AC ರಿಸರ್ಕ್ಯುಲೇಷನ್ ಬಟನ್‌ನ ಉಪಯೋಗವೆನು?: ಇದನ್ನು ಯಾವಾಗ ಬಳಸಬೇಕು?

ನಿಮ್ಮ ಕಾರ್ ಡ್ಯಾಶ್‌ಬೋರ್ಡ್‌ನಲ್ಲಿ AC ಕಂಟ್ರೋಲ್ಸ್‌ ಬಳಿ ಕಾಣುವ ಬಾಗಿದ ಬಾಣದ (ಕರ್ವ್ಡ್ ಆ್ಯರೋ) ಗುರುತಿರುವ ಸ್ವಿಚ್ ಇರುವುದನ್ನು ಗಮನಿಸಿರುವಿರಾ? ಇದನ್ನೇ ಏರ್ ರಿಸರ್ಕ್ಯುಲೇಷನ್ ಸ್ವಿಚ್ ಎಂದು ಕರೆಯಲಾಗುತ್ತದೆ. ಈ ವೈಶಿಷ್ಟ್ಯದ ನಿಜವಾದ ಬಳಕೆ ಏನು ಮತ್ತು ಈ ಸ್ವಿಚ್ ಅನ್ನು ಯಾವ ಸಂದರ್ಭಗಳಲ್ಲಿ ಬಳಸಬೇಕು ಎಂಬುದನ್ನು ಈ ಸ್ಟೋರಿನಲ್ಲಿ ತಿಳಿದುಕೊಳ್ಳಿ.

AC ರಿಸರ್ಕ್ಯುಲೇಷನ್ ಬಟನ್‌ನ ಉಪಯೋಗವೆನು?: ಇದನ್ನು ಯಾವಾಗ ಬಳಸಬೇಕು?

ಬೇಸಿಗೆ ಬಂದಿದೆ, ಹೊರಗಿನ ಬಿಸಿಲಿಗೆ ತಾಳಲಾಗುತ್ತಿಲ್ಲ ಎನ್ನುವ ಸಂದರ್ಭಗಳಲ್ಲಿ ಕಾರಿನೊಳಗೆ ಏರ್ ಕಂಡಿಷನರ್‌ ಹೊಂದಿರುವುದು ಬಹಳ ಅವಶ್ಯಕ. ಬೇಸಿಗೆಯಲ್ಲಿ ಕಾರ್ ಕ್ಯಾಬಿನ್ ಒಳಗಿನ ವಾತಾವರಣವು ತುಂಬಾ ಬಿಸಿಯಾಗಿರುತ್ತದೆ. ಅದೇ ಹೊರಗೆ ಬಿಸಿಲಿನಲ್ಲಿ ನಿಲ್ಲಿಸಿದ ಕಾರುಗಳಲ್ಲಿ ಶಾಖದ ತೀವ್ರತೆ ಇನ್ನೂ ಹೆಚ್ಚಾಗಿರುತ್ತದೆ. ಕಾರಿನೊಳಗಿರುವ ಎಸಿ ಆನ್ ಆದ ತಕ್ಷಣ ಇಡೀ ಕ್ಯಾಬಿನ್ ತಣ್ಣಗಾಗಬೇಕು ಎಂದು ಎಲ್ಲರೂ ಬಯಸುತ್ತಾರೆ.

AC ರಿಸರ್ಕ್ಯುಲೇಷನ್ ಬಟನ್‌ನ ಉಪಯೋಗವೆನು?: ಇದನ್ನು ಯಾವಾಗ ಬಳಸಬೇಕು?

