ಈ ಸಣ್ಣ ಮಾದರಿ ಕಾರಿನ ಬೆಲೆ 10 ಕೋಟಿ ರೂಪಾಯಿ

ಪ್ರಸಿದ್ಧ ಕಾರು ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ಕಂಪನಿಯು ಹಾಟ್ ವ್ಹೀಲ್ಸ್ ಸಹಯೋಗದೊಂದಿಗೆ ತಿಳಿ ಕೆಂಪು ಬೀಚ್ ಬಾಂಬ್ ಸಣ್ಣ ಕಾರು ಮಾದರಿಯನ್ನು ತಯಾರಿಸಿತ್ತು. 1969ರಲ್ಲಿ ನಿರ್ಮಿಸಲಾದ ಈ ಸಣ್ಣ ಮಾದರಿಯ ಕಾರು ಬಹಳ ಅಪರೂಪದ ವಸ್ತುವಾಗಿದ್ದು, 1:64 ಅಳತೆಯನ್ನು ಹೊಂದಿದೆ.

ಈ ಸಣ್ಣ ಮಾದರಿ ಕಾರಿನ ಬೆಲೆ 10 ಕೋಟಿ ರೂಪಾಯಿ

ಈ ಸಣ್ಣ ಕಾರು ಈಗ ಅತ್ಯಂತ ದುಬಾರಿ ಸಣ್ಣ ಮಾದರಿ ಕಾರ್ ಆಗಿ ಮಾರ್ಪಟ್ಟಿದೆ. ಈ ಸಣ್ಣ ಮಾದರಿಯ ಕಾರಿನ ಮೌಲ್ಯ 1,50,000 ಅಮೆರಿಕನ್ ಡಾಲರ್ ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ಸುಮಾರು 10 ಕೋಟಿಗಳಾಗಿದೆ.

ಈ ಸಣ್ಣ ಮಾದರಿ ಕಾರಿನ ಬೆಲೆ 10 ಕೋಟಿ ರೂಪಾಯಿ

ಫೋಕ್ಸ್‌ವ್ಯಾಗನ್ ಹಾಗೂ ಹಾಟ್ ವ್ಹೀಲ್ಸ್ ಜಂಟಿಯಾಗಿ ಈ ರೀತಿಯ ವಿವಿಧ ಪ್ರಮಾಣದ ಮಾದರಿಗಳನ್ನು ಉತ್ಪಾದಿಸಿವೆ. ರೇರ್ ವೀವ್ ಮೂಲಕ ಎರಡು ಸರ್ಫ್‌ಬೋರ್ಡ್‌ಗಳನ್ನು ಹೊಂದಿರುವ ಕಾರಣಕ್ಕೆ ಕೇವಲ ಎರಡು ಸ್ಕೇಲ್ ಮಾದರಿಗಳನ್ನು ಮಾತ್ರ ವಿನ್ಯಾಸಗೊಳಿಸಲಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಈ ಸಣ್ಣ ಮಾದರಿ ಕಾರಿನ ಬೆಲೆ 10 ಕೋಟಿ ರೂಪಾಯಿ

ಕೆಲವು ಕಾರಣಗಳಿಂದಾಗಿ ಈ ಮಾದರಿಗಳನ್ನು ಮಾರಾಟ ಮಾಡುತ್ತಿಲ್ಲ. ಕಂಪನಿಯ ಉದ್ಯೋಗಿಗಳು ಮಾತ್ರ ಇವುಗಳನ್ನು ಬಳಸುತ್ತಿದ್ದಾರೆ. ಬದಲಾದ ಸನ್ನಿವೇಶದಲ್ಲಿ ಫೋಕ್ಸ್‌ವ್ಯಾಗನ್ ಕಂಪನಿಯು ಈ ಮಾದರಿಯನ್ನು ಮರುವಿನ್ಯಾಸಗೊಳಿಸಿ ಹೊಸ ಸ್ಟಿಕ್ಕರ್‌ಗಳೊಂದಿಗೆ ಮಾರಾಟ ಮಾಡಲು ಆರಂಭಿಸಿತು.

