ಜಲಾಂತರ್ಗಾಮಿ ನೌಕೆಯಲ್ಲಿ ಕಪ್ಪು ಸಾಗರದೊಳಗೆ ಧುಮುಕಿದ ರಷ್ಯಾ ಅಧ್ಯಕ್ಷರು
ನಾಯಕರಾದವರು ಅಸಂಖ್ಯಾತ ತಮ್ಮ ಅನುಯಾಯಿಗಳಿಗೆ ಮಾದರಿಯಾಗಬೇಕೆಂಬ ಮಾತಿದೆ. ಅಕ್ಷರಶ: ಇದನ್ನೇ ವಚನಬದ್ಧವಾಗಿರಿಸಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಜಲಾಂತರ್ಗಾಮಿ ನೌಕೆಯಲ್ಲಿ ಸಾಗರದೊಳಗೆ ಧುಮುಕುವ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದಾರೆ.
Also Read: ನಿಗೂಢ ರಹಸ್ಯ ಭೇದಿಸಿದ ಆಫ್ರಿಕಾದ ಹಡಗು ಸ್ಮಶಾನ
ಬಹಳ ಹಿಂದಿನಿಂದಲೇ ಜಲಾಂತರ್ಗಾಮಿ ನೌಕೆಗಳ ಅಭಿವೃದ್ಧಿಯಲ್ಲಿ ರಷ್ಯಾ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಇತಿಹಾಸವನ್ನು ತೆರೆದು ನೋಡಿದಾಗ ಭಾರತದೊಂದಿಗೂ ಉತ್ತಮ ಬಾಂಧವ್ಯ ವೃದ್ಧಿಸಿಕೊಂಡಿರುವ ರಷ್ಯಾ ಅನೇಕ ಜಂಟಿ ಕಾರ್ಯಾಚರಣೆಗಳಲ್ಲಿ ಭಾಗವಹಿಸಿರುವುದನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ರಷ್ಯಾದ ಸಾಹಸ ಪ್ರಿಯ ಅಧ್ಯಕ್ಷರಾಗಿರುವ ಪುತಿನ್ ಆಗ್ನೇಯ ಯುರೋಪ್ ಮತ್ತು ಪಶ್ಚಿಮ ಏಷ್ಯಾದ ಮಧ್ಯೆ ಸ್ಥಿತಗೊಂಡಿರುವ ಕಪ್ಪು ಸಾಗರದಲ್ಲಿ (Black Sea) ಮೂರು ಸೀಟುಗಳ ಜಲಾಂತರ್ಗಾಮಿ ನೌಕೆಯಲ್ಲಿ ಸಾಹಸ ಪಯಣ ಹಮ್ಮಿಕೊಳ್ಳುವ ಮೂಲಕ ಸುದ್ದಿ ಮಾಡಿದ್ದಾರೆ.

ನಿಮ್ಮ ಮಾಹಿತಿಗಾಗಿ, ಇತ್ತೀಚೆಗಷ್ಟೇ ಬ್ಲ್ಯಾಕ್ ಸಮುದ್ರದಲ್ಲಿ ಮುಳುಗಿ ಹೋಗಿರುವ ಪ್ರಾಚೀನ ಹಡಗನ್ನು ಸಾಗರದಾಳದಲ್ಲಿ ಪತ್ತೆ ಹಚ್ಚಲಾಗಿತ್ತು. ಇದನ್ನು ತಮ್ಮ ಕಣ್ಣಾರೆ ವೀಕ್ಷಿಸಲು ಪುತಿನ್ ಸಾಹಸ ಪಯಣ ನಡೆಸಿದ್ದರು.

ನೀರಿನೊಳಗೆ ಪುತಿನ್ ಅವರು 272 ಅಡಿಯ (83 ಮೀಟರ್) ವರೆಗೂ ಸಂಚರಿಸಿದ್ದರು ಎಂದು ರಷ್ಯಾದ ಜಿಯೋಗ್ರಾಫಿಕಲ್ ಸೊಸೈಟಿ ತಿಳಿಸಿದೆ. ಈ ವೇಳೆಯಲ್ಲಿ ಹಲವು ಶತಮಾನದ ಹಳೆಯ ಹಡಗನ್ನು ಪರೀಶೀಲಿಸಿರುವುದಾಗಿ ಉಲ್ಲೇಖಿಸಿದೆ.

