45 ಡಿಗ್ರಿ ದಾಟಿದ ತಾಪಮಾನ: ಕಾರಿನ ಬಾನೆಟ್‌ ಅನ್ನೇ ಒಲೆಯಾಗಿಸಿಕೊಂಡು ರೊಟ್ಟಿ ಮಾಡಿದ ಮಹಿಳೆ

ದೇಶದ ಬಹುತೇಕ ಭಾಗಗಳಲ್ಲಿ ತಾಪಮಾನ 45 ಡಿಗ್ರಿಗಳಿಗೆ ತಲುಪಿದೆ. ಬಿಸಿಲಿನ ಬೇಗೆ ಹೆಚ್ಚಾಗಿದ್ದು, ಈಗ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಇಷ್ಟು ಬಿಸಿಲಿನಲ್ಲಿ ಅಡುಗೆಯೇ ತಯಾರಿಸಬಹುದು ಎಂದು ಕೆಲವರು ಗೇಲಿ ಮಾಡುತ್ತಿದ್ದರೆ, ಇನ್ನೂ ಕೆಲವರು ಈ ಬಿಸಿಲನ್ನೇ ಬಳಸಿಕೊಂಡು ಅಡುಗೆ ಮಾಡಿ ಅಚ್ಚರಿಗೊಳಿಸುತ್ತಿದ್ದಾರೆ.

 45 ಡಿಗ್ರಿ ದಾಟಿದ ತಾಪಮಾನ: ಕಾರಿನ ಬಾನೆಟ್‌ ಅನ್ನೇ ಒಲೆಯಾಗಿಸಿಕೊಂಡು ಅಡುಗೆ ತಯಾರಿ

ಇದನ್ನು ಕೇಳಿ ನಿಮಗೆ ನಗು ಬಂದಿರಬಹುದು ಆದರೆ ಇದು ನಿಜ. ಇತ್ತೀಚೆಗೆ, ಒಡಿಶಾದ ಮಹಿಳೆಯೊಬ್ಬರು ಕಾರಿನ ಬಾನೆಟ್ ಮೇಲೆ ಬ್ರೆಡ್, ರೊಟ್ಟಿ ಬೇಯಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಮಹಿಳೆಯೊಬ್ಬರು ಮೊದಲು ರೊಟ್ಟಿ ಉರಿದು, ನಂತರ ಬಾನೆಟ್ ಮೇಲೆ ಇಟ್ಟು ಅಡುಗೆ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು.

45 ಡಿಗ್ರಿ ದಾಟಿದ ತಾಪಮಾನ: ಕಾರಿನ ಬಾನೆಟ್‌ ಅನ್ನೇ ಒಲೆಯಾಗಿಸಿಕೊಂಡು ಅಡುಗೆ ತಯಾರಿ

ಸುಮಾರು ಒಂದು ನಿಮಿಷದ ಈ ವೀಡಿಯೊದಲ್ಲಿ, ಹೆಚ್ಚಿನ ಶಾಖದಿಂದಾಗಿ ಕಾರಿನ ಬಾನೆಟ್‌ ಗ್ಯಾಸ್‌ ಮೇಲಿನ ಪ್ಯಾನ್‌ನಷ್ಟೇ ಹೀಟ್‌ ಆಗುತ್ತಿದ್ದು, ಅದರ ಮೇಲೆ ರೊಟ್ಟಿ ಬೇಯಿಸುತ್ತಿದ್ದಾರೆ. ವಿಡಿಯೋದಲ್ಲಿನ ಮಹಿಳೆ ಥೇಟ್‌ ಪ್ಯಾನ್ ಮೇಲೆ ಮಾಡಿದಂತೆ ರೊಟ್ಟಿಯನ್ನು ಬಾನೆಟ್ ಮೇಲೆ ತಿರುಗಿಸಿ ಸುಟ್ಟಿದ್ದಾರೆ.

45 ಡಿಗ್ರಿ ದಾಟಿದ ತಾಪಮಾನ: ಕಾರಿನ ಬಾನೆಟ್‌ ಅನ್ನೇ ಒಲೆಯಾಗಿಸಿಕೊಂಡು ಅಡುಗೆ ತಯಾರಿ

ಒಡಿಶಾದ ಹಲವು ಪ್ರದೇಶಗಳಲ್ಲಿ ತಾಪಮಾನವು 40 ಡಿಗ್ರಿ ತಲುಪಿದೆ. ಅಷ್ಟು ಪ್ರಮಾಣದ ಬಿಸಿಲು ಮತ್ತು ಶಾಖದಲ್ಲಿ ಮನೆಯ ಹೊರಗೆ ನಿಲ್ಲಿಸಿದ ವಾಹನಗಳು ಬೆಂಕಿಯಂತೆ ಬಿಸಿಯಾಗುತ್ತವೆ. ಕಾರುಗಳು ಎಷ್ಟು ಬಿಸಿಯಾಗುತ್ತವೆ ಎಂದರೆ ಅವುಗಳನ್ನು ಮುಟ್ಟಿದರೆ ಕೈ ಸುಟ್ಟು ಹೋಗಬಹುದೆಂಬಂತಾಗುತ್ತದೆ.

