ವಿಮಾನದ ಸೀಟುಗಳೇಕೆ ನೀಲಿ ಬಣ್ಣದಲ್ಲಿರುತ್ತವೆ?

ನಮ್ಮಲ್ಲಿ ಬಹಳಷ್ಟು ಜನರು ವಿಮಾನಗಳಲ್ಲಿ ಸಂಚರಿಸಿರುತ್ತೇವೆ. ಹೀಗೆ ಸಂಚರಿಸುವಾಗ ವಿಮಾನಗಳಲ್ಲಿರುವ ನೀಲಿ ಬಣ್ಣದ ಸೀಟುಗಳನ್ನು ಕಾಣಬಹುದು. ಹಲವು ಬಣ್ಣಗಳಿರುವಾಗ ವಿಮಾನಗಳಲ್ಲಿ ನೀಲಿ ಬಣ್ಣದ ಸೀಟುಗಳೇ ಏಕಿರುತ್ತವೆ ಎಂಬ ಪ್ರಶ್ನೆ ಕಾಡುವುದು ಸಹಜ.

ವಿಮಾನದ ಸೀಟುಗಳೇಕೆ ನೀಲಿ ಬಣ್ಣದಲ್ಲಿರುತ್ತವೆ?

ಈ ಪ್ರಶ್ನೆಗೆ ಉತ್ತರಿಸುವ ಕೆಲವರು ವಿಮಾನಗಳು ಆಕಾಶದಲ್ಲಿ ಸಂಚರಿಸುತ್ತವೆ. ಆಕಾಶದ ಬಣ್ಣವು ನೀಲಿಯಾಗಿರುವ ಕಾರಣಕ್ಕೆ ವಿಮಾನಗಳಲ್ಲಿರುವ ಸೀಟುಗಳೂ ಸಹ ನೀಲಿ ಬಣ್ಣವನ್ನು ಹೊಂದಿರುತ್ತವೆ ಎಂದು ಹೇಳುತ್ತಾರೆ. ಆದರೆ ಇದು ಸರಿಯಾದ ಉತ್ತರವಲ್ಲ.

ವಿಮಾನದ ಸೀಟುಗಳೇಕೆ ನೀಲಿ ಬಣ್ಣದಲ್ಲಿರುತ್ತವೆ?

ವಿಮಾನಗಳಲ್ಲಿರುವ ಸೀಟುಗಳು ನೀಲಿ ಬಣ್ಣವನ್ನು ಏಕೆ ಹೊಂದಿರುತ್ತವೆ ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ. ವಿಮಾನಗಳಲ್ಲಿ ನೀಲಿ ಬಣ್ಣದ ಸೀಟುಗಳ ಬಳಕೆಯನ್ನು ಹಲವಾರು ದಶಕಗಳ ಹಿಂದೆ ಆರಂಭಿಸಲಾಯಿತು.

ವಿಮಾನದ ಸೀಟುಗಳೇಕೆ ನೀಲಿ ಬಣ್ಣದಲ್ಲಿರುತ್ತವೆ?

ಸದ್ಯಕ್ಕೆ ಪ್ರಪಂಚದಲ್ಲಿರುವ ಎಲ್ಲಾ ವಿಮಾನಗಳಲ್ಲಿಯೂ ನೀಲಿ ಬಣ್ಣದ ಸೀಟುಗಳನ್ನೇ ಬಳಸಲಾಗುತ್ತಿದೆ. ಬ್ರಿಟನ್ನಿನ ವಿಜ್ಞಾನಿಗಳ ಸಂಶೋಧನೆಯ ಪ್ರಕಾರ, ಬಹುತೇಕ ಜನರು ನೀಲಿ ಬಣ್ಣವನ್ನು ವಿಶ್ವಾಸಾರ್ಹತೆ ಹಾಗೂ ಸುರಕ್ಷತೆಗೆ ಹೋಲಿಸುತ್ತಾರೆ.

ವಿಮಾನದ ಸೀಟುಗಳೇಕೆ ನೀಲಿ ಬಣ್ಣದಲ್ಲಿರುತ್ತವೆ?

ಏರೋಫೋಬಿಯಾದಿಂದ ಬಳಲುವವರಿಗೆ ನೀಲಿ ಬಣ್ಣವು ಸಹಾಯ ಮಾಡುತ್ತದೆ. ಈ ಬಣ್ಣದಿಂದ ಏರೋಫೋಬಿಯಾ ಹೊಂದಿರುವವರು ಶಾಂತವಾಗಿರುತ್ತಾರೆ. ವರದಿಗಳ ಪ್ರಕಾರ 90% ಜನರು ಕಂಪನಿಯ ಬಣ್ಣದ ಆಧಾರದ ಮೇಲೆ ಕಂಪನಿಗೆ ವಾಪಸಾಗುತ್ತಾರೆ.