ಸಾಮಾನ್ಯವಾಗಿ ಕಾರಿನಲ್ಲಿ ಎಸಿ ಆನ್ ಮಾಡಿದಾಗ ಕ್ಯಾಬಿನ್ ತಣ್ಣಗಾಗಲು ಸುಮಾರು 10-15 ನಿಮಿಷ ತೆಗೆದುಕೊಳ್ಳುತ್ತದೆ. (ಇದು ನಾವು ಬಳಸುವ ಕಾರನ್ನು ಅವಲಂಬಿಸಿ ಬದಲಾಗುತ್ತದೆ). ಆದರೆ ಕಾರಿನೊಳಗಿನ ಕ್ಯಾಬಿನ್ ತ್ವರಿತವಾಗಿ ತಣ್ಣಗಾಗಲು ನೀವು ಬಯಸಿದರೆ, ಕಡಿಮೆ ಸಮಯದಲ್ಲೇ ಕ್ಯಾಬಿನ್ ಅನ್ನು ತ್ವರಿತವಾಗಿ ತಂಪಾಗಿಸ ಬಹುದು. ಇದಕ್ಕಾಗಿ ನಿಮ್ಮ ಕಾರಿನಲ್ಲಿ ಒದಗಿಸಲಾದ ಕಾರಿನ ಏರ್ ಕಂಡಿಷನರ್‌ನೊಂದಿಗೆ ಏರ್ ರಿಸರ್ಕ್ಯುಲೇಷನ್ ವೈಶಿಷ್ಟ್ಯವನ್ನು ಬಳಸಿಕೊಳ್ಳಬಹುದು. ಮೇಲೆ ತಿಳಿಸಿದಂತೆ ಈ ವೈಶಿಷ್ಟ್ಯಕ್ಕೆ ಸಂಬಂಧಿಸಿದ ಸ್ವಿಚ್, ಡ್ಯಾಶ್‌ಬೋರ್ಡ್‌ನಲ್ಲಿನ AC ಕಂಟ್ರೋಲ್ಸ್ ಬಳಿ ಇದೆ. ಇದನ್ನು ಬಾಗಿದ ಬಾಣದ ಗುರ್ತಿನಲ್ಲಿ ಸೂಚಿಸಲಾಗುತ್ತದೆ.

AC ರಿಸರ್ಕ್ಯುಲೇಷನ್ ಬಟನ್‌ನ ಉಪಯೋಗವೆನು?: ಇದನ್ನು ಯಾವಾಗ ಬಳಸಬೇಕು?

ಏರ್ ರಿಸರ್ಕ್ಯುಲೇಷನ್ ಸಿಸ್ಟಮ್ ಹೇಗೆ ಕೆಲಸ ಮಾಡುತ್ತದೆ?

ಸಾಮಾನ್ಯವಾಗಿ ಅನೇಕ ಜನರು ಈ ಬಟನ್ ಬಗ್ಗೆ ತಪ್ಪು ಕಲ್ಪನೆಯನ್ನು ಹೊಂದಿದ್ದಾರೆ, ಅವರು ಈ ಸ್ವಿಚ್ ಒತ್ತಿದಾಗ ಕಾರಿನ ಹೊರಗಿನ ಬಿಸಿ ಗಾಳಿಯು ಪ್ರವೇಶಿಸುತ್ತದೆ ಎಂದು ಭಾವಿಸಿದ್ದಾರೆ. ವಾಸ್ತವವಾಗಿ ಇದು ಹೊರಗಿನಿಂದ ಗಾಳಿಯನ್ನು ತೆಗೆದುಕೊಳ್ಳುವುದಿಲ್ಲ ಕ್ಯಾಬಿನ್ ಒಳಗೆ ಗಾಳಿಯನ್ನೇ ಪ್ರಸರಿಸುವಂತೆ (ರಿಸ್ಕ್ಯುಲೇಟ್) ಮಾಡುತ್ತದೆ. ಹವಾನಿಯಂತ್ರಣಗಳು ಹೊರಗಿನಿಂದ ಬಿಸಿ ಗಾಳಿಯನ್ನು ತೆಗೆದುಕೊಳ್ಳುತ್ತವೆ ಮತ್ತು ಆ ಗಾಳಿಯನ್ನು ತಂಪಾಗಿಸಲು ಹೆಚ್ಚು ಶ್ರಮಿಸುತ್ತವೆ. ಪರಿಣಾಮವಾಗಿ ತಂಪಾದ ಗಾಳಿಯು ಕ್ಯಾಬಿನ್ ಒಳಗೆ ಪರಿಚಲನೆಗೊಳ್ಳಲು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