45 ಡಿಗ್ರಿ ದಾಟಿದ ತಾಪಮಾನ: ಕಾರಿನ ಬಾನೆಟ್‌ ಅನ್ನೇ ಒಲೆಯಾಗಿಸಿಕೊಂಡು ಅಡುಗೆ ತಯಾರಿ

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗಿದ್ದು, ಜನರು ತಮಾಷೆಯ ಕಾಮೆಂಟ್‌ಗಳನ್ನು ಸಹ ಮಾಡುತ್ತಿದ್ದಾರೆ. ಒಬ್ಬ ಬಳಕೆದಾರ, "ರೋಟಿ ಮಾತ್ರವಲ್ಲ ನಾವು ಕಾರಿನಲ್ಲಿ ದಾಲ್ ಮತ್ತು ಸಬ್ಜಿ ಕೂಡ ಮಾಡಬಹುದು" ಎಂದು ಕಮೆಂಟ್‌ ಮಾಡಿದ್ದಾನೆ.

45 ಡಿಗ್ರಿ ದಾಟಿದ ತಾಪಮಾನ: ಕಾರಿನ ಬಾನೆಟ್‌ ಅನ್ನೇ ಒಲೆಯಾಗಿಸಿಕೊಂಡು ಅಡುಗೆ ತಯಾರಿ

ಅದೇ ಸಮಯದಲ್ಲಿ, ಇನ್ನೊಬ್ಬ ಬಳಕೆದಾರ ಈಗ ತಾಪಮಾನವು ತುಂಬಾ ಹೆಚ್ಚಿರುವುದರಿಂದ, ನಾವು ಕಾರನ್ನು ಸೋಲಾರ್ ಕುಕ್ಕರ್ ಆಗಿ ಬಳಸಬಹುದು ಎಂದು ಪ್ರತಿಕ್ರಿಯಿಸಿದ್ದಾನೆ. ಅದೇ ವೇಳೆ ಬಿಸಿಲಿನಲ್ಲಿ ನಿಲ್ಲಿಸಿದ್ದ ಬೈಕ್ ಸೀಟನ್ನು ಸ್ಪರ್ಶಿಸಿ ಕೈ ಸುಟ್ಟುಕೊಂಡಿರುವುದಾಗಿ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

45 ಡಿಗ್ರಿ ದಾಟಿದ ತಾಪಮಾನ: ಕಾರಿನ ಬಾನೆಟ್‌ ಅನ್ನೇ ಒಲೆಯಾಗಿಸಿಕೊಂಡು ಅಡುಗೆ ತಯಾರಿ

ಬೇಸಿಗೆಯಲ್ಲಿ ನಿಮ್ಮ ಕಾರನ್ನು ಹೀಗೆ ನಿಲ್ಲಿಸಿ

ಬೇಸಿಗೆಯಲ್ಲಿ ತಾಪಮಾನವು ತುಂಬಾ ಹೆಚ್ಚಾಗಿರುತ್ತದೆ ಆದ್ದರಿಂದ ನಿಮ್ಮ ಕಾರು ಅಥವಾ ಬೈಕು ನಿಲುಗಡೆಯಲ್ಲಿ ನೀವು ಹೆಚ್ಚು ಜಾಗರೂಕರಾಗಿರಬೇಕು. ನಿಮ್ಮ ಕಾರನ್ನು ದೀರ್ಘಕಾಲದವರೆಗೆ ನಿಲ್ಲಿಸಲು ನೀವು ಬಯಸಿದರೆ, ಶೆಡ್‌ನಲ್ಲಿ ಅಥವಾ ಬಿಸಿಲಿರದ ನೆಳಿನಲ್ಲಿ ನಿಲ್ಲಿಸಿ. ತೆರೆದ ಪ್ರದೇಶದಲ್ಲಿ ಕಾರನ್ನು ನಿಲ್ಲಿಸುವುದನ್ನು ತಪ್ಪಿಸಿ.

