Just In
Don't Miss!
- News
ಕೊರೊನಾ ಸೋಂಕು ಹೆಚ್ಚಳ: ವಿಧಾನಸೌಧಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ
- Movies
ಜಾಕಿ ಚಾನ್ ತಮ್ಮ ಮಗನಿಗೆ ಸಾವಿರಾರು ಕೋಟಿ ಆಸ್ತಿಯನ್ನು ಕೊಡುತ್ತಿಲ್ಲವೇಕೆ?
- Lifestyle
ಭಾನುವಾರದ ಭವಿಷ್ಯ: ಈ ದಿನ ಯಾವ ರಾಶಿಯವರಿಗೆ ಅದೃಷ್ಟದ ದಿನ
- Sports
ಹೈದರಾಬಾದ್ ಸೋಲಿಸಿ ಅಗ್ರ ಸ್ಥಾನಕ್ಕೇರಿದ ಮುಂಬೈ ಇಂಡಿಯನ್ಸ್
- Finance
ಮಹಾರಾಷ್ಟ್ರದಲ್ಲಿ ಲಾಕ್ಡೌನ್: ಕಾರುಗಳ ಉತ್ಪಾದನೆ ಮೇಲೆ ಭಾರೀ ಪರಿಣಾಮ
- Education
Ninasam Diploma Admission 2020-21: ಮೇ ತಿಂಗಳಲ್ಲಿ ನೀನಾಸಂ ಡಿಪ್ಲೋಮಾ ಪ್ರವೇಶಾತಿ ಆರಂಭ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದಂಡ ಪಾವತಿಸಿರುವ ಬಗ್ಗೆ ವೀಡಿಯೊ ಶೇರ್ ಮಾಡಿದ ನಟ
ಖ್ಯಾತ ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರು ಇತ್ತೀಚಿಗೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ವರದಿಯಾಗಿತ್ತು. ಪ್ರೇಮಿಗಳ ದಿನದ ಮುನ್ನಾದಿನ ವಿವೇಕ್ ಒಬೆರಾಯ್ ಹಾಗೂ ಅವರ ಪತ್ನಿ ದುಬಾರಿ ಬೆಲೆಯ ಹಾರ್ಲೆ ಡೇವಿಡ್ಸನ್ ಬೈಕಿನಲ್ಲಿ ಜಾಲಿ ರೈಡ್ ಹೋಗಿದ್ದರು.

ಜಾಲಿ ರೈಡ್ ಹೋದ ಸಂದರ್ಭದಲ್ಲಿ ಅವರಿಬ್ಬರು ಹೆಲ್ಮೆಟ್ ಹಾಗೂ ಫೇಸ್ ಮಾಸ್ಕ್ ಧರಿಸಿರಲಿಲ್ಲ. ಈ ಜಾಲಿ ರೈಡ್ ವೀಡಿಯೊವನ್ನು ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಬೈಕ್ ಸವಾರ ಹಾಗೂ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ.

ಇದರ ಜೊತೆಗೆ ಕರೋನಾ ವೈರಸ್ ಸಾಂಕ್ರಾಮಿಕದ ಸಂದರ್ಭದಲ್ಲಿ ಕರೋನಾ ವೈರಸ್ ಹರಡದಂತೆ ತಡೆಯಲು ಫೇಸ್ ಮಾಸ್ಕ್ ಧರಿಸುವುದನ್ನು ಸಹ ಕಡ್ಡಾಯಗೊಳಿಸಲಾಗಿದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಆದರೆ ಜಾಲಿ ರೈಡ್ ಸಂದರ್ಭದಲ್ಲಿ ವಿವೇಕ್ ಒಬೆರಾಯ್ ಹಾಗೂ ಅವರ ಪತ್ನಿ ಇಬ್ಬರೂ ಈ ಎರಡು ನಿಯಮಗಳನ್ನು ಪಾಲಿಸಿರಲಿಲ್ಲ. ಹೀಗಾಗಿ ವಿವಾದ ಭುಗಿಲೆದ್ದಿತ್ತು. ಸಾರ್ವಜನಿಕರು ವಿವೇಕ್ ಒಬೆರಾಯ್ ವಿರುದ್ಧ ಆಕ್ರೋಶ ಹೊರ ಹಾಕಿದ್ದರು.