AC ರಿಸರ್ಕ್ಯುಲೇಷನ್ ಬಟನ್‌ನ ಉಪಯೋಗವೆನು?: ಇದನ್ನು ಯಾವಾಗ ಬಳಸಬೇಕು?

ಆದರೆ, ಕ್ಯಾಬಿನ್ ಒಳಗೆ ಈ ಮರುಬಳಕೆ ವೈಶಿಷ್ಟ್ಯವನ್ನು ಬಳಸುವಾಗ, ಹವಾನಿಯಂತ್ರಣ ವ್ಯವಸ್ಥೆಯು ಹೊರಗಿನಿಂದ ಬಿಸಿ ಗಾಳಿಯನ್ನು ತೆಗೆದುಕೊಳ್ಳುವುದಿಲ್ಲ, ಬದಲಿಗೆ ಅದು ಕ್ಯಾಬಿನ್ ಒಳಗೆ ಗಾಳಿಯನ್ನು ತಂಪಾಗಿಸಲು ಪ್ರಯತ್ನಿಸುತ್ತದೆ. ಅಂದರೆ, ಕ್ಯಾಬಿನ್ ಒಳಗಿನ ಗಾಳಿಯು ಹೊರಗಿನ ಬಿಸಿ ಗಾಳಿಗಿಂತ ಸ್ವಲ್ಪ ತಂಪಾಗಿದ್ದರೆ, ಅದು ಕ್ಯಾಬಿನ್ ಒಳಗಿನ ಗಾಳಿಯನ್ನು ತ್ವರಿತವಾಗಿ ತಂಪಾಗಿಸುತ್ತದೆ. ಜೊತೆಗೆ, AC ಆನ್ ಮಾಡಿದ ಸ್ವಲ್ಪ ಸಮಯದ ನಂತರ, ಅದು ಹೊರಗಿನಿಂದ ಬಿಸಿ ಗಾಳಿಯನ್ನು ಹೀರಿಕೊಳ್ಳುವುದನ್ನು ನಿಲ್ಲಿಸುತ್ತದೆ ಮತ್ತು ಒಳಗೆ ತಂಪಾದ ಗಾಳಿಯನ್ನು ಇನ್ನಷ್ಟು ರಿಸರ್ಕ್ಯುಲೇಟ್ ಮಾಡುತ್ತದೆ.

AC ರಿಸರ್ಕ್ಯುಲೇಷನ್ ಬಟನ್‌ನ ಉಪಯೋಗವೆನು?: ಇದನ್ನು ಯಾವಾಗ ಬಳಸಬೇಕು?

ಸಂಕ್ಷಿಪ್ತವಾಗಿ ಹೇಳುವುದಾದರೆ, ಏರ್ ಕಂಡಿಷನರ್ ಪ್ರತಿ ಬಾರಿಯೂ ಹೊರಗಿನ ಗಾಳಿಯನ್ನು ಸಂಗ್ರಹಿಸುವ ಬದಲು ಒಳಗೆ ತಂಪಾಗಿರುವ ಗಾಳಿಯನ್ನು ಮರುಪರಿಚಲನೆ ಮಾಡುತ್ತಾ ಹೋದಲ್ಲಿ ಕ್ಯಾಬಿನ್ ಶಾಶ್ವತವಾಗಿ ಪ್ರಯಾಣ ಮುಗಿಯುವವರೆಗೂ ತಂಪಾಗಿರುತ್ತದೆ. ಅಲ್ಲದೇ ಹವಾನಿಯಂತ್ರಣದ ಕಾರ್ಯಕ್ಷಮತೆಯ ಮೇಲೆ ಕಡಿಮೆ ಒತ್ತಡವನ್ನು ಬೀರುತ್ತದೆ.

