ಹತ್ಯೆಯ ಪ್ರಯತ್ನದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೀವ ಉಳಿಸಿದ್ದು ಔರಸ್ ಸೆನೆಟ್ ಕಾರು!

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ದದ ನಂತರ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹತ್ಯೆಯ ಪ್ರಯತ್ನ ನಿರಂತವಾಗಿ ನಡೆಯುತ್ತಿದ್ದು, ಇದೀಗ ಮತ್ತೊಂದು ಘಟನೆಯಲ್ಲಿ ವ್ಲಾಡಿಮಿರ್ ಪುಟಿನ್ ಹತ್ಯೆಗೆ ಯತ್ನಿಸಲಾಗಿದೆ.

ಹತ್ಯೆಯ ಪ್ರಯತ್ನದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೀವ ಉಳಿಸಿದ್ದು ಔರಸ್ ಸೆನೆಟ್ ಕಾರು!

ವ್ಲಾಡಿಮಿರ್ ಪುಟಿನ್ ಹತ್ಯೆ ಪ್ರಯತ್ನದ ಕುರಿತಾಗಿ ಯುರೋ ವೀಕ್ಲಿ ನ್ಯೂಸ್‌ ವರದಿ ಮಾಡಿದ್ದು, ಹತ್ಯೆಯ ಪ್ರಯತ್ನದಲ್ಲಿ ಯಾವುದೇ ಪ್ರಾಣಾಪಾಯವಿಲ್ಲದೆ ಬದುಕುಳಿದ್ದಾರೆ. ಪುಟಿನ್ ಅವರು ಸಂಚರಿಸುತ್ತಿದ್ದ ಅಧಿಕೃತ ಲಿಮೋಸಿನ್ ಕಾರಿನ ಎಡ ಮುಂಭಾಗದ ಚಕ್ರಕ್ಕೆ ಜೋರಾಗಿ ಬ್ಯಾಂಗ್ ಹೊಡೆದಿರುವುದಾಗಿ ವರದಿಯಾಗಿದ್ದು, ಪುಟಿನ್ ಅವರ ಹತ್ಯೆಯ ಪ್ರಯತ್ನವು ನಿಖರವಾಗಿ ಯಾವಾಗ ನಡೆಯಿತು ಎಂಬುದು ಇನ್ನೂ ತಿಳಿದಿಲ್ಲ.

ಹತ್ಯೆಯ ಪ್ರಯತ್ನದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೀವ ಉಳಿಸಿದ್ದು ಔರಸ್ ಸೆನೆಟ್ ಕಾರು!

ಹತ್ಯೆ ಪ್ರಯತ್ನದ ಸಂದರ್ಭದಲ್ಲಿ ವ್ಲಾಡಿಮಿರ್ ಪುಟಿನ್ ಅವರು ರಷ್ಯಾ ನಿರ್ಮಿತ ಔರಸ್ ಸೆನೆಟ್ ಅಧ್ಯಕ್ಷೀಯ ಲಿಮೋಸಿನ್ ಅನ್ನು ಬಳಸುತ್ತಿದ್ದರು ಎಂದು ತಿಳಿದುಬಂದಿದ್ದು, ಬಲವಾದ ಬ್ಯಾಂಗ್ ಹೊಡೆತದ ನಂತರವು ಕಾರು ಯಾವುದೇ ದೊಡ್ಡ ಹಾನಿಗೊಳಗಾಗದೆ ಪುಟಿನ್ ಜೀವ ಉಳಿಸಲು ನೆರವಾಗಿದೆ.

ಹತ್ಯೆಯ ಪ್ರಯತ್ನದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೀವ ಉಳಿಸಿದ್ದು ಔರಸ್ ಸೆನೆಟ್ ಕಾರು!

ರಷ್ಯಾ ಅಧ್ಯಕ್ಷರ ಹತ್ಯೆಯ ಪ್ರಯತ್ನದ ನಂತರ ದೇಶಾದ್ಯಂತ ಹಲವರನ್ನು ಬಂಧನ ಸಹ ಮಾಡಲಾಗಿದ್ದು, ಹತ್ಯೆಯ ಹಿಂದಿನ ಸಂಚನ್ನು ಭೇದಿಸಲಾಗುತ್ತಿದೆ. ಹತ್ಯೆಯ ಯತ್ನದಲ್ಲಿ ಹಾನಿಗಿಡಾದ ವಾಹನದ ವಿವರಗಳು ಇನ್ನೂ ಹೊರಬಂದಿಲ್ಲವಾದರೂ, ಹೊಸ ಲಿಮೋಸಿನ್‌ನಲ್ಲಿರುವ ವೈಶಿಷ್ಟ್ಯತೆಗಳು ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸಿದೆ.

