ಅತ್ಯಾಕರ್ಷಕ ಮಿನಿ ಕ್ಯಾಂಪರ್ ಆಗಿ ಬದಲಾದ ಫೋಕ್ಸ್‌ವ್ಯಾಗನ್ ಬೀಟಲ್

ಪ್ರಪಂಚದಾದ್ಯಂತ ಕರೋನಾ ವೈರಸ್ ಆರ್ಭಟ ಮುಂದುವರೆದಿದೆ. ಈ ಸಮಯದಲ್ಲಿ ಪ್ರವಾಸ ಕೈಗೊಳ್ಳುವುದು ಅಪಾಯವನ್ನು ಮೈ ಮೇಲೆ ಎಳೆದು ಕೊಂಡಂತೆ. ರಜಾ ದಿನಗಳಲ್ಲಿ ಪ್ರವಾಸ ಕೈಗೊಳ್ಳುವವರನ್ನು ಮೋಟರ್‌ಹೋಮ್‌ಗಳು ಸಂರಕ್ಷಿಸುತ್ತವೆ.

ಅತ್ಯಾಕರ್ಷಕ ಮಿನಿ ಕ್ಯಾಂಪರ್ ಆಗಿ ಬದಲಾದ ಫೋಕ್ಸ್‌ವ್ಯಾಗನ್ ಬೀಟಲ್

ಬಹುತೇಕ ಮೋಟರ್‌ಹೋಮ್‌ಗಳು ದೊಡ್ಡದಾಗಿರುತ್ತವೆ. ಇವುಗಳ ಬೆಲೆ ದುಬಾರಿ ಜೊತೆಗೆ ನಿರ್ವಹಣೆಯು ಕಷ್ಟ. ಮಿನಿ ಕ್ಯಾಂಪರ್‌ಗಳು ಮೋಟರ್‌ಹೋಮ್‌ಗಳಿಗೆ ಪರ್ಯಾಯವಾಗಿವೆ. ಇತ್ತೀಚಿಗೆ ಆನ್‌ಲೈನ್ ಹರಾಜು ವೆಬ್‌ಸೈಟ್ ಆದ ಮೆಕ್ಕಾ ಹಳದಿ ಬಣ್ಣದ ಫೋಕ್ಸ್‌ವ್ಯಾಗನ್ ಸೂಪರ್ ಬಗ್ಗರ್ ಕ್ಯಾಂಪರ್ ಅನ್ನು ಮಾರಾಟ ಮಾಡಿತು.

ಅತ್ಯಾಕರ್ಷಕ ಮಿನಿ ಕ್ಯಾಂಪರ್ ಆಗಿ ಬದಲಾದ ಫೋಕ್ಸ್‌ವ್ಯಾಗನ್ ಬೀಟಲ್

1969ರ ಕ್ಲಾಸಿಕ್ ಬೀಟಲ್ ಕಾರ್ ಅನ್ನು ಮಿನಿ ಕ್ಯಾಂಪರ್‌ ಆಗಿ ಪರಿವರ್ತಿಸಲಾಗಿದೆ. ಇದನ್ನು 19,800 ಡಾಲರ್ ವೆಚ್ಚದಲ್ಲಿ ನಿರ್ಮಿಸಲಾಗಿದೆ. 1977ರಲ್ಲಿ ಕ್ಯಾಲಿಫೋರ್ನಿಯಾ ಮೂಲದ ಕಂಪನಿಯೊಂದು ಕ್ಲಾಸಿಕ್ ಬೀಟಲ್ ಅನ್ನು ಸಣ್ಣ ಕ್ಯಾಂಪರ್ ಆಗಿ ಪರಿವರ್ತಿಸಲು ಜಾಹೀರಾತು ನೀಡಿತ್ತು.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಅತ್ಯಾಕರ್ಷಕ ಮಿನಿ ಕ್ಯಾಂಪರ್ ಆಗಿ ಬದಲಾದ ಫೋಕ್ಸ್‌ವ್ಯಾಗನ್ ಬೀಟಲ್

ಆಗ ಈ ಕಾರಿನ ಮಾಲೀಕರು ಸಣ್ಣ ಬೀಟಲ್ ಅನ್ನು ಮಾರ್ಪಡಿಸಿದ್ದರು ಎಂದು ಕ್ಸೈಲೋಡ್ರೋಮ್ ವರದಿ ಮಾಡಿದೆ. ಈ ಕಾರಿನಲ್ಲಿರುವ ಹುಡ್, ಈ ಕಾರ್ ಅನ್ನು ಫೋಕ್ಸ್‌ವ್ಯಾಗನ್ ಬೀಟಲ್ ಎಂಬುದನ್ನು ಬಹಿರಂಗಪಡಿಸುತ್ತದೆ.

ಅತ್ಯಾಕರ್ಷಕ ಮಿನಿ ಕ್ಯಾಂಪರ್ ಆಗಿ ಬದಲಾದ ಫೋಕ್ಸ್‌ವ್ಯಾಗನ್ ಬೀಟಲ್

ಈ ಕ್ಯಾಂಪ್'ನ ಒಳಭಾಗವು 1970ರ ಶೈಲಿಯಲ್ಲಿದೆ. ಇದರಲ್ಲಿ ಬ್ರೌನ್, ಬೀಜ್ ಕಾರ್ಪೆಟ್, ಹಳೆಯ ಶೈಲಿಯ ಕರ್ಟೇನ್'ಗಳನ್ನು ಒಳಗೊಂಡಿದೆ. ವಾಲ್'ಗಳು ವುಡ್ ಪ್ಯಾನೆಲ್ ಹಾಗೂ ಸೀಲಿಂಗ್'ನಲ್ಲಿ ಸಣ್ಣ ಓಪನಿಂಗ್ ಹೊಂದಿದ್ದು, ಕಡಿಮೆ ವೆಂಟಿಲೇಷನ್ ಒದಗಿಸುತ್ತದೆ.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಅತ್ಯಾಕರ್ಷಕ ಮಿನಿ ಕ್ಯಾಂಪರ್ ಆಗಿ ಬದಲಾದ ಫೋಕ್ಸ್‌ವ್ಯಾಗನ್ ಬೀಟಲ್

