Just In
- 23 min ago
ಸಂಚಾರಿ ನಿಯಮ ಉಲ್ಲಂಘನೆ ದಂಡ ಪಾವತಿಸಿದ್ರೆ 50% ರಿಯಾಯಿತಿ: ರಾಜ್ಯ ಸರ್ಕಾರ ಆದೇಶ
- 2 hrs ago
6 ಏರ್ಬ್ಯಾಗ್ ಜೊತೆ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗುವ ಟಾಪ್ 5 ಕಾರುಗಳು
- 2 hrs ago
ಎಲೆಕ್ಟ್ರಿಕ್ ಬಳಿಕ ಸಿಎನ್ಜಿ ಕಾರುಗಳ ವಿಭಾಗದಲ್ಲೂ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ ಟಾಟಾ
- 2 hrs ago
ಹೊಸ ಮಹೀಂದ್ರಾ ಎಲೆಕ್ಟ್ರಿಕ್ XUV700 ಟೀಸರ್ ಬಿಡುಗಡೆ... ಫೆ.10 ರಂದು BE ಸರಣಿ SUV ಗಳ ಪ್ರದರ್ಶನ
Don't Miss!
- Sports
ಟೆಸ್ಟ್ ಮಾದರಿಗೆ ಕಮ್ಬ್ಯಾಕ್ ಮಾಡುವ ಬಗ್ಗೆ ಹಾರ್ದಿಕ್ ಪಾಂಡ್ಯ ಕುತೂಹಲಕಾರಿ ಪ್ರತಿಕ್ರಿಯೆ
- News
ಶ್ರೀರಾಮುಲು-ಸಂತೋಷ್ ಲಾಡ್ ಆಲಿಂಗನ: ಬಳ್ಳಾರಿಯಲ್ಲಿ ಜನಾರ್ಧನ ರೆಡ್ಡಿಯನ್ನು ಹಣಿಯಲು ಹೊಸ ತಂತ್ರ?
- Technology
ಭಾರತಕ್ಕೆ ಎಂಟ್ರಿ ಕೊಟ್ಟ ಒಪ್ಪೋ ರೆನೋ 8T 5G! ಕ್ಯಾಮೆರಾ ಹೇಗಿದೆ? ವಿಶೇಷತೆ ಏನು?
- Finance
Union Budget: ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಠೇವಣಿ ಮಿತಿ ಏರಿಕೆ
- Lifestyle
ಗಂಡಾಗಿ ಬದಲಾಗಿದ್ದ ಮಂಗಳಮುಖಿ ಜಿಹಾದ್ ಈಗ ಗರ್ಭಿಣಿ: 8 ತಿಂಗಳ ಗರ್ಭಿಣಿ ಈ ಜಿಹಾದ್
- Movies
ನಟ ಪ್ರೇಮ್ ಭೇಟಿ ವೇಳೆ ನಿರ್ಮಾಪಕರ ಮನೆಯಲ್ಲಿ ಕಾಣಿಸಿಕೊಂಡ ನಾಗರಹಾವು!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಚಲಿಸುತ್ತಿದ್ದ ಸ್ಕಾರ್ಪಿಯೋ ಬೋನೆಟ್ ಮೇಲೆ ಯುವತಿ ಹುಚ್ಚಾಟ... ವಾಹನ ಸೀಜ್ ಮಾಡಿ ಪಂಚ್ ಕೊಟ್ಟ ಪೊಲೀಸರು
ಇತ್ತೀಚಿನ ದಿನಗಳಲ್ಲಿ ತಮ್ಮ ವಾಹಾನಗಳ ಜೊತೆಗೆ ಹುಚ್ಚಾಟವಾಡುತ್ತಾ, ಅಪಾಯಕಾರಿ ಸ್ಟಂಟ್‌ಗಳನ್ನು ಮಾಡುತ್ತಾ ಅದನ್ನು ವಿಡಿಯೋ ಮಾಡಿ ವೈರಲ್ ಆಗುವ ಗೀಳು ದಿನೇ ದಿನೇ ಹೆಚ್ಚಾಗುತ್ತಿದೆ.

