Just In
- 10 hrs ago
ಹೊಸ ಫೀಚರ್ಸ್ಗಳನ್ನು ಪಡೆಯಲಿದೆ ನ್ಯೂ ಜನರೇಷನ್ ಫೋಕ್ಸ್ವ್ಯಾಗನ್ ಪೊಲೊ
- 12 hrs ago
ಫೋರ್ಡ್ ಮುಸ್ಟಾಂಗ್ ಕಾರಿನಂತೆ ಮಾಡಿಫೈಗೊಂಡ ಬಲೆನೊ ಸೆಡಾನ್ ಕಾರು
- 14 hrs ago
ವಾರದ ಸುದ್ದಿ: ಸಿಟ್ರನ್ ಕಾರು ಬಿಡುಗಡೆ, ಹೊಸ ವಾಹನ ಬೆಲೆ ಹೆಚ್ಚಳ, ಅಲ್ಕಾಜರ್ ಅನಾವರಣ, ಯುಗಾದಿ ಆಫರ್ ಘೋಷಣೆ!
- 24 hrs ago
ಎಕ್ಸ್ಯುವಿ700 ಎಸ್ಯುವಿ ಕಾರಿನ ಮತ್ತಷ್ಟು ಹೊಸ ಮಾಹಿತಿ ಹಂಚಿಕೊಂಡ ಮಹೀಂದ್ರಾ
Don't Miss!
- Sports
ದಿನೇಶ್ ಕಾರ್ತಿಕ್ ನನಗೆ ಸಂಪೂರ್ಣ ಬೆಂಬಲವನ್ನು ನೀಡುತ್ತಿದ್ದಾರೆ: ಇಯಾನ್ ಮಾರ್ಗನ್
- News
ನಾರ್ವೆ ಪ್ರಧಾನಿಗೆ ವಿಧಿಸಿದ 1.71 ಲಕ್ಷ ರೂ. ದಂಡದ ಹಿಂದಿನ ಕುತೂಹಲಕಾರಿ ಕಾರಣ?
- Movies
ಸೋನು ಸೂದ್ಗೆ ವಿಶೇಷ ಗೌರವ ನೀಡಿದ ಪಂಜಾಬ್ ಸರ್ಕಾರ
- Finance
ಟಾಪ್ 10ರಲ್ಲಿ 4 ಕಂಪನಿಗಳ ಮೌಲ್ಯ 1.14 ಲಕ್ಷ ಕೋಟಿ ರುಗೇರಿಕೆ
- Lifestyle
ವಾರ ಭವಿಷ್ಯ:ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Education
Bank Of Baroda Recruitment 2021: 512 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಳುತ್ತಲೇ ಪೊಲೀಸರ ಟೋಪಿ ಹಾಗೂ ಎಟಿಎಂ ಕಸಿದ ಮಹಿಳೆ
ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಇ-ಚಲನ್ ನೀಡುವ ವ್ಯವಸ್ಥೆಯನ್ನು ಭಾರತದಲ್ಲಿ ಕೆಲ ವರ್ಷಗಳ ಹಿಂದೆ ಜಾರಿಗೆ ತರಲಾಯಿತು. ವಾಹನ ಸವಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯುವುದನ್ನು ತಪ್ಪಿಸುವುದು ಇ-ಚಲನ್ ಜಾರಿಗೊಳಿಸಿದ್ದರ ಹಿಂದಿನ ಉದ್ದೇಶ.

ಉತ್ತರ ಪ್ರದೇಶದಲ್ಲಿ ಮಹಿಳೆಯೊಬ್ಬರು ಇ-ಚಲನ್ ವಿಚಾರವಾಗಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಘಟನೆ ವರದಿಯಾಗಿದೆ. ನೈಯೂಜ್ ಯುಪಿ ಎಂಬ ಯೂಟ್ಯೂಬ್ ಚಾನೆಲ್ ಈ ಘಟನೆಯನ್ನು ಅಪ್ ಲೋಡ್ ಮಾಡಿದೆ. ಈ ಘಟನೆ ಉತ್ತರ ಪ್ರದೇಶದ ಗೋಮತಿ ನಗರದಲ್ಲಿ ನಡೆದಿದೆ.

ವೀಡಿಯೊದಲ್ಲಿರುವ ಮಾಹಿತಿಯ ಪ್ರಕಾರ, ಈ ವೀಡಿಯೊದಲ್ಲಿರುವ ಮಹಿಳೆ ಸ್ಕೂಟರ್‌ನಲ್ಲಿ ಗೋಮತಿ ನದಿಗೆ ಕಟ್ಟಿರುವ ಸೇತುವೆಯನ್ನು ದಾಟುತ್ತಿದ್ದರು. ಈ ವೇಳೆ ಸೇತುವೆ ಮೇಲೆ ಐಸ್ ಕ್ರೀಮ್ ಖರೀದಿಸಿದ್ದಾರೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಐಸ್ ಕ್ರೀಮ್ ಖರೀದಿಸಿದ ಮಹಿಳೆ, ಸೇತುವೆ ಮೇಲೆ ಸ್ಕೂಟರ್ ನಿಲ್ಲಿಸಿ ಅಲ್ಲಿಯೇ ಐಸ್ ಕ್ರೀಮ್ ತಿನ್ನುತ್ತಿದ್ದರು. ಗಸ್ತು ತಿರುಗುತ್ತಿದ್ದ ಪೊಲೀಸರು ಸೇತುವೆಯ ಮೇಲೆ ನಿಲ್ಲಿಸಿದ್ದ ಸ್ಕೂಟರ್ ಗಮನಿಸಿದ್ದಾರೆ.

