ಕಾರು ಖರೀದಿಸಲು ಯಾವುದು ಸೂಕ್ತ ಕಾಲ... ಇಲ್ಲಿದೆ ಉತ್ತರ

ಯಾರಿಗೆ ಆಗಲಿ ಹೊಸ ಕಾರು ಖರೀದಿಸುವುದು ತುಸು ತ್ರಾಸದಾಯಕವಾದ ಕೆಲಸವೇ ಸರಿ. ಕಾರು ಖರೀದಿಸುವ ಮುನ್ನ ಜನರು ಬೆಲೆ, ಮೈಲೇಜ್ ಬಗ್ಗೆ ವಿಚಾರಿಸುವುದು ಸಹಜ. ಆದರೆ ಸಾಕಷ್ಟು ಜನರು ಕಾರು ಖರೀದಿಸಲು ಯಾವುದು ಸೂಕ್ತ ಸಮಯ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.

ಕಾರು ಖರೀದಿಸಲು ಯಾವುದು ಸೂಕ್ತ ಕಾಲ... ಇಲ್ಲಿದೆ ಉತ್ತರ

ಇನ್ನು ಕೆಲವೇ ದಿನಗಳಲ್ಲಿ 2020 ಅಂತ್ಯಗೊಳ್ಳಲಿದೆ. ವರ್ಷದ ಕೊನೆಯಲ್ಲಿ 2020ರ ಮಾದರಿ ಕಾರು ಖರೀದಿಸುವುದು ಸೂಕ್ತವೇ ಅಥವಾ 2021ರ ಮಾದರಿ ಬರುವವರೆಗೆ ಕಾಯಬೇಕೇ ಎಂಬ ಪ್ರಶ್ನೆ ಎದುರಾಗುವುದು ಸಹಜ. ಇದರ ಬಗೆಗಿನ ಸಂಪೂರ್ಣ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ಕಾರು ಖರೀದಿಸಲು ಯಾವುದು ಸೂಕ್ತ ಕಾಲ... ಇಲ್ಲಿದೆ ಉತ್ತರ

ವರ್ಷದ ಅಂತ್ಯವು ಹೊಸ ಕಾರು ಖರೀದಿಗೆ ಸೂಕ್ತ ಸಮಯ ಎಂಬುದು ನಮ್ಮ ಅಭಿಪ್ರಾಯ. ಇದಕ್ಕೆ ಹಲವಾರು ಕಾರಣಗಳಿವೆ. ಹೊಸ ಕಾರು ಖರೀದಿಸ ಬಯಸುವವರು ವರ್ಷದ ಕೊನೆಯಲ್ಲಿ ಸಾಕಷ್ಟು ಕೊಡುಗೆಗಳನ್ನು ಪಡೆಯಬಹುದು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಕಾರು ಖರೀದಿಸಲು ಯಾವುದು ಸೂಕ್ತ ಕಾಲ... ಇಲ್ಲಿದೆ ಉತ್ತರ

ಕಾರುಗಳ ಮಾರಾಟವು ಸಾಮಾನ್ಯವಾಗಿ ವರ್ಷದ ಕೊನೆಯಲ್ಲಿ ನಿಧಾನವಾಗಿರುತ್ತದೆ. ಈ ಕಾರಣಕ್ಕೆ ಕಾರು ತಯಾರಕ ಕಂಪನಿಗಳು ಹಾಗೂ ಡೀಲರ್'ಗಳು ಗ್ರಾಹಕರನ್ನು ಆಕರ್ಷಿಸಲು ಹಲವಾರು ರಿಯಾಯಿತಿಯನ್ನು ನೀಡುತ್ತಾರೆ. ಇದರಿಂದಾಗಿ ಕಾರುಗಳ ಮಾರಾಟವು ಹೆಚ್ಚಾಗಿ ಅವರು ತಮ್ಮ ಮಾರಾಟದ ಗುರಿಯನ್ನು ತಲುಪಬಹುದು.

