ವಿಮಾನಗಳಲ್ಲಿ ಪ್ಯಾರಾಚೂಟ್‍‍ಗಳೇಕೆ ಇರುವುದಿಲ್ಲ ಗೊತ್ತಾ?

ಪ್ಯಾರಾಚೂಟ್‍‍‍ಗಳನ್ನು ವಾತಾವರಣದಲ್ಲಿ ಯಾವುದೇ ಒಂದು ವಸ್ತುವಿನ ಚಲನೆಯನ್ನು ನಿಧಾನಗೊಳಿಸಲು ಬಳಸಲಾಗುತ್ತದೆ. ಪ್ಯಾರಾಚೂಟ್‍‍‍ಗಳನ್ನು ಸಾಮಾನ್ಯವಾಗಿ ತೆಳುವಾಗಿರುವ, ಆದರೆ ಹೆಚ್ಚು ಬಲಿಷ್ಟವಾಗಿರುವ ಬಟ್ಟೆಯಿಂದ ತಯಾರಿಸಲಾಗುತ್ತದೆ.

ವಿಮಾನಗಳಲ್ಲಿ ಪ್ಯಾರಾಚೂಟ್‍‍ಗಳೇಕೆ ಇರುವುದಿಲ್ಲ ಗೊತ್ತಾ?

ಮೊದಲು ಪ್ಯಾರಾಚೂಟ್‍‍‍ಗಳಲ್ಲಿ ರೇಷ್ಮೆಯನ್ನು ಬಳಸಲಾಗುತ್ತಿತ್ತು. ಈಗ ನೈಲಾನ್ ಬಳಸಲಾಗುತ್ತದೆ. ಪ್ಯಾರಾಚೂಟ್‍‍‍ಗಳು ಗುಮ್ಮಟದ ಆಕಾರದಲ್ಲಿರುತ್ತವೆ. ಪ್ಯಾರಾಚೂಟ್‍‍‍ಗಳಿಗೆ ಜನ, ಊಟ, ಎಕ್ವಿಪ್‍‍ಮೆಂಟ್, ಸ್ಪೇಸ್ ಕ್ಯಾಪ್ಸುಲ್‌ ಹಾಗೂ ಬಾಂಬ್‌ ಸೇರಿದಂತೆ ವಿವಿಧ ರೀತಿಯ ವಸ್ತುಗಳನ್ನು ಜೋಡಿಸಲಾಗುತ್ತದೆ.

ವಿಮಾನಗಳಲ್ಲಿ ಪ್ಯಾರಾಚೂಟ್‍‍ಗಳೇಕೆ ಇರುವುದಿಲ್ಲ ಗೊತ್ತಾ?

ಪ್ಯಾರಾಚೂಟ್‍‍‍ಗಳನ್ನು ಹೆಚ್ಚಾಗಿ ಹೆಲಿಕಾಪ್ಟರ್‍‍ಗಳಲ್ಲಿ ನೀಡಲಾಗುತ್ತದೆ. ಆದರೆ ಜನರು ಸಂಚರಿಸುವ ವಿಮಾನಗಳಲ್ಲಿ ಪ್ಯಾರಾಚೂಟ್‍‍‍ಗಳನ್ನು ಅಳವಡಿಸಿರುವುದಿಲ್ಲ. ಯಾವ ಕಾರಣಕ್ಕಾಗಿ ವಿಮಾನಗಳಲ್ಲಿ ಪ್ಯಾರಾಚೂಟ್‍‍‍ಗಳನ್ನು ನೀಡುವುದಿಲ್ಲ ಎಂಬ ಕಾರಣಗಳನ್ನು ಈ ಲೇಖನದಲ್ಲಿ ನೋಡೋಣ.

ವಿಮಾನಗಳಲ್ಲಿ ಪ್ಯಾರಾಚೂಟ್‍‍ಗಳೇಕೆ ಇರುವುದಿಲ್ಲ ಗೊತ್ತಾ?

1. ದೊಡ್ಡ ಗಾತ್ರ, ಹೆಚ್ಚು ತೂಕ ಹಾಗೂ ದುಬಾರಿ

ಸಾಮಾನ್ಯವಾಗಿ ಪ್ಯಾರಾಚೂಟ್‍‍‍ಗಳು ದೊಡ್ಡ ಗಾತ್ರ ಹಾಗೂ ಹೆಚ್ಚು ತೂಕವನ್ನು ಹೊಂದಿರುತ್ತವೆ. ಈ ಗಾತ್ರದಿಂದಾಗಿ ಅವುಗಳನ್ನು ವಿಮಾನಗಳ ಸೀಟಿನಡಿಯಲ್ಲಿಡಲು ಸಾಧ್ಯವಾಗುವುದಿಲ್ಲ.

ವಿಮಾನಗಳಲ್ಲಿ ಪ್ಯಾರಾಚೂಟ್‍‍ಗಳೇಕೆ ಇರುವುದಿಲ್ಲ ಗೊತ್ತಾ?

ಪ್ಯಾರಾಚೂಟ್‍‍‍ಗಳನ್ನು ಯಾವಾಗಲೂ ಪರೀಕ್ಷಿಸುತ್ತಿರಬೇಕಾಗುತ್ತದೆ ಮತ್ತು ರಿಪ್ಯಾಕ್ ಮಾಡಬೇಕಾಗುತ್ತದೆ. ಪ್ರತಿ ಸೀಟಿನಲ್ಲಿಡಿಯಲ್ಲಿ ಪ್ಯಾರಾಚೂಟ್‍‍ಗಳನ್ನು ಇಡುವುದಕ್ಕೆ ಹೆಚ್ಚು ವೆಚ್ಚವಾಗುತ್ತದೆ. ಇದರಿಂದಾಗಿ ವಿಮಾನದ ಪ್ರಯಾಣ ದರವನ್ನು ಹೆಚ್ಚಿಸಬೇಕಾಗುತ್ತದೆ.

