ಇದು ಬರಿ ಸಾಮಾನ್ಯವಲ್ಲ ಅಸಾಮಾನ್ಯ ಗಾಡಿ
ಈ ಸುಂದರ ಜಗತ್ತಿನಲ್ಲಿ ಹಲವು ವಿಧದ ಚಿತ್ರ ವಿಚಿತ್ರ ವಾಹನಗಳು ಸೃಷ್ಟಿಯಾಗುತ್ತಲೇ ಇದೆ. ಸಾಮಾನ್ಯ ವಾಹನಗಳು ಬರಿ ರಸ್ತೆಯಲ್ಲಿ ಸಂಚರಿಸುತ್ತವೆ. ಆದರೆ ನೆಲ ಹಾಗೂ ನೀರಲ್ಲಿ ಸಂಚರಿಸಬಲ್ಲ ಅಸಾಮಾನ್ಯ ವಾಹನಗಳನ್ನು ನೀವು ನೋಡುವೀರಾ?
ಇಂತಹ ಪರಿಕಲ್ಪನೆಗಳ ಸೃಷ್ಟಿಯೇ ಹೊಸತನಕ್ಕೆ ಕಾರಣವಾಗಿದೆ. ಎರಡನೇ ಮಹಾಯುದ್ಧದ ಬಳಿಕ ಈಜಾಡುವ ವಾಹನಗಳ ಬಗ್ಗೆ ಆಯೋಚನೆ ಹೊಳೆದಿತ್ತು. ಪ್ರಮುಖವಾಗಿ ಇದನ್ನು ಮೋಜನ್ನು ಇಷ್ಟಪಡುವ ವಿನೋದ ಸಂಚಾರಿಗಳನ್ನು ಗುರಿಯಾಗಿರಿಸಿಕೊಂಡಿದೆ. ಇಂದಿನ ಈ ಲೇಖನದಲ್ಲಿ ಟಾಪ್ 10 ಉಭಯಚರ ವಾಹನಗಳ ಬಗ್ಗೆ ನಾವು ಚರ್ಚಿಸಲಿದ್ದೇವೆ.

10. ಗಿಬ್ಸ್ ಕ್ವಾಡ್ ಸ್ಕಿ
ನೀರಲ್ಲೂ ನೆಲದಲ್ಲೂ ಸಂಚರಿಸುವ ಜಗತ್ತಿನ ಮೊದಲ ಸ್ಪೋರ್ಟ್ಸ್ ವಾಹನವಾಗಿರುವ ಗಿಬ್ಸ್ ಕ್ವಾಡ್ ಸ್ಕಿ ತನ್ನದೇ ಆದ ವಾಟರ್ ಕ್ರಾಫ್ಟ್ ಮತ್ತು ಎಟಿವಿಯಿಂದ ನಿಯಂತ್ರಿಸ್ಪಟ್ಟಿದೆ. 2012ರಲ್ಲಿ ಗಿಬ್ಸ್ ಸ್ಪೋರ್ಟ್ಸ್ ಆ್ಯಂಪಿಬಿಯನ್ ನಿಂದ ಅನಾವರಣಗೊಂಡಿರುವ ಗಿಬ್ಸ್ ಕ್ವಾಡ್ ಸ್ಕಿ 4 ಸ್ಟ್ರೋಕ್ ಆ್ಯಂಪಿಕ್ವಾಡ್ ಹೊಂದಿದೆ. ನೀರಿನಿಂದ ನೆಲದ ಮೇಲೆ ಸಂಚರಿಸುವ ಸಲುವಾಗಿ ಪರಿವರ್ತನೆಗಾಗಿ ಕೇವಲ ಐದು ಸೆಕೆಂಡುಗಳಷ್ಟೇ ಸಮಯ ತಗಲುತ್ತಿದ್ದು ನೀರಿನಲ್ಲಿ ಗಂಟೆಗೆ ಗರಿಷ್ಠ 72 ಕೀ.ಮೀ. ವೇಗದಲ್ಲಿ ಸಂಚರಿಸುತ್ತದೆ.

