ಜಾರಿಬಿದ್ದ ಮೊಬೈಲ್ ಫೋನ್‌ಗಾಗಿ ಮೆಟ್ರೋ ಟ್ರ್ಯಾಕ್‌ಗೆ ಇಳಿದ ಮಹಿಳೆ: ಜೀವ ಉಳಿಸಿದ ಸಿಬ್ಬಂದಿ

ಬೆಂಗಳೂರಿನ ಇಂದಿರಾನಗರ ಮೆಟ್ರೋ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಮೊಬೈಲ್ ಫೋನ್ ಜಾರಿ ಟ್ರಾಕ್‌ ಮೇಲೆ ಬೀಳಿಸಿಕೊಂಡಿದ್ದಾರೆ. ಈ ವೇಳೆ ಹಿಂದೆಮುಂದೆ ನೋಡದೆ ಹಿಂಪಡೆಯಲು ಟ್ರ್ಯಾಕ್‌ಗೆ ಇಳಿದಿದ್ದಾರೆ. ಸಿಬ್ಬಂದಿ ತಕ್ಷಣ ವಿದ್ಯುತ್ ಕಡಿತಗೊಳಿಸಿದ ಕಾರಣ ಅವಘಡ ತಪ್ಪಿದ್ದು, 15 ನಿಮಿಷಗಳ ಕಾಲ ರೈಲು ಸಂಚಾರ ಸ್ಥಗಿತಗೊಂಡಿತು.

ಸೋಮವಾರ ಸಂಜೆ ಇಂದಿರಾನಗರ ಮೆಟ್ರೋ ನಿಲ್ದಾಣದಲ್ಲಿ ಸಂಜೆ 6:45ಕ್ಕೆ ಈ ಘಟನೆ ನಡೆದಿದೆ. ಹಳಿಗಳ ಮೇಲೆ ಮಹಿಳೆಯನ್ನು ಗಮನಿಸಿದ ಭದ್ರತಾ ಸಿಬ್ಬಂದಿ ತಕ್ಷಣ ನಿಯಂತ್ರಣ ಕೊಠಡಿಗೆ ಎಚ್ಚರಿಕೆ ನೀಡಿದರು. ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಸಂಭಾವ್ಯ ದುರಂತವನ್ನು ತಪ್ಪಿಸಿದ್ದಾರೆ. ಪೀಕ್ ಅವರ್ ನಲ್ಲಿ 15 ನಿಮಿಷಗಳ ಕಾಲ ರೈಲು ಸಂಚಾರ ಸ್ಥಗಿತಗೊಂಡ ಕಾರಣ ಪರ್ಪಲ್ ಲೈನ್‌ನಲ್ಲಿ ಸಾವಿರಾರು ಪ್ರಯಾಣಿಕರ ಮೇಲೆ ಪರಿಣಾಮ ಬೀರಿತು.

woman-descends-into-metro-tracks-for-dropped-mobile-phone

ಭದ್ರತಾ ಸಿಬ್ಬಂದಿ ಆಕೆಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸುರಕ್ಷತಾ ಸಾಧನಗಳನ್ನು ಸಕ್ರಿಯಗೊಳಿಸಿದ್ದರು. ಫೋನ್ ಹಿಂಪಡೆದ ನಂತರ, ಆಕೆ ಸಹ-ಪ್ರಯಾಣಿಕನ ಸಹಾಯದಿಂದ ಮತ್ತೆ ಪ್ಲಾಟ್‌ಫಾರ್ಮ್‌ಗೆ ಬಂದರು. ರೈಲು ಸೇವೆಗಳ ಮರುಸ್ಥಾಪನೆಗಾಗಿ BMRCL ಸಿಬ್ಬಂದಿ ಸಾಧನಗಳನ್ನು ಮರುಹೊಂದಿಸಬೇಕಾಯಿತು ಎಂದು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್‌ನ ಕಾರ್ಯಾಚರಣೆ ಮತ್ತು ನಿರ್ವಹಣೆಯ ಕಾರ್ಯನಿರ್ವಾಹಕ ನಿರ್ದೇಶಕ ಎ.ಎಸ್ ಶಂಕರ್ ತಿಳಿಸಿದ್ದಾರೆ.