AC ರಿಸರ್ಕ್ಯುಲೇಷನ್ ಬಟನ್‌ನ ಉಪಯೋಗವೆನು?: ಇದನ್ನು ಯಾವಾಗ ಬಳಸಬೇಕು?

ಏರ್ ರಿಸರ್ಕ್ಯುಲೇಷನ್ ಬಟನ್ ಯಾವಾಗ ಬಳಸಬೇಕು?

ಸಾಮಾನ್ಯವಾಗಿ ಬೇಸಿಗೆಯಲ್ಲಿ ಈ ಏರ್‌ ರಿಸರ್ಕ್ಯುಲೇಷನ್ ಸಿಸ್ಟಮ್‌ ಅನ್ನು ಬಳಸುವುದು ಉತ್ತಮ. ಇದು ಕ್ಯಾಬಿನ್ ಅನ್ನು ಹೆಚ್ಚು ಕಾಲ ತಂಪಾಗಿರಿಸಲು ಸಹಾಯ ಮಾಡುತ್ತದೆ. ಮಳೆಗಾಲದಲ್ಲಿ ವಾಯು ಮರುಬಳಕೆ ವ್ಯವಸ್ಥೆಯನ್ನು ಬಳಸುವುದು ಸೂಕ್ತವಲ್ಲ. ಏಕೆಂದರೆ ಮಳೆಗಾಲದಲ್ಲಿ ಗಾಳಿಯಲ್ಲಿ ತೇವಾಂಶ ಹೆಚ್ಚಿರುತ್ತದೆ. ಈ ಸಮಯದಲ್ಲಿ ಬಳಸಿದರೆ ತೇವಾಂಶವುಳ್ಳ ಗಾಳಿಯು ಕಾರಿನೊಳಗೆ ಪವೇಶಿಸುತ್ತದೆ. ಇದರಿಂದಾಗಿ ಕನ್ನಡಿಗಳ ಮೇಲೆ ಮಂಜು ಕೂರುತ್ತದೆ. ಪರಿಣಾಮ ರಸ್ತೆಯ ಗೋಚರತೆ ಕಡಿಮೆಯಾಗುತ್ತದೆ.

AC ರಿಸರ್ಕ್ಯುಲೇಷನ್ ಬಟನ್‌ನ ಉಪಯೋಗವೆನು?: ಇದನ್ನು ಯಾವಾಗ ಬಳಸಬೇಕು?

ಸಾಮಾನ್ಯವಾಗಿ ಬಿಸಿಲಿನಲ್ಲಿ ನಿಲ್ಲಿಸಿದ ಕಾರ್ ಕ್ಯಾಬಿನ್ ಒಳಗಿನ ಗಾಳಿಯು ಹೊರಗಿನ ಗಾಳಿಗಿಂತ ಹೆಚ್ಚು ಬಿಸಿಯಾಗಿರುತ್ತದೆ. ಹಾಗಾಗಿ ಕಾರು ಆನ್ ಆದ ತಕ್ಷಣ ಎಸಿ ಆನ್ ಮಾಡಿ ರಿಸರ್ಕ್ಯುಲೇಷನ್ ಬಟನ್ ಬಳಸುವುದರಿಂದ ದೊಡ್ಡ ಫಲಿತಾಂಶ ಇರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಕಾರನ್ನು ಆನ್ ಮಾಡಿದಾಗ ಎಲ್ಲಾ ಕಿಟಕಿಗಳು ಸಂಪೂರ್ಣವಾಗಿ ಕೆಳಗಿಳಿಸಿ ಬ್ಲೋಯರ್ ಪೂರ್ಣ ವೇಗದಲ್ಲಿ ಆನ್ ಮಾಡುವುದರಿಂದ ಕಾರಿನೊಳಗಿನ ಬಿಸಿ ಗಾಳಿಯು ಬ್ಲೋಯರ್ ವೇಗಕ್ಕೆ ಹೊರ ಹೋಗುತ್ತದೆ. ಆ ನಂತರ ವಿಂಡೋಸ್ ರೋಲ್ ಮಾಡಿ ಎಸಿಯನ್ನು ಪೂರ್ಣ ವೇಗದಲ್ಲಿ ಇರಿಸಿ, ರಿಸರ್ಕ್ಯುಲೇಷನ್ ವೈಶಿಷ್ಟ್ಯವನ್ನು ಬಳಸಿದರೆ ಕ್ಯಾಬಿನ್ ಬಹಳ ಕಡಿಮೆ ಸಮಯದಲ್ಲಿ ತಂಪಾಗುತ್ತದೆ.

