ಪೊಲೀಸರಿಗ್ಯಾಕೆ ಬುಲೆಟ್ ಪ್ರೂಫ್ ವಾಹನವಿಲ್ಲ: ಗಣ್ಯರಿಗಿರುವ ಭದ್ರತೆ ಆರಕ್ಷಕರಿಗಿಲ್ಲವೇ? ಕಾರಣ ಇಲ್ಲಿದೆ...

ಅತ್ಯಂತ ಶ್ರೀಮಂತರು, ಮುಖ್ಯಮಂತ್ರಿಗಳು, ಪ್ರಧಾನ ಮಂತ್ರಿ ಸೇರಿದಂತೆ ಗಣ್ಯ ವ್ಯಕ್ತಿಗಳು ವಾಹನಗಳಲ್ಲಿ ಸಂಚರಿಸಬೇಕಾದರೆ ಕಡ್ಡಾಯವಾಗಿ ಬುಲೆಟ್ ಪ್ರೂಫ್ ವಾಹನಗಳನ್ನು ಬಳಸುತ್ತಾರೆ. ಈ ಬುಲೆಟ್ ಪ್ರೂಫ್ ವಾಹನಗಳು ಅಪಾಯಕಾರಿ ಪರಿಸ್ಥಿತಿಗಳಲ್ಲಿ ಭದ್ರತೆಯನ್ನು ಒದಗಿಸುತ್ತವೆ.

Recommended Video

Jeep Meridian Kannada Review | 3rd Row Seat Space, Off-road Performance, Features, 4x4 & More

ವಿಶ್ವದ ಕೆಲವು ಸುಧಾರಿತ ಸುರಕ್ಷಿತ ಕಾರುಗಳು ರಾಸಾಯನಿಕ ಮತ್ತು ಜೈವಿಕ ಆಯುಧಗಳನ್ನು ಸಮರ್ಥವಾಗಿ ಎದುರಿಸಬಲ್ಲವು. ಜೊತೆಗೆ ಮಾರ್ಟರ್ ಶೆಲ್‌ಗಳು, ಮೆಷಿನ್ ಗನ್‌ಗಳು ಮತ್ತು ಹ್ಯಾಂಡ್ ಗ್ರೆನೇಡ್‌ಗಳನ್ನು ಸಹ ತಡೆದುಕೊಳ್ಳಬಲ್ಲವು. ಇವೆಲ್ಲವೂ ಭಾರೀ ಭದ್ರತೆ ಅಗತ್ಯವಿರುವ ಪ್ರಧಾನಿಯಂತಹ ವ್ಯಕ್ತಿಗಳಿಗೆ ಮಾತ್ರ ಒದಗಿಸಲಾಗುತ್ತದೆ.

ಪೊಲೀಸರಿಗ್ಯಾಕೆ ಬುಲೆಟ್ ಪ್ರೂಫ್ ವಾಹನವಿಲ್ಲ: ಗಣ್ಯರಿಗಿರುವ ಭದ್ರತೆ ಆರಕ್ಷಕರಿಗಿಲ್ಲವೇ? ಕಾರಣ ಇಲ್ಲಿದೆ...

ಆದರೆ ಪ್ರತಿನಿತ್ಯ ಅಪಾಯಕಾರಿ ಸ್ಥಿತಿಯಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡುವ ಪೊಲೀಸರಿಗೆ ಮಾತ್ರ ಬುಲೆಟ್ ಪ್ರೂಫ್ ವಾಹನಗಳನ್ನು ಏಕೆ ನೀಡುವುದಿಲ್ಲ ಎಂಬ ಅನುಮಾನ ಹಲವರಿಗಿರಬಹುದು. ಪ್ರಪಂಚದಾದ್ಯಂತದ ಅನೇಕ ಪೋಲೀಸ್ ಇಲಾಖೆಗಳು ಅಧಿಕೃತ ವಾಹನಗಳನ್ನು ಹೊಂದಿವೆ, ಅವು ಸ್ವಲ್ಪ ಮಟ್ಟಿಗೆ ಕಾರಿನೊಳಗಿನ ಪೊಲೀಸರನ್ನು ರಕ್ಷಿಸುತ್ತವೆಯಾದರೂ ಗ್ಯಾರೆಂಟಿ ಇಲ್ಲ.