ಈ ಸಣ್ಣ ಮಾದರಿ ಕಾರಿನ ಬೆಲೆ 10 ಕೋಟಿ ರೂಪಾಯಿ

ಅದೇ ರೀತಿಯ ಹೊಸ ಕಾರುಗಳನ್ನು ಉತ್ಪಾದಿಸಿ ಮಾರಾಟ ಮಾಡಲಾಯಿತು. ಹೊಸ ಕಾರುಗಳನ್ನು ನೇರಳೆ, ಹಸಿರು, ಕೆಂಪು, ತಿಳಿ ನೀಲಿ ಹಾಗೂ ಚಿನ್ನದ ಬಣ್ಣಗಳಲ್ಲಿ ತಯಾರಿಸಿ ಮಾರಾಟ ಮಾಡಲಾಯಿತು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಈ ಸಣ್ಣ ಮಾದರಿ ಕಾರಿನ ಬೆಲೆ 10 ಕೋಟಿ ರೂಪಾಯಿ

ಪಿಂಕ್ ಬಣ್ಣದಲ್ಲಿ ಮಾರಾಟ ಮಾಡದ ಕಾರಣಕ್ಕೆ ಆ ವೇಳೆ ಈ ಮಾದರಿಯು ಅಪರೂಪದ ಮಾದರಿಯಾಯಿತು. ಇದರಿಂದಾಗಿ ಅದರ ಬೆಲೆ ಈಗ ಹಲವಾರು ಕೋಟಿಗಳಷ್ಟು ಹೆಚ್ಚಾಗಿದೆ. ಈ ಮಾದರಿಯ ಕಾರು ಸದ್ಯಕ್ಕೆ ಮೇರಿಲ್ಯಾಂಡ್‌ನ ಬ್ರೂಸ್ ಪ್ಯಾಸ್ಕಲ್ ಅವರ ಒಡೆತನದಲ್ಲಿದೆ.

ಈ ಸಣ್ಣ ಮಾದರಿ ಕಾರಿನ ಬೆಲೆ 10 ಕೋಟಿ ರೂಪಾಯಿ

ಪ್ಯಾಸ್ಕಲ್ ಈ ವಾಹನದ ಜೊತೆಗೆ 7,000ಕ್ಕೂ ಹೆಚ್ಚು ಹಾಟ್ ವ್ಹೀಲ್ ಮಾದರಿಗಳನ್ನು ಹೊಂದಿದ್ದಾರೆ. ಅವುಗಳಲ್ಲಿ ಕೆಲವನ್ನು ತಮ್ಮ ಸ್ನೇಹಿತರಿಗೆ ಮಾರಾಟ ಮಾಡಿದ್ದಾರೆ ಎಂದು ವರದಿಗಳಾಗಿವೆ. ಇವುಗಳ ಮೌಲ್ಯ ಹಲವಾರು ಕೋಟಿಗಳು ಎಂದು ಹೇಳಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಈ ಸಣ್ಣ ಮಾದರಿ ಕಾರಿನ ಬೆಲೆ 10 ಕೋಟಿ ರೂಪಾಯಿ

ಫೋಕ್ಸ್‌ವ್ಯಾಗನ್ ಸದ್ಯಕ್ಕೆ ಹಲವಾರು ಸರಣಿಯ ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಕಂಪನಿಯು ಇತ್ತೀಚೆಗೆ 42 ಹಾಟ್ ವ್ಹೀಲ್ ಮಾದರಿಗಳನ್ನು ಬಿಡುಗಡೆಗೊಳಿಸಿದೆ. ಆದರೆ ಅವುಗಳಲ್ಲಿ ಯಾವುದೇ ಮಾದರಿಯು ಬೀಚ್ ಬಾಂಬ್ ಮಾದರಿಯಂತೆ ಜನಪ್ರಿಯವಾಗಲಿಲ್ಲ.

Most Read Articles

Kannada
English summary
Volkswagen prototype car costs 150000 dollars. Read in Kannada.
Story first published: Tuesday, December 8, 2020, 18:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X