WeChatನಲ್ಲೂ ಒನ್‌ಇಂಡಿಯಾ ತಾಜಾ ಸುದ್ದಿಗಳನ್ನು ನಿಮ್ಮದಾಗಿಸಿ
ಅಂತರ್ಜಾಲ ಸುದ್ದಿ ಪ್ರಸಾರದಲ್ಲಿ ಆ್ಯಪ್ ಗಳ ಪಾತ್ರ ಮಹತ್ವದ್ದು. ಇದು ಓದುಗರಿಗೆ ಅತಿ ವೇಗದಲ್ಲಿ ಸುದ್ದಿಗಳನ್ನು ತಲುಪಿಸಲು ನೆರವಾಗುತ್ತದೆ. ಪ್ರಸ್ತುತ ಕಳೆದ 15 ವರ್ಷಗಳಿಂದ ನಿರಂತರವಾಗಿ ಕನ್ನಡಿಗರ ಸುದ್ದಿದಾಹವನ್ನು ತೀರಿಸುತ್ತಾ ಬಂದಿರುವ ಒನ್‌ಇಂಡಿಯಾ ಕನ್ನಡ ಮಗದೊಂದು ಮೊಬೈಲ್ ಉತ್ಪನ್ನಕ್ಕೆ ಕಾಲಿರಿಸಿದೆ. ಸಮಸ್ತ ಕನ್ನಡಿಗರೂ ಇದನ್ನು ಆದರದಿಂದ ಸ್ವೀಕರಿಸಬೇಕಾಗಿ ವಿನಂತಿ.
ಸಾಮಾಜಿಕ ಜಾಲತಾಣಗಳಲ್ಲಿ ತನ್ನದೇ ಆದ ಪ್ರಭಾವ ಬೀರಿರುವ 'ವಿಚಾಟ್' ಮೂಲಕ ಈಗ ಒನ್‌ಇಂಡಿಯಾ ಕನ್ನಡ ಓದುಗರನ್ನು ತಲುಪಲಿದೆ. ಪ್ರತಿದಿನ ಉಚಿತ ಸುದ್ದಿಪತ್ರಗಳೆಂತೆ ವಿಚಾಟ್ ನಲ್ಲಿ ಮೊಬೈಲ್ ಬಳಕೆದಾರರು ಸಂಜೆ ವೇಳೆಯಲ್ಲಿ ಪ್ರಮುಖ ಸುದ್ದಿಗಳತ್ತ ಕಣ್ಣಾಯಿಸಬಹುದಾಗಿದೆ.

ಇಲ್ಲಿ ತಾಜಾ ಸುದ್ದಿಗಳ ಜೊತೆಗೆ ಮನರಂಜನೆಗಾಗಿ ಸಿನೆಮಾ ಸುದ್ದಿ, ಆಟೋಮೊಬೈಲ್, ಜೀವನಶೈಲಿ, ತಂತ್ರಜ್ಞಾನ ಕುರಿತ ಸ್ವಾರಸ್ಯಕರ ಸುದ್ದಿಗಳು ನಿಮ್ಮ ಇನ್ ಬಾಕ್ಸ್ ಬಂದು ತಲುಪಲಿದೆ. ಹಾಗಿದ್ದರೆ ಇನ್ಯಾಕೆ ತಡ ಈಗಲೇ ವಿಚಾಟ್ ಇನ್ ಸ್ಟಾಲ್ ಮಾಡಿಕೊಳ್ಳಿ ಮತ್ತು ಕನ್ನಡ ಸುದ್ದಿಗಳನ್ನು ಓದಲು ಆರಂಭಿಸಿ...
ವಿಚಾಟ್‌ನಲ್ಲಿ ಒನ್ಇಂಡಿಯಾ ಕನ್ನಡ ಸೇರಿಸುವುದು ಹೇಗೆ?
ವಿಧಾನ 1

1. ಬಲಭಾಗದ ಮೂಲೆಯಲ್ಲಿರುವ "+" ಐಕಾನನ್ನು ಕ್ಲಿಕ್ಕಿಸಿ.
2. Add contacts ಕ್ಲಿಕ್ಕಿಸಿ.
3. Official Accounts ಮೇಲೆ ಮತ್ತೆ ಕ್ಲಿಕ್ಕಿಸಿ.

4. Oneindia Kannada ಅಂತ ಟೈಪಿಸಿ ಸರ್ಚ್ ಮಾಡಿರಿ.
5. ಒನ್ಇಂಡಿಯಾ ಕನ್ನಡ ಮೇಲೆ ಕ್ಲಿಕ್ಕಿಸಿ Follow ಮಾಡಿರಿ.
ವಿಧಾನ 2
ಈ ಲೇಖನದೊಂದಿಗೆ QR (Quick Response) Code ಇರುವ ಚಿತ್ರವನ್ನು ನೀಡಲಾಗಿದೆ. ಇದನ್ನು ಬಳಸಿ ಕೂಡ ಒನ್ಇಂಡಿಯಾ ಕನ್ನಡವನ್ನು WeChatಗೆ ಸೇರಿಸಬಹುದಾಗಿದೆ. ಅದರ ವಿಧಾನ ಕೆಳಗಿನಂತಿದೆ.

1. ಬಲಭಾಗದ ಮೂಲೆಯಲ್ಲಿರುವ "+" ಐಕಾನನ್ನು ಕ್ಲಿಕ್ಕಿಸಿ.
2. Add contacts ಕ್ಲಿಕ್ಕಿಸಿ.

3. Scan QR code ಮೇಲೆ ಕ್ಲಿಕ್ಕಿಸಿ.
4. QR Code ಮೇಲೆ ಹಿಡಿದು ಸ್ಕ್ಯಾನ್ ಮಾಡಿರಿ.
5. ಒನ್ಇಂಡಿಯಾ ಕನ್ನಡ ಮೇಲೆ ಕ್ಲಿಕ್ಕಿಸಿ Follow ಮಾಡಿರಿ.


Click it and Unblock the Notifications