ತಮ್ಮ ಕಾರು ಅಥವಾ ಬೈಕ್‌ಗಳನ್ನು ಬಳಸಿಕೊಂಡು ಅಪಾಯಕಾರಿ ಸ್ಟಂಟ್‌ಗಳನ್ನು ಮಾಡುತ್ತಾ, ತಾವು ಅಪಾಯಕ್ಕೆ ಒಳಗಾಗುವುದಲ್ಲದೇ, ಇನ್ನೊಬ್ಬರನ್ನು ಅಪಾಯಕ್ಕೆ ತಳ್ಳುವಂತಹ ಹಲವಾರು ಘಟನೆಗಳನ್ನು ನಾವೀಗಾಗಲೇ ನೋಡಿದ್ದೇವೆ. ಅದೇ ರೀತಿಯ ಮತ್ತೊಂದು ಹುಚ್ಚುತನ ತೋರಿದ ಯುವತಿಯೊಬ್ಬಳಿಗೆ ಪೊಲೀಸರು ಕೇಸ್ ದಾಖಲಿಸಿದ್ದು ಮಾತ್ರವಲ್ಲದೇ, ಆಕೆಯ ಕಾರನ್ನು ಸೀಝ್ ಮಾಡಿರುವ ಘಟನೆಯೊಂದು ರಾಜಧಾನಿಯಲ್ಲಿ ನಡೆದಿದೆ.

ಮಹಿಳೆಯೊಬ್ಬಳು ತನ್ನ ಮಹೀಂದ್ರಾ ಸ್ಕಾರ್ಪಿಯೋದ ಬೋನೆಟ್ ಮೇಲೆ ಕುಳಿತುಕೊಂಡು ಹೋಗುತ್ತಿರುವ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ೧೦ ಸೆಕೆಂಡ್‌ಗಳಷ್ಟು ಉದ್ದವಿರುವ ಈ ವಿಡಿಯೋದಲ್ಲಿ ಯುವತಿಯ ಹುಚ್ಚಾಟ ಸೆರೆಯಾಗಿದ್ದು, ವಿಡಿಯೋ ವೈರಲ್ ಆದ ತಕ್ಷಣವೇ ಪೊಲೀಸರು ಕೇಸು ದಾಖಲಿಸಿ ಕ್ರಮ ತೆಗೆದುಕೊಂಡಿದ್ದಾರೆ.

ವರದಿಯ ಪ್ರಕಾರ ಉತ್ತರ ಪ್ರದೇಶದ, ನೊಯ್ಡಾ ಸೆಕ್ಟರ್ ೨೪ ರ ಪೊಲೀಸ್ ಪರಿಧಿಯಲ್ಲಿ ಘಟನೆ ಸಂಭವಿದ್ದು, ಇದು ಎಂದು ಅಥವಾ ಯಾವಾಗ ನಡೆದಿರುವ ಘಟನೆ ಎಂದು ಇದುವರೆಗೂ ತಿಳಿದು ಬಂದಿಲ್ಲ.

ಆದರೆ ವೈರಲ್ ವಿಡಿಯೋವನ್ನು ತನಿಖೆ ನಡೆಸಿದ ಪೊಲೀಸರು ಕೂಡಲೇ ಯುವತಿಯ ಮೇಲೆ ಕೇಸ್ ದಾಖಲಿಸಿ ಆಕೆಯ ಮಹೀಂದ್ರ ಸ್ಕಾರ್ಪಿಯೋ ಕಾರನ್ನು ಸೀಝ್ ಮಾಡಿದ್ದಾರೆ. ಆದರೆ ಪೊಲೀಸರು ಈಕೆಯ ಮೇಲೆ ಯಾವ ಯಾವ ಕೇಸ್‌ಗಳನ್ನು ದಾಖಲಿಸಿದ್ದಾರೆ ಎಂಬ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.