09. ಆ್ಯಂಪಿಕಾರ್
ಇದು 1961ನೇ ಇಸವಿಯಲ್ಲೇ ಜರ್ಮನಿಯ ಸಾರ್ವಜನಿಕ ಮಾರುಕಟ್ಟೆಯನ್ನು ತಲುಪಿತ್ತು ಅಂದರೆ ನಿಮ್ಮಿಂದ ಊಹಿಸಲು ಸಾಧ್ಯವೇ? ಕ್ವಾಂಡ್ ನಿಂದ ನಿರ್ಮಾಣವಾಗಿರುವ ಈ ಗಾಡಿಯನ್ನು ಹಾನ್ಸ್ ಟ್ರಿಪಲ್ ವಿನ್ಯಾಸಗೊಳಿಸಿದ್ದಾರೆ. ವೈಯಕ್ತಿಕ ಉಭಯಚರ ಹಾಗೂ ವಿಂಟೇಜ್ ವಾಹನಗಳ ಪೈಕಿ ಆ್ಯಂಪಿಕಾರ್ ಈಗಲೂ ಮೇಲ್ದರ್ಜೆಯಲ್ಲಿ ಗುರುತಿಸಿಕೊಂಡಿದೆ.

08. ಗಿಬ್ಸ್ ಅಕ್ವಾಡ
ಗಿಬ್ಸ್ ಸ್ಪೋರ್ಟ್ಸ್ ಆ್ಯಂಪಿಬಿಯನ್ ನಿಂದ ಅಭಿವೃದ್ಧಿಯಾಗಿರುವ ಮಗದೊಂದು ಆಕರ್ಷಕ ನೀರಲ್ಲೂ ನೆಲದಲ್ಲೂ ಸಂಚರಿಸುವ ಗಾಡಿ ಗಿಬ್ಸ್ ಅಕ್ವಾಡ ಆಗಿದೆ. ನೀರಿನಲ್ಲಿ ಗಂಟೆಗೆ 30 ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುವ ಈ ಅತಿ ವೇಗದ ವಾಹನ ನೆಲದಲ್ಲಿ ಗಂಟೆಗೆ 160 ಕೀ.ಮೀ. ವೇಗವನ್ನು ಸಾಧಿಸುತ್ತದೆ.

07. ರಿನ್ ಸ್ಪೀಡ್ ಸ್ಪ್ಲಾಷ್
ಸ್ವಿಜರ್ಲೆಂಡ್ ನ ಜನಪ್ರಿಯ ಸ್ಪೋರ್ಟ್ಸ್ ಕಾರಿನಿಂದ ಸ್ಪೋರ್ತಿ ಪಡೆದಿರುವ ರಿನ್ ಸ್ಪೀಡ್ ಸ್ಪ್ಲಾಷ್ ವಾಹನವನ್ನು 2004ರಲ್ಲಿ ಅಭಿವೃದ್ಧಿಪಡಿಸಲಾಗಿತ್ತು. ಹೈಡ್ರೋಫಾಯಿಲ್ ಕಾನ್ಸೆಪ್ಟ್ ನಲ್ಲಿ ನಿರ್ಮಾಣವಾಗಿರುವ ಪ್ರಸ್ತುತ ವಾಹನವು ನೀರಿನಲ್ಲಿ ಗಂಟೆಗೆ 50 ಕೀ.ಮೀ. ಹಾಗೆಯೇ ನೆಲದಲ್ಲಿ ಗಂಟೆಗೆ 124 ಕೀ.ಮೀ. ವೇಗ ಗಿಟ್ಟಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ನೈಸರ್ಗಿಕ ಇಂಧನದಿಂದ ಚಲಿಸುವ ರಿನ್ ಸ್ಪೀಡ್ ಮೊದಲ ಪರಿಸರ ಸ್ನೇಹಿ ಉಭಯಚರ ಗಾಡಿಯೆನಿಸಿಕೊಂಡಿದೆ.

06. ಸೀರೋಡರ್ ಲಂಬೋರ್ಗಿನಿ ಕೌಂಟಕ್
ಸೀರೋಡರ್ ಲಂಬೋರ್ಗಿನಿ ಕೌಂಟಕ್ ವಾಹನವನ್ನು ಮೈಕ್ ರೈನ್ ಎಂಬವನ್ನು ಮಾರ್ಪಾಡುಗೊಳಿಸಿದ್ದಾರೆ. ಮೋಟಾರುಸೈಕಲ್, ಜೀಪ್ ಹಾಗೂ ಲಂಡನ್ ಟ್ಯಾಕ್ಸಿಗಳನ್ನು ನೀರಿನಲ್ಲಿ ಸಂಚರಿಸುವ ರೀತಿಯಲ್ಲಿ ಕಸ್ಟಮೈಸ್ಡ್ ಮಾಡಿರುವ ರೈನ್ ಐಷಾರಾಮಿ ಕ್ರೀಡಾ ಕಾರಿಗೂ ಇಂತಹದೊಂದು ಅದೃಷ್ಟ ಕಲ್ಪಿಸಿಕೊಟ್ಟಿದ್ದಾರೆ.

05. ಗಿಬ್ಸ್ ಹಮ್ ಡಿಂಗಾ
ಐದು ಸೀಟುಗಳ ಗಿಬ್ಸ್ ಹಮ್ ಡಿಂಗಾ ಉಭಯಚರ ವಾಹನಗಳಲ್ಲಿ ವಿಶ್ವಕ್ಕೆ ಹೊಸ ಪರಿಚಯವಾಗಿತ್ತು. ಈ ಫೋರ್ ವೀಲ್ ಡ್ರೈವ್ ವಾಹನದಲ್ಲಿ 350 ಅಶ್ವಶಕ್ತಿ ಉತ್ಪಾದಿಸಬಲ್ಲ ವಿ8 ಎಂಜಿನ್ ಆಳವಡಿಸಲಾಗಿತ್ತು. ಅಂತೆಯೇ ನೆಲದಲ್ಲಿ ಗಂಟೆಗೆ 160 ಕೀ.ಮೀ. ಹಾಗೂ ನೀರಲಲ್ಲಿ ಗಂಟೆಗೆ 65 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. 2012ರಲ್ಲಿ ಬಿಡುಗಡೆಯಾಗಿದ್ದ ಹಮ್ ಡಿಂಗಾ ಹೈ ಸ್ಪೀಡ್ ಆ್ಯಂಪಿಬಿಯನ್ (ಎಚ್ ಎಸ್ ಎ) ನಾವೀನ್ಯತೆಯ ಭಾಗವಾಗಿದೆ.

04. ಹೈಡ್ರಾ ಸ್ಪೈಡರ್
ಓಪನ್ ಟಾಪ್ ಗರಿಷ್ಠ ನಿರ್ವಹಣೆಯ ಹೈ ಸ್ಪೀಡ್ ಆ್ಯಂಪಿಬಿಯಸ್ ಕ್ರೀಡಾ ಕಾರನ್ನು ಕೂಲ್ ಆ್ಯಂಪಿಬಿಯಸ್ ತಯಾರಕ ಇಂಟರ್ ನ್ಯಾಷನಲ್ ಬಿಡುಗಡೆಗೊಳಿಸ್ತತು. ಆಧುನಿಕ ತಕ್ಕ ವಿನ್ಯಾಸ ಹೊಂದಿರುವ ಈ ಸ್ಪೀಡ್ ಬೋಟ್ ಜಲದಲ್ಲಿ ಗಂಟೆಗೆ 85 ಕೀ.ಮೀ. ಹಾಗೂ ನೆಲದಲ್ಲಿ ಗಂಟೆಗೆ 201 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

03. ಡೊಬರ್ ಟಿನ್ ಹೈಡ್ರೊಕಾರ್
ವಿಶಿಷ್ಟ ವಿನ್ಯಾಸ ಗಿಟ್ಟಿಸಿಕೊಂಡಿರುವ ಡೊಬರ್ ಟಿನ್ ಹೈಡ್ರೊಕಾರ್ ಅಲ್ಯೂಮಿನಿಯಂ ದೇಹವನ್ನು ಆವರಿಸಿಕೊಂಡಿದೆ. ಇದು ಕೆಲವೇ ಕ್ಷಣಗಳಲ್ಲಿ ಲ್ಯಾಂಡ್ ಮೋಡ್ ನಿಂದ ವಾಟರ್ ಮೋಡ್ ಗೆ ಪರಿವರ್ತನೆಯಾಗುತ್ತದೆ. ಇದರಲ್ಲಿರುವ ಷೆವರ್ಲೆ ಮೋಟಾರು 762 ಅಶ್ವಶಕ್ತಿ ಹುಟ್ಟುಹಾಕುತ್ತದೆ.

02. ಸೀ ಲಯನ್
ವೇಗ ಇಷ್ಟಪಡುವ ಒಂದು ವಿಭಾಗದ ಗ್ರಾಹಕರನ್ನು ಗುರಿಯಾಗಿರಿಸಿಕೊಂಡು ಸೀ ಲಯನ್
ಸೃಷ್ಟಿ ಮಾಡಲಾಗಿತ್ತು. ಅಷ್ಟೇ ಅಲ್ಲದೆ ತನ್ನ ವೇಗಕ್ಕೆ ತಕ್ಕಂತೆ ಆ್ಯಂಪಿಬಿಯಸ್ ವರ್ಲ್ಡ್ ಸ್ಪೀಡ್ ರೆಕಾರ್ಡ್ ಸಹ ಬರೆದಿತ್ತು. ನೆಲದಲ್ಲಿ ಗಂಟೆಗೆ 201 ಕೀ.ಮೀ. ಗಿಟ್ಟಿಸಿಕೊಳ್ಳುವ ಈ ವಾಹನ ನೀರಲ್ಲಿ ಗಂಟೆಗೆ 96 ಕೀ.ಮೀ. ವೇಗದಲ್ಲಿ ಸಂಚರಿಸುತ್ತದೆ.

01. ವಾಟರ್ ಕಾರ್ ಪ್ಯಾಂಥರ್
ಸ್ಪೀಡ್ ಬೋಟ್ ಅಂಥ ಹೆಸರಿಸುವುದಕ್ಕಿಂತಲೂ ಜೀಪ್ ಅನ್ನುವುದೇ ಹೆಚ್ಚು ಸೂಕ್ತವೆನಿಸಲಿದೆ. ಕ್ಯಾಲಿಫೋರ್ನಿಯಾ ತಳಹದಿಯ ಕಾರು ಸಂಸ್ಥೆಯಿಂದ ನಿರ್ಮಿಸಲ್ಪಟ್ಟಿರುವ ವಾಟರ್ ಕಾರ್ ಪ್ಯಾಂಥರ್ ಜಗತ್ತಿನ ಅತಿ ವೇಗದ ಆ್ಯಂಪಿಬಿಯಸ್ ವಾಹನವಾಗಿದೆ. ಇದರ ಸೂತ್ರಧಾರಿ ಫ್ಯಾಂಥರ್ ಅವರಾಗಿದ್ದು, ಬರೋಬ್ಬರಿ 13 ವರ್ಷಗಳ ನಿರಂತರ ಅಧ್ಯಯನದ ಬಳಿಕ ತನ್ನ ಕನಸಿನ ಕೂಸನ್ನು ನನಸಾಗಿಸಿದ್ದಾರೆ. ಸೀ ಲಯನ್ ವಾಹನವನ್ನು ಮೀರಿಸಿರುವ ವಾಟರ್ ಕಾರ್ ಫ್ಯಾಂಥರ್ ನೀರಲ್ಲಿ ಗಂಟೆಗೆ 96 ಕೀ.ಮೀ. ಹಾಗೂ ನೆಲದಲ್ಲಿ ಗಂಟೆಗೆ 201 ಕೀ.ಮೀ. ವೇಗದಲ್ಲಿ ಸಂಚರಿಸುತ್ತದೆ. ಜೀಪ್ ಸಿಎಸ್8 ಸ್ಕ್ರಾಂಬ್ಲರ್ ನಿಂದ ಡಿಸೈನ್ ಆಮದು ಮಾಡಿರುವ ವಾಟರ್ ಕಾರ್ ಪರಿಪೂರ್ಣ ಉಭಯಚರ ವಾಹನವೆನಿಸಿಕೊಂಡಿದೆ.


Click it and Unblock the Notifications








