ಚಿತ್ರಕಲೆಗೆ ಪ್ರೋತ್ಸಾಹ; ವೋಲ್ವೋ ವಿಶಿಷ್ಟ ಕಲಾಕೃತಿ
ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಕಲೆಗೆ ಪ್ರೋತ್ಸಾಹ ಕೊಟ್ಟು ಬಂದಿರುವ ಜಗತ್ತಿನ ಹೆಸರಾಂತ ವಾಹನ ತಯಾರಕ ಸಂಸ್ಥೆಯಾಗಿರುವ ವೋಲ್ವೋ ಕಾರು ಸ್ವಿಜರ್ಲೆಂಡ್, ಆರ್ಟ್ ಸೆಷನ್ ಹಮ್ಮಿಕೊಳ್ಳುವ ಮೂಲಕ ಆಟೋಮೊಬೈಲ್ ಜಗತ್ತಿನಲ್ಲಿ ಮತ್ತೆ ಗುರುತಿಸಿಕೊಂಡಿದೆ.
ಇಡೀ ಯುರೋಪ್ ಖಂಡದಲ್ಲೇ ಅತ್ಯಂತ ಹೆಚ್ಚು ಜನನಿಬಿಡ ಪ್ರದೇಶಗಳಲ್ಲಿ ಒಂದಾಗಿರುವ ಸ್ವಿಜರ್ಲೆಂಡ್‌ನ ಜುರಿಕ್ ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಈ ಸ್ಪರ್ಧೆ ಏರ್ಪಡಿಸಲಾಗಿತ್ತು. ಇಲ್ಲಿಗೆ ವಿವಿಧ ದೇಶಗಳಿಂದ ಆಗಮಿಸಿದ ಕಲಾವಿದರಿಗೆ ವೋಲ್ವೋ ಕಾರುಗಳನ್ನು ಆಧರಿಸಿ ಕಲೆ ರಚಿಸಲು ಅವಕಾಶ ಮಾಡಿಕೊಡಲಾಗಿತು. ಮೊದಲೆರೆಡು ವರ್ಷಗಳಲ್ಲಿ ಸ್ಥಳೀಯ ಕಲಾವಿದರು ಪಾಲ್ಗೊಂಡಿದ್ದರೆ ಈ ಬಾರಿ ವಿವಿಧ ದೇಶಗಳ ತಂಡಗಳು ಸ್ಪರ್ಧೆಗೆ ಆಗಮಿಸಿದ್ದವು.
ಈ ಬಾರಿಯ ಆರ್ಟ್ ಸೆಷನ್‌ನಲ್ಲಿ ವೋಲ್ವೋ ಎಕ್ಸ್‌ಸಿ60 ಕ್ರಾಸೋವರ್ ಕೇಂದ್ರ ಬಿಂದುವಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಾಳುಗಳು ತಮ್ಮದೇ ಆದ ಶೈಲಿಯಲ್ಲಿ ವೋಲ್ವೋ ಕಾರಿಗೆ ವಿಶಿಷ್ಟ ವಿನ್ಯಾಸ ಪ್ರದಾನ ಮಾಡುವಲ್ಲಿ ಯಶಸ್ವಿಯಾಗಿದ್ದರು. ಕೇವಲ ನಿಗದಿತ ಅವಧಿಗೆ ಮಾತ್ರ ಚಿತ್ರ ಪ್ರದರ್ಶನವಾಗಿತ್ತು. ಇದಾದ ಮೇಲೆ ಮುಂದಿನ ಸ್ಪರ್ಧಾಳುಗಳು ಅದರ ಮೇಲೆ ತಮ್ಮ ಕೈಚಳಕ ಪ್ರದರ್ಶಿಸುತ್ತಿದ್ದರು.

ಜರ್ಮನ್ ತಲಹದಿಯ ಚೀನಾ ಕಲಾವಿದ ಡ್ಯಾನಿಯಲ್ ಮೆನ್

ಜರ್ಮನ್ ತಲಹದಿಯ ಚೀನಾ ಕಲಾವಿದ ಡ್ಯಾನಿಯಲ್ ಮೆನ್

ಕೆನಡಾದ ಕಲಾವಿದರಾದ ಲೆಕ್ಸ್ ಹಾಗೂ ಇವೋಕ್ ಚಿತ್ರಣ ಹೀಗಿದೆ ನೋಡಿ

ಕೆನಡಾದ ಕಲಾವಿದರಾದ ಲೆಕ್ಸ್ ಹಾಗೂ ಇವೋಕ್ ಚಿತ್ರಣ ಹೀಗಿದೆ ನೋಡಿ

ಸ್ವಿಜರ್ಲೆಂಡ್ ಗ್ರಾಫಿಕ್ ಡಿಸೈನರ್ Blanda Eggenschwiler ಮೋಡಿ

ಸ್ವಿಜರ್ಲೆಂಡ್ ಗ್ರಾಫಿಕ್ ಡಿಸೈನರ್ Blanda Eggenschwiler ಮೋಡಿ

ಪೋಲೆಂಡ್‌ನ ಸ್ಟ್ರೀಟ್ ಆರ್ಟಿಸ್ಟ್ ಎಟಮ್ ಕ್ರೂ ಚಿತ್ರಣ

ಪೋಲೆಂಡ್‌ನ ಸ್ಟ್ರೀಟ್ ಆರ್ಟಿಸ್ಟ್ ಎಟಮ್ ಕ್ರೂ ಚಿತ್ರಣ

ಫ್ರಾನ್ಸ್-ಅಮೆರಿಕದ ಜೋಡಿ duo Koralie & Supakitch

ಫ್ರಾನ್ಸ್-ಅಮೆರಿಕದ ಜೋಡಿ duo Koralie & Supakitch

ಜರ್ಮನಿಯ ತ್ರಿಡಿ ಕಲಾವಿದ ಡೈಯಾಮ್

ಜರ್ಮನಿಯ ತ್ರಿಡಿ ಕಲಾವಿದ ಡೈಯಾಮ್

Click it and Unblock the Notifications