ಹತ್ಯೆಯ ಪ್ರಯತ್ನದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೀವ ಉಳಿಸಿದ್ದು ಔರಸ್ ಸೆನೆಟ್ ಕಾರು!

ಸದ್ಯ ರಷ್ಯಾ ಅಧ್ಯಕ್ಷರು ಈ ಹಿಂದಿನ ಮರ್ಸಿಡಿಸ್-ಬೆಂಝ್ ಎಸ್ 600 ಪುಲ್‌ಮ್ಯಾನ್ ಲಿಮೋಸಿನ್ ಬದಲಾಗಿ ರಷ್ಯಾ ನಿರ್ಮಿತ ಔರಸ್ ಸೆನೆಟ್ ಲಿಮೋಸಿನ್ ಬಳಸುತ್ತಿದ್ದು, ಇದು ಮರ್ಸಿಡಿಸ್-ಬೆಂಝ್ ಎಸ್ 600 ಪುಲ್‌ಮ್ಯಾನ್‌ಗಿಂತಲೂ ಹೆಚ್ಚಿನ ಮಟ್ಟದ ಸುರಕ್ಷಾ ಫೀಚರ್ಸ್ ಹೊಂದಿದೆ.

ಹತ್ಯೆಯ ಪ್ರಯತ್ನದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೀವ ಉಳಿಸಿದ್ದು ಔರಸ್ ಸೆನೆಟ್ ಕಾರು!

ರಷ್ಯಾ ಅಧ್ಯಕ್ಷೀಯ ಕಾರುಗಳ ಸರಣಿಯಾಗಿರುವ ಕೊರ್ಟೆಜ್ ಯೋಜನೆಯ ಭಾಗವಾಗಿ ಹೊಸ ಔರಸ್ ಸೆನೆಟ್ ಲಿಮೋಸಿನ್ ನಿರ್ಮಾಣ ಮಾಡಲಾಗಿದ್ದು, 2018ರಿಂದ ವ್ಲಾಡಿಮಿರ್ ಪುಟಿನ್ ಹೊಸ ಕಾರನ್ನು ಅಧಿಕೃತವಾಗಿ ಬಳಕೆ ಮಾಡುತ್ತಿದ್ದಾರೆ.

ಹತ್ಯೆಯ ಪ್ರಯತ್ನದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೀವ ಉಳಿಸಿದ್ದು ಔರಸ್ ಸೆನೆಟ್ ಕಾರು!

ಔರಸ್ ಸೆನೆಟ್ ಕಾರು ಮಾದರಿಯು ಎರಡು ಮಾದರಿಯಲ್ಲಿ ಖರೀದಿಗೆ ಲಭ್ಯವಿದ್ದು, ಖಾಸಗಿ ಬಳಕೆದಾರರಿಗಾಗಿ ಸ್ಟ್ಯಾಂಡರ್ಡ್ ವೆರಿಯೆಂಟ್ ಮತ್ತು ರಷ್ಯಾ ಅಧ್ಯಕ್ಷರಿಗಾಗಿ ವಿಶೇಷ ಸೌಲಭ್ಯಗಳನ್ನು ಒಳಗೊಂಡ ಲಿಮೋಸಿನ್ ಅಭಿವೃದ್ದಿಪಡಿಸಲಾಗಿದೆ.

ಹತ್ಯೆಯ ಪ್ರಯತ್ನದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೀವ ಉಳಿಸಿದ್ದು ಔರಸ್ ಸೆನೆಟ್ ಕಾರು!

