ಹಿಮಪಾತದಲ್ಲಿ ಸಿಲುಕಿದ್ದ ಟ್ರಕ್‌ ಮುಂದೆ ಸಾಗಲು ನೆರವಾದ ಸೂಪರ್ ವುಮೆನ್

ವಿಶ್ವದ ಹಲವು ಭಾಗಗಳಲ್ಲಿ ಹಿಮಪಾತವಾಗುತ್ತಿದೆ. ಭಾರೀ ಹಿಮಪಾತವಾಗುತ್ತಿರುವ ದೇಶಗಳಲ್ಲಿ ಇಂಗ್ಲೆಂಡ್ ಸಹ ಸೇರಿದೆ. ಕಳೆದ ಕೆಲವು ದಿನಗಳಿಂದ ಇಂಗ್ಲೆಂಡಿನಲ್ಲಿ ಭಾರೀ ಹಿಮಪಾತವಾಗುತ್ತಿದೆ. ಇದರಿಂದಾಗಿ ದೇಶದ ಹಲವು ನಗರಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ.

ಹಿಮಪಾತದಲ್ಲಿ ಸಿಲುಕಿದ್ದ ಟ್ರಕ್‌ ಮುಂದೆ ಸಾಗಲು ನೆರವಾದ ಸೂಪರ್ ವುಮೆನ್

ಭಾರೀ ಹಿಮಪಾತವಿರುವ ರಸ್ತೆಯಲ್ಲಿ ಸಾಗುತ್ತಿದ್ದ ಹಾಲಿನ ಟ್ರಕ್‌ವೊಂದು ಮುಂದೆ ಚಲಿಸಲು ಸಾಧ್ಯವಾಗದೇ ನಿಂತಿದೆ. ಈ ವೇಳೆ ಸೂಪರ್ ಮಾರ್ಕೆಟ್'ಗೆ ಹೋಗುತ್ತಿದ್ದ ಮಹಿಳೆಯೊಬ್ಬರು ಈ ದೈತ್ಯ ವಾಹನವು ಮುಂದೆ ಸಾಗಲು ನೆರವಾಗಿದ್ದಾರೆ. ಮಹಿಳೆ ನೆರವಾಗುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹಿಮಪಾತದಲ್ಲಿ ಸಿಲುಕಿದ್ದ ಟ್ರಕ್‌ ಮುಂದೆ ಸಾಗಲು ನೆರವಾದ ಸೂಪರ್ ವುಮೆನ್

ಈ ಘಟನೆಯ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಹಾಲಿನ ಡೈರಿಯು ಆ ಮಹಿಳೆಗೆ ವರ್ಷಪೂರ್ತಿ ಉಚಿತವಾಗಿ ಹಾಲು ವಿತರಣೆ ಮಾಡುವುದಾಗಿ ತಿಳಿಸಿದೆ. ಇಂಗ್ಲೆಂಡ್'ನಲ್ಲಿ ನಡೆದ ಘಟನೆ ವಿಶ್ವದಾದ್ಯಂತವಿರುವ ಜನರ ಗಮನವನ್ನು ಸೆಳೆದಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಹಿಮಪಾತದಲ್ಲಿ ಸಿಲುಕಿದ್ದ ಟ್ರಕ್‌ ಮುಂದೆ ಸಾಗಲು ನೆರವಾದ ಸೂಪರ್ ವುಮೆನ್

ವೀಡಿಯೊ ನೋಡಿದವರು ಮಹಿಳೆಯನ್ನು ಸೂಪರ್ ವುಮೆನ್ ಎಂದು ಕರೆಯುತ್ತಿದ್ದಾರೆ. ಹೀಗೆ ವಿಶ್ವಾದ್ಯಂತ ಶ್ಲಾಘನೆಗೆ ಒಳಗಾಗುತ್ತಿರುವ ಮಹಿಳೆಯ ಹೆಸರು 33 ವರ್ಷದ ಚಾರ್ಲಿನಾ ಲೆಸ್ಲಿ ಎಂದು ತಿಳಿದು ಬಂದಿದೆ.