ಪೊಲೀಸರಿಗ್ಯಾಕೆ ಬುಲೆಟ್ ಪ್ರೂಫ್ ವಾಹನವಿಲ್ಲ: ಗಣ್ಯರಿಗಿರುವ ಭದ್ರತೆ ಆರಕ್ಷಕರಿಗಿಲ್ಲವೇ? ಕಾರಣ ಇಲ್ಲಿದೆ...

ಆದರೆ ಪೊಲೀಸ್ ಬುಲೆಟ್ ಪ್ರೂಫ್ ಜಾಕೆಟ್‌ಗಳಂತೆ ಬುಲೆಟ್ ಪ್ರೂಫ್ ವಾಹನಗಳನ್ನು ಒದಗಿಸಿಲ್ಲ. ತಜ್ಞರ ಪ್ರಕಾರ ಬುಲೆಟ್ ಪ್ರೂಫ್ ಕಾರು ತಯಾರಿಕೆಗೆ ತಗಲುವ ವೆಚ್ಚ ಸಾಮಾನ್ಯ ಕಾರಿಗಿಂತ ಮೂರು ಪಟ್ಟು ಹೆಚ್ಚಾಗಿರುತ್ತದೆ. ಪೊಲೀಸ್ ಕಾರುಗಳನ್ನು ದೊಡ್ಡ ಪ್ರಮಾಣದಲ್ಲಿ ಬುಲೆಟ್ ಪ್ರೂಫ್ ಮಾಡಿದರೆ, ಅದಕ್ಕೆ ಸಾಕಷ್ಟು ವೆಚ್ಚವಾಗುತ್ತದೆ.

ಪೊಲೀಸರಿಗ್ಯಾಕೆ ಬುಲೆಟ್ ಪ್ರೂಫ್ ವಾಹನವಿಲ್ಲ: ಗಣ್ಯರಿಗಿರುವ ಭದ್ರತೆ ಆರಕ್ಷಕರಿಗಿಲ್ಲವೇ? ಕಾರಣ ಇಲ್ಲಿದೆ...

ಗುಂಡೇಟಿನ ವಿರುದ್ಧ ಹೆಚ್ಚುವರಿ ರಕ್ಷಣಾತ್ಮಕ ಪದರಗಳೊಂದಿಗೆ ಪೊಲೀಸ್ ವಾಹನವನ್ನು ಸಜ್ಜುಗೊಳಿಸುವುದರಿಂದ ಭಾರೀ ವೆಚ್ಚವಾಗುತ್ತದೆ. ಈ ಕಾರಣದಿಂದಾಗಿ, ಅನೇಕ ದೇಶಗಳಲ್ಲಿ ಪೊಲೀಸ್ ವಾಹನಗಳು ಬುಲೆಟ್ ಪ್ರೂಫ್ ವಾಹನಗಳನ್ನು ಒದಗಿಸಲು ಹಿಂದೇಟು ಹಾಕುತ್ತಿರುವುದರಿಂದ ಪೊಲೀಸರು ಸಾಮಾನ್ಯ ಭದ್ರತೆಯೊಂದಿಗೆ ವಾಹನಗಳನ್ನು ಬಳಸುತ್ತಾರೆ.

ಪೊಲೀಸರಿಗ್ಯಾಕೆ ಬುಲೆಟ್ ಪ್ರೂಫ್ ವಾಹನವಿಲ್ಲ: ಗಣ್ಯರಿಗಿರುವ ಭದ್ರತೆ ಆರಕ್ಷಕರಿಗಿಲ್ಲವೇ? ಕಾರಣ ಇಲ್ಲಿದೆ...

