ಅದೃಷ್ಟವಂತ: ಮೈಮೇಲೆ ಹೋದ ವೋಲ್ವೋ ಕಾರು, ಬದುಕುಳಿದ ಬಾಲಕ: ಈ ಫೀಚರ್ ಇದ್ದರೆ ಏನು ಆಗುತ್ತಿರಲಿಲ್ಲ!
ಮನೆಯ ಮುಂದಿನ ರಸ್ತೆಯಲ್ಲಿ ಮಕ್ಕಳನ್ನು ಆಟವಾಡಲು ಬಿಡುವುದು ಕೆಲವೊಮ್ಮೆ ದೊಡ್ಡಮಟ್ಟದ ಅಪಾಯಕ್ಕೆ ಕಾರಣವಾಗಬಹುದು. ಈ ವಿಚಾರದಲ್ಲಿ ಪೋಷಕರು ತೀರಾ ಎಚ್ಚರವಹಿಸಬೇಕಿರುವುದು ಅನಿವಾರ್ಯವಾಗಿದೆ. ಸಣ್ಣ ರಸ್ತೆಯಲ್ಲಿ ವಾಹನ ಸವಾರರು ಕೂಡ ಜಾಗರೂತೆಯಿಂದ ಚಾಲನೆ ಮಾಡಬೇಕು. ಆಗೊಮ್ಮೆ ನಿರ್ಲಕ್ಷ್ಯ ತೋರಿದರೆ ಏನಾಗುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.
ಗುಜರಾತ್‌ನ ಸೂರತ್‌ನ ಕಟರ್ಗಾಮ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಬೆಚ್ಚಿಬೀಳುವ ದೃಶ್ಯಗಳು ಸೆರೆಯಾಗಿವೆ. ಮನೆಯ ಮುಂಭಾಗದ ಪುಟ್ಟ ರಸ್ತೆಯಲ್ಲಿ ಆಟವಾಡುತ್ತಿದ್ದ 7 ವರ್ಷದ ಬಾಲಕನ ಮೇಲೆ ವೋಲ್ವೋ ಎಸ್90 (Volvo S90) ಕಾರು ಹಾದುಹೋಗಿದೆ. ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳಾಗಿ ಆ ಮಗು ಪ್ರಾಣಾಪಾಯದಿಂದ ಪಾರಾಗಿದೆ ಎಂದು ವರದಿಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವೋಲ್ವೋ ಕಾರಿನ ಬಾನೆಟ್ ಹೆಚ್ಚು ಉದ್ದವಿರುವ ಕಾರಣ, ಚಾಲಕನಿಗೆ ರಸ್ತೆಯಲ್ಲಿ ಬಾಲಕ ಆಟವಾಡುತ್ತಿರುವುದು ಕಂಡಿಲ್ಲ ಎನ್ನಲಾಗಿದೆ. ಆದರೆ, ವೋಲ್ವೋ ಸೆಡಾನ್ (Volvo Sedan) ಉತ್ತಮ ಗ್ರೌಂಡ್ ಕ್ಲಿಯರೆನ್ಸ್ (Ground Clearance) ಹೊಂದಿರುವುದರಿಂದ ಮಗುವಿಗೆ ಪ್ರಾಣಾಪಾಯವಾಗಿಲ್ಲ. ತಲೆ ಹಾಗೂ ಮುಖಕ್ಕೆ ಗಾಯಗಳಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇಂತಹ ಘಟನೆಗಳನ್ನು ತಪ್ಪಿಸಲು ವೋಲ್ವೋ ಎಸ್90 ಕಾರು ಬ್ಲೈಂಡ್‌ಸ್ಪಾಟ್ ಮಾನಿಟರಿಂಗ್ ಸಿಸ್ಟಮ್ (Blindspot Monitoring System)ನಂತಹ ವೈಶಿಷ್ಟ್ಯವನ್ನು ಹೊಂದಿದೆ. ಇದು ಕಾರಿನ ಹಿಂಭಾಗದಲ್ಲಿ ಮಾತ್ರ ಇದ್ದು, ರಸ್ತೆಯಲ್ಲಿ ಚಾಲಕನಿಗೆ ಕಾಣದಿರುವ ವಾಹನ ಸೇರಿದಂತೆ ಇನ್ನಿತರೇ ಅಂಶಗಳನ್ನು ಪತ್ತೆ ಮಾಡಿ, ಆತನನ್ನು ಎಚ್ಚರಿಸುತ್ತದೆ. ಆದರೆ, ಮುಂಭಾಗದಲ್ಲಿ ಈ ಸಿಸ್ಟಮ್ ಇಲ್ಲ. ಇದರಿಂದಾಗಿ ಚಾಲಕರು ಜಾಗರೂಕತೆಯಿಂದ ರಸ್ತೆಯ ಮೇಲೆ ಹೆಚ್ಚಿನ ಗಮನವಿಡಬೇಕು.

ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೇ, ಈ ಕಾರಿನಲ್ಲಿ ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ವೈಶಿಷ್ಟ್ಯವೂ ಇಲ್ಲ. ಈ ಫೀಚರ್ಸ್ ಒಳಗೊಂಡಿದ್ದರೆ ಈ ಘಟನೆಯೇ ನಡೆಯುತ್ತಿರಲಿಲ್ಲ. ಎಡಿಎಎಸ್ 'ಡ್ಯುಯಲ್ ಸೆನ್ಸರ್ ಬ್ರೇಕ್ ಸಪೋರ್ಟ್' ಎಂಬ ಅಂಶವನ್ನು ಹೊಂದಿರುತ್ತದೆ. ಇದು ಕ್ಯಾಮೆರಾ ಮತ್ತು ಲೇಸರ್ ಸೆನ್ಸರ್ ಬಳಸಿ, ಸುತ್ತಲು ವಾಹನ ಹಾಗೂ ಪಾದಚಾರಿಗಳನ್ನು ಪತ್ತೆ ಹಚ್ಚಲು ನೇರವಾಗುತ್ತದೆ.
ಯಾವುದೇ ಕಾರುಗಳಲ್ಲಿ ಭರಪೂರ ಸುರಕ್ಷತಾ ವೈಶಿಷ್ಟ್ಯಗಳಿದ್ದರೆ, ಇಂತಹ ಘಟನೆಗಳಿಗೆ ಕಡಿವಾಣ ಹಾಕಬಹುದು. ಈ ರೀತಿಯ ಫೀಚರ್ಸ್ ಇಲ್ಲದಿರುವಾಗ ಚಾಲಕರು, ವಾಹನ ಚಲಾಯಿಸುವಾಗ ತೀವ್ರ ಕಟ್ಟೆಚ್ಚರ ವಹಿಸಬೇಕು. ಅದರಲ್ಲೂ ಸಣ್ಣ ರಸ್ತೆಯಲ್ಲಿ ನಿಧಾನವಾಗಿ ವಾಹನಗಳನ್ನು ಓಡಿಸಬೇಕು. ತಮ್ಮ ಗಮನವನ್ನು ಬೇರೆಡೆಗೆ ಹರಿಸದೇ ಚಾಲನೆಯ ಮೇಲೆ ಕೇಂದ್ರೀಕರಿಸಬೇಕು.
ಗುಜರಾತ್‌ನ ಸೂರತ್‌ನಲ್ಲಿ ನಡೆದ ಈ ಘಟನೆಯಲ್ಲಿ ಚಾಲಕನ ಮೇಲೆ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆಯೇ, ಇಲ್ಲವೇ ಎಂಬುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ. ತಮ್ಮ ಮನೆಯ ಮುಂದಿನ ರಸ್ತೆಯಲ್ಲಿ ಒಂದಷ್ಟು ವಾಹನ ಸಂಚಾರವಿದ್ದರೂ ಅಲ್ಲಿ ಮಕ್ಕಳನ್ನು ಆಟವಾಡಲು ಹೋಗದಂತೆ ಪೋಷಕರು ಎಚ್ಚರವಹಿಸಬೇಕು. ಎಲ್ಲ ಸಮಯವೂ ಒಂದೇ ರೀತಿಯಲ್ಲಿ ಇರುವುದಿಲ್ಲ ಎಂಬುದುದನ್ನು ನೆನಪಿನಲ್ಲಿಡಬೇಕು. ಆದರೆ, ಈ ಘಟನೆಯಲ್ಲಿ ಬಾಲಕ ಪವಾಡಸದೃಶವಾಗಿ ಪಾರಾಗಿರುವುದು ಮಾತ್ರ ಸುಳ್ಳಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications