ಮಾಜಿ ಪ್ರಿಯಕರನ ರೂ.28 ಲಕ್ಷ ಮೌಲ್ಯದ ಬೈಕಿಗೆ ಬೆಂಕಿ ಹಚ್ಚಿದ ಮಹಿಳೆ

ಪ್ರೇಮಿಗಳ ನಡುವೆ ಬ್ರೇಕ್ ಅಪ್ ಆದಾಗ ಮನಸ್ಸಿಗೆ ಆಘಾತವಾಗುವುದು ಸಹಜ. ಕೆಲವೊಮ್ಮೆ ಅನಿವಾರ್ಯ ಕಾರಣಗಳಿಗಾಗಿ ಬ್ರೇಕ್ ಅಪ್ ಆಗುತ್ತದೆ. ಕೆಲವರು ಎಲ್ಲವನ್ನೂ ಮರೆತು ಹೊಸ ಜೀವನ ಆರಂಭಿಸುತ್ತಾರೆ.

ಮಾಜಿ ಪ್ರಿಯಕರನ ರೂ.28 ಲಕ್ಷ ಮೌಲ್ಯದ ಬೈಕಿಗೆ ಬೆಂಕಿ ಹಚ್ಚಿದ ಮಹಿಳೆ

ಇನ್ನು ಕೆಲವರು ತಮ್ಮ ಮಾಜಿ ಪ್ರೇಮಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾರೆ. ಹೀಗೆ ಸೇಡು ತೀರಿಸಿಕೊಳ್ಳಲು ಮುಂದಾಗುವವರು ತಾವು ಸಂಕಷ್ಟಕ್ಕೆ ಸಿಲುಕುವುದರ ಜೊತೆಗೆ ಇತರರಿಗೂ ಸಂಕಷ್ಟವನ್ನು ತಂದಿಡುತ್ತಾರೆ. ಇತ್ತೀಚಿಗೆ ಇದೇ ರೀತಿಯ ಘಟನೆಯೊಂದು ಥೈಲ್ಯಾಂಡ್‌ನಲ್ಲಿ ನಡೆದಿದೆ.

ಮಾಜಿ ಪ್ರಿಯಕರನ ರೂ.28 ಲಕ್ಷ ಮೌಲ್ಯದ ಬೈಕಿಗೆ ಬೆಂಕಿ ಹಚ್ಚಿದ ಮಹಿಳೆ

ಥೈಲ್ಯಾಂಡ್‌ನ 36 ವರ್ಷದ ಮಹಿಳೆ ಹಾಗೂ ಪುರುಷನೊಬ್ಬ ಪರಸ್ಪರ ಪ್ರೀತಿಸುತ್ತಿದ್ದರು. ಈ ಇಬ್ಬರ ನಡುವೆ ಆಗಾಗ ಸಣ್ಣ ಪುಟ್ಟ ಕಾರಣಗಳಿಗಾಗಿ ಜಗಳವಾಗುತ್ತಿತ್ತು. ಇತ್ತೀಚಿಗೆ ಆತ ಆಕೆಯಿಂದ ದೂರವಾಗುವ ಮಾತನಾಡಿದ್ದಾನೆ.

ಮಾಜಿ ಪ್ರಿಯಕರನ ರೂ.28 ಲಕ್ಷ ಮೌಲ್ಯದ ಬೈಕಿಗೆ ಬೆಂಕಿ ಹಚ್ಚಿದ ಮಹಿಳೆ

ತಮ್ಮಿಬ್ಬರ ನಡುವೆ ಹೊಂದಾಣಿಕೆಯಾಗುತ್ತಿಲ್ಲವಾದ್ದರಿಂದ ದೂರಾಗುವುದು ಒಳಿತು ಎಂದು ಆತ ಹೇಳಿದ್ದಾನೆ. ಮಹಿಳೆ ಆತನ ಮನವೊಲಿಸಲು ಸಾಕಷ್ಟು ಪ್ರಯತ್ನ ಪಟ್ಟರೂ ಆತನ ಮನ ಕರಗಿಲ್ಲ.

ಮಾಜಿ ಪ್ರಿಯಕರನ ರೂ.28 ಲಕ್ಷ ಮೌಲ್ಯದ ಬೈಕಿಗೆ ಬೆಂಕಿ ಹಚ್ಚಿದ ಮಹಿಳೆ

ಇದರಿಂದ ಆಕ್ರೋಶಗೊಂಡ ಆಕೆ ಆತನ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾಳೆ. ಆತ ಕೆಲಸ ಮಾಡುವ ಶಾಲೆಯ ಬಳಿ ತೆರಳಿದ್ದಾಳೆ. ಅಲ್ಲಿಂದ ಪಾರ್ಕಿಂಗ್ ಪ್ರದೇಶಕ್ಕೆ ಹೋಗಿದ್ದಾಳೆ.