ಕಾರು ಖರೀದಿಸಲು ಯಾವುದು ಸೂಕ್ತ ಕಾಲ... ಇಲ್ಲಿದೆ ಉತ್ತರ

ವರ್ಷದ ಕೊನೆಯಲ್ಲಿ ಬಹುತೇಕ ಎಲ್ಲಾ ಕಾರು ಕಂಪನಿಗಳು ಹಾಗೂ ಡೀಲರ್'ಗಳು ಹಲವಾರು ರಿಯಾಯಿತಿ ಹಾಗೂ ಕೊಡುಗೆಗಳನ್ನು ನೀಡುತ್ತಾರೆ. ಹೊಸ ಕಾರುಗಳ ಮೇಲೆ ಸಾವಿರಾರು ರೂಪಾಯಿ, ಇನ್ನು ಕೆಲವೊಮ್ಮೆ ಲಕ್ಷಾಂತರ ರೂಪಾಯಿ ರಿಯಾಯಿತಿ ನೀಡಲಾಗುತ್ತದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಕಾರು ಖರೀದಿಸಲು ಯಾವುದು ಸೂಕ್ತ ಕಾಲ... ಇಲ್ಲಿದೆ ಉತ್ತರ

ವರ್ಷದ ಕೊನೆಯಲ್ಲಿ ಭಾರಿ ಪ್ರಮಾಣದ ರಿಯಾಯಿತಿ ಹಾಗೂ ಕೊಡುಗೆಗಳನ್ನು ನೀಡುವುದರ ಜೊತೆಗೆ ಕಾರು ತಯಾರಕ ಕಂಪನಿಗಳು ವಿಶೇಷ ಆವೃತ್ತಿಯ ಮಾದರಿಗಳನ್ನು ಸಹ ಬಿಡುಗಡೆಗೊಳಿಸುತ್ತವೆ. ಈ ವಿಶೇಷ ಆವೃತ್ತಿ ಮಾದರಿಗಳು ಸಾಮಾನ್ಯ ಮಾದರಿಗಳಂತೆ ಇದ್ದರೂ ಹೆಚ್ಚುವರಿ ಆಕ್ಸೆಸರಿಸ್'ಗಳನ್ನು ಹೊಂದಿರುತ್ತವೆ.

ಕಾರು ಖರೀದಿಸಲು ಯಾವುದು ಸೂಕ್ತ ಕಾಲ... ಇಲ್ಲಿದೆ ಉತ್ತರ

ಈ ವಿಶೇಷ ಆವೃತ್ತಿಯ ಮಾದರಿಗಳನ್ನು ಸಾಮಾನ್ಯ ಮಾದರಿಗಳ ರೀತಿಯಲ್ಲಿಯೇ ಮಾರಾಟ ಮಾಡಲಾಗುತ್ತದೆ. ಹೊಸ ಕಾರಿನಲ್ಲಿ ವಿವಿಧ ಬಗೆಯ ಆಕ್ಸೆಸರಿಸ್'ಗಳನ್ನು ಬಯಸುವವರು ವಿಶೇಷ ಆವೃತ್ತಿಯ ಮಾದರಿಗಳನ್ನು ಖರೀದಿಸಬಹುದು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಕಾರು ಖರೀದಿಸಲು ಯಾವುದು ಸೂಕ್ತ ಕಾಲ... ಇಲ್ಲಿದೆ ಉತ್ತರ

ವರ್ಷದ ಕೊನೆಯಲ್ಲಿ ಹೊಸ ಕಾರು ಖರೀದಿಸುವುದರಿಂದ ಬೆಲೆ ಏರಿಕೆಯನ್ನು ತಪ್ಪಿಸಬಹುದು. ವರ್ಷದ ಕೊನೆಯಲ್ಲಿ ಮಾರಾಟವನ್ನು ಹೆಚ್ಚಿಸಲು ರಿಯಾಯಿತಿ ಹಾಗೂ ಕೊಡುಗೆಗಳನ್ನು ನೀಡುವ ಕಂಪನಿಗಳು ಹೊಸ ವರ್ಷದಲ್ಲಿ ತಮ್ಮ ಮಾದರಿಗಳ ಬೆಲೆಯನ್ನು ಹೆಚ್ಚಿಸುತ್ತವೆ.

