ಚಾಲಕ ರಹಿತ ವಾಹನ ಪರೀಕ್ಷೆಗಾಗಿ ತಯಾರಾಗುತ್ತಿದೆ ಕೃತಕ ನಗರ

ಆಟೋಮೊಬೈಲ್ ಉದ್ಯಮದಲ್ಲಿ ಪ್ರತಿದಿನ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸಲಾಗುತ್ತದೆ. ಈ ತಂತ್ರಜ್ಞಾನಗಳು ಸುಲಭವಾದ ಹಾಗೂ ಆರಾಮದಾಯಕವಾದ ಪ್ರಯಾಣಕ್ಕೆ ನೆರವಾಗುತ್ತವೆ.

ಚಾಲಕ ರಹಿತ ವಾಹನ ಪರೀಕ್ಷೆಗಾಗಿ ತಯಾರಾಗುತ್ತಿದೆ ಕೃತಕ ನಗರ

ವಾಹನ ತಯಾರಕ ಕಂಪನಿಗಳು ಬಜೆಟ್ ಬೆಲೆಯ ಕಾರುಗಳಲ್ಲೂ ಸಹ ಹಲವಾರು ಫೀಚರ್ ಗಳನ್ನು ನೀಡುತ್ತಿವೆ. ಈಗ ವಿಶ್ವಾದ್ಯಂತವಿರುವ ಹಲವು ಕಂಪನಿಗಳು ಚಾಲಕರಹಿತ ವಾಹನಗಳನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ನಿರತವಾಗಿವೆ. ಈ ಪೈಕಿ ವೆಮೊ ಕಂಪನಿ ಮುಂಚೂಣಿಯಲ್ಲಿದೆ. ವೆಮೊ ಅಮೆರಿಕಾ ಮೂಲದ ಕಂಪನಿಯಾಗಿದೆ.

ಚಾಲಕ ರಹಿತ ವಾಹನ ಪರೀಕ್ಷೆಗಾಗಿ ತಯಾರಾಗುತ್ತಿದೆ ಕೃತಕ ನಗರ

ನಮಗೆಲ್ಲರಿಗೂ ಗೂಗಲ್ ಕಂಪನಿಯ ಬಗ್ಗೆ ತಿಳಿದಿದೆ. ಗೂಗಲ್, ಆಲ್ಫಾಬೆಟ್ ಕಂಪನಿಯ ಮಾತೃ ಸಂಸ್ಥೆಯಾಗಿದೆ. ಆಲ್ಫಾಬೆಟ್ ಮಾತ್ರವಲ್ಲದೆ ಗೂಗಲ್ ಕಂಪನಿಯಡಿಯಲ್ಲಿ ಹಲವಾರು ಅಂಗಸಂಸ್ಥೆಗಳು ಕಾರ್ಯನಿರ್ವಹಿಸುತ್ತವೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಚಾಲಕ ರಹಿತ ವಾಹನ ಪರೀಕ್ಷೆಗಾಗಿ ತಯಾರಾಗುತ್ತಿದೆ ಕೃತಕ ನಗರ

ಇವುಗಳಲ್ಲಿ ವೆಮೊ ಸಹ ಒಂದು. ವೆಮೊ ಸ್ವಾಯತ್ತ ಚಾಲನಾ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ. ವೆಮೊ ಕಂಪನಿಯು ಈಗ ಕೃತಕ ನಗರವನ್ನು ರಚಿಸುವ ಕೆಲಸವನ್ನು ಮಾಡುತ್ತಿದೆ. ಈ ಕೃತಕ ನಗರವನ್ನು ಸ್ವಾಯತ್ತ ವಾಹನಗಳನ್ನು ಪರೀಕ್ಷಿಸುವ ಸಲುವಾಗಿಯೇ ರಚಿಸಲಾಗಿದೆ.

ಚಾಲಕ ರಹಿತ ವಾಹನ ಪರೀಕ್ಷೆಗಾಗಿ ತಯಾರಾಗುತ್ತಿದೆ ಕೃತಕ ನಗರ

ವೆಮೊ ಕಂಪನಿಯು ಈ ಕೃತಕ ನಗರವನ್ನು ಅಮೆರಿಕಾದ ಓಹಿಯೋ ರಾಜ್ಯದಲ್ಲಿ ನಿರ್ಮಿಸುತ್ತಿದೆ. ನೈಜ ನಗರಗಳಲ್ಲಿರುವ ಚಾಲನಾ ವಾತಾವರಣದ ರೀತಿಯಲ್ಲಿಯೇ ಈ ಕೃತಕ ನಗರವನ್ನು ಸಹ ನಿರ್ಮಿಸಲಾಗುತ್ತಿದೆ. ಚಾಲಕರಿಲ್ಲದೆ ಚಲಿಸುವ ಕಾರು ಹಾಗೂ ಟ್ರಕ್‌ಗಳನ್ನು ಪರೀಕ್ಷಿಸಲು ಈ ಕೃತಕ ನಗರವನ್ನು ಬಳಸಲಾಗುತ್ತದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಚಾಲಕ ರಹಿತ ವಾಹನ ಪರೀಕ್ಷೆಗಾಗಿ ತಯಾರಾಗುತ್ತಿದೆ ಕೃತಕ ನಗರ