45 ಡಿಗ್ರಿ ದಾಟಿದ ತಾಪಮಾನ: ಕಾರಿನ ಬಾನೆಟ್‌ ಅನ್ನೇ ಒಲೆಯಾಗಿಸಿಕೊಂಡು ಅಡುಗೆ ತಯಾರಿ

ವಿಂಡೋಸ್ ಮತ್ತು ಬಾಗಿಲುಗಳನ್ನು ತೆರೆಯಿರಿ

ನೀವು ಆಕಸ್ಮಿಕವಾಗಿ ಪಾರ್ಕ್ ಮಾಡಿದರೆ ಅಥವಾ ನೇರ ಸೂರ್ಯನ ಬೆಳಕಿನಲ್ಲಿ ನಿಮ್ಮ ಕಾರನ್ನು ನಿಲ್ಲಿಸುವುದು ಅನಿವಾರ್ಯವಾದರೆ, ನೀವು ಮಾಡಬಹುದಾದ ಉತ್ತಮ ಕೆಲಸವೆಂದರೆ ಕಾರನ್ನು ಪ್ರವೇಶಿಸುವ ಮೊದಲು ಎಲ್ಲಾ ಬಾಗಿಲುಗಳು ಅಥವಾ ಕಿಟಕಿಗಳನ್ನು ತೆರೆಯುವುದು. ಹೀಗೆ ಮಾಡುವುದರಿಂದ ಕ್ಯಾಬಿನ್‌ನೊಳಗಿನ ಎಲ್ಲಾ ಬಿಸಿ ಗಾಳಿಯನ್ನು ಹೊರ ಹಾಕುತ್ತದೆ.

45 ಡಿಗ್ರಿ ದಾಟಿದ ತಾಪಮಾನ: ಕಾರಿನ ಬಾನೆಟ್‌ ಅನ್ನೇ ಒಲೆಯಾಗಿಸಿಕೊಂಡು ಅಡುಗೆ ತಯಾರಿ

ಬೇಸಿಗೆಯ ವಾತಾವರಣದಲ್ಲಿ ನಿಮ್ಮ ಕಾರನ್ನು ಹೆಚ್ಚು ಆತಿಥ್ಯಕಾರಿಯಾಗಿ ಮಾಡಲು ಮೇಲೆ ತಿಳಿಸಿದ ಸಲಹೆಗಳು ಉತ್ತಮ ಮಾರ್ಗವಾಗಿದೆ. ಇದರೊಂದಿಗೆ ನೆನಪಿಡಬೇಕಾದ ಮತ್ತೊಂದು ವಿಷಯವೆಂದರೆ ಮರದ ನೆರಳಿನಲ್ಲಿ ಕಾರನ್ನು ನಿಲುಗಡೆ ಮಾಡುವುದನ್ನು ಮರಿಯದಿರಿ, ಹೋದ ಜಾಗದಲ್ಲೆಲ್ಲಾ ಮರದ ನೆರಳನ್ನು ಹುಡುಕುವುದು ತುಸು ಕಷ್ಟವೇ ಆದರೂ ಹೀಗೆ ಮಾಡುವುದರಿಂದ ನಿಮ್ಮ ಕಾರಿನ ಕ್ಯಾಬಿನ್ ಒಳಗೆ ತಾಪಮಾನವನ್ನು ಗಮನಾರ್ಹವಾಗಿ ಸುಧಾರಿಸಬಹುದು.

45 ಡಿಗ್ರಿ ದಾಟಿದ ತಾಪಮಾನ: ಕಾರಿನ ಬಾನೆಟ್‌ ಅನ್ನೇ ಒಲೆಯಾಗಿಸಿಕೊಂಡು ಅಡುಗೆ ತಯಾರಿ

ಸ್ಟೀರಿಂಗ್, ಡ್ಯಾಶ್‌ಬೋರ್ಡ್ ಅನ್ನು ಟವೆಲ್‌ನೊಂದಿಗೆ ಮುಚ್ಚಿ

ಸ್ಟೀರಿಂಗ್ ವೀಲ್ ಮತ್ತು ಡ್ಯಾಶ್‌ಬೋರ್ಡ್‌ನಂತಹ ಕಾರಿನ ವಿನೈಲ್ ಮತ್ತು ಚರ್ಮದ ಮೇಲ್ಮೈಗಳನ್ನು ಕವರ್ ಮಾಡುವುದು ಕ್ಯಾಬಿನ್ ತಾಪಮಾನವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ಏಕೆಂದರೆ ವಿನೈಲ್ ಮತ್ತು ಚರ್ಮದ ಮೇಲ್ಮೈಗಳು ಶಾಖವನ್ನು ತ್ವರಿತವಾಗಿ ಹೀರಿಕೊಳ್ಳುವುದರಿಂದ ಕ್ಯಾಬಿನ್ ಒಳಗೆ ಹೆಚ್ಚು ಹೀಟ್‌ ಆಗಲು ಕಾರಣವಾಗುತ್ತವೆ.

