ವಿಮಾನಗಳಲ್ಲಿ ವೈ ಫೈ ಫ್ರೀಯಾಗಿ ಸಿಗಲ್ಲ, ಕಾರಣಗಳೇನು ಗೊತ್ತಾ?
ಹಳೆಯ ದಿನಗಳಲ್ಲಿ ವಿಮಾನಗಳಲ್ಲಿ ಪ್ರಯಾಣಿಸುವಾಗ ಮೊಬೈಲ್ ನೆಟ್‍ವರ್ಕ್ ಸ್ಥಗಿತಗೊಂಡರೆ ಪ್ರಪಂಚದೊಂದಿಗಿನ ಸಂಪರ್ಕವೇ ಕಡಿತಗೊಳ್ಳುತ್ತಿತ್ತು. ಆದರೆ ಈಗ ಬಹುತೇಕ ಎಲ್ಲಾ ವಿಮಾನಗಳಲ್ಲಿ ವೈ ಫೈಗಳನ್ನು ನೀಡಲಾಗುತ್ತಿದೆ.

ಈ ವೈ ಫೈಗಳನ್ನು ಉಚಿತವಾಗಿ ನೀಡಲಾಗುತ್ತಿದೆಯೇ ? ಈ ಲೇಖನದಲ್ಲಿ ವಿಮಾನಗಳಲ್ಲಿ ವೈ ಫೈಯನ್ನು ಉಚಿತವಾಗಿ ನೀಡಲಾಗುತ್ತಿದೆಯೇ ಇಲ್ಲವೇ ಎಂಬುದನ್ನು ನೋಡೋಣ. ಇಂದಿನ ಟೆಲಿಕಾಂ ಕ್ರಾಂತಿಯ ಯುಗದಲ್ಲಿ ವೈ ಫೈ ಸೌಲಭ್ಯವನ್ನು ಎಲ್ಲೆಡೆ ನೀಡಲಾಗುತ್ತಿದೆ. ಕಚೇರಿಯೇ ಆಗಿರಲಿ, ರೆಸ್ಟೋರೆಂಟ್ ಆಗಿರಲಿ, ಎಲ್ಲೆಡೆ ವೈಫೈ ಸೌಲಭ್ಯಗಳಿರುತ್ತವೆ.

ಈ ಎಲ್ಲಾ ಸ್ಥಳಗಳಲ್ಲಿಯೂ ವೈ ಫೈ ಸುಲಭವಾಗಿ ಉತ್ತಮ ಗುಣಮಟ್ಟದಲ್ಲಿ ದೊರೆಯುತ್ತದೆ. ಕಾರಣ ಈ ಎಲ್ಲಾ ಜಾಗಗಳೂ ಭೂಮಿಯ ಮೇಲಿರುತ್ತವೆ. ಭೂಮಿಯಿಂದ ಸುಮಾರು 35,000 ಅಡಿಗಳ ಎತ್ತರದಲ್ಲಿ ಹಾರಾಡುವ ವಿಮಾನಗಳಲ್ಲಿ ವೈಫೈ ಹೇಗೆ ದೊರೆಯುತ್ತದೆ ಎಂಬ ಪ್ರಶ್ನೆ ಮೂಡುವುದು ಸಹಜ.

ವಿಮಾನಗಳ ಮೇಲ್ಭಾಗದಲ್ಲಿ ಸಿಗ್ನಲ್‍ಗಳನ್ನು ಸ್ವೀಕರಿಸಲು ಆಂಟೆನಾಗಳನ್ನು ಅಳವಡಿಸಲಾಗಿರುತ್ತದೆ. ವಿಮಾನಗಳು ಹಾರಾಡುವಾಗ ಈ ಆಂಟೆನಾಗಳು ಉಪಗ್ರಹಗಳನ್ನು ಸಂಪರ್ಕಿಸಿ ಸಿಗ್ನಲ್‍ಗಳನ್ನು ಕಳುಹಿಸುತ್ತವೆ.

