ವಿಶಿಷ್ಟ ಬಗೆಯ ಸಿನಿಮಾ ಪ್ರದರ್ಶನಕ್ಕೆ ಮುಂದಾದ ವಿಶ್ವದ ದೊಡ್ಡ ಶಾಪಿಂಗ್ ಮಾಲ್
ಕರೋನಾ ವೈರಸ್ ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿಯೂ ಹೆಚ್ಚು ಪರಿಣಾಮವನ್ನುಂಟು ಮಾಡಿದೆ. ವಿದೇಶಗಳಲ್ಲಿಯೂ ಸಹ ಮಾಲ್ ಹಾಗೂ ಥಿಯೇಟರ್‌ಗಳನ್ನು ಬಂದ್ ಮಾಡಲಾಗಿದೆ. ಚಿತ್ರಮಂದಿರಗಳು ಬಂದ್ ಆದ ಕಾರಣಕ್ಕೆ ನಿರಾಶೆಗೊಂಡಿದ್ದ ದುಬೈ ಜನರಿಗೆ ಸಿಹಿ ಸುದ್ದಿಯೊಂದು ಹೊರ ಬಿದ್ದಿದೆ.

ದುಬೈನ ಚಿತ್ರ ಪ್ರೇಮಿಗಳು ಶೀಘ್ರದಲ್ಲೇ ವಿಶ್ವದ ಅತಿದೊಡ್ಡ ಶಾಪಿಂಗ್ ಮಾಲ್ ರೂಫ್ ಮೇಲೆ ಡ್ರೈವ್-ಇನ್ ಸಿನೆಮಾ ನೋಡಬಹುದು. ಜನರು ತಮ್ಮ ಕಾರಿನಲ್ಲಿಯೇ ಕುಳಿತು ಸಿನಿಮಾ ವೀಕ್ಷಿಸ ಬಹುದು. ಇದರಿಂದ ಸಾಮಾಜಿಕ ಅಂತರವನ್ನು ಪೂರ್ಣ ಪ್ರಮಾಣದಲ್ಲಿ ಕಾಯ್ದುಕೊಳ್ಳಲಾಗುವುದು.

ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಯುನೈಟೆಡ್ ಅರಬ್ ಎಮಿರೇಟ್ಸ್ ಹೊರಡಿಸಿರುವ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು, ಕಾರಿನಲ್ಲಿ ಇಬ್ಬರು ಮಾತ್ರ ತೆರೆದ ಸ್ಥಳಕ್ಕೆ ಹೋಗಲು ಅವಕಾಶವಿರುತ್ತದೆ ಎಂದು ವೋಕ್ಸ್ ಸಿನೆಮಾ ಹೇಳಿದೆ.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಈ ತೆರೆದ ಸ್ಥಳವನ್ನು ಭಾನುವಾರಗಳಂದು ಮಾತ್ರ ತೆರೆಯಲಾಗುವುದು. ಒಂದು ಸಮಯಕ್ಕೆ 75 ಕಾರುಗಳನ್ನು ಮಾತ್ರ ಒಳಗೆ ಬಿಡಲಾಗುತ್ತದೆ. ಪಾಪ್‌ಕಾರ್ನ್, ಸ್ನ್ಯಾಕ್ಸ್, ಕೂಲ್ ಡ್ರಿಂಕ್ ಎಲ್ಲಾ ಸೇರಿ ಪ್ರತಿ ಕಾರಿಗೆ ಒಟ್ಟು 180 ದಿರ್ಹಾಮ್‌ಗಳನ್ನು ಅಂದರೆ 50 ಡಾಲರ್ ಶುಲ್ಕ ನಿಗದಿಪಡಿಸಲಾಗಿದೆ.

ಇಂದು ಡ್ರೈವ್-ಇನ್ ಸಿನೆಮಾದ ಪೂರ್ವ-ಆರಂಭಿಕ ಕಾರ್ಯಕ್ರಮವನ್ನು ಇಲ್ಲಿ ಆಯೋಜಿಸಲಾಗಿದೆ. ಈ ಬಗ್ಗೆ ಮಾತನಾಡಿದ ಕಾರ್ ಡ್ರೈವರ್ ಒಬ್ಬರು ನಾವು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತೇವೆ. ಇದೊಂದು ಒಳ್ಳೆಯ ಕ್ರಮವಾಗಿದೆ ಎಂದು ಹೇಳಿದರು.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ರಂಜಾನ್ ತಿಂಗಳು ಆರಂಭವಾಗಿ ಮೂರು ವಾರಗಳಾಗಿದೆ. ಈ ಕಾರಣದಿಂದಾಗಿ ವ್ಯಾಪಾರ, ಪ್ರವಾಸೋದ್ಯಮ ಕೇಂದ್ರಗಳನ್ನು ತೆರೆದು ಕರೋನಾ ವೈರಸ್ ಕಾರಣಕ್ಕೆ ಜಾರಿಗೊಳಿಸಲಾಗಿದ್ದ ಲಾಕ್‌ಡೌನ್ ಅನ್ನು ಸಡಿಲಗೊಳಿಸಲಾಗಿದೆ.

3 ರಿಂದ 12 ವರ್ಷ ವಯಸ್ಸಿನ ಮಕ್ಕಳು ಹಾಗೂ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಈ ಸ್ಥಳಗಳಿಗೆ ಭೇಟಿ ನೀಡುವುದನ್ನು ನಿಷೇಧಿಸಲಾಗಿದೆ. ಈ ಸಿನೆಮಾವನ್ನು ಮಾಲ್ ಆಫ್ ಎಮಿರೇಟ್ಸ್ ಆಫ್ ಮಜೀದ್ ಅಲ್ ಫತೈತಿಮ್ ರೂಫ್ ಮೇಲೆ ನಿರ್ಮಿಸಲಾಗಿದೆ.
ಸೂಚನೆ: ಈ ಚಿತ್ರಗಳನ್ನು ರೆಫರೆನ್ಸ್‌ಗಾಗಿ ಬಳಸಲಾಗಿದೆ.


Click it and Unblock the Notifications