ಈ ಕ್ಯಾಂಪರ್ ಕ್ಯಾಬಿನ್ ಇಬ್ಬರು ಜನರಿಗೆ ಮಾತ್ರ ಸ್ಥಳಾವಕಾಶ, ಸಣ್ಣ ಸಿಂಕ್ ಹಾಗೂ ಕುಕ್‌ಟಾಪ್ ಅನ್ನು ಒಳಗೊಂಡಿದೆ. ಎಕ್ಸ್'ಟರ್ನಲ್ ಸ್ಟವ್ ಹಾಗೂ ಪ್ರೊಪೇನ್ ಸೆಟಪ್ ಸಹ ಹೊಂದಿದೆ.

ಅತ್ಯಾಕರ್ಷಕ ಮಿನಿ ಕ್ಯಾಂಪರ್ ಆಗಿ ಬದಲಾದ ಫೋಕ್ಸ್‌ವ್ಯಾಗನ್ ಬೀಟಲ್

ಓಲ್ಡ್ ಸ್ಕೂಲ್ ಕ್ಯಾಂಪರ್ ಫ್ಯಾನ್ಸಿ ಇನ್ಫೋಟೇನ್ಮೆಂಟ್ ಸಿಸ್ಟಂ ಹೊಂದಿಲ್ಲ. ಆದರೆ ಪ್ರವಾಸದ ಅವಧಿಯಲ್ಲಿ ಮನರಂಜನೆ ಒದಗಿಸಲು ಎಎಂ/ ಎಫ್‌ಎಂ ರೇಡಿಯೊವನ್ನು ನೀಡಲಾಗಿದೆ.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಅತ್ಯಾಕರ್ಷಕ ಮಿನಿ ಕ್ಯಾಂಪರ್ ಆಗಿ ಬದಲಾದ ಫೋಕ್ಸ್‌ವ್ಯಾಗನ್ ಬೀಟಲ್

ಈ ಫೋಕ್ಸ್‌ವ್ಯಾಗನ್ ಸೂಪರ್ ಬಗ್ಗರ್ ಕ್ಯಾಂಪರ್'ನಲ್ಲಿ 1.6 ಲೀಟರ್ ಫ್ಲಾಟ್ ಫಾರ್ 1600 ಸಿಸಿ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 1973ರ ಸೂಪರ್ ಬೀಟಲ್‌ನೊಂದಿಗೆ ಬಂದಿದೆ.

ಅತ್ಯಾಕರ್ಷಕ ಮಿನಿ ಕ್ಯಾಂಪರ್ ಆಗಿ ಬದಲಾದ ಫೋಕ್ಸ್‌ವ್ಯಾಗನ್ ಬೀಟಲ್

ಈ ಎಂಜಿನ್ ನಾಲ್ಕು-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಮೂಲಕ ವ್ಹೀಲ್'ಗಳಿಗೆ ಪವರ್ ಕಳುಹಿಸುತ್ತದೆ. ಈ ಕ್ಯಾಂಪರ್‌ನಲ್ಲಿ ಹೆಚ್ಚುವರಿ ತೂಕವನ್ನು ಬೆಂಬಲಿಸಲು ಮಾಡಿಫೈ ಮಾಡಲಾದ ಸಸ್ಪೆಂಷನ್ ಅಳವಡಿಸಲಾಗಿದೆ.

MOST READ:ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಅತ್ಯಾಕರ್ಷಕ ಮಿನಿ ಕ್ಯಾಂಪರ್ ಆಗಿ ಬದಲಾದ ಫೋಕ್ಸ್‌ವ್ಯಾಗನ್ ಬೀಟಲ್

ಸ್ಥಿರತೆಗಾಗಿ ವಿಶಾಲವಾದ ರೇರ್ ವ್ಹೀಲ್'ಗಳನ್ನು ಹೊಂದಿರುವ ಹೊಸ ಕಾಂಟಿನೆಂಟಲ್ ಟಯರ್‌ಗಳನ್ನು ಈ ಕ್ಯಾಂಪರ್‌ನಲ್ಲಿ ಅಳವಡಿಸಲಾಗಿದೆ. ಈ ಅಪರೂಪದ ಮಿನಿ ಮೋಟರ್‌ಹೋಮ್ ಅನ್ನು 1977ರಲ್ಲಿ ಮೆಕ್ಯಾನಿಕ್ಸ್ ಇಲ್ಲಸ್ಟ್ರೇಟೆಡ್ ಮ್ಯಾಗಜೀನ್ ಹಾಗೂ ಸ್ಥಳೀಯ ಫ್ರೀಪೋರ್ಟ್ ಇಲಿನಾಯ್ಸ್ ಪತ್ರಿಕೆ ಸೇರಿದಂತೆ ವಿವಿಧ ನಿಯತಕಾಲಿಕೆಗಳಲ್ಲಿ ಪ್ರದರ್ಶಿಸಲಾಗಿತ್ತು.

Most Read Articles

Kannada
English summary
Volkswagen Beetle converted into a attractive mini camper. Read in Kannada.
Story first published: Thursday, May 20, 2021, 12:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X