ಸಾಮಾಜಿಕ ಜಾಲತಾಣದಲ್ಲಿದ್ದ ವೀಡಿಯೊ ವೀಕ್ಷಿಸಿದ್ದ ಮಹಿಳಾ ಸಾಮಾಜಿಕ ಕಾರ್ಯಕರ್ತೆಯೊಬ್ಬರು ವಿವೇಕ್ ಒಬೆರಾಯ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿ ದೂರು ದಾಖಲಿಸಿದ್ದರು.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಇದರ ಬೆನ್ನಲ್ಲೇ ಮಹಾರಾಷ್ಟ್ರ ರಾಜ್ಯದ ಸಚಿವರ ಆದೇಶದ ಮೇರೆಗೆ ಮುಂಬೈ ನಗರ ಸಂಚಾರ ಪೊಲೀಸರು ವಿವೇಕ್ ಒಬೆರಾಯ್ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಿಧಿಸಿದ್ದರು. ಹೆಲ್ಮೆಟ್ ಧರಿಸದ ಕಾರಣಕ್ಕೆ ಅವರಿಗೆ ಇ-ಚಲನ್ ನೀಡಲಾಗಿತ್ತು.

ಆದರೆ ಫೇಸ್ ಮಾಸ್ಕ್ ಧರಿಸದೇ ಇರುವುದಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ನಟ ವಿವೇಕ್ ಒಬೆರಾಯ್ ಅವರು ದಂಡವನ್ನು ಪಾವತಿಸಿದ್ದಾರೆಂದು ಎಂದು ತಿಳಿದು ಬಂದಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಈ ಹಿಂದೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಜಾಲಿ ರೈಡ್'ನ ವೀಡಿಯೊವನ್ನು ಪೋಸ್ಟ್ ಮಾಡಿದ್ದ ವಿವೇಕ್ ಒಬೆರಾಯ್, ಈಗ ದಂಡ ಪಾವತಿಸಿರುವುದಾಗಿ ಹೇಳುತ್ತಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
ಈ ವೀಡಿಯೊದಲ್ಲಿ ಅವರು ತಮ್ಮ ಬಳಿಯಿರುವ ಎರಡು ಸೂಪರ್ ಬೈಕುಗಳನ್ನು ತೋರಿಸುತ್ತಾರೆ. ಅವರು ವೀಡಿಯೊದಲ್ಲಿ ತೋರಿಸುವ ಬೈಕುಗಳಲ್ಲಿ ಬಿಎಂಡಬ್ಲ್ಯು ಎಸ್ 1000 ಆರ್‌ಆರ್ ಹಾಗೂ ಬಿಎಂಡಬ್ಲ್ಯು ಕೆ 1600 ಜಿಟಿಎಲ್ ಬೈಕುಗಳು ಸೇರಿವೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ನಟ ವಿವೇಕ್ ಒಬೆರಾಯ್ ಬೈಕ್ ಪ್ರಿಯರು. ಅವರು ಬಿಡುಗಡೆಗೊಳಿಸಿರುವ ವೀಡಿಯೊ ಇದನ್ನು ಖಚಿತಪಡಿಸಿದೆ. ಅವರು ಹಾರ್ಲೆ ಡೇವಿಡ್ಸನ್ ಬೈಕ್ ಸಹ ಹೊಂದಿದ್ದು, ಆ ಬೈಕಿನಲ್ಲಿಯೇ ಹೆಲ್ಮೆಟ್ ಧರಿಸದೇ ಜಾಲಿ ರೈಡ್ ಮಾಡಿ ಈಗ ದಂಡ ಪಾವತಿಸಿದ್ದಾರೆ.