ಸೇತುವೆಯ ಮೇಲೆ ಪಾರ್ಕಿಂಗ್ ಮಾಡಲು ಅವಕಾಶವಿಲ್ಲದ ಕಾರಣ ಅಲ್ಲಿಂದ ತೆರಳುವಂತೆ ಪೊಲೀಸರು ಮಹಿಳೆಗೆ ತಿಳಿಸಿದ್ದಾರೆ. ಆದರೆ ಪೊಲೀಸರ ಮಾತನ್ನು ಕೇಳದ ಮಹಿಳೆ ಐಸ್ ಕ್ರೀಮ್ ತಿನ್ನುವುದನ್ನು ಮುಂದುವರೆಸಿದ್ದಾರೆ ಎಂದು ವರದಿಯಾಗಿದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ನಂತರ ಪೊಲೀಸರು ಸ್ಕೂಟರ್‌ನ ಫೋಟೋ ತೆಗೆದುಕೊಂಡು ಇಲಾಖೆಯ ವೆಬ್ ಸೈಟ್'ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ನಂತರ ಮಹಿಳೆಯ ಸೆಲ್ ಫೋನ್‌ಗೆ ಎಸ್‌ಎಂಎಸ್ ಬಂದಿದೆ. ಆ ಎಸ್‌ಎಂಎಸ್'ನಲ್ಲಿ ಮಹಿಳೆಗೆ ಇ-ಚಲನ್ ನೀಡಿರುವ ಬಗ್ಗೆ ತಿಳಿಸಲಾಗಿತ್ತು.

ಇ-ಚಲನ್ ನೀಡಿದ ಕಾರಣ ಆಕ್ರೋಶಗೊಂಡ ಮಹಿಳೆ ಮತ್ತೆ ಸೇತುವೆ ಮೇಲೆ ಹೋಗಿದ್ದಾರೆ. ಅಲ್ಲಿಯೇ ಇದ್ದ ಪೊಲೀಸರನ್ನು ನೋಡಿದ ತಕ್ಷಣ ಅಳುವುದಕ್ಕೆ ಶುರು ಮಾಡಿದ್ದಾರೆ. ಅಳುತ್ತಲೇ ಪೊಲೀಸರ ಟೋಪಿ ಹಾಗೂ ಎಟಿಎಂ ಕಾರ್ಡ್ ಕಸಿದುಕೊಂಡು ಸ್ಕೂಟರ್‌ನ ಸೀಟಿನ ಕೆಳಗೆ ಲಾಕ್ ಮಾಡಿದ್ದಾರೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಮಹಿಳೆ ಅಳುವುದನ್ನು ಗಮನಿಸಿದ ಜನರು ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಮೊದಲಿಗೆ ಅಳುತ್ತಿರುವ ಮಹಿಳೆಯನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದ್ದಾರೆ. ಮಹಿಳೆಗೆ ತನಗೆ ನೀಡಿರುವ ಇ-ಚಲನ್ ರದ್ದುಪಡಿಸುವಂತೆ ಒತ್ತಾಯಿಸಿದ್ದಾರೆ.

ಅಲ್ಲಿ ನೆರೆದಿದ್ದವರಿಗೆ ಮಹಿಳೆ ಮಾಡುತ್ತಿರುವುದು ತಪ್ಪು ಎಂದು ಅರಿವಾಗಿದೆ. ಪೊಲೀಸರ ಟೋಪಿ ಹಾಗೂ ಎಟಿಎಂ ಕಾರ್ಡ್ ಮರಳಿಸುವಂತೆ ಜನರು ಮಹಿಳೆಯನ್ನು ಒತ್ತಾಯಿಸಿದ್ದಾರೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು
ಜನರ ಒತ್ತಾಯಕ್ಕೆ ಮಣಿದ ಮಹಿಳೆ ಪೊಲೀಸರ ಟೋಪಿ ಹಾಗೂ ಎಟಿಎಂ ಕಾರ್ಡ್ ಮರಳಿಸಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಇ-ಚಲನ್ ರದ್ದುಗೊಳಿಸಲಾಗುವುದು ಎಂದು ಪೊಲೀಸರು ಮಹಿಳೆಗೆ ತಿಳಿಸಿದ್ದಾರೆ. ಪೊಲೀಸರು ಮಹಿಳೆಗೆ ನೀಡಿದ್ದ ಇ-ಚಲನ್ ರದ್ದುಪಡಿಸಿದರೆ ಇಲ್ಲವೇ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ.

ಈ ಘಟನೆಯ ವೀಡಿಯೊ ವೀಕ್ಷಿಸಿರುವ ಸಾರ್ವಜನಿಕರು ಮಹಿಳೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರು ವಿನಾ ಕಾರಣ ಇ-ಚಲನ್ ನೀಡಿ ಅಧಿಕಾರ ದುರುಪಯೋಗಪಡಿಸಿಕೊಂಡರೆ, ಅದನ್ನು ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸುವ ಮೂಲಕ ಪ್ರಶ್ನಿಸುವುದು ಒಳಿತು. ಅದನ್ನು ಬಿಟ್ಟು ಪೊಲೀಸರ ವಸ್ತುಗಳನ್ನು ಕಸಿಯುವಂತಹ ಕೃತ್ಯವೆಸಗುವುದು ಸರಿಯಲ್ಲ.
ಚಿತ್ರ ಕೃಪೆ: ನೈಯೂಜ್ ಯುಪಿ - ಉತ್ತರಖಂಡ್