ವಿಮಾನಗಳೇಕೆ ಪೆಸಿಫಿಕ್ ಸಾಗರದ ಮೇಲೆ ಹಾರಾಡುವುದಿಲ್ಲ?

ಹೆಚ್ಚಿನ ವಿಮಾನಗಳು ಅಮೇರಿಕಾದಿಂದ ಏಷ್ಯಾಕ್ಕೆ ಸಂಪರ್ಕ ಕಲ್ಪಿಸುವ ಪೆಸಿಫಿಕ್ ಮಹಾಸಾಗರದ ಮೇಲೆ ಹಾರಾಡುವುದಿಲ್ಲ. ಬದಲಿಗೆ ವಿಮಾನಗಳು ಬೇರೆ ಮಾರ್ಗಗಳಲ್ಲಿ ಸಂಚರಿಸುತ್ತವೆ. ನೀವು ವಿಮಾನಗಳಲ್ಲಿ ಓಡಾಡಿದ್ದರೆ ನಿಮಗೂ ಸಹ ಈ ವಿಮಾನಗಳು ಪೆಸಿಫಿಕ್ ಸಾಗರದ ಮೇಲೆಕೆ ಹಾರಾಡುವುದಿಲ್ಲವೆಂಬ ಪ್ರಶ್ನೆ ಮೂಡಿರುತ್ತದೆ.

ವಿಮಾನಗಳೇಕೆ ಪೆಸಿಫಿಕ್ ಸಾಗರದ ಮೇಲೆ ಹಾರಾಡುವುದಿಲ್ಲ?

ಪೆಸಿಫಿಕ್ ಸಾಗರದ ಮೇಲೆ ನೇರವಾಗಿ ಹೋಗುವ ಮಾರ್ಗವು ಕಡಿಮೆ ದೂರವನ್ನು ಹೊಂದಿರುತ್ತದೆ ಎಂಬುದು ಜನರ ಅಭಿಪ್ರಾಯವಾಗಿದೆ. ಈ ಮಾರ್ಗದಲ್ಲಿಯೇ ವಿಮಾನಗಳು ಹೋಗಲಿ ಎಂಬುದು ಪ್ರಯಾಣಿಕರ ಆದ್ಯತೆಯಾಗಿದೆ.

ವಿಮಾನಗಳೇಕೆ ಪೆಸಿಫಿಕ್ ಸಾಗರದ ಮೇಲೆ ಹಾರಾಡುವುದಿಲ್ಲ?

ವಿಮಾನಗಳು ಪೆಸಿಫಿಕ್ ಸಾಗರದ ಮೇಲೆ ಹಾರಾಡದಿರುವುದಕ್ಕೆ ಮುಖ್ಯ ಕಾರಣವೆಂದರೆ, ನೇರವಾದ ಮಾರ್ಗಕ್ಕಿಂತ ಅಂಕು ಡೊಂಕು ಮಾರ್ಗಗಳು ಹೆಚ್ಚು ಹತ್ತಿರವಾಗುತ್ತವೆ ಎಂಬುದು. ಆದರೆ ನಾವು ನೋಡುವ ಮ್ಯಾಪ್‍‍ಗಳು ನಮ್ಮನ್ನು ಗೊಂದಲಕ್ಕೀಡು ಮಾಡುತ್ತವೆ.

ವಿಮಾನಗಳೇಕೆ ಪೆಸಿಫಿಕ್ ಸಾಗರದ ಮೇಲೆ ಹಾರಾಡುವುದಿಲ್ಲ?

ಭೂಮಿಯೇ ನೇರವಾಗಿಲ್ಲದ ಕಾರಣ, ಮಾರ್ಗಗಳು ನೇರವಾಗಿವೆ ಎಂದು ಗೊಂದಲವನ್ನು ಸೃಷ್ಟಿಸಲಾಗುತ್ತಿದೆ. ಭೂಮಿಯು ದುಂಡಗಿರುವ ಕಾರಣ ಎರಡು ಸ್ಥಳಗಳ ಮಧ್ಯೆಯಿರುವ ನೇರವಾದ ಮಾರ್ಗಗಳು ಕಡಿಮೆ ದೂರದಂತೆ ಕಂಡರೂ, ವಾಸ್ತವವಾಗಿ ಕಡಿಮೆ ಅಂತರವನ್ನು ಹೊಂದಿರುವುದಿಲ್ಲ.

ವಿಮಾನಗಳೇಕೆ ಪೆಸಿಫಿಕ್ ಸಾಗರದ ಮೇಲೆ ಹಾರಾಡುವುದಿಲ್ಲ?

ವಿಮಾನಗಳು ಅಮೇರಿಕಾದಿಂದ ಏಷ್ಯಾದಲ್ಲಿರುವ ದೇಶಗಳಿಗೆ ತೆರಳುವಾಗ ವೇಗವಾಗಿ ಸಾಗುವ ಹಾಗೂ ಕಡಿಮೆ ಇಂಧನವನ್ನು ಬಳಸುವ ಅಂಕು ಡೊಂಕು ಮಾರ್ಗಗಳನ್ನು ಬಳಸುತ್ತವೆ. ಭೂಮಿಯ ಗ್ಲೋಬ್‌ ಅನ್ನು ಕೈಯಲ್ಲಿ ಹಿಡಿದು ನೀವೂ ಸಹ ಇದನ್ನು ಪರೀಕ್ಷಿಸಬಹುದು.