ಇಲ್ಲಿ ಸ್ವಯಂಚಾಲಿತ ವಾಹನಗಳನ್ನು ವಿವಿಧ ರೀತಿಯ ನಗರಗಳ ಪರಿಸರದಲ್ಲಿ ಪರೀಕ್ಷಿಸಲಾಗುವುದು. ಹೆಚ್ಚು ಟ್ರಾಫಿಕ್ ಜಾಮ್ ಇರುವ ನಗರಗಳಲ್ಲಿ ಸ್ವಯಂಚಾಲಿತ ವಾಹನಗಳನ್ನು ಪರೀಕ್ಷಿಸಲು ಹಲವು ತೊಂದರೆಗಳು ಎದುರಾಗುತ್ತವೆ.

ಚಾಲಕ ರಹಿತ ವಾಹನ ಪರೀಕ್ಷೆಗಾಗಿ ತಯಾರಾಗುತ್ತಿದೆ ಕೃತಕ ನಗರ

ಈ ಕಾರಣಕ್ಕೆ ನೈಜ ನಗರಗಳ ರೀತಿಯಲ್ಲಿ ಕೃತಕ ನಗರಗಳನ್ನು ರಚಿಸಿ ಸ್ವಯಂಚಾಲಿತ ವಾಹನಗಳನ್ನು ಪರೀಕ್ಷಿಸಲು ವೆಮೊ ಕಂಪನಿಯು ಮುಂದಾಗಿದೆ. ಸಾರಿಗೆ ಸಂಶೋಧನಾ ಕೇಂದ್ರದ ಸಹಯೋಗದೊಂದಿಗೆ ಓಹಿಯೋ ರಾಜ್ಯದಲ್ಲಿ ಈ ಯೋಜನೆಯನ್ನು ಕೈಗೊಳ್ಳಲಾಗುತ್ತಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಚಾಲಕ ರಹಿತ ವಾಹನ ಪರೀಕ್ಷೆಗಾಗಿ ತಯಾರಾಗುತ್ತಿದೆ ಕೃತಕ ನಗರ

ಚಾಲಕರು ಇಲ್ಲದೆ ಚಲಿಸುವ ವಾಹನಗಳಿಗೆ ದೊಡ್ಡ ಶತ್ರುವೆಂದರೆ ಕೆಟ್ಟ ಹವಾಮಾನ. ಈ ಸಂದರ್ಭಗಳಲ್ಲಿ ವಾಹನಗಳಲ್ಲಿರುವ ಸೆನ್ಸಾರ್'ಗಳು ಸರಿಯಾಗಿ ಕಾರ್ಯನಿರ್ವಹಿಸಲು ವಿಫಲವಾದರೆ ಅಪಘಾತಗಳಾಗುವ ಸಾಧ್ಯತೆಗಳಿರುತ್ತವೆ.

ಚಾಲಕ ರಹಿತ ವಾಹನ ಪರೀಕ್ಷೆಗಾಗಿ ತಯಾರಾಗುತ್ತಿದೆ ಕೃತಕ ನಗರ

ವೆಮೊ ಕಂಪನಿಯು ಈ ಹೊಸ ಕೃತಕ ನಗರದಲ್ಲಿ ಹಿಮ ಸೇರಿದಂತೆ ಎಲ್ಲಾ ರೀತಿಯ ಹವಾಮಾನ ಪರಿಸ್ಥಿತಿಗಳಲ್ಲಿ ತನ್ನ ವಾಹನಗಳನ್ನು ಪರೀಕ್ಷಿಸಲು ಮುಂದಾಗಿದೆ. ಸ್ವಯಂಚಾಲಿತ ವಾಹನಗಳನ್ನು ಪರೀಕ್ಷಿಸಲು ಕೃತಕ ನಗರಗಳನ್ನು ರಚಿಸುತ್ತಿರುವ ವೆಮೊ ಪ್ರಯತ್ನ ಯಶಸ್ವಿಯಾಗಲಿ ಎಂದು ಶುಭ ಹಾರೈಸೋಣ.

Most Read Articles

Kannada
English summary
Waymo company creating artificial city to test autonomous vehicles. Read in Kannada.
Story first published: Friday, December 11, 2020, 16:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X