Viral video: ಕುಡಿದು ವಾಹನ ಚಾಲನೆ ಮಾಡಿದ್ದಲ್ಲದೇ ಪೊಲೀಸರ ಕೆನ್ನೆಗೆ ಬಾರಿಸಿದ ಮಹಿಳೆ

ಗುಜರಾತ್‌ನಲ್ಲಿ ಮಹಿಳೆಯೊಬ್ಬರು ಸಾರ್ವಜನಿಕರ ಮುಂದೆ ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಕುಡಿದು ವಾಹನ ಚಲಾಯಿಸಿ ಸಿಕ್ಕಿಬಿದ್ದಿದ್ದಲ್ಲದೇ ಪೊಲೀಸ್ ಅಧಿಕಾರಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಕರ್ತವ್ಯದಲ್ಲಿದ್ದ ಪುರುಷ ಮತ್ತು ಮಹಿಳಾ ಪೊಲೀಸರಿಗೆ ಕಿರುಕುಳ ನೀಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ಗುಜರಾತ್‌ನ ವಡೋದರಾದ ರಸ್ತೆಗಳಲ್ಲಿ ಮಹಿಳೆಯೊಬ್ಬರು ಮಾಡಿರುವ ಈ ಗಲಾಟೆಯ ವೀಡಿಯೊವನ್ನು ಹಲವರು ಬಳಕೆದಾರರು ಎಕ್ಸ್‌ನಲ್ಲಿ (ಟ್ವಿಟ್ಟರ್‌) ಹಂಚಿಕೊಂಡಿದ್ದಾರೆ. ಈ ವೀಡಿಯೊಗಳಲ್ಲಿ, ಮಹಿಳೆ ಕೂಗುವುದು, ಹಿಡಿ ಶಾಪಗಳನ್ನು ಹಾಕುವುದು ಮತ್ತು ಪೊಲೀಸ್ ಅಧಿಕಾರಿಗಳಿಗೆ ಕಪಾಳಮೋಕ್ಷ, ಕಿರುಕುಳ ನೀಡುವುದನ್ನು ಖಂಡಿಸಿ ಆಕೆಯನ್ನು ಬಂಧಿಸಲು ಮುಂದಾದರೆ ವಿರೋಧಿಸುವುದನ್ನು ಸಹ ವಿಡಿಯೋದಲ್ಲಿ ಕಾಣಬಹುದು.

woman-drunk-and-drive-slapped-to-police-viral-video

ಗುಜರಾತ್‌ನಲ್ಲಿ ಮದ್ಯಪಾನವನ್ನು ನಿಷೇಧಿಸಲಾಗಿದೆ, ಆದರೆ ಈ ಮಹಿಳೆ ವಿಪರೀತ ಕುಡಿದು ಮೇಲೆ ತಿಳಿಸಿದ ಎಲ್ಲಾ ದುಷ್ಕೃತ್ಯಗಳನ್ನು ಮಾಡಿದ್ದಾರೆ. ವಿಷಯಕ್ಕೆ ಬಂದರೆ ಗುಜರಾತ್‌ನ ವಡೋದರದ ಗೋತ್ರಿ ಗೋಕುಲ್ ನಗರದ ಬಳಿ ವಾಡಿಕೆಯ ತಪಾಸಣೆಯ ವೇಳೆ ವಿಡಿಯೋದಲ್ಲಿರುವ ಮಹಿಳೆಯನ್ನು ನಿಲ್ಲಿಸಲಾಗಿದೆ. ಇತ್ತೀಚೆಗಷ್ಟೇ ಗುಜರಾತ್‌ನಲ್ಲಿ ಈ ವಾಡಿಕೆಯ ತಪಾಸಣೆ ನಡೆಸಲಾಗುತ್ತಿದ್ದು, ಅಹಮದಾಬಾದ್‌ನ ಇಸ್ಕಾನ್ ಸೇತುವೆಯ ಮೇಲೆ ಹಲವಾರು ಜನರ ಪ್ರಾಣವನ್ನು ಬಲಿತೆಗೆದುಕೊಂಡ ಭೀಕರ ಅಪಘಾತ ಸಂಭವಿಸಿತ್ತು.

ಹಾಗಾಗಿ ತಪಾಸಣೆ ವೇಳೆ ಕಾರನ್ನು ನಿಲ್ಲಿಸಿದ ನಂತರ, ಕಪ್ಪು ಬಣ್ಣದ ಕಿಯಾ ಸೋನೆಟ್ ಸಬ್-ಕಾಂಪ್ಯಾಕ್ಟ್ ಎಸ್‌ಯುವಿ ಚಲಾಯಿಸುತ್ತಿದ್ದ ಮಹಿಳೆ ವಿಪರೀತ ಕುಡಿದು ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ಸಹಕರಿಸಿಲ್ಲ ಎಂಬುದು ತಿಳಿದುಬಂದಿದೆ. ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಕಾರನ್ನು ನಿಲ್ಲಿಸಿ ಮಹಿಳೆ ಯಾವ ಮಟ್ಟಕ್ಕೆ ನಶೆಯಲ್ಲಿದ್ದಾರೆ ಎಂಬುದನ್ನು ಅರ್ಥಮಾಡಿಕೊಂಡ ನಂತರ, ಆಕೆಯನ್ನು ತನ್ನ ಕಾರಿನಿಂದ ಹೊರಬರಲು ಹೇಳಿದ್ದಾರೆ.

