Just In
- 2 hrs ago
ಹೊಸ ರೂಪದೊಂದಿಗೆ ರಸ್ತೆಗಿಳಿಯಲಿವೆ ತೆರೆಮರೆಗೆ ಸರಿದ ಜಟಕಾ ಬಂಡಿ
- 4 hrs ago
ಫೆಬ್ರವರಿ ತಿಂಗಳಿನಲ್ಲಿ 12 ಸಾವಿರಕ್ಕೂ ಹೆಚ್ಚು ಎಂಪಿವಿಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ
- 4 hrs ago
ಸಿಎನ್ಜಿ ವರ್ಷನ್ನಲ್ಲೂ ಬಿಡುಗಡೆಯಾಗಲಿದೆ ಸ್ಕೋಡಾ ರ್ಯಾಪಿಡ್ ಸೆಡಾನ್
- 5 hrs ago
ಸ್ಕ್ರ್ಯಾಪೇಜ್ ನೀತಿ ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ
Don't Miss!
- News
ಪೆಟ್ರೋಲ್, ಡೀಸೆಲ್ ದರ ಏರಿಕೆ: ಕೇಂದ್ರಕ್ಕೆ ಬಿಸಿ ಮುಟ್ಟಿಸಿದ ಮಲ್ಲಿಕಾರ್ಜುನ್ ಖರ್ಗೆ
- Movies
ಬಿಗ್ಬಾಸ್: ಪ್ರಶಾಂತ್ ಸಂಬರ್ಗಿ ಮೇಲೆ ಉರಿದು ಬಿದ್ದ ಮನೆ ಸದಸ್ಯರು
- Education
UAS Dharwad Recruitment 2021: ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಮಾ.10ಕ್ಕೆ ನೇರ ಸಂದರ್ಶನ
- Sports
ಐಎಸ್ಎಲ್: ಫೈನಲ್ಗಾಗಿ ನಾರ್ಥ್ ಈಸ್ಟ್, ಬಾಗನ್ ನಡುವೆ ಫೈನಲ್ ಫೈಟ್
- Lifestyle
ಮಾ.11ಕ್ಕೆ ಕುಂಭ ರಾಶಿಗೆ ಬುಧನ ಪ್ರವೇಶ: ನಿಮ್ಮ ಬದುಕಿನಲ್ಲಿ ಆಗಲಿದೆ ಈ ಬದಲಾವಣೆ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 08ರ ಮಾರುಕಟ್ಟೆ ದರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಾರಿಗೆ ಇಲಾಖೆ ಅಧಿಕಾರಿಗಳ ಎಡವಟ್ಟು, ಫೇಸ್ ಮಾಸ್ಕ್ ಹೊಂದಿರುವ ಡ್ರೈವಿಂಗ್ ಲೈಸೆನ್ಸ್ ಪಡೆದ ಮಹಿಳೆ
ಕರೋನಾ ವೈರಸ್ ಕಾರಣದಿಂದಾಗಿ ಜನರು ಫೇಸ್ ಮಾಸ್ಕ್ ಧರಿಸುವುದು ಅನಿವಾರ್ಯವಾಗಿದೆ. ಕರೋನಾ ವೈರಸ್ ಸೋಂಕು ಹರಡದಂತೆ ತಡೆಗಟ್ಟಲು ಫೇಸ್ ಮಾಸ್ಕ್ ಧರಿಸಿ ಮನೆಯಿಂದ ಹೊರ ಬರುವಂತೆ ಜನರಿಗೆ ಸೂಚನೆ ನೀಡಲಾಗಿದೆ.