ಸ್ಟ್ಯಾಂಡರ್ಡ್ ಔರಸ್ ಸೆನೆಟ್ ಕಾರು ಫುಲ್ ಸೈಜ್ ಸೆಡಾನ್ ವೈಶಿಷ್ಟ್ಯತೆಯೊಂದಿಗೆ 5,631 ಎಂಎಂ ಉದ್ದಳತೆಯೊಂದಿಗೆ ಸುಮಾರು 2,700 ಕೆಜಿ ತೂಕ ಹೊಂದಿದ್ದರೆ, ಲಿಮೋಸಿನ್ ಆವೃತ್ತಿಯು 6,700 ಎಂಎಂ ಉದ್ದಳತೆಯೊಂದಿಗೆ ಬರೋಬ್ಬರಿ 7,200 ಕೆ.ಜಿ ತೂಕ ಹೊಂದಿದೆ.

ಹತ್ಯೆಯ ಪ್ರಯತ್ನದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೀವ ಉಳಿಸಿದ್ದು ಔರಸ್ ಸೆನೆಟ್ ಕಾರು!

ಔರಸ್ ಸೆನೆಟ್ ಸ್ಟ್ಯಾಂಡರ್ಡ್ ಮತ್ತು ಲಿಮೋಸಿನ್ ಮಾದರಿಗೂ ಸಾಕಷ್ಟು ವ್ಯತ್ಯಾಸಗಳಿದ್ದು, ರಷ್ಯಾ ಅಧ್ಯಕ್ಷರ ರಕ್ಷಣೆಗಾಗಿ ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಸುರಕ್ಷಾ ಸೌಲಭ್ಯಗಳನ್ನು ಇದರಲ್ಲಿ ಸೇರಿಸಲಾಗಿದೆ.

ಹತ್ಯೆಯ ಪ್ರಯತ್ನದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೀವ ಉಳಿಸಿದ್ದು ಔರಸ್ ಸೆನೆಟ್ ಕಾರು!

ಅಧ್ಯಕ್ಷರ ಕಾರಿನಲ್ಲಿರುವ ಹಲವಾರು ಬಹಿರಂಗಪಡಿಸಲಾಗದ ಹಲವಾರು ಭದ್ರತಾ ವೈಶಿಷ್ಟ್ಯತೆಗಳಿದ್ದು, ಇವುಗಳಲ್ಲಿ ಮುಖ್ಯವಾಗಿ ಕಾರಿಗೆ ರಕ್ಷಾಕವಚ ನೀಡಲು ಬುಲೆಟ್ ಪ್ರೂಫಿಂಗ್ ಮುಖ್ಯವಾಗಿದೆ.

ಹತ್ಯೆಯ ಪ್ರಯತ್ನದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೀವ ಉಳಿಸಿದ್ದು ಔರಸ್ ಸೆನೆಟ್ ಕಾರು!

ಜೊತೆಗೆ ಬುಲೆಟ್ ಪ್ರೂಫ್ ಗಾಜು, ನೆಲ ಬಾಂಬ್ ತಡೆಯಲು ಸಹಕಾರಿಯಾಗುವಂತೆ ಅಂಡರ್‌ರ್ಫ್ಲೋರ್ ಸಂರಚನೆ, ಘನವಾದ 'ರನ್-ಫ್ಲಾಟ್-ರಬ್ಬರ್ ಟೈರ್‌ಗಳು, ಸಂಯೋಜಿತವಾಗಿರುವ "ಆಕ್ರಮಣಕಾರಿ" ಶಸ್ತ್ರಾಸ್ತ್ರಗಳು ಮತ್ತು ಜೈವಿಕ ಯುದ್ಧವನ್ನು ಎದುರಿಸುವ ಸಂದರ್ಭದಲ್ಲಿ ಬೇಕಾಗಬಹುದಾದ ಆಮ್ಲಜನಕ ಪೂರೈಕೆ ಸೌಲಭ್ಯಗಳನ್ನು ಒಳಗೊಂಡಿದೆ.

ಹತ್ಯೆಯ ಪ್ರಯತ್ನದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೀವ ಉಳಿಸಿದ್ದು ಔರಸ್ ಸೆನೆಟ್ ಕಾರು!