AC ರಿಸರ್ಕ್ಯುಲೇಷನ್ ಬಟನ್‌ನ ಉಪಯೋಗವೆನು?: ಇದನ್ನು ಯಾವಾಗ ಬಳಸಬೇಕು?

ಎಸಿ ಆನ್ ಮಾಡಿ ಡ್ರೈವ್ ಮಾಡುವುದರಿಂದ ಮೈಲೇಜ್ ಕಡಿಮೆಯಾಗುತ್ತದೆಯೇ?

ಹೌದು, ಕಾರಿನಲ್ಲಿ ಎಸಿ ಆನ್ ಮಾಡಿ ಡ್ರೈವಿಂಗ್ ಮಾಡಿದರೆ ಮೈಲೇಜ್ ಖಂಡಿತಾ ಕಡಿಮೆಯಾಗುತ್ತದೆ. ಏಕೆಂದರೆ ಎಸಿಗೆ ವಿದ್ಯುತ್ ಪೂರೈಸುವ ಕಂಪ್ರೆಸರ್ ಇಂಜಿನ್‌ಗೆ ಸಂಪರ್ಕ ಹೊಂದಿರುತ್ತದೆ. ಎಂಜಿನ್‌ ಬಿಡುಗಡೆ ಮಾಡುವ ಶಕ್ತಿಯಲ್ಲಿ ಸ್ವಲ್ಪಮಟ್ಟಿಗೆ ಕಂಪ್ರೆಸರ್ ಕೂಡ ಬದಲಿಯಾಗುತ್ತದೆ, ಇದರಿಂದಾಗಿ ಹೆಚ್ಚಿನ ಇಂಧನ ಬಳಕೆಯಾಗುತ್ತದೆ. ಹಾಗಾಗಿ ಎಸಿ ಆನ್ ಮಾಡಿ ಕಾರು ಓಡಿಸುವುದರಿಂದ ಮೈಲೇಜ್ ಕೂಡ ಕಡಿಮೆಯಾಗುತ್ತದೆ. ಅದರಂತೆ ಎಲ್ಲಾ ಕಿಟಕಿಗಳನ್ನು ಉರುಳಿಸಿ ಓಡಿಸಿದರೂ ಮೈಲೇಜ್ ಕಡಿಮೆಯಾಗುತ್ತದೆ. ಏಕೆಂದರೆ ಕಾರಿನೊಳಗೆ ಪ್ರವೇಶಿಸುವ ಗಾಳಿಯು ಕಾರನ್ನು ಮುಂದಕ್ಕೆ ತಳ್ಳಲು ತಡೆಯುತ್ತದೆ. ಪರಿಣಾಮವಾಗಿ, ಎಂಜಿನ್ ಕಾರನ್ನು ಮುಂದಕ್ಕೆ ತಳ್ಳಲು ಹೆಣಗಾಡುವುದರಿಂದ ಮೈಲೇಜ್ ಕಡಿಮೆಯಾಗುತ್ತದೆ.

More from DriveSpark

Article Published On: Thursday, April 7, 2022, 19:17 [IST]
English summary
What is the use of car ac recirculation and when to use it
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+