ಸಾಂಪ್ರಾದಾಯಿಕ ಉಡುಗೆ ಧರಿಸಿ ಬಸ್ ಚಾಲನೆ ಮಾಡಿದ ಮಹಿಳೆ

ಸಾಮಾನ್ಯವಾಗಿ ಸಾರಿಗೆಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಕಷ್ಟಕರವೆಂದು ಪರಿಗಣಿಸಲಾಗುತ್ತದೆ. ಪುರುಷರು ಸಾರಿಗೆಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಮಾಡುತ್ತಾರೆ. ಬಸ್ ಹಾಗೂ ಟ್ರಕ್ ಚಾಲನೆಯಲ್ಲಿ ಪುರುಷರ ಸಂಖ್ಯೆಯೇ ಅಧಿಕವೆಂದು ಹೇಳಬಹುದು.

ಸಾಂಪ್ರಾದಾಯಿಕ ಉಡುಗೆ ಧರಿಸಿ ಬಸ್ ಚಾಲನೆ ಮಾಡಿದ ಮಹಿಳೆ

ಇಂದು ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಪುರುಷರಿಗೆ ಸರಿ ಸಮಾನರಾಗಿ ದುಡಿಯುತ್ತಿದ್ದಾರೆ. ಆದರೂ ಮಹಿಳೆಯರು ಭಾರೀ ಗಾತ್ರದ ವಾಹನಗಳನ್ನು ಚಾಲನೆ ಮಾಡುವುದು ಅಪರೂಪವೆಂದೇ ಹೇಳಬಹುದು.

ಸಾಂಪ್ರಾದಾಯಿಕ ಉಡುಗೆ ಧರಿಸಿ ಬಸ್ ಚಾಲನೆ ಮಾಡಿದ ಮಹಿಳೆ

ಮಹಿಳೆಯರು ದ್ವಿಚಕ್ರ ವಾಹನ ಹಾಗೂ ಕಾರುಗಳನ್ನು ಚಾಲನೆ ಮಾಡುವುದನ್ನು ದಿನ ನಿತ್ಯ ಕಾಣಬಹುದು. ಲಾರಿ, ಬಸ್ಸುಗಳಂತಹ ಭಾರೀ ವಾಹನಗಳನ್ನು ಚಾಲನೆ ಮಾಡುವ ಮಹಿಳೆಯರ ಸಂಖ್ಯೆ ತೀರಾ ಕಡಿಮೆ.

MOST READ: ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಸಾಂಪ್ರಾದಾಯಿಕ ಉಡುಗೆ ಧರಿಸಿ ಬಸ್ ಚಾಲನೆ ಮಾಡಿದ ಮಹಿಳೆ

ಈ ಮಹಿಳೆಯೊಬ್ಬರು ಬಸ್ ಚಾಲನೆ ಮಾಡುತ್ತಿರುವ ವೀಡಿಯೊ ವೈರಲ್ ಆಗಿದೆ. ಈ ವೀಡಿಯೊವನ್ನು ಐಎಸ್ ಅವ್ನೀಶ್ ಶರಣ್'ರವರು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

ಸಾಂಪ್ರಾದಾಯಿಕ ಉಡುಗೆ ಧರಿಸಿ ಬಸ್ ಚಾಲನೆ ಮಾಡಿದ ಮಹಿಳೆ

ಈ ವೀಡಿಯೊ ಈಗಾಗಲೇ 60 ಸಾವಿರಕ್ಕೂ ಹೆಚ್ಚು ವೀವ್ಸ್, 7,500ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ. ಬಸ್‌ಗಳಂತಹ ಭಾರೀ ಗಾತ್ರದ ವಾಹನಗಳನ್ನು ಚಾಲನೆ ಮಾಡುವುದು ಅದರಲ್ಲೂ ನಗರಗಳಲ್ಲಿ ಚಾಲನೆ ಮಾಡುವುದು ಸವಾಲಿನ ಕೆಲಸ.

MOST READ: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಸಾಂಪ್ರಾದಾಯಿಕ ಉಡುಗೆ ಧರಿಸಿ ಬಸ್ ಚಾಲನೆ ಮಾಡಿದ ಮಹಿಳೆ

ಸಂಚಾರ ದಟ್ಟಣೆಯ ನಡುವೆ ಬಹಳ ಎಚ್ಚರಿಕೆಯಿಂದ ಬಸ್ ಚಾಲನೆ ಮಾಡಬೇಕೆಂಬ ಕಾರಣಕ್ಕೆ ಮಹಿಳೆಯರು ಬಸ್ ಚಾಲನೆ ಮಾಡಲು ಮುಂದೆ ಬರುವುದಿಲ್ಲ. ಈಗ ವೈರಲ್ ಆಗಿರುವ ವೀಡಿಯೊದಲ್ಲಿ ಬಸ್ ಚಾಲನೆ ಮಾಡುತ್ತಿರುವ ಮಹಿಳೆ ಭಾರತೀಯ ಸಾಂಪ್ರದಾಯಿಕ ಉಡುಗೆಯಾದ ಸೀರೆ ಧರಿಸಿ ಬಸ್ ಚಾಲನೆ ಮಾಡಿದ್ದಾರೆ ಎಂಬುದು ವಿಶೇಷ.

ಸಾಂಪ್ರಾದಾಯಿಕ ಉಡುಗೆ ಧರಿಸಿ ಬಸ್ ಚಾಲನೆ ಮಾಡಿದ ಮಹಿಳೆ

ಬಸ್ ಚಾಲನೆ ಮಾಡುವ ಮುನ್ನ ಅವರು ಸುರಕ್ಷತೆಗಾಗಿ ಸೀಟ್ ಬೆಲ್ಟ್ ಧರಿಸುವುದನ್ನು ವೀಡಿಯೊದಲ್ಲಿ ಕಾಣಬಹುದು. ಈ ಮಹಿಳೆ ಸೀರೆ ಧರಿಸಿ ವೋಲ್ವೋ ಬಸ್ ಚಾಲನೆ ಮಾಡಿದ್ದಾರೆ. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಜನರ ಗಮನ ಸೆಳೆಯುತ್ತಿದೆ.

MOST READ: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಸೀರೆ ಧರಿಸಿ ಬಸ್ ಚಾಲನೆ ಮಾಡಿದ ಈ ಮಹಿಳೆಯ ಹೆಸರು ಹಾಗೂ ಇನ್ನಿತರ ಮಾಹಿತಿಗಳು ಸದ್ಯಕ್ಕೆ ತಿಳಿದು ಬಂದಿಲ್ಲ. ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿದ ಈ ಮಹಿಳೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ಸಾಂಪ್ರಾದಾಯಿಕ ಉಡುಗೆ ಧರಿಸಿ ಬಸ್ ಚಾಲನೆ ಮಾಡಿದ ಮಹಿಳೆ

ವರದಿಗಳ ಪ್ರಕಾರ ಈ ಮಹಿಳೆ ಒಡಿಶಾದಿಂದ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾವರೆಗೆ ಬಸ್ ಚಾಲನೆ ಮಾಡಿದ್ದಾರೆ. ಇಷ್ಟು ದೂರ ಈ ಮಹಿಳೆ ಬಸ್ ಚಾಲನೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ.

Most Read Articles

Kannada
English summary
Woman drives a bus wearing saree video goes viral. Read in Kannada.
Story first published: Wednesday, June 2, 2021, 19:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X