವ ಬಿಡಿ ಭಾಗವನ್ನು ಅಳವಡಿಸಲಾಗುತ್ತದೆ.

Most Read Articles

Kannada
English summary
Vistara airlines bags best airline and best staff in india awards details
Story first published: Friday, October 1, 2021, 14:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X