ಫೇಸ್ ಮಾಸ್ಕ್ ಧರಿಸುವುದು ಫ್ಯಾಷನ್ ಆಗಿ ಬದಲಾಗಿದೆ. ಯಾವುದೇ ಕಾರ್ಯವಿರಲಿ ಅಥವಾ ಸಮಾರಂಭವಿರಲಿ ಫೇಸ್ ಮಾಸ್ಕ್ ಧರಿಸಬೇಕಾಗುತ್ತದೆ. ಫೋಟೋ ತೆಗೆಯುವಾಗ ಸಹ ಜನರು ಫೇಸ್ ಮಾಸ್ಕ್ ಧರಿಸುತ್ತಿದ್ದಾರೆ. ಆದರೆ ಯಾವುದೇ ಅಧಿಕೃತ ದಾಖಲೆ ಪಡೆಯಲು ಜನರು ತಮ್ಮ ಸಂಪೂರ್ಣ ಮುಖವನ್ನು ತೋರಿಸಬೇಕಾಗುತ್ತದೆ.

ವ್ಯಕ್ತಿಯ ಸಂಪೂರ್ಣ ಮುಖ ಕಾಣದಿದ್ದರೇ ಯಾವುದೇ ದಾಖಲೆಯನ್ನು ಪರಿಶೀಲಿಸಲು ಸಾಧ್ಯವಾಗುವುದಿಲ್ಲ. ಆದರೆ ಕ್ಯಾಲಿಫೋರ್ನಿಯಾದ ಸಾರಿಗೆ ಇಲಾಖೆಯು ಫೇಸ್ ಮಾಸ್ಕ್ ಧರಿಸಿರುವ ಮಹಿಳೆಗೆ ಡ್ರೈವಿಂಗ್ ಲೈಸೆನ್ಸ್ ನೀಡಿದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಅಲ್ಲಿನ ಸಾರಿಗೆ ಇಲಾಖೆಯ ಅಧಿಕಾರಿಗಳು ಇದನ್ನು ಮಾನವ ಸಹಜ ತಪ್ಪು ಎಂದು ಹೇಳಿದ್ದಾರೆ. ಈ ಡ್ರೈವಿಂಗ್ ಲೈಸೆನ್ಸ್ ಇಂಟರ್'ನೆಟ್'ನಲ್ಲಿ ವೈರಲ್ ಆದ ನಂತರಕ್ಯಾಲಿಫೋರ್ನಿಯಾ ಸಾರಿಗೆ ಇಲಾಖೆಯನ್ನು ಟ್ರೋಲ್ ಮಾಡಲಾಗುತ್ತಿದೆ.

ಈ ಡ್ರೈವಿಂಗ್ ಲೈಸೆನ್ಸ್ ಪಡೆದ ಮಹಿಳೆ ಕಳೆದ ತಿಂಗಳು ಕ್ಯಾಲಿಫೋರ್ನಿಯಾ ಸಾರಿಗೆ ಇಲಾಖೆಯಲ್ಲಿ ಡ್ರೈವಿಂಗ್ ಲೈಸೆನ್ಸ್'ಗಾಗಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸುವಾಗಅಧಿಕಾರಿಯೊಬ್ಬರು ಅವರ ಕೆಲವು ಫೋಟೋಗಳನ್ನು ತೆಗೆದಿದ್ದರು.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಫೋಟೋ ತೆಗೆಯುವಾಗ ಅವರು ಫೇಸ್ ಮಾಸ್ಕ್ ಧರಿಸಿದ್ದರು. ಫೇಸ್ ಮಾಸ್ಕ್ ತೆಗೆಯುವಂತೆ ಅವರಿಗೆ ಯಾರೂ ಹೇಳಲಿಲ್ಲ. ತನ್ನ ತಪ್ಪಿನ ಅರಿವಾದ ತಕ್ಷಣ ಆಕೆಯ ಫೋಟೋ ತೆಗೆದ ಅಧಿಕಾರಿ ಫೇಸ್ ಮಾಸ್ಕ್ ತೆಗೆಸಿ ಆಕೆಯ ಫೋಟೋ ತೆಗೆದಿದ್ದರು.