ಸಾರ್ವಜನಿಕ ರಸ್ತೆಗಳಲ್ಲಿ ಯಾವುದೇ ರೀತಿಯ ಸ್ಟಂಟ್‌ಗಳನ್ನು ಮಾಡುವುದು ಭಾರತದಲ್ಲಿ ಶಿಕ್ಷಾರ್ಹ ಅಪರಾಧ. ಈ ರೀತಿ ಸ್ಟಂಟ್‌ಗಳು ಮಾಡುವುದು ಕಂಡು ಬಂದರೆ ಅವರ ಮೇಲೆ ಕೇಸ್ ದಾಖಲಿಸಬಹುದಾಗಿದೆ ಮತ್ತು ಸ್ಟಂಟ್ ಮಾಡಿರುವ ವಿಡಿಯೋಗಳು ಪೊಲೀಸರ ಗಮನಕ್ಕೆ ಬಂದರೆ ಅಂಥಹವರ ಮೇಲೆ ಪೊಲೀಸರು ಸ್ವಯಂ ಪ್ರೇರಿತವಾಗಿ ಕೇಸ್ ದಾಖಲಿಸಿ ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳಬಹುದಾಗಿದೆ.

ಆದರೂ ಸ್ಟಂಟ್ ಮಾಡಲೇ ಬೇಕು ಎಂದಾದರೆ ನಿಮಗೆ ಖಾಸಗಿ ಜಾಗದಲ್ಲಿ ಮಾಡಬಹುದಾಗಿದೆ. ಸಾರ್ವಜನಿಕರಿಗೆ ಹಾನಿಯಾಗದಂತೆ ಸ್ಟಂಟ್ ಮಾಡಬೇಕಾಗುತ್ತದೆ. ಅದಕ್ಕಾಗಿ ನೀವು ಬೇಕಾದರೆ ರೇಸ್ ಟ್ರ್ಯಾಕ್‌ಗಳನ್ನು ಬಳಸಬಹುದು.

ಈ ರೀತಿಯಾದಂತಹ ಜಾಗಗಳನ್ನು ನೀವು ಸ್ಟಂಟ್ ಮಾಡಲು ಆಯ್ಕೆ ಮಾಡಿಕೊಳ್ಳುವುದರಿಂದ ನೀವು ಸಹ ಸೇಫ್ ಆಗಿರುತ್ತೀರಿ ಜೊತೆಗೆ ಬೇರೆಯವರಿಗೂ ಹಾನಿಯಾಗುವುದು ತಪ್ಪುತ್ತದೆ.

ಇನ್ನು ವಿಡಿಯೋದಲ್ಲಿ ಯುವತಿ ಮಾಡಿರುವುದು ಭಾರತೀಯ ನೀತಿ ಸಂಹಿತೆ ಪ್ರಕಾರ ಅಪರಾಧವಾಗಿದೆ. ಕಾರನ್ನು ಒಬ್ಬರು ಚಲಾಯಿಸುತ್ತಾ ಅದರ ಬೋನೆಟ್ ಮೇಲೆ ಯಾವುದೇ ಸುರಕ್ಷಾ ಮಾನದಂಡಗಳನ್ನು ಅನುಸರಿಸದೇ ಅಪಾಯಕಾರಿಯಾಗುವ ರೀತಿಯಲ್ಲಿ ಚಲಿಸುವ ವಾಹನದ ಮೇಲೆ ಕೂತಿದ್ದಾಳೆ.

ವಿಡಿಯೋ ನೋಡುವಾಗ ಕಾರು ನಿಧಾನವಾಗಿ ಚಲಿಸುತ್ತಿದ್ದು, ಯಾವುದೇ ಅಪಾಯ ಇಲ್ಲ ಎಂಬಂತೆ ಕಾಣುತ್ತದೆ, ಇದು ನಿಜ ಆಗಿರಬಹುದು. ಆದರೆ ಬೇರೆ ಯಾವುದಾದರೂ ವಾಹನ ಇದ್ದಕ್ಕಿದ್ದ ಹಾಗೆ ಅಡ್ಡ ಬಂದರೆ ಕಾರಿನ ಡ್ರೈವರ್ ಕೂಡಲೇ ಬ್ರೇಕ್ ಹಾಕಲೇ ಬೇಕಾಗುತ್ತದೆ.