45 ಡಿಗ್ರಿ ದಾಟಿದ ತಾಪಮಾನ: ಕಾರಿನ ಬಾನೆಟ್‌ ಅನ್ನೇ ಒಲೆಯಾಗಿಸಿಕೊಂಡು ಅಡುಗೆ ತಯಾರಿ

ಇದಲ್ಲದೆ, ಬಿಳಿ ಟವೆಲ್ ಅನ್ನು ಬಳಸುವುದರಿಂದ ಇನ್ನೂ ಹೆಚ್ಚಿನ ಶಾಖವನ್ನು ತಡಿಯಬಹುದು. ಶಾಖವನ್ನು ಮತ್ತಷ್ಟು ಕಡಿಮೆ ಮಾಡಲು, ಆಸನಗಳನ್ನು ಮುಚ್ಚಲು ಬೆಡ್‌ಸ್ಪ್ರೆಡ್‌ಗಳನ್ನು ಸಹ ಬಳಸಬಹುದು. ಇದು ಕಾರಿನೊಳಗೆ ಸೂರ್ಯನ ಶಾಖದಿಂದ ಆಗುವ ಕಲರ್‌ ಡಿಮ್‌ನಂತಹ ಸಮಸ್ಯೆಗಳನ್ನು ಸಹ ಪರಿಹರಿಸುತ್ತದೆ.

45 ಡಿಗ್ರಿ ದಾಟಿದ ತಾಪಮಾನ: ಕಾರಿನ ಬಾನೆಟ್‌ ಅನ್ನೇ ಒಲೆಯಾಗಿಸಿಕೊಂಡು ಅಡುಗೆ ತಯಾರಿ

ಸೋಲಾರ್ ಫ್ಯಾನ್‌

ಬಿಸಿಲಿನಲ್ಲಿ ಸಿಲ್ಲಿಸಿರುವ ಕಾರಿನೊಳಗೆ ಹಸಿರುಮನೆ ಪರಿಣಾಮ (ಗ್ರೀನ್ ಹೌಸ್ ಎಫೆಕ್ಟ್) ಉಂಟಾಗುತ್ತದೆ. ಸೂರ್ಯನ ಬಿಸಿಲು ಕಾರಿನ ಕ್ಯಾಬಿನ್‌ನೊಳಗೆ ಪ್ರವೇಶಿಸುತ್ತದೆ. ಆದರೆ ಅದರಿಂದ ಹೊರಬರುವುದಿಲ್ಲ. ಇದರಿಂದ ಕ್ಯಾಬಿನ್‌ನೊಳಗಿನ ತಾಪಮಾನವು ಹೆಚ್ಚಾಗುತ್ತದೆ.

45 ಡಿಗ್ರಿ ದಾಟಿದ ತಾಪಮಾನ: ಕಾರಿನ ಬಾನೆಟ್‌ ಅನ್ನೇ ಒಲೆಯಾಗಿಸಿಕೊಂಡು ಅಡುಗೆ ತಯಾರಿ

ಇದರ ಪರಿಹಾರಕ್ಕಾಗಿಯೇ ಈ ಸೌರ ಫ್ಯಾನ್‌ಗಳನ್ನು ಕಾರಿನ ಒಳಭಾಗದಿಂದ ಬಿಸಿ ಗಾಳಿಯನ್ನು ತೆಗೆದುಹಾಕಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ಸೋಲಾರ್ ಫ್ಯಾನ್‌ಗಳು ಕಾರಿನ ಕಿಟಕಿಗಳ ಮೇಲೆ ಬಿಗಿಯಾಗಿ ಹೊಂದಿಕೊಳ್ಳುತ್ತವೆ ಮತ್ತು ಕ್ಯಾಬಿನ್‌ನಿಂದ ಬಿಸಿ ಗಾಳಿಯನ್ನು ಪಂಪ್ ಮಾಡುತ್ತವೆ. ಅದರ ಜೊತೆಗೆ, ಉತ್ತಮ ಗುಣಮಟ್ಟದ ಸೌರಶಕ್ತಿ ಚಾಲಿತ ಫ್ಯಾನ್ ಅನ್ನು ಕೇವಲ 1,000 ರೂ.ಗೆ ಖರೀದಿಸಬಹುದು. ಬೇಸಿಗೆ ಕಾಲದಲ್ಲಿ ನಿಮ್ಮ ಕಾರನ್ನು ತಂಪಾಗಿರಿಸಲು ಇದು ಅತ್ಯುತ್ತಮ ಗ್ಯಾಜೆಟ್‌ಗಳಲ್ಲಿ ಒಂದಾಗಿದೆ.

More from DriveSpark

Article Published On: Saturday, April 30, 2022, 13:37 [IST]
English summary
Woman cooks roti on car bonnet viral video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+