ನಂತರ ಈ ಆಂಟೆನಾಗಳು ಸಿಗ್ನಲ್‍ಗಳನ್ನು ಪಡೆಯುತ್ತವೆ. ಈ ಸಿಗ್ನಲ್‍ಗಳಿಂದ ವಿಮಾನಗಳಲ್ಲಿ ವೈ ಫೈ ನೆಟ್‍ವರ್ಕ್ ದೊರೆಯುತ್ತದೆ. ಈ ಸಿಗ್ನಲ್‍ಗಳು ಸ್ಥಿರವಾಗಿರದೇ ಏರುಪೇರಾಗುತ್ತಿರುತ್ತವೆ. ಇದರಿಂದ ಕೇವಲ ಮೆಸೇಜ್‍ಗಳನ್ನು ಅಥವಾ ಮೇಲ್‍ಗಳನ್ನು ಕಳುಹಿಸಬಹುದು.

ಇದರ ಜೊತೆಗೆ ವಿಮಾನಗಳ ಕೆಳಗೆ ಮೊಬೈಲ್ ಟವರ್‍ಗಳನ್ನು ಸಂಪರ್ಕಿಸಲು ಸಿಗ್ನಲ್ ರಿಸೀವರ್‍ಗಳಿರುತ್ತವೆ. ವಿಮಾನಗಳು ಮೇಲೆ ಹಾರಾಡುವಾಗ ಹತ್ತಿರದಲ್ಲಿರುವ ಮೊಬೈಲ್ ಟವರ್‍ಗಳಿಂದ ಸಿಗ್ನಲ್ ಪಡೆಯುತ್ತವೆ. ಗೊಗೊದಂತಹ ಕಂಪನಿಗಳು 5ಜಿ ನೆಟ್‍ವರ್ಕ್ ಸೇವೆಯನ್ನು ನೀಡಲು ಮುಂದಾಗಿವೆ.

ಇದರಿಂದಾಗಿ ವಿಮಾನಗಳಲ್ಲಿ ವೈಫೈ ಚಾಲನೆಗೊಂಡು ಎಲ್ಲಾ ರೀತಿಯ ಇಂಟರ್‍ನೆಟ್ ಸೌಲಭ್ಯಗಳನ್ನು ಪಡೆಯಬಹುದು. ಆದರೆ ವಿಮಾನಗಳು ನೀರಿನ ಮೇಲೆ ಹಾರಾಡುವಾಗ ಮೊಬೈಲ್ ಟವರ್‍ಗಳಿಲ್ಲದ ಕಾರಣ ವೈ ಫೈ ಸೌಲಭ್ಯವಿರುವುದಿಲ್ಲ.

ವಾಸ್ತವವಾಗಿ ವಿಮಾನಗಳಲ್ಲಿ ಫ್ರಿ ಶೇರಿಂಗ್ ವೈ ಫೈ ಸೌಲಭ್ಯವಿರುತ್ತದೆ. ಇದರಿಂದಾಗಿ ನಿಮ್ಮ ಮೊಬೈಲ್ ಹಾಗೂ ಲ್ಯಾಪ್‍ಟ್ಯಾಪ್‍ಗಳಿಂದ ಡೇಟಾವನ್ನು ಎಲ್ಲಿಗೆ ಬೇಕಾದರೂ ಕಳುಹಿಸಬಹುದು.

ವೈ ಫೈಗಳನ್ನು ಶೇರ್ ಮಾಡುವುದರಿಂದ ಈ ಡೇಟಾವನ್ನು ಹ್ಯಾಕರ್‍ಗಳು ಸುಲಭವಾಗಿ ಹ್ಯಾಕ್ ಮಾಡುತ್ತಾರೆ. ಇದರ ಜೊತೆಗೆ ಯಾವುದಾದರೂ ವೈರಸ್ ಅಥವಾ ಮಾಲ್‍ವೇರ್‍ಗಳು ಮೊಬೈಲ್ ಅಥವಾ ಲ್ಯಾಪ್‍ಟ್ಯಾಪ್ ಪ್ರವೇಶಿಸಿ ಅಲ್ಲಿರುವ ಡೇಟಾವನ್ನು ನಾಶಪಡಿಸಬಹುದು. ಈ ಕಾರಣಕ್ಕೆ ವಿಮಾನಗಳಲ್ಲಿ ವೈಫೈ ಬಳಕೆಗೆ ಶುಲ್ಕ ವಿಧಿಸಲಾಗುತ್ತದೆ.


Click it and Unblock the Notifications