ಹಿಮಪಾತದಲ್ಲಿ ಸಿಲುಕಿದ್ದ ಟ್ರಕ್‌ ಮುಂದೆ ಸಾಗಲು ನೆರವಾದ ಸೂಪರ್ ವುಮೆನ್

ಸೂಪರ್ ಮಾರ್ಕೆಟ್'ನಲ್ಲಿ ಕೆಲಸ ಮಾಡುವ ಅವರು ತಮ್ಮ ಇಬ್ಬರು ಹೆಣ್ಣುಮಕ್ಕಳಾದ ರಿಹಾನಾ ಹಾಗೂ ಹಂಟರ್ ಅವರೊಂದಿಗೆ ಹೊರಗೆ ಹೋದಾಗ ಮುಂದೆ ಚಲಿಸಲು ಕಷ್ಟ ಪಡುತ್ತಿದ್ದ ಗ್ರಹಾಂ ಎಂಬುವವರಿಗೆ ಸೇರಿದ ಹಾಲಿನ ಟ್ರಕ್‌ಗೆ ಸಹಾಯ ಮಾಡಿದ್ದಾರೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಹಿಮಪಾತದಲ್ಲಿ ಸಿಲುಕಿದ್ದ ಟ್ರಕ್‌ ಮುಂದೆ ಸಾಗಲು ನೆರವಾದ ಸೂಪರ್ ವುಮೆನ್

ಚಾರ್ಲಿನಾ ಅವರ ಈ ಕಾರ್ಯವು ಅಲ್ಲಿ ನೆರೆದಿದ್ದವರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದೆ. ಘಟನೆಗೆ ಸಾಕ್ಷಿಯಾದ ಪ್ರತ್ಯಕ್ಷದರ್ಶಿಯೊಬ್ಬರು ಮಹಿಳೆಯ ಸಾಹಸವನ್ನುತಮ್ಮ ಮೊಬೈಲ್'ನಲ್ಲಿ ರೆಕಾರ್ಡ್ ಮಾಡಿ ಇಂಟರ್ ನೆಟ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮಹಿಳೆಯ ಕಾರ್ಯವನ್ನು ಶ್ಲಾಘಿಸಿರುವ ಡೈರಿಯ ಮಾಲೀಕ ಗ್ರಹಾಂ ಒಂದು ವರ್ಷ ಉಚಿತವಾಗಿ ಹಾಲು ಸರಬರಾಜು ಮಾಡುವುದಾಗಿ ಘೋಷಿಸಿದ್ದಾರೆ. ಚಾರ್ಲಿನಾ ಮೊದಲಿನಿಂದಲೂ ಕಷ್ಟದಲ್ಲಿರುವವರಿಗೆ ನೆರವಾಗುತ್ತಿದ್ದಾರೆ ಎಂದು ಹೇಳಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಹಿಮಪಾತದಲ್ಲಿ ಸಿಲುಕಿದ್ದ ಟ್ರಕ್‌ ಮುಂದೆ ಸಾಗಲು ನೆರವಾದ ಸೂಪರ್ ವುಮೆನ್

ಯಾರಿಗಾದರೂ ತೊಂದರೆಯಲ್ಲಿದ್ದರೆ ಅವರು ತಕ್ಷಣವೇ ಸ್ಪಂದಿಸುತ್ತಾರೆ ಎಂದು ತಿಳಿದು ಬಂದಿದೆ. ಇದೇ ರೀತಿಯಾಗಿ ಹಿಮಪಾತದಲ್ಲಿ ಸಿಲುಕಿದ್ದ ಹಾಲಿನ ಟ್ರಕ್‌ಗೂನೆರವು ನೀಡಿದ್ದಾರೆ. ಯಾವುದೇ ಪ್ರತಿಫಲ ಬಯಸದೇ ನಾನು ಜನರಿಗೆ ಸಹಾಯ ಮಾಡುತ್ತೇನೆ. ಇತರರಿಗೆ ಸಹಾಯ ಮಾಡುವುದು ನನ್ನ ಸ್ವಭಾವ ಎಂದು ಚಾರ್ಲಿನಾ ಹೇಳಿದ್ದಾರೆ.

Most Read Articles

Kannada
English summary
Woman helps milk truck stuck on the icy road to move forward. Read in Kannada.
Story first published: Wednesday, February 17, 2021, 14:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X