ಭಾರೀ ಪ್ರಮಾಣದ ಶಸ್ತ್ರಸಜ್ಜಿತ ಲಿಮೋಸಿನ್ ಅನ್ನು ಸಾಗಿಸಲು ಔರಸ್ ಸೆನೆಟ್‌ನಲ್ಲಿ ಜರ್ಮನ್ ಸ್ಪೋರ್ಟ್ಸ್ ಕಾರ್ ತಯಾರಕ ಕಂಪನಿಯಾಗಿರುವ ಪೋರ್ಷೆ ನಿರ್ಮಾಣದ ಎಂಜಿನ್ ಎರವಲು ಪಡೆಯಲಾಗಿದೆ. ಇದರಲ್ಲಿರುವ 4.4-ಲೀಟರ್, ಟ್ವಿನ್-ಟರ್ಬೋಚಾರ್ಜ್ಡ್ ವಿ8 ಪೆಟ್ರೋಲ್ ಎಂಜಿನ್ 9-ಸ್ಪೀಡ್ ಸ್ವಯಂಚಾಲಿತ ಗೇರ್‌ಬಾಕ್ಸ್ ಮೂಲಕ ಅತ್ಯುತ್ತಮ ಪರ್ಫಾಮೆನ್ಸ್ ನೀಡುತ್ತದೆ.

ಹತ್ಯೆಯ ಪ್ರಯತ್ನದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೀವ ಉಳಿಸಿದ್ದು ಔರಸ್ ಸೆನೆಟ್ ಕಾರು!

ಟ್ವಿನ್-ಟರ್ಬೋಚಾರ್ಜ್ಡ್ ವಿ8 ಎಂಜಿನ್‌ನಲ್ಲಿ ಹೈಬ್ರಿಡ್ ಸಿಸ್ಟಂ ಸಂಯೋಜಿಸಲಾಗಿದ್ದು, ಇದು 590 ಗರಿಷ್ಠ ಹಾರ್ಸ್ ಪವರ್ ಮತ್ತು 889 ಎನ್ಎಂ ಗರಿಷ್ಠ ಟಾರ್ಕ್ ಉತ್ಪಾದನೆಯೊಂದಿಗೆ ಕೇವಲ 6 ಸೆಕೆಂಡ್‌ಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ ಪಡೆದುಕೊಳ್ಳುವ ಬಲಿಶಾಲಿ ಕಾರು ಮಾದರಿಯಾಗಿದೆ.

ಹತ್ಯೆಯ ಪ್ರಯತ್ನದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೀವ ಉಳಿಸಿದ್ದು ಔರಸ್ ಸೆನೆಟ್ ಕಾರು!

ಇದು 250 ಕಿ.ಮೀ ಟಾಪ್ ಸ್ಪೀಡ್‌ನೊಂದಿಗೆ ಹಲವಾರು ಹೊಸ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಐಷಾರಾಮಿ ಕಾರಿನ ಹಿಂಬದಿಯ ಆಸನ ವಿಭಾಗದಲ್ಲಿ ಪ್ರತ್ಯೇಕ ಆಸನಗಳು, ಚಾಲಿತ ಪರದೆಗಳು ಸೇರಿದಂತೆ ಹಲವಾರು ಐಷಾರಾಮಿ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ.

ಹತ್ಯೆಯ ಪ್ರಯತ್ನದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೀವ ಉಳಿಸಿದ್ದು ಔರಸ್ ಸೆನೆಟ್ ಕಾರು!

ಅದಾಗ್ಯೂ ಹೊಸ ಕಾರಿನಲ್ಲಿ ಇನ್ನು ಹಲವಾರು ಸುರಕ್ಷಾ ಸೌಲಭ್ಯಗಳ ಮಾಹಿತಿಯು ಗೌಪ್ಯವಾಗಿಡಲಾಗಿದ್ದು, ಒಟ್ಟಿನಲ್ಲಿ ಬೃಹತ್ ಪ್ರಮಾಣದ ದಾಳಿಗಳಲ್ಲೂ ಅಧ್ಯಕ್ಷರನ್ನು ಪ್ರಾಣಾಪಾಯದಿಂದ ರಕ್ಷಿಸಲು ನೆರವಾಗುವಂತಹ ಹಲವಾರು ತಾಂತ್ರಿಕ ಸೌಲಭ್ಯಗಳು ಈ ಕಾರಿನಲ್ಲಿವೆ.

Most Read Articles

Kannada
English summary
Vladimir putin survived in assassination attempt russian presidents limousine safety features
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X