ಹೀಗೆ ಬ್ರೇಕ್ ಹಾಕಿದಾಗ ಖಂಡಿತಾ ಆಕೆ ಕಾರಿನ ಬೋನೆಟ್ ಇಂದ ಜಾರಿ ಕೆಳಗೆ ಬಿದ್ದು, ಅದೇ ಕಾರು ಆಕೆಯ ಮೇಲೆ ಹರಿಯುವ ಸಾಧ್ಯತೆಗಳಿವೆ.

ಭಾರತೀಯ ರಸ್ತೆಗಳು ಹೇಗಿರುತ್ತದೆ ಎಂದು ನಮಗೆಲ್ಲಾ ಗೊತ್ತೇ ಇದೆ. ಇನ್ನು ನಗರ ಪ್ರದೇಶಗಳಲ್ಲಿ ಅಂತೂ, ಯಾರು ಯಾವಾಗ ಎಲ್ಲಿಂದ ನುಗ್ಗುತ್ತಾರೆ ಎಂದು ಊಹಿಸುವುದೂ ಸಹ ಕಷ್ಟ, ಮತ್ತು ಒಂದೊಮ್ಮೆ ಅಂತಹ ಪರಿಸ್ಥಿತಿ ಎದುರಾದರೆ ಅದನ್ನು ನಿಭಾಯಿಸಲು ಈಕೆಗೆ ಖಂಡಿತಾ ಸಾಧ್ಯವಾಗಲಾರದು. ಯಾಕೆಂದರೆ ತನ್ನನ್ನು ರಕ್ಷಿಸಿಕೊಳ್ಳಲು ಆಕೆ ಯಾವುದೇ ಸುರಕ್ಷಾ ಸಾಧನಗಳನ್ನು ಸಹ ಬಳಸಿಲ್ಲ. ಹಾಗಾಗಿ ಇದು ಆಕೆಯ ಜೀವಕ್ಕೆ ಮುಳುವಾಗುವ ಎಲ್ಲಾ ಸಾಧ್ಯತೆಗಳು ಸಹ ಇದೆ.

ಇನ್ನು ಇತ್ತೀಚೆಗೆ ಅಂತೂ ಬಹುತೇಕ ಎಲ್ಲಾ ಮೆಟ್ರೋಪಾಲಿಟನ್ ಸಿಟಿಗಳಲ್ಲೂ ಖುದ್ದು ಪೊಲೀಸರಿಂದ ನಿರ್ವಹಿಸಲಾಗುತ್ತಿರುವಂತಹ ಸಿಸಿ ನೆಟ್‌ವರ್ಕ್ ಇದೆ. ನಗರಗಳಲ್ಲಿ ಎಲ್ಲಿ ಏನೇನು ನಡೆಯುತ್ತಿದೆ ಎಂದು ಗಮನಿಸುತ್ತಲೇ ಇರುತ್ತಾರೆ. ಇದೇ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಈ ರೀತಿಯ ಅಕ್ರಮ ವಿಡಿಯೋಗಳೆಲ್ಲಾ ಸಿಸಟಿವಿಯಲ್ಲಿ ಸೆರೆಯಾಗುತ್ತಿರುವುದು ಮತ್ತು ಅಂತಹವರ ಮೇಲೆ ಕೇಸ್ ದಾಖಲಿಸುತ್ತಿರುವುದು.

ಯಾರೆಲ್ಲಾ ನಿಯಮ ಮೀರಿ ತಮ್ಮ ಚಟುವಟಿಕೆಗಳನ್ನು ಮಾಡುತ್ತಿದ್ದಾರೋ ಅಂತಹವರ ಕಾರು ನಂಬರ್‌ಗಳನ್ನು ತೆಗೆದುಕೊಂಡು ಚಲನ್ ವಿತರಿಸಿ ದಂಡ ಪಾವತಿಸಿಕೊಳ್ಳಲಾಗುತ್ತಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ಚಲನ್ ನ ದಂಡದ ಮೊತ್ತವನ್ನೂ ಸಹ ಏರಿಸಲಾಗುತ್ತಿದೆ ಎಂಬುದು ಗಮನಿಸಬೇಕಾದ ಸಂಗತಿ. ಚಲನ್‌ನ ದಂಡದ ಮೊತ್ತ ಹೆಚ್ಚು ಮಾಡಿದಂತೆ ಈ ರೀತಿಯ ಅಪರಾಧದ ಸಂಖ್ಯೆ ಕಡಿಮೆಯಾಗಬಹುದೆನ್ನುವ ಲೆಕ್ಕಾಚಾರ ಪೊಲೀಸರದ್ದು.

ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲೇ ಅತೀ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುತ್ತಿದೆ. ಅದರಲ್ಲಿ ತಲೆಯ ಭಾಗಕ್ಕೆ ಪೆಟ್ಟು ಬಿದ್ದು ಮರಣ ಹೊಂದುವವರ ಸಂಖ್ಯೆಯೇ ಹೆಚ್ಚು. ಇದರಲ್ಲೇ ತಿಳಿಯುತ್ತದೆ, ಭಾರತೀಯರಾದ ನಾವು ಎಷ್ಟು ಅಜಾಗುರುಕತೆಯಿಂದ ವಾಹನ ಚಲಾಯಿಸುತ್ತಿದ್ದೇವೆ ಎಂದು. ಇದಕ್ಕೆ ಪ್ರಮುಖ ಕಾರಣ ನಾವು ಸರಿಯಾದ ರೀತಿಯಲ್ಲಿ ಟ್ರಾಫಿಕ್ ನಿಯಮಗಳನ್ನು ಪಾಲಿಸದೇ ಇರುವುದು ಎಂದರೆ ಅದನ್ನು ಖಂಡಿಸಲಾಗದು.

ಇದೇ ಕಾರಣಕ್ಕಾಗಿ ಈಗ ಎಲ್ಲಾ ದೊಡ್ಡ ದೊಡ್ಡ ನಗರಗಳಲ್ಲಿ ಪೊಲೀಸರು ನಿರ್ವಹಿಸುತ್ತಿರುವಂತಹ ಸಿಸಿಟಿವಿ ನೆಟ್‌ವರ್ಕ್‌ಗಳಿರುವುದು. ಎಲ್ಲಾ ಸಿಗ್ನಲ್‌ಗಳಲ್ಲೂ ಸಿಸಿಟಿವಿಗಳನ್ನು ಅಳವಡಿಸಿರುವುದು. ಕೊನೆಯ ಪಕ್ಷ ಸಿಸಿಟಿವಿಗಳಲ್ಲಿ ತಾವು ಮಾಡುತ್ತಿರುವ ನಿಯಮದ ಉಲ್ಲಂಘನೆ ಸೆರೆಯಾಗುತ್ತಿದೆ ಎಂದಾದರೂ ವಾಹನ ಚಾಲಕರು ನಿಧಾನವಾಗಿ ವಾಹನ ಚಲಾಯಿಸಬಹುದು ಎಂದು.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಯಾವುದೇ ಸುರಕ್ಷಾ ಮಾನದಂಡಗಳನ್ನು ನೋಡದೇ ಆ ಯುವತಿ ವಾಹನದ ಬೋನೆಟ್ ಮೇಲೆ ಕುಳಿತು ಸವಾರಿ ಮಾಡಿದ್ದು ಅಪಾಯಕಾರಿಯಾದ ವಿಚಾರ ಮತ್ತು ಇದು ಶಿಕ್ಷಾರ್ಹ ಅಪರಾಧ. ಇದೇ ಕಾರಣದಿಂದ ಪೊಲೀಸರು ಆಕೆಯ ಮೇಲೆ ಕ್ರಮ ಕೈಗೊಂಡು ವಾಹನವನ್ನೂ ಸೀಝ್ ಮಾಡಿರುವುದು ಸ್ವಾಗತಾರ್ಹ. ಹೀಗಾದಾಗ ಮಾತ್ರ ಬೇರೆಯವರೂ ಸಹ ಈ ರೀತಿಯ ತಪ್ಪು ಮಾಡುವುದಕ್ಕೂ ಮುನ್ನ ಒಂದು ಬಾರಿ ಯೋಚಿಸುವುದಂತೂ ಖಂಡಿತ.