ತಮ್ಮ 45 ನಿಮಿಷಗಳ ಪಯಣವನ್ನು ಸ್ಮರಣೀಯವಾಗಿಸಿದ ಬಳಿಕ ಮಾತನಾಡಿರುವ ಪುತಿನ್, "ರಷ್ಯಾದ ಅಭಿವೃದ್ಧಿ ಹಾಗೂ ಇತಿಹಾಸವು ಎಷ್ಟು ಆಳವಾಗಿದೆ ಎಂಬುದಕ್ಕೆ ಇದೊಂದು ನಿದರ್ಶನವಾಗಿದೆ" ಎಂದಿದ್ದಾರೆ.

ಇತಿಹಾಸ ತಜ್ಞರ ಪ್ರಕಾರ ಕಪ್ಪು ಸಾಗರದಲ್ಲಿ ಪತ್ತೆ ಹಚ್ಚಲಾಗಿರುವ ಈ ಪ್ರಾಚೀನ ಹಡಗು ಒಂಬತ್ತು ಅಥವಾ 10ನೇ ಶತನಮಾನಕ್ಕೆ ಸೇರಿದ್ದಾಗಿದೆ ಎಂದು ನಂಬಲಾಗಿದೆ.

ರಷ್ಯಾದ ಜಿಯೋಗ್ರಾಫಿಕಲ್ ಸೊಸೈಟಿಯ 170ನೇ ವರ್ಷಾಚರಣೆಯ ಅಂಗವಾಗಿ ಪುತಿನ್ ನಡೆಸಿರುವ ದಂಡಯಾತ್ರೆಯೀಗ ವಿಶ್ವದೆಲ್ಲೆಡೆ ಸುದ್ದಿ ಮಾಧ್ಯಮಗಳಲ್ಲಿ ಹೆಚ್ಚಿನ ಗಮನಕ್ಕೆ ಪಾತ್ರವಾಗಿದೆ.

ಅಷ್ಟಕ್ಕೂ ರಷ್ಯಾ ಅಧ್ಯಕ್ಷರು ಇದೇ ಮೊದಲ ಬಾರಿಯೇನಲ್ಲ ಸಾಹಸ ಯಾತ್ರೆ ಹಮ್ಮಿಕೊಳ್ಳುತ್ತಿರುವುದು. ಈ ಮೊದಲು 2009ರಲ್ಲಿ ಜಲಾಂತರ್ಗಾಮಿ ನೌಕೆಯಲ್ಲಿ ಹಾಗೂ 2011ರಲ್ಲಿ ಸ್ಕೂಬಾ ಡೈವಿಂಗ್‌ನಲ್ಲೂ ಭಾಗವಹಿಸಿದ್ದರು.

ಸಾಗರವೆಂಬ ಮಾಯಾಲೋಕದಲ್ಲಿ ಜಲಾಂತರ್ಗಾಮಿ ಪ್ರವಾಸ
ಸಾಗರದೊಳಗೆ ಮುಳುಗಿರುವ 18 ಅವಿಶ್ವಸನೀಯ ಹಡಗುಗಳು
ಬೆಲ್ಜಿಯಂ ದಟ್ಟಾರಣ್ಯದಲ್ಲಿ 70 ವರ್ಷಕ್ಕೂ ಹಳೆಯ ಕಾರು ಸ್ಮಶಾನ
ಪ್ರಾಚೀನ ಹಡಗು ನೋಡಲು ರಷ್ಯಾ ಅಧ್ಯಕ್ಷರ ದಂಡಯಾತ್ರೆ - ರೋಚಕ ವಿಡಿಯೋ ವೀಕ್ಷಿಸಲು ಮರೆಯದಿರಿ


Click it and Unblock the Notifications