ವಿಮಾನಗಳಲ್ಲಿ ಪ್ಯಾರಾಚೂಟ್‍‍ಗಳೇಕೆ ಇರುವುದಿಲ್ಲ ಗೊತ್ತಾ?

2.ತರಬೇತಿಯ ಕೊರತೆ

ಪ್ಯಾರಾಚೂಟ್‍‍ಗಳನ್ನು ಬಳಸಲು ಸ್ವಲ್ಪವಾದರೂ ತರಬೇತಿಯ ಅವಶ್ಯಕತೆಯಿರುತ್ತದೆ. ತರಬೇತಿಯಿಲ್ಲದಿದ್ದರೆ, ಜನರಿಗೆ ಅವುಗಳನ್ನು ತೆರೆಯಲೂ ಸಹ ಸಾಧ್ಯವಾಗುವುದಿಲ್ಲ.

ವಿಮಾನಗಳಲ್ಲಿ ಪ್ಯಾರಾಚೂಟ್‍‍ಗಳೇಕೆ ಇರುವುದಿಲ್ಲ ಗೊತ್ತಾ?

ಪ್ಯಾರಾಚೂಟ್‍‍ಗಳನ್ನು ತೆರೆದು ನೆಲದ ಮೇಲೆ ಸುರಕ್ಷಿತವಾಗಿ ನಿಲ್ಲುವುದು ಅಷ್ಟು ಸುಲಭದ ಕೆಲಸವಲ್ಲ. ವಿಮಾನಗಳ ಸೀಟಿನಡಿಯಲ್ಲಿರುವ ಪ್ಯಾರಾಚೂಟ್‍‍ಗಳನ್ನು ಹೊರತೆಗೆದು, ತುರ್ತು ಸನ್ನಿವೇಶಗಳಲ್ಲಿ ಬಳಸುವುದು ಇನ್ನಷ್ಟು ಕಷ್ಟವಾಗಲಿದೆ.

ವಿಮಾನಗಳಲ್ಲಿ ಪ್ಯಾರಾಚೂಟ್‍‍ಗಳೇಕೆ ಇರುವುದಿಲ್ಲ ಗೊತ್ತಾ?

3.ಹೊರಕ್ಕೆ ನೆಗೆಯುವುದು ಕಷ್ಟ

ವಿಮಾನಗಳಿಂದ ಹೊರಕ್ಕೆ ನೆಗೆಯಲು ವಿಮಾನಗಳನ್ನು ಮರುವಿನ್ಯಾಸಗೊಳಿಸಬೇಕಾಗುತ್ತದೆ. ಈಗ ಇರುವ ಬಾಗಿಲುಗಳಿಂದ ಅಥವಾ ಎಮರ್ಜೆನ್ಸಿ ದ್ವಾರಗಳಿಂದ ಹೊರಕ್ಕೆ ನೆಗೆದರೆ ವಿಮಾನಗಳ ರೆಕ್ಕೆ ಅಥವಾ ಹಿಂಭಾಗಕ್ಕೆ ತೊಂದರೆಯಾಗುತ್ತದೆ.

ವಿಮಾನಗಳಲ್ಲಿ ಪ್ಯಾರಾಚೂಟ್‍‍ಗಳೇಕೆ ಇರುವುದಿಲ್ಲ ಗೊತ್ತಾ?

4.ರಕ್ಷಿಸುವ ಸಾಧ್ಯತೆ ಕಡಿಮೆ

ವಿಮಾನಗಳಲ್ಲಿ ಪ್ಯಾರಾಚೂಟ್‍‍ಗಳನ್ನು ಬಳಸಿ ಹೊರಕ್ಕೆ ನೆಗೆಯಲು ಹಗಲಾಗಿರಬೇಕು, ವಿಮಾನವು ಭೂಮಿಯ ಮೇಲೆ ಹಾರಾಡುತ್ತಿರಬೇಕು. ಎಲ್ಲ ಪ್ರಯಾಣಿಕರೂ ಹೊರಕ್ಕೆ ನೆಗೆಯುವ ಸನ್ನಿವೇಶಗಳಿರಬೇಕು.

ವಿಮಾನಗಳಲ್ಲಿ ಪ್ಯಾರಾಚೂಟ್‍‍ಗಳೇಕೆ ಇರುವುದಿಲ್ಲ ಗೊತ್ತಾ?

ಇದುವರೆಗೂ ವಿಮಾನಗಳಲ್ಲಿ ಪ್ಯಾರಾಚೂಟ್‍‍ಗಳನ್ನು ಬಳಸಿ ಪ್ರಯಾಣಿಕರು ಹೊರಬಂದ ಯಾವುದೇ ಘಟನೆಗಳು ನಡೆದಿಲ್ಲ. ಪ್ಯಾರಾಚೂಟ್‍‍ಗಳಿಂದ ಹೊರಕ್ಕೆ ನೆಗೆಯುವ ಬದಲು ವಿಮಾನಗಳಲ್ಲಿಯೇ ಇರುವುದು ಒಳ್ಳೆಯದು.

Most Read Articles

Kannada
English summary
Why Don't Airlines Have Parachutes for Passengers? - Read in Kannada
Story first published: Wednesday, January 8, 2020, 14:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X