ಕಾರು ಖರೀದಿಸಲು ಯಾವುದು ಸೂಕ್ತ ಕಾಲ... ಇಲ್ಲಿದೆ ಉತ್ತರ

ಸಾಮಾನ್ಯವಾಗಿ ಕಾರುಗಳ ಬೆಲೆಯನ್ನು 2ರಿಂದ 3ರಷ್ಟು ಹೆಚ್ಚಿಸಲಾಗುತ್ತದೆ. ಈ ಬೆಲೆಗಳು ಕಾರು ಕಂಪನಿಗಳು ಹಾಗೂ ಮಾದರಿಗಳನ್ನು ಅವಲಂಬಿಸಿರುತ್ತವೆ.ಈ ಕಾರಣಕ್ಕೆ ಹೊಸ ವರ್ಷದಲ್ಲಿ ಹೊಸ ಕಾರು ಖರೀದಿಸುವ ಗ್ರಾಹಕರು ಸ್ವಲ್ಪ ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಕಾರು ಖರೀದಿಸಲು ಯಾವುದು ಸೂಕ್ತ ಕಾಲ... ಇಲ್ಲಿದೆ ಉತ್ತರ

ಕೆಲವರು ಹೊಸ ಮಾದರಿಗಾಗಿ ಕಾಯಬಹುದು. ಆದರೆ ಹೊಸದಾಗಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಕಾರು ಮರು ವರ್ಷ ಗಮನಾರ್ಹ ಬದಲಾವಣೆಗಳು ಅಥವಾ ನವೀಕರಣಗಳನ್ನು ಪಡೆಯುವ ಸಾಧ್ಯತೆಗಳು ಕಡಿಮೆಯಿರುತ್ತವೆ.

ಕಾರು ಖರೀದಿಸಲು ಯಾವುದು ಸೂಕ್ತ ಕಾಲ... ಇಲ್ಲಿದೆ ಉತ್ತರ

ಸಾಮಾನ್ಯವಾಗಿ ಕಾರು ಕಂಪನಿಗಳು ಪ್ರತಿ ಎರಡು ವರ್ಷಗಳಿಗೊಮ್ಮೆ ತಮ್ಮ ಮಾದರಿಗಳನ್ನು ಅಪ್ ಡೇಟ್ ಮಾಡಿ, ಫೇಸ್‌ಲಿಫ್ಟ್‌ ಆವೃತ್ತಿಗಳನ್ನು ಬಿಡುಗಡೆಗೊಳಿಸುತ್ತವೆ. ಈ ಕಾರಣಕ್ಕೆ ಲಭ್ಯವಿರುವ ರಿಯಾಯಿತಿ ಹಾಗೂ ಕೊಡುಗೆಗಳ ಲಾಭವನ್ನು ಪಡೆದುಕೊಂಡು ವರ್ಷದ ಕೊನೆಯಲ್ಲಿ ಕಾರು ಖರೀದಿಸುವುದು ಸೂಕ್ತ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕಾರು ಖರೀದಿಸಲು ಯಾವುದು ಸೂಕ್ತ ಕಾಲ... ಇಲ್ಲಿದೆ ಉತ್ತರ

ವರ್ಷದ ಕೊನೆಯಲ್ಲಿ ಕಂಪನಿಗಳು ನೀಡುವ ರಿಯಾಯಿತಿ ಹಾಗೂ ಕೊಡುಗೆಗಳನ್ನು ಬಳಸಿಕೊಂಡು ಕಾರನ್ನು ಖರೀದಿಸುವುದರಿಂದ ಸಾಕಷ್ಟು ಹಣವನ್ನು ಉಳಿಸಬಹುದು.

Most Read Articles

Kannada
English summary
Which is the best time to purchase a new car. Read in Kannada.
Story first published: Saturday, December 12, 2020, 17:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X