ವಿಮಾನಗಳೇಕೆ ಪೆಸಿಫಿಕ್ ಸಾಗರದ ಮೇಲೆ ಹಾರಾಡುವುದಿಲ್ಲ?

ಕೈಯಲ್ಲಿ ಗೋಳಾಕಾರದ ಗ್ಲೋಬ್‌ ಹಿಡಿದು, ಅಮೇರಿಕಾ ಹಾಗೂ ಮಧ್ಯ ಏಷ್ಯಾದ ಮಧ್ಯಯಿರುವ ಎರಡು ಸ್ಥಳಗಳನ್ನು ಗುರುತಿಸಿ. ಈ ಎರಡು ಪ್ರದೇಶಗಳ ನಡುವಿರುವ ನೇರವಾದ ಮಾರ್ಗವನ್ನು ಗುರುತಿಸಿ ಸ್ಟ್ರಿಂಗ್ ಅಥವಾ ಕಾರ್ಡೇಜ್ ತುಂಡುಗಳನ್ನು ಇಡಿ.

ವಿಮಾನಗಳೇಕೆ ಪೆಸಿಫಿಕ್ ಸಾಗರದ ಮೇಲೆ ಹಾರಾಡುವುದಿಲ್ಲ?

ಸ್ಟ್ರಿಂಗ್ ಅಥವಾ ಕಾರ್ಡೇಜ್ ಅನ್ನು ಹೈಲೈಟ್ ಮಾಡಲು ಮಾರ್ಕರ್ ಬಳಸಿ. ಈಗ ಅದೇ ಎರಡು ಸ್ಥಳಗಳನ್ನು ಅಳೆಯಿರಿ. ಅದೇ ತುಂಡು ಸ್ಟ್ರಿಂಗ್ ಅಥವಾ ಕಾರ್ಡೇಜ್ ಬಳಸಿ, ಅಂಕುಡೊಂಕಾಗಿರುವ ಮಾರ್ಗದ ಮೂಲಕ ಅದೇ ಎರಡು ಸ್ಥಳಗಳನ್ನು ಸಂಪರ್ಕಿಸಿ.

ವಿಮಾನಗಳೇಕೆ ಪೆಸಿಫಿಕ್ ಸಾಗರದ ಮೇಲೆ ಹಾರಾಡುವುದಿಲ್ಲ?

ಎರಡೂ ಸ್ಥಳಗಳನ್ನು ಅಳತೆ ಮಾಡಿ. ಅಂಕುಡೊಂಕಾಗಿರುವ ಮಾರ್ಗವು ನೇರವಾದ ಮಾರ್ಗಕ್ಕಿಂತ ಚಿಕ್ಕದಾಗಿರುವುದನ್ನು ಗಮನಿಸಬಹುದು. ಅಮೇರಿಕಾ ಹಾಗೂ ಏಷ್ಯಾದಲ್ಲಿರುವ ದೇಶಗಳನ್ನು ಸಂಪರ್ಕಿಸುವ ಅಂಕುಡೊಂಕು ಮಾರ್ಗವು, ನೇರವಾದ ಮಾರ್ಗಕ್ಕಿಂತ ಹೆಚ್ಚು ಸುರಕ್ಷಿತವಾಗಿರುತ್ತದೆ.

ವಿಮಾನಗಳೇಕೆ ಪೆಸಿಫಿಕ್ ಸಾಗರದ ಮೇಲೆ ಹಾರಾಡುವುದಿಲ್ಲ?

ವಿಮಾನಗಳು ಸಾಮಾನ್ಯವಾಗಿ ಕೆನಡಾ ಹಾಗೂ ಅಲಾಸ್ಕಾ ಮೂಲಕ ಹಾದು ಹೋಗುವಾಗ ಅಂಕುಡೊಂಕು ಮಾರ್ಗವಾಗಿ ಸಾಗುತ್ತವೆ. ಇದರಿಂದಾಗಿ ಸಮಯದ ಉಳಿತಾಯವಾಗುವುದರ ಜೊತೆಗೆ ಎಮರ್ಜೆನ್ಸಿ ಸಂದರ್ಭಗಳಲ್ಲಿ ವಿಮಾನಗಳನ್ನು ತುರ್ತು ಭೂ ಸ್ಪರ್ಶ ಮಾಡಲು ಅನುಕೂಲವಾಗಲಿದೆ.

ವಿಮಾನಗಳೇಕೆ ಪೆಸಿಫಿಕ್ ಸಾಗರದ ಮೇಲೆ ಹಾರಾಡುವುದಿಲ್ಲ?

ಅಂಕು ಡೊಂಕು ಮಾರ್ಗಗಳು ಕಡಿಮೆ ದೂರವನ್ನು ಹೊಂದಿರುವ ಕಾರಣಕ್ಕೆ ಹಾಗೂ ಇಂಧನದ ಉಳಿತಾಯವಾಗುವ ಕಾರಣಕ್ಕೆ ವಿಮಾನಗಳು ನೇರವಾದ ಮಾರ್ಗಕ್ಕೆ ಬದಲು ಅಂಕುಡೊಂಕು ಮಾರ್ಗಗಳನ್ನು ಬಳಸುತ್ತವೆ.

Most Read Articles

Kannada
English summary
Why Don’t Airplanes Fly Over the Pacific Ocean? - Read in Kannada
Story first published: Thursday, January 9, 2020, 15:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X