ಈ ನಗರದಲ್ಲಿ ಪೊಲೀಸರಿಗೆ ಬುಲೆಟ್ ಪ್ರೂಫ್ ವಾಹನ

ಯುಎಸ್‌ನ ಇಂಡಿಯಾನಾದಲ್ಲಿರುವ ಎಲ್‌ವುಡ್ ಎಂಬ ನಗರದಲ್ಲಿನ ಪೊಲೀಸರಿಗೆ ಇತ್ತೀಚೆಗೆ ತಮ್ಮ ಫ್ಲೀಟ್‌ನಲ್ಲಿರುವ ಎಲ್ಲಾ ಅಧಿಕೃತ ಗಸ್ತು ಮತ್ತು ಕ್ರೂಸರ್ ಕಾರುಗಳಲ್ಲಿ ಬ್ಯಾಲಿಸ್ಟಿಕ್ ವಿರೋಧಿ ವಿಂಡ್‌ಶೀಲ್ಡ್‌ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಇದೇನಪ್ಪ ವಿಶ್ವದ ಯಾವುದೇ ದೇಶದಲ್ಲಿ ಇಲ್ಲದ ಭದ್ರತೆಯನ್ನು ಈ ಪೊಲೀಸರು ಪಡೆದಿದ್ದಾರೆ ಎಂಬ ಅನುಮಾನ ಬರಬಹುದು.

ಪೊಲೀಸರಿಗ್ಯಾಕೆ ಬುಲೆಟ್ ಪ್ರೂಫ್ ವಾಹನವಿಲ್ಲ: ಗಣ್ಯರಿಗಿರುವ ಭದ್ರತೆ ಆರಕ್ಷಕರಿಗಿಲ್ಲವೇ? ಕಾರಣ ಇಲ್ಲಿದೆ...

ಆದರೆ ಇದಕ್ಕೂ ಒಂದು ಬಲವಾದ ಕಾರಣವಿದೆ, ಇತ್ತೀಚೆಗೆ ಕಾರಿನ ವಿಂಡ್ ಶೀಲ್ಡ್ ಅನ್ನು ಸೀಳಿದ ಬುಲೆಟ್‌ ನೇರವಾಗಿ ಪೊಲೀಸ್ ಅಧಿಕಾರಿಯೊಬ್ಬರಿಗೆ ತಗುಲಿ ಸಾವನ್ನಪ್ಪಿದ್ದರು. ನಂತರ ಇದನ್ನು ಗಂಭಿರವಾಗಿ ತೆಗೆದುಕೊಂಡ ಅಲ್ಲಿನ ಉನ್ನತಾಧಿಕಾರಿಗಳು ಈ ನಿರ್ಣಯಕ್ಕೆ ಬಂದಿದ್ದಾರೆ. ಅಸೋಸಿಯೇಟೆಡ್ ಪ್ರೆಸ್ ಪ್ರಕಾರ, US$35,000 ವೆಚ್ಚದಲ್ಲಿ ತನ್ನ 19 ವಾಹನಗಳಿಗೆ ವಿಶೇಷ ವಿಂಡ್‌ಶೀಲ್ಡ್‌ಗಳನ್ನು ಸ್ಥಾಪಿಸಲು ಮುಂದಾಗಿದೆ.

ಪೊಲೀಸರಿಗ್ಯಾಕೆ ಬುಲೆಟ್ ಪ್ರೂಫ್ ವಾಹನವಿಲ್ಲ: ಗಣ್ಯರಿಗಿರುವ ಭದ್ರತೆ ಆರಕ್ಷಕರಿಗಿಲ್ಲವೇ? ಕಾರಣ ಇಲ್ಲಿದೆ...

ಬ್ಯಾಲಿಸ್ಟಿಕ್ ಪ್ಯಾನಲ್‌ಗಳನ್ನು ಹೇಗೆ ತಯಾರಿಸಲಾಗುತ್ತದೆ?

ಗುಂಡು ನಿರೋಧಕ ಗಾಜು (ಬುಲೆಟ್ ಪ್ರೂಫ್ ಗ್ಲಾಸ್) ಸಾಮಾನ್ಯವಾಗಿ ಪಾಲಿಕಾರ್ಬೊನೇಟ್ ಪ್ಲಾಸ್ಟಿಕ್‌ನ ಹಲವಾರು ಪದರಗಳನ್ನು ಹೊಂದಿರುತ್ತದೆ. ಇದು ರಾಸಾಯನಿಕಗಳೊಂದಿಗೆ ಸಂಯೋಜನೆಗೊಂಡು ಗಾಜಿನ ವಿನ್ಯಾಸವನ್ನು ಬಲಪಡಿಸಲು ಗಾಳಿಯ ಪದರವನ್ನು ತೆಗೆದುಹಾಕುತ್ತದೆ. ಮುಂದಿನ ಪ್ರಕ್ರಿಯೆಯಲ್ಲಿ ಸಂಪೂರ್ಣ ರಚನೆಯು ಒತ್ತಡಕ್ಕೊಳಗಾಗಿ ತನ್ನ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಲು ಬಿಸಿಮಾಡಲಾಗುತ್ತದೆ.

ಪೊಲೀಸರಿಗ್ಯಾಕೆ ಬುಲೆಟ್ ಪ್ರೂಫ್ ವಾಹನವಿಲ್ಲ: ಗಣ್ಯರಿಗಿರುವ ಭದ್ರತೆ ಆರಕ್ಷಕರಿಗಿಲ್ಲವೇ? ಕಾರಣ ಇಲ್ಲಿದೆ...

ಬ್ಯಾಲಿಸ್ಟಿಕ್ ಪ್ಯಾನಲ್‌ಗಳು ಹೇಗೆ ರಕ್ಷಿಸುತ್ತವೆ?

ಒಂದು ಗುಂಡು ಸಾಮಾನ್ಯ ಗಾಜಿನ ಫಲಕವನ್ನು ಹೊಡೆದಾಗ ಗುಂಡಿನ ವೇಗವು ಬಹುತೇಕ ಒಂದೇ ಆಗಿರುವುದರಿಂದ ಗಾಜು ಒಡೆದುಹೋಗುತ್ತದೆ. ಅಂದರೆ ಗಾಜಿನ ಫಲಕವನ್ನು ಹೊಡೆಯುವಾಗ ಅದು ವ್ಯಕ್ತಿಯನ್ನು ಸುಲಭವಾಗಿ ತಾಗಬಹುದು. ಆದರೆ ಬುಲೆಟ್ ಪ್ರೂಫ್ ಗ್ಲಾಸ್‌ಗೆ ಹೊಡೆಯುವ ಗುಂಡು ವಿಭಿನ್ನ ಪರಿಣಾಮವನ್ನು ಬೀರುತ್ತದೆ.

ಪೊಲೀಸರಿಗ್ಯಾಕೆ ಬುಲೆಟ್ ಪ್ರೂಫ್ ವಾಹನವಿಲ್ಲ: ಗಣ್ಯರಿಗಿರುವ ಭದ್ರತೆ ಆರಕ್ಷಕರಿಗಿಲ್ಲವೇ? ಕಾರಣ ಇಲ್ಲಿದೆ...

ಬುಲೆಟ್, ಬುಲೆಟ್ ಪ್ರೂಫ್ ಪ್ಯಾನೆಲ್ ಅನ್ನು ಹೊಡೆದಾಗ, ಅದರ ಪ್ರಭಾವವು ಸಂಪೂರ್ಣ ಫಲಕದ ಮೇಲೆ ಏಕರೂಪವಾಗಿರುತ್ತದೆ. ಈ ವೇಳೆ ಗಾಜು ಬುಲೆಟ್ ಶಕ್ತಿಯನ್ನು ಹೀರಿಕೊಳ್ಳುತ್ತದೆ. ಬುಲೆಟ್ ಪ್ರೂಫ್ ಗಾಜಿನ ಗುಣಮಟ್ಟವನ್ನು ಅವಲಂಬಿಸಿ, ಬುಲೆಟ್ ಸಾಮಾನ್ಯವಾಗಿ ಅದನ್ನು ಭೇದಿಸಲು ಸಾಧ್ಯವಾಗುವುದಿಲ್ಲ. ಗಾಜು ಕೂಡ ಸಾಮಾನ್ಯವಾಗಿ ಒಡೆಯುವುದಿಲ್ಲ ಅಂದರೆ ವಾಹನದೊಳಗಿರುವವರಿಗೆ ಯಾವುದೇ ಹಾನಿಯಾಗುವುದಿಲ್ಲ.

ಪೊಲೀಸರಿಗ್ಯಾಕೆ ಬುಲೆಟ್ ಪ್ರೂಫ್ ವಾಹನವಿಲ್ಲ: ಗಣ್ಯರಿಗಿರುವ ಭದ್ರತೆ ಆರಕ್ಷಕರಿಗಿಲ್ಲವೇ? ಕಾರಣ ಇಲ್ಲಿದೆ...