ಆದರೆ ಮಹಿಳೆ ತಮ್ಮ ಡ್ರೈವಿಂಗ್ ಲೈಸೆನ್ಸ್ ಪಡೆದಾಗ ಫೇಸ್ ಮಾಸ್ಕ್ ಹೊಂದಿರುವ ಫೋಟೋ ಲಗತ್ತಿಸಿ ಡ್ರೈವಿಂಗ್ ಲೈಸೆನ್ಸ್ ನೀಡಿರುವುದು ಕಂಡು ಬಂದಿದೆ. ಇದನ್ನು ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಶೇರ್ ಮಾಡಿ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಈ ಡ್ರೈವಿಂಗ್ ಲೈಸೆನ್ಸ್ ಪಡೆಯಲು ತಾವು 35 ಡಾಲರ್ ಖರ್ಚು ಮಾಡಿರುವುದಾಗಿ ಆಕೆ ತಿಳಿಸಿದ್ದಾರೆ. ಆಕೆ ಪಡೆದಿರುವ ಡ್ರೈವಿಂಗ್ ಲೈಸೆನ್ಸ್'ನಲ್ಲಿ ಅವರು ಫೇಸ್ ಮಾಸ್ಕ್ ಧರಿಸಿರುವ ಫೋಟೋವನ್ನು ಕಾಣಬಹುದು.

ಇಲಾಖೆಯ ಅಧಿಕಾರಿಗಳು ಎಷ್ಟು ಅಜಾಗರೂಕರಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಡ್ರೈವಿಂಗ್ ಲೈಸೆನ್ಸ್ ನೀಡುವಾಗ ಹಲವು ಪ್ರಕ್ರಿಯೆಗಳಿರುತ್ತವೆ.ಆದರೂ ಯಾರೂ ಈ ತಪ್ಪನ್ನು ಗಮನಿಸಿಲ್ಲವೆಂದು ಅವರು ಹೇಳಿದ್ದಾರೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಭಾರತದಲ್ಲಿಯೂ ಡ್ರೈವಿಂಗ್ ಲೈಸೆನ್ಸ್ ನೀಡುವಾಗ ಹಲವಾರು ತಪ್ಪುಗಳಾಗುತ್ತವೆ. ಕೆಲವೊಮ್ಮೆ ಪರವಾನಗಿ ಸಂಖ್ಯೆಯೇ ತಪ್ಪಾಗಿರುತ್ತದೆ. ಮತ್ತೊಮ್ಮೆ ಪರವಾನಗಿಯಲ್ಲಿ ಬೇರೊಬ್ಬರ ಚಿತ್ರವಿರುತ್ತದೆ. ನಕಲಿ ಡ್ರೈವಿಂಗ್ ಲೈಸೆನ್ಸ್ ಪ್ರಕರಣಗಳ ಸಂಖ್ಯೆ ಭಾರತದಲ್ಲಿ ಒಂದು ದೊಡ್ಡ ಸಮಸ್ಯೆಯಾಗಿದೆ.

ಭಾರತದಲ್ಲಿ ವಾಹನ ಸಂಬಂಧಿತ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ಡಿಜಿಲಾಕರ್ ಹಾಗೂ ಎಂ ಟ್ರಾನ್ಸ್‌ಪೋರ್ಟ್ ಮೊಬೈಲ್ ಅಪ್ಲಿಕೇಶನ್‌ಗಳನ್ನುಬಿಡುಗಡೆಗೊಳಿಸಲಾಗಿದೆ. ಈ ಅಪ್ಲಿಕೇಶನ್‌ಗಳಲ್ಲಿ ಪರವಾನಗಿಗಳನ್ನು ಡಿಜಿಟಲ್ ರೂಪದಲ್ಲಿಡಲಾಗುತ್ತದೆ. ಮೊದಲನೇ ಚಿತ್ರವನ್ನು ಲೆಸ್ಲಿ ಪಿಲ್ ಗ್ರಿಮ್'ರವರಿಂದ ಪಡೆಯಲಾಗಿದೆ.