woman-drunk-and-drive-slapped-to-police-viral-video

ಆದರೆ, ಮಹಿಳೆ ನಿರಾಕರಿಸಿದ್ದು, ಬದಲಾಗಿ ತನ್ನ ಮೊಬೈಲ್ ಫೋನ್‌ನಲ್ಲಿ ಪೊಲೀಸ್ ಅಧಿಕಾರಿಗಳ ವೀಡಿಯೊವನ್ನು ರೆಕಾರ್ಡ್ ಮಾಡಲು ಪ್ರಾರಂಭಿಸಿದ್ದಾರೆ. ಈ ವೇಳೆ ಮಹಿಳಾ ಅಧಿಕಾರಿ ಆಕೆಯ ಕೈಯಿಂದ ಫೋನ್ ಕಸಿದುಕೊಂಡಿದ್ದಾರೆ. ಈ ಕ್ರಮದ ನಂತರ, ಕುಡಿದ ಮಹಿಳೆ ರಸ್ತೆಯಲ್ಲಿ ಕಿರುಚಲು ಪ್ರಾರಂಭಿಸಿದ್ದಾರೆ. ತನ್ನ ಫೋನ್ ತೆಗೆದುಕೊಂಡು ಅದನ್ನು ಮರಳಿ ಪಡೆಯಲು ಪ್ರಯತ್ನಿಸಿದ ಪೊಲೀಸ್ ಅಧಿಕಾರಿಯನ್ನು ನಿಂದಿಸಿದ್ದಾರೆ.

ಈ ಮಧ್ಯೆ, ತನ್ನ ಫೋನ್ ಹೊಂದಿದ್ದ ಮಹಿಳಾ ಅಧಿಕಾರಿ ಅದನ್ನು ಪುರುಷ ಅಧಿಕಾರಿಗೆ ರವಾನಿಸಿದ್ದಾರೆ. ನಂತರ ಮಹಿಳೆ ಪುರುಷ ಅಧಿಕಾರಿಯನ್ನು ನಿಂದಿಸಲು ಪ್ರಾರಂಭಿಸಿದ್ದಾರೆ. ಆತನಿಂದ ತನ್ನ ಫೋನ್ ತೆಗೆದುಕೊಳ್ಳಲು ಪ್ರಯತ್ನಿಸಿ ಅಧಿಕಾರಿಗಳೊಂದಿಗೆ ಜಗಳವಾಡಿದ ನಂತರ ಮಹಿಳೆ ಅಂತಿಮವಾಗಿ ತನ್ನ ಫೋನ್ ಅನ್ನು ಪಡೆದುಕೊಂಡಿದ್ದಾರಾದರೂ ಅದನ್ನು ಮರಳಿ ಪಡೆದ ನಂತರ ಕರ್ತವ್ಯದಲ್ಲಿದ್ದ ಅಧಿಕಾರಿಗಳಿಗೆ ಆಕ್ಷೇಪಾರ್ಹ ಸನ್ನೆಗಳನ್ನು ಮಾಡಿದ್ದಾರೆ.

woman-drunk-and-drive-slapped-to-police-viral-video

ಇದು ಮತ್ತಷ್ಟು ಉಭಯ ಪಕ್ಷಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿದ್ದು, ರಾತ್ರಿಯಲ್ಲಿ ರಸ್ತೆಯಲ್ಲಿ ಈ ತೀವ್ರವಾದ ಪರಿಸ್ಥಿತಿಯನ್ನು ಅನುಸರಿಸಿ ಅಂತಿಮವಾಗಿ ಮಹಿಳೆಯನ್ನು ಬಂಧಿಸಲಾಯಿತು. ವಿಡಿಯೋ ಒಂದರಲ್ಲಿ ಮಹಿಳೆಯನ್ನು ಇಬ್ಬರು ಮಹಿಳಾ ಅಧಿಕಾರಿಗಳು ಪೊಲೀಸ್ ವ್ಯಾನ್‌ನಲ್ಲಿ ಕೂರಿಸುವುದನ್ನು ತೋರಿಸಿದ್ದಾರೆ. ಆದರೆ, ಆಕೆ ನಿಂದಿಸುತ್ತಲೇ ಇದ್ದರು. ಈ ವೇಳೆ ಮಹಿಳಾ ಅಧಿಕಾರಿಯೊಬ್ಬರು ಕಪಾಳಮೋಕ್ಷ ಮಾಡಿದ್ದಾರೆ.

ಪ್ರತಿಯಾಗಿ, ಮಹಿಳೆ ಕೂಡ ಇತರ ಮಹಿಳಾ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಸದ್ಯ ಈಕೆ ಪೊಲೀಸರ ಬಂಧನದಲ್ಲಿದ್ದು, ಹೆಚ್ಚಿನ ವಿವರಗಳು ಇನ್ನಷ್ಟೆ ಹೊರಬರಬೇಕಿದೆ. ಒಟ್ಟಿನಲ್ಲಿ ಕುಡಿದು ವಾಹನ ಚಾಲನೆ ಮಾಡಿದ್ದಲ್ಲದೇ ಅಧಿಕಾರಿಗಳನ್ನು ಹೊಡೆದು ತೀರ್ವ ಸಂಕಷ್ಟಕ್ಕೆ ಮಹಿಳೆ ಗುರಿಯಾಗಿದ್ದಾರೆ. ಇದೀಗ ನಶೆ ಇಳಿದ ಮೇಲೆ ಪಶ್ಚ್ಯಾತಾಪ ಪಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, August 29, 2023, 17:06 [IST]
English summary
Woman drunk and drive slapped to police viral video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+