ನಡೆದಿದ್ದೇನು?: "ಬೈಯಪ್ಪನಹಳ್ಳಿ ಕಡೆಗೆ ಹೋಗುತ್ತಿದ್ದ ಇಂದಿರಾನಗರ ಮೆಟ್ರೋ ಸ್ಟೇಷನ್ ಪ್ಲಾಟ್‌ಫಾರ್ಮ್ 1 ರಲ್ಲಿ ಕಾಯುತ್ತಿದ್ದ ಮಹಿಳೆಯೊಬ್ಬರು ಸಂಜೆ 6.40 ರ ಸುಮಾರಿಗೆ ತಮ್ಮ ಫೋನ್ ಅನ್ನು ಕೈಬಿಟ್ಟರು. ರೈಲು ಬರುವ ಮೊದಲು ಅದನ್ನು ತೆಗೆದುಕೊಳ್ಳಲು ನಿರ್ಧರಿಸಿ ಟ್ರಾಕ್‌ಗೆ ಇಳಿದಿದ್ದಾರೆ. ತನ್ನ ಫೋನ್ ಅನ್ನು ಹಿಂಪಡೆದರಾದ್ರೂ ಹಿಂತಿರುಗಲು ಸಾಧ್ಯವಾಗಲಿಲ್ಲ.

woman-descends-into-metro-tracks-for-dropped-mobile-phone

ಇತರ ಪ್ರಯಾಣಿಕರು ಆಕೆಯನ್ನು ಪ್ಲಾಟ್‌ ಫಾರ್ಮ್‌ಗೆ ಹಿಂತಿರುಗಿಸಲು ಸಹಾಯ ಮಾಡಬೇಕಾಯಿತು. ಇದಕ್ಕೂ ಮುನ್ನ ಪ್ಲಾಟ್‌ ಫಾರ್ಮ್‌ನಲ್ಲಿ ಮೆಟ್ರೋ ಅಧಿಕಾರಿಯೊಬ್ಬರು ತುರ್ತು ಟ್ರಿಪ್ ವ್ಯವಸ್ಥೆಯನ್ನು ಒತ್ತಿ ಹಳಿಗಳಿಗೆ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿದ್ದರು. ಇಲ್ಲದಿದ್ದರೇ ಸಂಭವನೀಯ ಅನಾಹುತಕ್ಕೆ ದುಃಖಿಸಬೇಕಾಗಿತ್ತು ಎಂದು ಅಲ್ಲಿನ ಸಿಬ್ಬಂದಿ ಹೇಳಿದ್ದಾರೆ.

ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಮಾತನಾಡಿ, "ಇದೊಂದು ವಿಚಿತ್ರ ಘಟನೆ. 750 ವೋಲ್ಟ್‌ಗಳನ್ನು ಹೊತ್ತೊಯ್ಯುವ ಹಳಿಗಳ ಉದ್ದಕ್ಕೂ ರೈಲುಗಳು ಚಲಿಸುತ್ತವೆ. ಮಹಿಳೆ ಕೆಳಗೆ ಜಿಗಿಯುವುದನ್ನು ಗಮನಿಸಿದ ನಮ್ಮ ಸಿಬ್ಬಂದಿಯ ಚುರುಕಾದ ಕ್ರಮವೇ ಆಕೆಯ ಜೀವ ಉಳಿಸಿದೆ. ಇದು ಅತ್ಯಂತ ಅಪಾಯಕಾರಿಯಾದ ಕಾರಣ ಟ್ರ್ಯಾಕ್‌ಗಳ ಬಳಿ ಎಲ್ಲೂ ಯಾರನ್ನೂ ಅನುಮತಿಸಲಾಗುವುದಿಲ್ಲ.

woman-descends-into-metro-tracks-for-dropped-mobile-phone

ಇಂದಿರಾನಗರ ಮೆಟ್ರೋ ಸ್ಟೇಷನ್‌ನಲ್ಲಿ ಉಂಟಾದ ಗಲಾಟೆಯಲ್ಲಿ ಮಹಿಳೆ ಜಾರಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. "ನಮ್ಮ ಸಿಸಿಟಿವಿ ಕ್ಯಾಮರಾಗಳು ಆಕೆಯ ಮುಖವನ್ನು ಸೆರೆಹಿಡಿದಿವೆ. ಮುಂದಿನ ದಿನಗಳಲ್ಲಿ ನಮ್ಮ ಯಾವುದೇ ಸ್ಟೇಷನ್‌ಗೆ ಬಂದರೂ ಮಹಿಳೆ ಸಿಕ್ಕಿಬೀಳುತ್ತಾರೆ" ಎಂದು ಶಂಕರ್ ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, January 2, 2024, 13:42 [IST]
English summary
Woman descends into metro tracks for dropped mobile phone
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+