ವಿಮಾನದ ಸೀಟುಗಳೇಕೆ ನೀಲಿ ಬಣ್ಣದಲ್ಲಿರುತ್ತವೆ?

ನೀಲಿ ಬಣ್ಣವು ಧೂಳು, ಕಲೆ ಹಾಗೂ ಹೊಗೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕಾಣದಂತೆ ಮಾಡುತ್ತದೆ. ಬಿಳಿ ಬಣ್ಣಕ್ಕೆ ಹೋಲಿಸಿದರೆ ನೀಲಿ ಬಣ್ಣದ ಸೀಟುಗಳನ್ನು ಹೆಚ್ಚಿನ ಸಮಯದವರೆಗೆ ಬಳಸಲಾಗುತ್ತದೆ. ಬಿಳಿ ಬಣ್ಣದ ಸೀಟುಗಳಲ್ಲಿರುವ ಕಲೆಗಳು ಎದ್ದು ಕಾಣುತ್ತವೆ.

ವಿಮಾನದ ಸೀಟುಗಳೇಕೆ ನೀಲಿ ಬಣ್ಣದಲ್ಲಿರುತ್ತವೆ?

ವಿಮಾನಗಳಲ್ಲಿ ಆರಂಭದಿಂದಲೂ ನೀಲಿ ಬಣ್ಣದ ಸೀಟುಗಳನ್ನು ಬಳಸುತ್ತಿಲ್ಲ. ಈ ಬಗ್ಗೆ ಸಂಶೋಧನೆಯನ್ನು ನಡೆಸಲಾಗಿದೆ. 1970 ಹಾಗೂ 1980ರ ದಶಕದಲ್ಲಿ ಕೆಲವು ವಿಮಾನಯಾನ ಕಂಪನಿಗಳು ಸೀಟುಗಳನ್ನು ಕೆಂಪು ಬಣ್ಣಕ್ಕೆ ಬದಲಿಸಿದ್ದವು.

ವಿಮಾನದ ಸೀಟುಗಳೇಕೆ ನೀಲಿ ಬಣ್ಣದಲ್ಲಿರುತ್ತವೆ?

ನಂತರ ಸೀಟುಗಳನ್ನು ನೀಲಿ ಬಣ್ಣಕ್ಕೆ ಬದಲಿಸಲಾಯಿತು. ಕೆಂಪು ಬಣ್ಣದ ಸೀಟುಗಳಿದ್ದಾಗ ಪ್ರಯಾಣಿಕರು ಹೆಚ್ಚು ಆಕ್ರಮಣಕಾರಿ ಹಾಗೂ ಕೋಪಿಷ್ಟರಾಗಿದ್ದ ಕಾರಣಕ್ಕೆ ನೀಲಿ ಬಣ್ಣಕ್ಕೆ ಬದಲಿಸಲಾಯಿತು ಎಂದು ಹೇಳಲಾಗಿದೆ.

ವಿಮಾನದ ಸೀಟುಗಳೇಕೆ ನೀಲಿ ಬಣ್ಣದಲ್ಲಿರುತ್ತವೆ?

ವಿಮಾನಗಳಲ್ಲಿರುವ ಸೀಟುಗಳನ್ನು ಆರ್ಟಿಫಿಶಿಯಲ್ ಲೆದರ್ ಹಾಗೂ ಫ್ಯಾಬ್ರಿಕ್‍‍ಗಳಿಂದ ಮಾಡಲಾಗಿರುತ್ತದೆ. ಈ ರೀತಿಯ ಸೀಟುಗಳನ್ನು ಹೆಚ್ಚು ದೂರ ಚಲಿಸುವ ವಿಮಾನಗಳಲ್ಲಿ ಅಳವಡಿಸಲಾಗಿರುತ್ತದೆ.

ವಿಮಾನದ ಸೀಟುಗಳೇಕೆ ನೀಲಿ ಬಣ್ಣದಲ್ಲಿರುತ್ತವೆ?

ಈ ಸೀಟುಗಳಿಂದ ಪ್ರಯಾಣಿಕರ ಚರ್ಮಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಹಾಗೂ ಹೆಚ್ಚು ಬೆವರುವುದಿಲ್ಲವೆಂಬ ಕಾರಣಕ್ಕೆ ಇವುಗಳನ್ನು ಬಳಸಲಾಗುತ್ತದೆ. ಕಡಿಮೆ ದೂರ ಚಲಿಸುವ ವಿಮಾನಗಳಲ್ಲಿ ಹೆಚ್ಚು ಕಲೆಗಳಾಗುವುದಿಲ್ಲವೆಂಬ ಕಾರಣಕ್ಕೆ ಆರ್ಟಿಫಿಶಿಯಲ್ ಲೆದರ್ ಬಳಲಾಗುತ್ತದೆ.

Article Published On: Friday, January 10, 2020, 16:26 [IST]
English summary
Why Airplane seats are blue in color. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+