ಬುಲೆಟ್ ಪ್ರೂಫ್ ಗ್ಲಾಸ್ ಪ್ಯಾನೆಲ್‌ಗಳು ಸಾಂಪ್ರದಾಯಿಕ ಗಾಜಿನ ಪ್ಯಾನೆಲ್‌ಗಳಿಗಿಂತ ನಿಸ್ಸಂಶಯವಾಗಿ ಭಾರವಾಗಿರುತ್ತವೆ. ಆದ್ದರಿಂದ, ಪ್ರತಿ ಸಾಮಾನ್ಯ ವಾಹನಕ್ಕೂ ಸುಲಭವಾಗಿ ಹೊಂದಿಕೊಳ್ಳುವುದಿಲ್ಲ, ಇದು ಸಾಮಾನ್ಯವಾಗಿ ಸೂಕ್ಷ್ಮ ಸಂದರ್ಭಗಳಲ್ಲಿ ನಿರ್ಧಿಷ್ಟ ವಾಹನಗಳಿಗೆ ಮಾತ್ರ ಬಳಸಲಾಗುತ್ತದೆ. ಪ್ರತಿ ವಾಹನಕ್ಕು ಬಳಸಬೇಕಿದ್ದಲ್ಲಿ ಎಲ್ಲವನ್ನು ಮಾಡಿಫೈಗೊಳಿಸಬೇಕಾಗುತ್ತದೆ. ವಾಹನ ತಯಾರಕರು ಕಂಪನಿಯಿಂದ ನೀಡುವಾಗ ಸಾಮನ್ಯ ಗ್ಲಾಸ್ ಬದಲು ಬುಲೆಟ್ ಪ್ರೂಫ್ ಬೇಕಿದ್ದಲ್ಲಿ ಕಸ್ಟಮೈಜೇಷನ್ ಮಾಡುತ್ತಾರೆ. ಇದರ ಬೆಲೆಯು ವಾಹನದ ಎರಡುಪಟ್ಟು ಹೆಚ್ಚಾಗುತ್ತದೆ.

ಪೊಲೀಸರಿಗ್ಯಾಕೆ ಬುಲೆಟ್ ಪ್ರೂಫ್ ವಾಹನವಿಲ್ಲ: ಗಣ್ಯರಿಗಿರುವ ಭದ್ರತೆ ಆರಕ್ಷಕರಿಗಿಲ್ಲವೇ? ಕಾರಣ ಇಲ್ಲಿದೆ...

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಪೊಲೀಸರು ಕರ್ತವ್ಯದಲ್ಲಿದ್ದಾಗ ನಡೆಯುವ ದಾಳಿಗಳಿಂದಾಗಿ ಹಲವರು ಈ ಹಿಂದೆ ಜೀವ ಕಳೆದುಕೊಂಡಿದ್ದಾರೆ. ವಾಹನದಲ್ಲಿದ್ದಾಗ ರಕ್ಷಣೆಗೆ ವಿಂಡ್‌ಶೀಲ್ಡ್ ಪ್ರೊಟೆಕ್ಟರ್‌ನಂತಹ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆಯಾದರೂ, ಇವು ಕಲ್ಲು ಎಸೆತ ಮತ್ತು ಇತರ ದಾಳಿಗಳಿಂದ ರಕ್ಷಣೆ ನೀಡುತ್ತವೆಯೇ ಹೊರತು ಬಂದೂಕಿನಿಂದ ಹೊರಬಂದ ಬುಲೆಟ್‌ನಿಂದ ರಕ್ಷಣೆ ನೀಡುವುದಲ್ಲ. ಹಾಗಾಗಿ ಸಾರ್ವಜನಿಕರ ರಕ್ಷಣೆಗೆ ನಿಲ್ಲುವ ಪೊಲೀಸರಿಗೂ ಬುಲೆಟ್ ಪ್ರೂಫ್ ಕಾರಿನ ಅಗತ್ಯವಿದೆ.

Most Read Articles

Kannada
English summary
Why Police Dont Have Bulletproof Vehicles Heres the Reason
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X