ಮಾಜಿ ಪ್ರಿಯಕರನ ರೂ.28 ಲಕ್ಷ ಮೌಲ್ಯದ ಬೈಕಿಗೆ ಬೆಂಕಿ ಹಚ್ಚಿದ ಮಹಿಳೆ

ಅಲ್ಲಿ ನಿಲ್ಲಿಸಿದ್ದ ಆತನ ಬೈಕಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ. ಒಂದು ಮಿಲಿಯನ್ ಬಹ್ತ್ ಅಂದರೆ ರೂ.28 ಲಕ್ಷ ರೂಪಾಯಿ ಮೌಲ್ಯದ ಈ ಟ್ರಯಂಫ್ ಬೈಕ್ ಅನ್ನು ಆಕೆ ಆತನಿಗೆ ಉಡುಗೊರೆಯಾಗಿ ನೀಡಿದ್ದಳು ಎಂಬುದು ವಿಶೇಷ.

ಮಾಜಿ ಪ್ರಿಯಕರನ ರೂ.28 ಲಕ್ಷ ಮೌಲ್ಯದ ಬೈಕಿಗೆ ಬೆಂಕಿ ಹಚ್ಚಿದ ಮಹಿಳೆ

ಬೈಕಿಗೆ ಬೆಂಕಿ ಹಚ್ಚಿದ ನಂತರ ಆಕೆ ಸ್ಥಳದಿಂದ ಹೊರಟು ಹೊರಗೆ ನಿಲ್ಲಿಸಿದ್ದ ಕಾರಿನಲ್ಲಿ ಪರಾರಿಯಾಗಿದ್ದಾಳೆ. ಈ ದೃಶ್ಯಗಳೆಲ್ಲವೂ ಪಾರ್ಕಿಂಗ್ ಪ್ರದೇಶದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಮಾಜಿ ಪ್ರಿಯಕರನ ರೂ.28 ಲಕ್ಷ ಮೌಲ್ಯದ ಬೈಕಿಗೆ ಬೆಂಕಿ ಹಚ್ಚಿದ ಮಹಿಳೆ

ಈ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲವಾದರೂ ಆ ಬೈಕಿನ ಸಮೀಪದಲ್ಲಿ ನಿಲ್ಲಿಸಿದ್ದ ಇತರ ಆರು ವಾಹನಗಳು ಬೆಂಕಿಯಿಂದ ಹಾನಿಗೀಡಾಗಿವೆ. ಪಾರ್ಕಿಂಗ್ ಪ್ರದೇಶದಲ್ಲಿ ಉಳಿದ ವಾಹನಗಳನ್ನು ಪರಸ್ಪರ ಹತ್ತಿರ ನಿಲ್ಲಿಸಲಾಗಿದ್ದ ಕಾರಣಕ್ಕೆ ಅವುಗಳಿಗೂ ಬೆಂಕಿ ತಗುಲಿದೆ.

ಬೈಕಿನ ಮೇಲೆ ಹೆಚ್ಚು ಪೆಟ್ರೋಲ್ ಸುರಿದು ಬೈಕಿನ ಹತ್ತಿರ ಹೋಗಿದ್ದ ಕಾರಣ ಆಕೆಗೂ ಬೆಂಕಿ ತಗುಲುವ ಸಾಧ್ಯತೆಗಳಿದ್ದವು. ಆದರೆ ಅಷ್ಟರಲ್ಲಿ ಆಕೆ ಪಾರಾಗಿದ್ದಾಳೆ. ಸಿಸಿಟಿವಿಯಲ್ಲಿದ್ದ ಮುಂದಿನ ದೃಶ್ಯದಲ್ಲಿ ಆ ಮಹಿಳೆ ಕೆಂಪು ಬಣ್ಣದ ಕಾರಿನಲ್ಲಿ ಪರಾರಿಯಾಗುವುದನ್ನು ಕಾಣಬಹುದು.

ಮಾಜಿ ಪ್ರಿಯಕರನ ರೂ.28 ಲಕ್ಷ ಮೌಲ್ಯದ ಬೈಕಿಗೆ ಬೆಂಕಿ ಹಚ್ಚಿದ ಮಹಿಳೆ

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ದೊಡ್ಡ ಅನಾಹುತವಾಗುವುದನ್ನು ತಪ್ಪಿಸಿದ್ದಾರೆ. ಈ ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

Most Read Articles

Kannada
English summary
Woman sets fire to ex lover's bike. Read in Kannada.
Story first published: Monday, June 28, 2021, 19:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X